ವಲಸೆ ಹಕ್ಕಿಗಳ ಜನಪ್ರಿಯ ತಾಣವಾಗಿದ್ದು, ಜರ್ಮ್ ಪ್ಲಾಸ್ಮ್ ಕೇಂದ್ರವೆಂದೂ ಕರೆಯಲಾಗುವ ಈ ಉದ್ಯಾನವು ಜೊಕಾಯ್ ಮೀಸಲು ಅರಣ್ಯ ಪ್ರದೇಶದಲ್ಲಿ ನೆಲೆಸಿದೆ. ಇದು ಅಸ್ಸಾಮಿನ ದಿಬ್ರುಗಡ್‍ನಿಂದ 12 ಕಿ.ಮೀ ದೂರದಲ್ಲಿದೆ. ಮನ್ಕೊಟ್ಟಾ ಖಮ್ತಿಘಾಟ್ ರಸ್ತೆಯ ಮೇಲೆ ಇದನ್ನು ಕಾಣಬಹುದು. ಇಲ್ಲಿ ಅಂಗಾಂಶಗಳ ಸಂಗ್ರಹಣಾ ಕೊಠಡಿಯೂ ಇದೆ. ಈ ಉದ್ಯಾನವನ್ನು ರೈನ್ ಫಾರೆಸ್ಟ್ ಪ್ಲಾಟ್, ಆರ್ಕಿಡ್ ಹೌಸ್, ಮೆಡಿಸಿನಲ್ ಪ್ಲಾಂಟ್ಸ್, ವಾಟರ್ ಪಾಂಡ್ ಹೀಗೆ ಹಲವು ವಿಧಗಳಲ್ಲಿ ವಿಂಗಡಿಸಲಾಗಿದೆ.
ಈ ಪ್ರದೇಶದಲ್ಲಿ ಅಗಾಧ ಪ್ರಮಾಣದ ಸಸ್ಯ ಸಂಪತ್ತನ್ನೆ ನೋಡಬಹುದು. ಬೇಕಾದರೆ ಆನೆಯ ಮೇಲೆ ಕುಳಿತು ಸಫಾರಿ ಮಾಡುತ್ತ ಸುತ್ತಲಿನ ಪ್ರಕೃತಿ ಸೌಂದರ್ಯವನ್ನೂ ಸಹ ಸಹ ಸವಿಯಬಹುದು. ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ದೋನಿ ವಿಹಾರವನ್ನೂ ಸಹ ಕೈಗೊಳ್ಳಬಹುದು.


Click it and Unblock the Notifications