Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ಹವಾಮಾನ

ದಿಬ್ರುಗಡ್ ಹವಾಮಾನ

ವರ್ಷ ಪೂರ್ತಿ ಹವಾಮಾನವು ಅನುಕೂಲಕರವಾಗಿರುವುದರಿಂದ ಯಾವಾಗ ಬೇಕಾದರೂ ದಿಬ್ರುಗಡ್ಗೆ ಭೇಟಿ ನೀಡಬಹುದು. ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶವಿರುವುದಿಲ್ಲವಾದ್ದರಿಂದ ಆರಾಮವಾಗಿ ಸುತ್ತಾಡಬಹುದು. ಮಳೆಗಾಲವು ಸುತ್ತಲ ಪ್ರಕೃತಿಗೆ ಹೊಸ ಗಂಧ ಮತ್ತು ಸೌಂದರ್ಯವನ್ನು ನೀಡುತ್ತದೆ. ಚಳಿಗಾಲದಲ್ಲಿ ಪ್ರಶಾಂತ ವಾತಾವರಣವಿರುತ್ತದೆ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆ ಕಾಲ. ಬೇಸಿಗೆಯಲ್ಲಿ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ಗಳನ್ನು ದಾಟುವುದಿಲ್ಲವಾದ್ದರಿಂದ ಹೆಚ್ಚು ಧಗೆಯಿರುವುದಿಲ್ಲ. ಈ ಸಮಯದಲ್ಲಿನ ಕನಿಷ್ಠ ಉಷ್ಣಾಂಶವೆಂದರೆ 20 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಒಟ್ಟಿನಲ್ಲಿ ಬೇಸಿಗೆ ದಿಬ್ರುಗಡ್ನಲ್ಲಿ ಆಹ್ಲಾದಕರವಾಗಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗುತ್ತದೆ. ಮಳೆಗಾಲದ ನಂತರದ ಎರಡು ತಿಂಗಳುಗಳು ಹೆಚ್ಚು ಆರಾಮದಾಯವಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಹಸಿರು ಸಿರಿಯನ್ನು ನೋಡುವುದೇ ಚೆಂದ.

ಚಳಿಗಾಲ

ಡಿಸಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 9 ಡಿಗ್ರಿಗಳಷ್ಟಿರುತ್ತದೆ. ಮಳೆಗಾಲಕ್ಕೆ ಹೋಲಿಸಿದಾಗ ಚಳಿಗಾಲದಲ್ಲಿ ಹವಾಮಾನವು ಅನುಕೂಲಕರವಾಗಿರುತ್ತದೆ. ಆದರೂ ಉಣ್ಣೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.