ಅಸ್ಸಾಮಿ ಸಮಾಜದ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಸಂಸ್ಥೆಗಳಾಗಿ ಸತ್ರಗಳು ಶತಮಾನಗಳಿಂದಲೂ ಕಾರ್ಯನಿರ್ವಹಿಸುತ್ತಿವೆ. ದಿಬ್ರುಗಡ್ನ ಈ ದಿಹಾಂಗ್ ಸತ್ರವು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಇದು ಧಾರ್ಮಿಕ ಕೇಂದ್ರವಾಗಿದ್ದರಿಂದ ಅಹೋಮಾ ರಾಜರು ಇದನ್ನು ನಿರಂತರವಾಗಿ ಪೋಷಿಸುತ್ತಾ ಬಂದರು.
ಅಹೋಮಾ ದೊರೆಗಳಲ್ಲಿ ರಾಜೇಶ್ವರ ಸಿಂಘ ಮತ್ತು ಗೌರಿನಾಥ ಸಿಂಘರು ಇದನ್ನು ಪೋಷಿಸಿದ ದೊರೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರಸಿದ್ಧ ಮೊಮೊರಿಯ ಕ್ರಾಂತಿ (1769-1806)ಯ ಸಂದರ್ಭದಲ್ಲಿ ದೆಹಿಂಗ್ ಸತ್ರವನ್ನು ಅಹೋಮಾ ದೊರೆಗಳು ಸಂರಕ್ಷಿಸಿದರು.
ಇಂದು ದೆಹಿಂಗ್ ಸತ್ರವು ಪಾಳು ಬಿದ್ದಿದೆಯಾದರೂ ಪ್ರವಾಸಿಗರಿಗೆ ಇತಿಹಾಸದ ದಿನಗಳನ್ನು ನೆನಪಿಸುತ್ತದೆ. ದೆಹಿಂಗ್ ನದಿಯಿಂದ ಈ ಸತ್ರಕ್ಕೆ ದೆಹಿಂಗ್ ಹೆಸರು ಬಂದಿದೆ. ಸತ್ರವು ದೆಹಿಂಗ್ ನದಿ ದಂಡೆಯಲ್ಲಿದೆ. ಇದು ಈ ಸ್ಥಳವನ್ನು ಜನಪ್ರಿಯ ಪ್ರವಾಸಿ ತಾಣವಾಗಿಸಿದೆ.