Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರುವಾಯೂರ್ » ಹವಾಮಾನ

ಗುರುವಾಯೂರ್ ಹವಾಮಾನ

ಗುರುವಾಯೂರಿಗೆ ಹೋಗಲು ಅತ್ಯಂತ ಸರಿಯಾದ ಸಮಯವೆಂದರೆ ಚಳಿಗಾಲ ಮಾತ್ರ. ಆದರೆ ಅನೇಕ ಹಬ್ಬಗಳು ಆಗಸ್ಟ್ ನಿಂದ ನವೆಂಬರ್ ನಲ್ಲಿಯೇ ಆಚರಿಸಲ್ಪಡುವುದರಿಂದ ಈ ಸಮಯದಲ್ಲಿಯೂ ಗುರುವಾಯೂರಿಗೆ ಹೋಗಬಹುದು. ಈ ಸಂದರ್ಭದಲ್ಲಿ ಮಾತ್ರ ಹವಾಮಾನವು ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಗುರುವಾಯೂರಿನಲ್ಲಿ ಶಾಖ ಹಾಗೂ ಶುಷ್ಕ  ಮರ್ಕ್ಯೂರಿ (ಪಾದರಸ) 37 ಡಿ.ಸೆ ಇರುತ್ತದೆ. ಇಲ್ಲಿ ಕನಿಷ್ಠ 28 ಡಿ. ಸೆ. ಉಷ್ಣತೆ ಯಿರುತ್ತದೆ. ಬೆಸಿಗೆಯು ಮಾರ್ಚ್ ನಿಂದ ಮೇ ವರೆಗೆ ಕಾಣಬಹುದು. ಈ ಸಮಯದಲ್ಲಿ ಗುರುವಾಯುರಿಗೆ ಪ್ರವಾಸಕ್ಕೆ ಹೋಗುವುದು ಅಷ್ಟು ಸೂಕ್ತವಲ್ಲ.

ಮಳೆಗಾಲ

ಮಳೆಗಾಲವು ಗುರುವಾಯೂರಿನಲ್ಲಿ ಜೂನ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಗುರುವಾಯೂರಿನಲ್ಲಿ ಅಧಿಕ ಮಳೆಯಾಗುತ್ತದೆ. ಈ ಮಳೆಯ ನಡುವೆಯೂ ಇಲ್ಲಿ ಸರಾಸರಿ ಉಷ್ಣಾಂಶ ಬೆಚ್ಚಗಿರುತ್ತದೆ. ಮಳೆಗಾಲದಲ್ಲಿ ಗುರುವಾಯೂರಿಗೆ ಬರುವುದು ದುಸ್ಸಾಹಸವೆನಿಸಿ ಬಿಡುತ್ತದೆ.

ಚಳಿಗಾಲ

ಚಳಿಗಾಲ ಋತುವಿನಲ್ಲಿ ಆಹ್ಲಾದಕರ ವಾತಾವರಣ ದ ಅನುಭವವನ್ನು ಗುರುವಾಯೂರಿನಲ್ಲಿ ಪಡೆಯಬಹುದು. ಕೇರಳದ ಉಳಿದ ಭಾಗಗಳಲ್ಲಿರುವಂತೆ ಚಳಿಗಾಲವು ಅಲ್ಪಾವಧಿಯದಾಗಿದ್ದು, ಕೇವಲ ಮೂರು ತಿಂಗಳು ಚಳಿಗಾಲದ ಅವಧಿ. ಈ ಸಮಯದಲ್ಲಿ ಉಷ್ಣಾಂಶವು 23 ಡಿ.ಸೆ ನಿಂದ 30 ಡಿ.ಸೆ. ಇರುತ್ತದೆ.