Search
  • Follow NativePlanet
Share
ಮುಖಪುಟ » ಸ್ಥಳಗಳು» ಹರಸಿಲ್

ಹರಸಿಲ್ - ಪ್ರಶಾಂತತೆ ಹೊತ್ತುನಿಂತ ನೈಸರ್ಗಿಕ ಸಿರಿ

9

ಉತ್ತರಾಖಂಡ ರಾಜ್ಯದಲ್ಲಿರುವ ಒಂದು ಪುಟ್ಟ ಹಳ್ಳಿ ಹರಸಿಲ್. ಇದು ಸಮುದ್ರ ಮಟ್ಟದಿಂದ ಸುಮಾರು 2620 ಮೀ ಎತ್ತರದಲ್ಲಿದೆ. ಇದು ಭಾಗೀರಥಿ ನದಿಯ ದಂಡೆಯಲ್ಲಿದ್ದು ಉತ್ತರಕಾಶಿಯಿಂದ ಸುಮಾರು 72 ಕಿ.ಮೀ ದೂರದಲ್ಲಿದೆ.

ಒಂದು ನಂಬಿಕೆಯ ಪ್ರಕಾರ, ಒಮ್ಮೆ ಸತ್ಯಯುಗದಲ್ಲಿ ನದಿಗಳಾದ ಭಾಗೀರಥಿ ಮತ್ತು ಜಲಂಧರಿಯು ತಮ್ಮಲ್ಲಿ ಯಾರು ಶ್ರೇಷ್ಠರು ಎಂದು ಜಗಳವಾಡತೊಡಗಿದರು. ಇದನ್ನು ನೋಡಿದ ಹರಿಯು(ವಿಷ್ಣು ದೇವರು) ಒಂದು ಶಿಲೆಯಾಗಿ ಮಾರ್ಪಾಡಾಗಿ ಅವರ ನಡುವಿನ ಕ್ರೋಧವನ್ನು ಹೀರಿಕೊಂಡ. ಇದಕ್ಕಾಗಿ ಈ ಹಳ್ಳಿಗೆ ಹರಸಿಲ್ ಅಂದರೆ ‘ಹರಿಶಿಲೆ’ ಎಂಬ ಹೆಸರು ಬಂದಿತು ಹಾಗೂ ಅಂದಿನಿಂದ ಈ ಎರಡೂ ನದಿಗಳು ಕಡಿಮೆ ರಭಸವಾಗಿ ಹರಿಯುತ್ತಿವೆ ಎಂದು ನಂಬಲಾಗಿದೆ.

ಚಾರ್ ಧಾಮಗಳ ಒಂದು ಕೇಂದ್ರವಾದ ಗಂಗೋತ್ರಿಗೆ ಈ ಹಳ್ಳಿ ಸಮೀಪದಲ್ಲಿದೆ. ಇದು ಹಲವಾರು ಪ್ರವಾಸಿ ಆಕರ್ಷಣೆಗಳ ಕೇಂದ್ರವಾಗಿದೆ. ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಅವುಗಳಲ್ಲಿ ಒಂದು. ಇದು ಸುಮಾರು 30 ಕಿ.ಮೀ ದೂರದಲ್ಲಿದೆ. ಇದಲ್ಲದೆ ಇಲ್ಲಿರುವ ಮುಖ್ಬಾ ಹಳ್ಳಿಕೂಡ ಪ್ರಮುಖ ಆಕರ್ಷಣೆ. ಸೈನಿಕ ಕೃಷಿ ಸಂಶೋಧನಾ ಪ್ರಯೋಗಾಲಯ (ಡಿ.ಎ.ಆರ್.ಎಲ್) ಮೇ 1973 ರಲ್ಲಿ ಇಲ್ಲಿ ಸ್ಥಾಪನೆಯಾಯಿತು.

ಹರಸಿಲ್ ಒಂದು ಸಣ್ಣ ಹಳ್ಳಿ ಆದ ಕಾರಣ ತನ್ನದೇ ಆದ ಒಂದು ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮತ್ತು ರಿಷಿಕೇಶ ಸಮೀಪವಿರುವ ರೈಲ್ವೆ ನಿಲ್ದಾಣವಾಗಿದೆ. ಪ್ರವಾಸಿಗರು ಸಾಮಾನ್ಯವಾಗಿ ಏಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ತನಕ ಇಲ್ಲಿಗೆ ಭೇಟಿ ನೀಡುತ್ತಾರೆ.

ಹರಸಿಲ್ ಪ್ರಸಿದ್ಧವಾಗಿದೆ

ಹರಸಿಲ್ ಹವಾಮಾನ

ಉತ್ತಮ ಸಮಯ ಹರಸಿಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹರಸಿಲ್

  • ರಸ್ತೆಯ ಮೂಲಕ
    ರಸ್ತೆ ಮಾರ್ಗವಾಗಿಯೂ ಹರಸಿಲ್ ಗೆ ತಲುಪಬಹುದು. ಉತ್ತರಕಾಶಿ, ಡೆಹ್ರಾಡೂನ್, ನ್ಯೂ ತೆಹ್ರಿ ಮತ್ತು ರಿಷಿಕೇಷದಿಂದ ಬಸ್ಸು ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಿಷಿಕೇಶ್ ರೈಲ್ವೆ ನಿಲ್ದಾಣ ಹರಸಿಲ್ ಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ದೇಶದ ಇತರ ರೈಲ್ವೆ ನಿಲ್ದಾಣಗಳಿಗೆ ನಿರಂತರ ರೈಲುಗಳಿಂದ ಸಂಪರ್ಕ ಸಾಧಿಸುತ್ತದೆ. ಇದು ಹರಸಿಲ್ ಗೆ ಸುಮಾರು 215 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಈ ರೈಲ್ವೆ ನಿಲ್ದಾಣದಿಂದ ಹರಸಿಲ್ ಗೆ ತಲುಪಲು ಟಾಕ್ಸಿ ಮತ್ತು ಬಸ್ ಸೌಲಭ್ಯವನ್ನು ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹ್ರಾಡೂನಿನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದ್ದು ಸುಮಾರು 232 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರಂತರ ವಿಮಾನಗಳನ್ನು ಹೊಂದಿದೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಹರಸಿಲ್ ಗೆ ಟಾಕ್ಸಿಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu