Search
  • Follow NativePlanet
Share
ಮುಖಪುಟ » ಸ್ಥಳಗಳು» ವಾರ್ಧಾ

ವಾರ್ಧಾ - ಐತಿಹಾಸಿಕ ಪ್ರವಾಸಿ ಆಕರ್ಷಣೆ

13

1866 ರಲ್ಲಿ ಹುಟ್ಟುಹಾಕಲಾಗಿದ್ದ ವಾರ್ಧಾ ಜಿಲ್ಲೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ವಾರ್ಧಾ ನದಿಯ ದಂಡೆಯ ಮೇಲೆ ಸುಮಾರು  6310 ಕಿ ಮೀ ವಿಸ್ತಾರದ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ ನಗರಕ್ಕೂ "ವಾರ್ಧಾ " ಎಂದು ಆ ನದಿಯದ್ದೇ ಹೆಸರನ್ನಿರಿಸಲಾಗಿದೆ.

ವಾರ್ಧಾ, ಪ್ರಸ್ತುತವಾಗಿ  ಪ್ರಮುಖ ಹತ್ತಿ ವ್ಯಾಪಾರ ಕೇಂದ್ರವಾಗಿದ್ದು, ಗಾಂಧೀಜಿ ಕಾಲದಲ್ಲಿಯೂ ಐತಿಹಾಸಿಕ ಮಹತ್ವ ಪಡೆದಿತ್ತು.  

ವಾರ್ಧಾದ ಇತಿಹಾಸ

ವಾರ್ಧಾ ಚಾಲುಕ್ಯರು, ಮಯೂರರು, ರಜಪೂತರು ಮತ್ತು ಶಾತವಾಹನರನ್ನೊಳಗೊಂಡ ಹಲವಾರು ಸಾಮ್ರಾಜ್ಯಗಳಿಂದ ಆಳಲ್ಪಟ್ಟಿದ್ದು ಐತಿಹಾಸಿಕವಾಗಿ ಉತ್ತಮ ಸ್ಥಾನವನ್ನು ಪಡೆದಿದೆ.

ವಾರ್ಧಾ 1351 ರಲ್ಲಿ ಮೊದಲು  ಬಹಮನಿ ಸಾಮ್ರಾಜ್ಯದ ವಶದಲ್ಲಿತ್ತು.  ಬಹಮನಿ ಸಾಮ್ರಾಜ್ಯ ಒಡೆದಾಗ ಅಂದರೆ  1518ರ ನಂತರ ಇದು  ಇಮಾದ್ ಶಾಹಿಯ ಆಳ್ವಿಕೆಗೆ  ಒಳಪಟ್ಟಿತು. ಮುಘಲ್ ಆಡಳಿತದ ತರುವಾಯ ವಾರ್ಧಾವು ಕೊನೆಯದಾಗಿ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು.

ಗಾಂಧಿಜಿಯ ಆಶ್ರಮಕ್ಕೆ ನೆಲೆ ಒದಗಿಸಿದ್ದ ವಾರ್ಧಾ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿತು.

ವಾರ್ಧಾದಲ್ಲಿನ ಪ್ರವಾಸಿ ಆಕರ್ಷಣೆಗಳು

ವಾರ್ಧಾವು  ಗೀತಾ ಮಂದಿರ, ಲಕ್ಷ್ಮಿ ನಾರಾಯಣ ಮಂದಿರ, ಮಹಾಕಾಳಿ ಮಂದಿರ ಮತ್ತು ಕೆಲ್ಜೆರ್ ದೇವಸ್ಥಾನಗಳಂತಹ  ಹಲವಾರು ದೇವಾಲಯಗಳಿಂದ  ಪ್ರಸಿದ್ಧವಾಗಿದೆ.

ವಿಶ್ವ ಶಾಂತಿ ಸ್ತೂಪ, ಪರಂಧಾಮ ಆಶ್ರಮ, ಗಾಂಧೀಜಿಯವರ ಆಶ್ರಮವಾದ ಬಾಪು ಕುಟಿರಗಳು ಐತಿಹಾಸಿಕ ಪೌನರ್ ಗ್ರಾಮದಲ್ಲಿವೆ. ವಾರ್ಧಾದ ಇತರ ಆಕರ್ಷಣೆಯಾದ ಸಂಗ್ರಹಾಲಯ, ಮ್ಯೂಸಿಯಂಗಳು ವಾರ್ಧಾವನ್ನು ಪ್ರವಾಸಿಗರಲ್ಲಿ ಆಕರ್ಷಕ ತಾಣವನ್ನಾಗಿಸಿದೆ.

ಹವಾಮಾನ

ವಾರ್ಧಾದ ಹವಾಮಾನ ವರ್ಷದ ಎಲ್ಲಾ ಕಾಲದಲ್ಲಿಯೂ ಉತ್ತಮವಾಗಿದ್ದು, ಬೇಸಿಗೆ ಸ್ವಲ್ಪ ಬಿಸಿಯಾಗಿರುತ್ತಿದ್ದರೂ, ಆಗಾಗ ಬೀಸುವ ತಂಪಾದ ಗಾಳಿಯಿಂದಾಗಿ ಬಿಸಿಲನ್ನು ನಿಭಾಯಿಸಬಹುದು. ಆದ್ದರಿಂದ ಚಳಿಗಾಲ ಹಾಗೂ ಮಳೆಗಾಲದ ನಂತರದ ಸಮಯದಲ್ಲಿ  ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ .

ಸಂಚಾರ/ಪ್ರಯಾಣ

ನಾಗ್ಪುರದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾಯುಯಾನ ಮಾಡುವವರಿಗೆ ವಾರ್ಧಾ ತಲುಪಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಅಲ್ಲದೆ ರೈಲು ಮಾರ್ಗವಾಗಿಯೂ ವಾರ್ಧಾ, ಇತರೆ ಪಟ್ಟಣಗಳು ಮತ್ತು ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ರಸ್ತೆ ಪ್ರಯಾಣ ಬಯಸುವ ಯಾತ್ರಿಕರಿಗೆ ಅನೇಕ ಬಸ್ ಸೇವೆಗಳು ಮತ್ತು ಇತರೆ ಸಾರಿಗೆ ವಾಹನಗಳು ಇಲ್ಲಿ ಲಭ್ಯವಿದೆ.

ವಾರ್ಧಾ ಪ್ರಸಿದ್ಧವಾಗಿದೆ

ವಾರ್ಧಾ ಹವಾಮಾನ

ಉತ್ತಮ ಸಮಯ ವಾರ್ಧಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಾರ್ಧಾ

  • ರಸ್ತೆಯ ಮೂಲಕ
    ವಾರ್ಧಾಕ್ಕೆ ಹಲವಾರು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಪ್ರವಾಸದ ಬಸ್ ಗಳು ಲಭ್ಯವಿದ್ದು ನಾಗ್ಪುರ, ಪುಣೆ ಮತ್ತು ಮುಂಬೈ ಮುಂತಾದ ನಗರಗಳಿಗೆ ರಸ್ತೆ ಸಂಪರ್ಕ ಹೊಂದಿವೆ. ಬಸ್ಸುಗಳ ದರ ನಿಮ್ಮ ಆಯ್ಕೆಯ ಮಾದರಿಯನ್ನು ಅವಲಂಬಿಸಿರುತ್ತದೆ - ಡಿಲಕ್ಸ್, ಸೆಮಿ ಡಿಲಕ್ಸ್, ಸ್ಲೀಪರ್, ನಾನ್ ಸ್ಲೀಪರ್, ಎ / ಸಿ, ನಾನ್ ಎ / ಸಿ ಪುಣೆಯಿಂದ ವಾರ್ಧಾಗೆ ಸರಾಸರಿ ಶುಲ್ಕ ಸುಮಾರು. 500 ರೂ ಗಳು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಾರ್ಧಾ ಕೊಂಕಣ ಮಾರ್ಗದ ಒಂದು ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ಪುಣೆ, ನಾಗ್ಪುರ ಮತ್ತು ಮುಂಬೈಗಳಂತಹ ಪ್ರಮುಖ ನಗರಗಳ ಸಂಪರ್ಕಹೊಂದಿದೆ. ರೈಲಿನ ಪ್ರಯಾಣವು ಆರಾಮದಾಯಕವೂ ಮಿತವ್ಯಯಕರವೂ ಆಗಿದ್ದು, ವಾರ್ಧಾ ನಗರದ ಹೃದಯ ಭಾಗವನ್ನು ತಲುಪಲು ನಿಲ್ದಾಣದಿಂದ ರಿಕ್ಷಾಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸುಮಾರು 74 ಕಿಮೀ ದೂರದಲ್ಲಿರುವ ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾರ್ಧಾದ ಹತ್ತಿರದ ವಿಮಾನ ನಿಲ್ದಾಣವಾಗಿದೆ. ವಾಯುಯಾನ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದ್ದು ಇದು ಮುಂಬೈ ವಿಮಾನ ನಿಲ್ದಾಣದ ಸಂಪರ್ಕವನ್ನೂ ಹೊಂದಿದೆ. ವಿಮಾನ ನಿಲ್ದಾಣದಿಂದ ವಾರ್ಧಾಕ್ಕೆ ಹೋಗಲು ಬಾಡಿಗೆಗೆ ಟ್ಯಾಕ್ಸಿಗಳು ದೊರೆಯುತ್ತಿದ್ದು ಪ್ರತಿ ಕಿ.ಮೀ 7 ರೂ ಗಳ ದರದಲ್ಲಿ ನಾನ್ ಎ / ಸಿ ಕ್ಯಾಬ್ ಗಳು ಲಭ್ಯವಿವೆ. ಮುಂಬೈ ನಲ್ಲಿ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಾಂದೇಡ್ ಏರ್ಪೋರ್ಟ್ ವಾಯುಯಾನ ಇಲ್ಲಿಗೆ ತಲುಪಲು ಇರುವ ಇತರ ಕೆಲವು ಆಯ್ಕೆಗಳು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City