Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಸಿಲ್ » ಹವಾಮಾನ

ಹರಸಿಲ್ ಹವಾಮಾನ

ಏಪ್ರಿಲ್ ನಿಂದ ಜೂನ್ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್, ಈ ಗಿರಿಧಾಮಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಅವಧಿಗಳಾಗಿವೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಏಪ್ರಿಲ್ ತಿಂಗಳು ಹರಸಿಲ್ ನಲ್ಲಿ ಬೇಸಗೆಯ ಆರಂಭವಾಗಿದ್ದು, ಇದು ಜೂನ್ ತಿಂಗಳವರೆಗೆ ಮುಂದುವರೆಯುತ್ತದೆ. ಈ ತಿಂಗಳ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 15  ಮತ್ತು 10 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತದೆ. ಈ ಸಮಯದಲ್ಲಿನ ಆಹ್ಲಾದಕರ ವಾಯುಗುಣದ ಕಾರಣದಿಂದ ಹೆಚ್ಚು ಹೆಚ್ಚು ಜನರನ್ನು ಅಕರ್ಷಿಸುತ್ತದೆ. ಆದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಉಣ್ಣೆ ಬಟ್ಟೆಯನ್ನು ಸಾಕಷ್ಟು ಪ್ರಮಾಣದಲ್ಲಿ ತರಬೇಕಾಗುತ್ತದೆ.

ಮಳೆಗಾಲ

(ಜುಲೈ ನಿಂದ ಆಗಸ್ಟ್): ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಆಗುವ ಬಂಡೆಗಳ ಕುಸಿತದ ಕಾರಣ ಮಳೆಗಾಲದಲ್ಲಿ ಇದು ಪ್ರವಾಸ ಯೋಗ್ಯ ತಾಣವಲ್ಲ. ಆದರೂ ಈ ಅವಧಿಯ ಇಲ್ಲಿನ ಸೌಂದರ್ಯ ನೋಡಿದವರೇ ಅನುಭವಿಸಬೇಕು.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿಯ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 10 ಮತ್ತು 0 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತದೆ. ಈ ಅವಧಿಯಲ್ಲಿ ಹಿಮಪಾತವೂ ಹೆಚ್ಚಾಗಿರುತ್ತದೆ.