ಗುರುದ್ವಾರ ಮನ್ಜಿ ಸಾಹಿಬ್, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಗುರುದ್ವಾರ ಮನ್ಜಿ ಸಾಹಿಬ್

ಗುರುದ್ವಾರ ಮನ್ಜಿ ಸಾಹಿಬ್ ನ್ನು ಗುರುದ್ವಾರ ಅಲಮ್ಗಿರ್ ಸಾಹಿಬ್ ಎಂದೂ ಪ್ರಸಿದ್ಧವಾಗಿದೆ. ಇದು ಲುಧಿಯಾನದ ಆಗ್ನೇಯ ಭಾಗದಲ್ಲಿ 11 ಕಿ.ಮೀ. ದೂರದಲ್ಲಿದೆ. ಗುರು ಗೋಬಿಂದ್ ಸಿಂಗ್ ಜಿ ಅವರು ಮಚ್ಛಿವಾರ್ ಗೆ ತೆರಳುವ ಮೊದಲು ಕೆಲ ಸಮಯ ಇಲ್ಲಿ ತಂಗಿದ್ದರೆಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ನೀರಿಲ್ಲವೆಂದು ಅರಿತ ಗುರು ಜೀ ಅವರು ನೆಲಕ್ಕೊಂದು ಬಾಣ ಬಿಟ್ಟರು. ಆ ಬಾಣ ನಾಟಿದ ಸ್ಥಳದಲ್ಲಿ ನೀರಿನ ಕಾರಂಜಿಯೇ ಚಿಮ್ಮಿತ್ತು.

ಇದನ್ನು ಬಳಿಕ ಕೊಳವಾಗಿ ಪರಿವರ್ತಿಸಲಾಗಿದ್ದು, ಈಗ ಇದನ್ನು ಬಾಣದ ಕೊಳ- ತಿರ್ಸಾರ್ ಎನ್ನಲಾಗುತ್ತಿದೆ. ಗುರುಜೀ ಹೇಳಿದಂತೆ ಈ ಕೊಳದಲ್ಲಿ ಮಿಂದೆದ್ದ ಮಹಿಳೆಯ ಕುಷ್ಠರೋಗವು ವಾಸಿಯಾಗಿದೆ. ಭಕ್ತನೊಬ್ಬ ಗುರುಜೀ ಅವರಿಗೆ ಪ್ರಯಾಣ ಮಾಡಲು ಕುದುರೆಯನ್ನು ನೀಡಿದ್ದ ಎನ್ನುವ ಕಥೆಯೂ ಇದೆ. ಗುರು ತೇಗ್ ಬಹದೂರ್ ಜೀ ಅವರ ಶಾಹಿದಿ ದಿವಸ್ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ.

Please Wait while comments are loading...