ಮಮ್ಮಿಯೂರ್ ಮಹದೇವ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಮಮ್ಮಿಯೂರ್ ಮಹದೇವ ದೇವಾಲಯ

 ಮಮ್ಮಿಯೂರ್ ಮಹದೇವ ದೇವಾಲಯವನ್ನು ಗೌರವಾನ್ವಿತ ಗುರುವಾಯೂರಪ್ಪನ್ ದೇವಾಲಯದ ಸಮೀಪವೇ ಸ್ಥಾಪಿಸಲಾಗಿದೆ. ದೇವಾಲಯದ ಹೆಸರೇ ಹೇಳುವಂತೆ ಈ ದೇವಾಲಯ ಶಿವ ಭಕ್ತರಿಗಾಗಿಯೇ ಮೀಸಲಾಗಿದೆ. ಈ ದೇವಾಲಯವು ಭಿತ್ತಿ ಚಿತ್ರ ಅಥವಾ ಗೋಡೆ ಚಿತ್ರಗಳಿಂದ ಅಲಂಕರಿಸಲಾಗಿದೆ. ಈ ವರ್ಣ ಚಿತ್ರಗಳಲ್ಲಿ ದುಷ್ಟರ ಸಂಹಾರಕ್ಕಾಗಿ ಶ್ರೀ ಮಹಾ ವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯ ಚಿತ್ರಗಳನ್ನು ಬಿಂಬಿಸಲಾಗಿದೆ. ಈ ಚಿತ್ರಗಳನ್ನು ನೋಡಿದರೆ, ಪೌರಾಣಿಕ ಘಟನೆಗಳೇ ಕಣ್ಮುಂದೆ ಬರುತ್ತವೆ.

ಗುರುವಾಯೂರಿಗೆ ಪ್ರವಾಸಕ್ಕಾಗಿ ಬಂದವರು ಈ ಮಹದೇವ ದೇವಾಲಯಕ್ಕೆ ಭೇಟಿ ನೀಡದೇ ಹೋದರೆ ಅವರ ಯಾತ್ರೆ ಪೂರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದೊಂದು ಕೇವಲ ನಂಬಿಕೆಯಾಗಿದ್ದರೂ ಇಲ್ಲಿನ ಸೊಬಗನ್ನು ದೇವಾಲಯಕ್ಕೆ ಬಂದೇ ಅರಿತುಕೊಳ್ಳಬೇಕು. ಆದ್ದರಿಂದಲೇ ಗುರುವಾಯೂರಪ್ಪನ್ ದೇವಾಲಯಕ್ಕೆ ಬಂದ ಸಹಸ್ರಾರು ಭಕ್ತರು ಈ ಶಿವ ದೇವಾಲಯಕ್ಕೆ ಭೇಟಿ ನೀಡದೇ ಹಿಂತಿರುಗುವುದಿಲ್ಲ.  ಒಂದು ಜನಪ್ರಿಯ ಪುರಾಣದ ಕಥೆಯ ಪ್ರಕಾರ ಗುರುವಾಯೂರಪ್ಪನ್ ದೇವಾಲಯದಲ್ಲಿದ್ದ ಶಿವ ತನ್ನ ನೆಲೆಯನ್ನು ದಾನ ಮಾಡಿ ಇಲ್ಲಿಗೆ ಸ್ಥಳಾಂತರಗೊಂಡು ಬಂದು  ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

ಈ ಶಿವ ದೇವಾಲಯದ ಒಳ ಭಾಗದಲ್ಲಿ ತಾಯಿ ಪಾರ್ವತಿಯ ಚಿತ್ರಗಳನ್ನೂ ಕೂಡಾ ಕಾಣಬಹುದು.  ಅಲ್ಲದೇ ಇಲ್ಲಿ, ಗಣಪತಿ, ಸುಬ್ರಹ್ಮಣ್ಯ, ಅಯ್ಯಪ್ಪ, ಹಾಗೂ ಭಗವಾನ್ ವಿಷ್ಣುವಿನ ದೇವಾಲಯಗಳನ್ನು ಕೂಡಾ ಕಾಣಬಹುದು.

Please Wait while comments are loading...