ರಾಣಿ ಚರಕ ಮಹಲ್, ತಾವಿ ನದಿಯ ದಡದಲ್ಲಿದ್ದು ಜಮ್ಮುವಿನ ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಇದು 150 ವರ್ಷ ಹಳೆಯ ಅರಮನೆ. ಈ ಮಹಲ್ ಅನ್ನು ಕೆಂಪು ಗಾರೆ ಹಾಗೂ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇದು ಮುಬಾರಕ್ ಮಂಡಿ ಕಾಂಪ್ಲೆಕ್ಸ್ ನ ಒಂದು ಭಾಗವಾಗಿದೆ. ಈ ಸ್ಥಳದ ಲಂಬ ಸಾಲುಗಳು ಮತ್ತು ಕಮಾನುಗಳು ಆ ಕಾಲದ ವಾಸ್ತುಶಿಲ್ಪ ಶೈಲಿಯನ್ನು ಪ್ರದರ್ಶಿಸುತ್ತವೆ.
ರಾಣಿ ಚರಕ ಮಹಲ್ ಆವರಣವು ಅನೇಕ ಸರ್ಕಾರಿ ಕಚೇರಿಗಳನ್ನು ಹೊಂದಿವೆ. ಈ ಅರಮನೆಯ ಒಂದು ಕೊನೆಯಲ್ಲಿ ಮುಬಾರಕ್ ಮಂಡಿ ಅರಮನೆಯ ತೋಷಖಾನ ಅಥವಾ ಖಜಾನೆ ಮನೆಗೆ ಸಂಪರ್ಕ ಇದೆ. ಚಿನ್ನದ ಸಿಂಹಾಸನ, ಚಿನ್ನದ ಪ್ರಾಚೀನ ವಸ್ತುಗಳು, ಪಾತ್ರೆಗಳು ಮತ್ತು ಪಲ್ಲಕ್ಕಿಗಳನ್ನು ರಾಣಿ ಚರಕ ಮಹಲ್ ಭಾಗದಲ್ಲಿ ಕಾಣಬಹುದು.


Click it and Unblock the Notifications