ಗುರುವಾಯೂರಪ್ಪನ್ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಗುರುವಾಯೂರಪ್ಪನ್ ದೇವಾಲಯ

ಭಾರತದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಅದರಲ್ಲೂ ನಮ್ಮ ದೇಶದಲ್ಲಿ ನೋಡಲೇ ಬೇಕಾದ 4 ಪ್ರಮುಖ ದೇವಾಲಯಗಳಲ್ಲಿ ಗುರುವಾಯೂರಪ್ಪನ್ ದೇವಾಲಯ ಕೂಡಾ ಒಂದು. ಏಕೆಂದರೆ ಇಲ್ಲಿ ಪ್ರತೀ ದಿನ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ’ಭೂಲೋಕ ವೈಕುಂಟ ಎಂದೂ ಕರೆಯಲಾಗುತ್ತದೆ. ಅಲ್ಲದೇ ಈ ದೇವಾಲಯಕ್ಕೆ ಬರುವುದು ಅತ್ಯಂತ ಪವಿತ್ರ ಹಾಗೂ ಮಂಗಳಕರ ಎಂದು ಹೇಳಲಾಗುತ್ತದೆ.

ಇಲ್ಲಿಯೇ ನೆಲೆಸಿರುವ ದೇವರೆಂದರೆ ಬಾಲ ಗೋಪಾಲ. ಶ್ರೀ ಕೃಷ್ಣನ ಬಾಲ್ಯವನ್ನು  ಹೀಗೆ ವಿವರಿಸಲಾಗುತ್ತದೆ. ಈ ದೇವಾಲಯವನ್ನು ಶ್ರೀ ಕೃಷ್ಣನ ಬಾಲ್ಯದ ಲೀಲೆಗಳನ್ನು ಹೇಳುವಂತಹ ಕಲ್ಪನೆಗಳು ಕೃಷ್ಣಲೀಲಕಲಾ ಚಿತ್ರಕಲೆಗಳಿಂದ ಅಲಂಕರಿಸಲಾಗಿದೆ. ಕೇರಳದ ಜಾನಪದ ಕಲೆಯಾದ ಕೃಷ್ಣಾಟಂ ಕಲಿ ಯ ಸೊಬಗನ್ನು ಈ ಸ್ಥಳದಲ್ಲಿ ಕಾಣಬಹುದು. ಈ ದೇವಾಲಯದಲ್ಲಿ ಕೇರಳದ ಕರ್ನಾಟಿಕ್ ಸಂಗೀತ ಹಾಗೂ  ಸಾಂಪ್ರದಾಯಿಕ ನೃತ್ಯಗಳನ್ನು ಆಯೋಜಿಸಲಾಗುತ್ತದೆ.

ಈ ದೇವಾಲಯದಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಮದುವೆ ಹಾಗೂ ಚೂರುಣು ಗಳು ನಡೆಯುತ್ತಿರುತ್ತವೆ. ಪ್ರತಿ ದಿನ ಎರಡು ಹೊತ್ತು ಭಕ್ತಾದಿಗಳಿಗಾಗಿ ಉಚಿತ ಅನ್ನಸಂತರ್ಪಣೆ ಮಾಡಲಾಗಿತ್ತದೆ. ಶಿವೇಲಿ ಹಬ್ಬದ ಸಂದರ್ಭದಲ್ಲಿ ಆನೆಗಳು ದೇವರ ಮೂರ್ತಿಯನ್ನು ಹೊತ್ತು ಮೆರವಣಿಗೆ ಹೋಗುವ ದೃಶ್ಯ ಅತ್ಯದ್ಭುತ. ಇಂತಹ ಅಪರೂಪದ ದೃಶ್ಯವನ್ನು ನೀವು ಆ ಸಮಯದಲ್ಲಿ ಗುರುವಾಯೂರಿನಲ್ಲಿದ್ದರೆ ಖಂಡಿತ ತಪ್ಪಿಸಿಕೊಳ್ಳಬೇಡಿ.

Please Wait while comments are loading...