ಹುಲಿ ಸಫಾರಿ, ಲುಧಿಯಾನಾ

ಹುಲಿ ಸಫಾರಿ ಮುಖ್ಯ ನಗರದಿಂದ 6 ಕಿ.ಮೀ. ದೂರದಲ್ಲಿ ಜಿಟಿ ರಸ್ತೆ(ಲುಧಿಯಾನ-ಜಲಂಧರ್ ಹೈವೇ)ಯಲ್ಲಿದ್ದು, ಸುಮಾರು 25 ಎಕ್ರೆಯಲ್ಲಿ ವ್ಯಾಪಿಸಿದೆ. ಪ್ರವಾಸಿಗಳು ಹುಲಿ ಬ್ಲ್ಯಾಕ್ ಬಕ್ಸ್, ಮೊಲಗಳು, ಜಿಂಕೆ ಮತ್ತು ನವಿಲುಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಮೃಗಾಲಯದಲ್ಲಿ ಹೋಗಿ ಹುಲಿಯನ್ನು ನೋಡುವುದಕ್ಕಿಂತಲೂ ಅದು ಮುಕ್ತ ವಾತಾವರಣದಲ್ಲಿ ತಿರುಗಾಡುವುದನ್ನು ನೋಡುವುದು ಒಳ್ಳೆಯ ಅನುಭವ. ನಗರದ ವನ್ಯಜೀವಿ ಇಲಾಖೆ ಸಫಾರಿ ನಡೆಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿದೆ. ಸೋಮವಾರ ನಿರ್ವಹಣೆಗೆ ರಜೆಯಿದೆ. ಈ ಸಫಾರಿ ವಾರದ ಉಳಿದೆಲ್ಲಾ ದಿನ ತೆರೆದಿರುತ್ತದೆ. ಪ್ರವಾಸಿಗಳು ಹುಲಿ ಸಫಾರಿ, ಹಾರ್ಡಿಸ್ ವರ್ಲ್ಡ್ ಮತ್ತು ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಒಂದೇ ಭೇಟಿಯಲ್ಲಿ ನೋಡಬಹುದಾಗಿದೆ.

Please Wait while comments are loading...