ಚೊವ್ವಲೂರ್ (Chowallur) ಶಿವ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಚೊವ್ವಲೂರ್ (Chowallur) ಶಿವ ದೇವಾಲಯ

 ಚೊವ್ವಲೂರ್ (Chowallur) ಶಿವ ದೇವಾಲಯವು ಅತ್ಯಂತ ಪ್ರಮುಖ ಹಾಗೂ ಹೆಸರುವಾಸಿ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಶಿವಾಲಯ / ಶಿವಾಲಯಾಸ್ ಎಂದು ಪರಿಗಣಿಸಲಾಗಿದೆ. ಒಟ್ಟು 108 ಶಿವಾಲಯಗಳಿವೆ ಅವುಗಳಲ್ಲಿ ಈ ದೇವಾಲಯವೂ ಒಂದು. ಶಿವಾಲಯ ಎಂದರೆ ’ಶಿವನ ಪವಿತ್ರ ನೆಲೆ’ ಎಂದರ್ಥ. ಗುರುವಾಯೂರಿನಲ್ಲಿ ಈ ಶಿವ ದೇವಾಲಯವನ್ನು ನಿರ್ಮಿಸಲಾಗಿದ್ದು ಒಂದು ಸೊಗಸಾದ ಸ್ಥಳದಲ್ಲಿ ಈ ದೇವಾಲಯವನ್ನು ಕಾಣಬಹುದು.

ಈ ದೇವಾಲಯವನ್ನು ಶಿವನಿಗಾಗಿಯೇ ಕಟ್ಟಿಸಿದ್ದಾದರೂ ದೇವಾಲಯದ ಪ್ರವೇಶ ದ್ವಾರದಲ್ಲಿ  ತಿರುವಂಬಡಿ ಕೃಷ್ಣನ ಸುಂದರವಾದ ವಿಗ್ರಹವನ್ನು ಕಾಣಬಹುದು. ಶಿವಲಿಂಗವು ಈ ದೇವಾಲಯದ ವಿಶೇಷವಾಗಿದ್ದು ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತಿವರ್ಷ ಶಿವರಾತ್ರಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂಗ ಅತ್ಯುತ್ಸಾಹದಿಂದ ಇಲ್ಲಿ ಆಚರಿಸಲಾಗುತ್ತದೆ. ಆ ದಿನದ ರಾತ್ರಿಯನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಎಂಬಂತಹ ಬೆಡಗನ್ನು ಹೊಂದಿರುತ್ತದೆ.

ನೀವು ಗುರುವಾಯೂರಿನಲ್ಲಿ ಎಲ್ಲೇ ಪ್ರವಾಸದಲ್ಲಿದ್ದರೂ  ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ. ಈ ಶಿವ ದೇವಸ್ಥಾನದ ಸುತ್ತಮುತ್ತಲೂ ಶಾಂತಿ ಹಾಗೂ ಏಕಾಂತವನ್ನು ಹುಡುಕಲು ಸಹಾಯವಾಗುತ್ತದೆ. ಅಷ್ಟು ಉತ್ತಮವಾದ ವಾತಾವರಣವನ್ನು ನೀವು ಬೇರೆಲ್ಲಿ ಕಾಣಬಲ್ಲಿರಿ?

 

Please Wait while comments are loading...