ಆನೆ ಕ್ಯಾಂಪ್, ಗುರುವಾಯೂರ್

ಆನೆಗಳ ಕ್ಯಾಂಪ್ ಅಥವಾ ಶಿಬಿರವು ಗುರುವಾಯೂರಪ್ಪನ್ ದೇವಾಲಯದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪಣ್ಣತ್ತುರ್ ಕೊಟ್ಟ ಎಂಬ ಸ್ಥಳದಲ್ಲಿದೆ. ಈ ಆನೆಗಳ ಕ್ಯಾಂಪ್ ಭಾರತದಲ್ಲಿಯೇ ಅತೀ ದೊಡ್ಡ ಕ್ಯಾಂಪ್ ಎನಿಸಿದೆ. ಇದನ್ನು ಪಣ್ಣತ್ತುರ್ ರಾಜರುಗಳಿಂದ ಬಳಸಲಾಗುತ್ತದೆ. ಈ ಅಭಯಾರಣ್ಯವು ಹತ್ತು ಎಕರೆ ಪ್ರದೇಶವನ್ನು ಆವರಿಸಿದೆ. ಅಲ್ಲದೇ ಇಲ್ಲಿ ಸುಮಾರು 60 ಆನೆಗಳಿಗೆ ಆಶ್ರಯವನ್ನು ನೀಡಲಾಗಿದೆ.

ಗುರುವಾಯೂರಪ್ಪನ್ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳು ಶಿಬಿರದಲ್ಲಿರುವ ಆನೆಗಳಿಗೆ ಕೊಡುಗೆ (ತಿಂಡಿ, ಹಣ) ಗಳನ್ನು ನೀಡುತ್ತಾರೆ. ಟಸ್ಕರ್ ಗುರುವಾಯೂರ್ ಪದ್ಮನಾಭನ್ ಹಾಗೂ ಗುರುವಾಯೂರ್ ಕೇಶವನ್ ಈ ಆನೆಗಳು ಇಲ್ಲಿನ ಪ್ರಮುಖ ಉತ್ಪನ್ನಗಳಾಗಿವೆ. ಈ ಆನೆಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ. ದೇವಾಲಯದಲ್ಲಿ ನಡೆಯುವ ಉತ್ಸವದ ಸಂದರ್ಭದಲ್ಲಿ ದೇವರ ವಿಗ್ರಹಗಳನ್ನು ಹೊರಲು ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸಲಾಗುತ್ತದೆ.

ಅದಕ್ಕಿಂತ ಹೆಚ್ಚಾಗಿ ದೇವಾಲಯದ ಮುಖ್ಯಸ್ಥರಿಂದ ನಡೆಸಲ್ಪಡುವ ಆನೆಗಳ ರೇಸ್ / ಓಡಾಟ ದ ಸ್ಪರ್ಧೆಯ  ಸಮಯದಲ್ಲಿ ಶಿಬಿರದಲ್ಲಿನ ಆನೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಈ ರೇಸ್ ನ್ನು ’ಅನಯೊತ್ತಂ’ ಎಂದು ಕರೆಯಲಾಗುತ್ತದೆ. ಟಸ್ಕರ್ ಎಂಬ ಜಾತಿಗೆ ಸೇರಿದ ಆನೆಗಳನ್ನೇ ಉತ್ಸವದ ಸಮಯದಲ್ಲಿ ಮೆರವಣಿಗೆಗಾಗಿ ಬಳಸಲಾಗುತ್ತದೆ. ಈ ಆನೆಗಳ ಸ್ಪರ್ಧೆಯು ಮನೋರಂಜನೆಯನ್ನು ನೀಡುವಂತದ್ದಾಗಿದ್ದು ಪ್ರವಾಸಿಗರನ್ನು ಸೆಳೆಯುತ್ತದೆ. ಇಂತಹ ಆನೆಗಳ ಶಿಬಿರಕ್ಕೆ ನಿಮ್ಮ ಮಕ್ಕಳನ್ನು ಕರೆತಂದರೆ ಅವರ ಖುಷಿಗೆ ಪಾರವೇ ಇರುವುದಿಲ್ಲ!

Please Wait while comments are loading...