ದೇವಾಸ್ವಮ್ ಮ್ಯೂಸಿಯಂ/ ವಸ್ತು ಸಂಗ್ರಹಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ದೇವಾಸ್ವಮ್ ಮ್ಯೂಸಿಯಂ/ ವಸ್ತು ಸಂಗ್ರಹಾಲಯ

 ದೇವಾಸ್ವಮ್ ವಸ್ತು ಸಂಗ್ರಹಾಲಯ ಗುರುವಾಯೂರಪ್ಪನ್ ದೇವಾಲಯದ ಪೂರ್ವ ಗೇಟ್ ಗೆ ಹೋಗುವ ದಾರಿಯಲ್ಲೇ ಕಾಣ ಸಿಗುತ್ತದೆ. ಈ ವಸ್ತು ಸಂಗ್ರಹಾಲಯದಲ್ಲಿ ಬೇರೆ ಬೇರೆ ಪ್ರಮುಖ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಂಗೀತ ಉಪಕರಣಗಳು, ಪ್ರಾಚೀನ ವಸ್ತುಗಳು, ವಾಸ್ಯುಶಿಲ್ಪಗಳು, ದೇವಾಲಯದಲ್ಲಿನ ಸಾಮಗ್ರಿಗಳು ಹೀಗೆ ಕೇರಳದ ಅನೇಕ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಕಾಣಬಹುದು. ಅಲ್ಲದೇ ಗುರುವಾಯೂರಪ್ಪನ್ ದೇವಾಲಯದ ಹಲವಾರು ಹಳೆಯ ವಸ್ತುಗಳನ್ನು ಹಾಗೂ ಗುರುವಾಯೂರಿನಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಆನೆಗಳಿಗೆ ಮೆರವಣಿಗೆ ಹೋಗುವಾಗ ಅಲಂಕರಿಸುವ ಅಲಂಕಾರಿಕ ಒಡವೆ ವಸ್ತ್ರಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ದೇವಾಸ್ವಮ್ ವಸ್ತು ಸಂಗ್ರಹಾಲಯ ಚಿತ್ರಗಳನ್ನು ವಿಗ್ರಹಗಳು ಮತ್ತು ಪ್ರಸಿದ್ಧ ಕವಿಗಳಾದ ಪೂಂತನಂ ಹಾಗೂ ಮೆಲಪ್ತುರ್ ಮೊದಲಾದವರ ಚಿತ್ರಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದಲ್ಲದೇ ಕೇರಳದ ಜಾನಪದ ಕಲೆಗಳಾದ ಕಥಕ್ಕಳಿ ಹಾಗೂ  ಕೃಷ್ಣಾಟಂ ಗಳಲ್ಲಿ ಬಳಸುವ ವಿಶೇಷವಾದ ಆಭರಣಗಳನ್ನೂ ದೇವಾಸ್ವಮ್ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಇಲ್ಲಿಗೆ ಒಮ್ಮೆ ಭೇಟಿಯಿತ್ತರೆ ಇಲ್ಲಿ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅಂತಹ ಅಪರೂಪದ ವಸ್ತು ಸಂಗ್ರಹಾಲಯವೆನಿಸಿದೆ ದೇವಾಸ್ವಮ್ ಮ್ಯೂಸಿಯಂ. ಇಲ್ಲಿಗೆ ವಿದೇಶಿಯರೂ ಕೂಡಾ ಪ್ರವಾಸಕ್ಕಾಗಿ ಆಗಮಿಸುತ್ತಾರೆ.

ಈ ಸ್ಥಳವು ಅತ್ಯಂತ ಹೆಸರುವಾಸಿಯಾದ ಪ್ರವಾಸಿ ತಾಣ. ಕೇರಳದ ಕಲೆ, ಸಂಸ್ಕೃತಿಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಬೇಕೆಂದಿದ್ದರೆ ಗುರುವಾಯೂರಿನಲ್ಲಿರುವ ದೇವಾಸ್ವಮ್ ಮ್ಯೂಸಿಯಂ ಗೆ ಭೇಟಿ ನೀಡಲೇ ಬೇಕು.

 

Please Wait while comments are loading...