ಲೆಕೈ ಚೆತಿಯ ಮೈದಮ್ ಒಂದು ‘ಥಾನ್’ ಅಥವ ಧಾರ್ಮಿಕ ಸಂಸ್ಥೆ. ಇದು ಸ್ವರಗೊದಿಯೊ ಪ್ರತಾಪ ಸಿಂಗನ ಬಳಿ ಕೆಲಸ ಮಾಡುತ್ತಿದ್ದ ಅಹೊಮಾ ಅಧಿಕಾರಿ ಲೆಕೈ ಚೆತಿಯಗೆ ಸಂಬಂಧಿಸಿದ್ದು. ದೊಡ್ಡ ‘ಮೈದಾಮ್’ ಸೆಸ್ಸಾದ ಮನ್ಕೊಟ ರಸ್ತೆಯ ಸಮೀಪವಿದೆ. ಲೆಕೈ ಚೆತಿಯ ಮೈದಾಮ್ ‘ಥಾನ್’ ಎಂದು ಪ್ರಸಿದ್ಧಿ ಪಡೆಯಲು ಕಾರಣವೆಂದರೆ ಇದೊಂದು ಧಾರ್ಮಿಕ ಸಂಸ್ಥೆ.
ಈ ಧಾರ್ಮಿಕ ಸಂಸ್ಥೆಯ ಆವರಣದೊಳಗೆ ‘ಲೆಕೈ’ ಎನ್ನುವ ಪ್ರದೇಶವಿದೆ. ಅಸ್ಸಾಂ ಮುಖ್ಯ ಪ್ರವಾಸಿ ಕೇಂದ್ರಗಳಲ್ಲಿ ಇದು ಕೂಡ ಒಂದು. ಲೆಕೈ ಚೆತಿಯ ಮೈದಾಮ್ ಅಲ್ಲದೆ ದಿಬ್ರುಗಡ್ನಲ್ಲಿ ಇನ್ನೂ ಹಲವು ಜನಪ್ರಿಯ ಮೈದಾಮ್ಗಳಿವೆ. ಬರ್ಬರುವ ಮೈದಾಮ್, ಸೊರುಮೆಚಲೊ ಮತ್ತು ಬೊರಮೆಚಲೊ ಮೈದಾಮ್ ಮತ್ತು ದಹಿಖೊವ ದಶರಥ ಡೊವೆರ್ಹಕ ಬೊರ್ಫುಕನ್ ಮೈದಾಮ್ಗಳು ಇವುಗಳಲ್ಲಿ ಕೆಲವು. ಲೆಕೈ ಚೆತಿಯ ಮೈದಾಮ್ಗೆ ಹೋಗಲು ಬಾಡಿಗೆ ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಮತ್ತು ನಗರ ಸಾರಿಗೆ ಬಸ್ಸುಗಳು ಲಭ್ಯವಿವೆ.