Search
  • Follow NativePlanet
Share
» »ಈ ಊರಲ್ಲಿ ನೀವು ಮಗುವನ್ನು ಮಾತ್ರವಲ್ಲ ಇದನ್ನೂ ದತ್ತು ಪಡೆಯಬಹುದು

ಈ ಊರಲ್ಲಿ ನೀವು ಮಗುವನ್ನು ಮಾತ್ರವಲ್ಲ ಇದನ್ನೂ ದತ್ತು ಪಡೆಯಬಹುದು

ಪ್ರಕೃತಿ ಸೌಂದರ್ಯ ಇಷ್ಟಪಡುವವರು ಗಿಡ, ಮರಗಳನ್ನೂ ಇಷ್ಟ ಪಡ್ತಾರೆ. ಅವುಗಳನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ನಿಮಗೂ ಕೂಡಾ ಗಿಡ ಮರಗಳೆಂದರೆ ಇಷ್ಟನಾ? ಹಾಗಾದರೆ ಸಿಕ್ಕಿಂ ಸರ್ಕಾರ ನಿಮಗಾಗಿ ಒಂದು ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಅದೇನೆಂದರೆ ...

ಏನೀ ಯೋಜನೆ

ಏನೀ ಯೋಜನೆ

PC: Nichalp

ನೀವು ಇನ್ನು ನಿಮಗಿಷ್ಟ ಬಂದ ಮರವನ್ನು ದತ್ತು ತೆಗೆದುಕೊಳ್ಳಬಹುದು. ನಿಮ್ಮ ಸಹೋದರಿ, ಸಹೋದರ ಅಥವಾ ಮಗುವಿನಂತೆ ಮರವನ್ನೂ ದತ್ತು ಪಡೆಯಬಹುದಾಗಿದೆ. ಇಂತಹದ್ದೊಂದು ಅವಕಾಶವನ್ನು ಸಿಕ್ಕಿಂ ರಾಜ್ಯವು ಒದಗಿಸುತ್ತಿದೆ. ಸಿಕ್ಕಿಂ ಹೊಸ ಯೋಜನೆಯೊಂದನ್ನು ಜಾರಿಗೆ ತರಲಿದೆ . ಈ ಮೂಲಕ ನೀವು ಮರವನ್ನು ದತ್ತು ಪಡೆಯಬಹುದು.

ಸಿಕ್ಕಿಂ ಹೊಸ ಯೋಜನೆ

ಸಿಕ್ಕಿಂ ಹೊಸ ಯೋಜನೆ

ರಾಜ್ಯ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರು ಸಿಕ್ಕಿಂನ ಅರಣ್ಯದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಥಾಮಸ್ ಚಾಂಡಿ ಅವರಿಗೆ ಈ ಕಲ್ಪನೆಯನ್ನು ಪ್ರಸ್ತಾಪಿಸಿದರು. ಮಾನವ ಮತ್ತು ಮರದ ನಡುವಿನ ವೈಯಕ್ತಿಕ ಸಂಬಂಧವನ್ನು ನಿರ್ಮಿಸುವ ಸಲುವಾಗಿ ಈ ಹೊಸ ನಿಯಮಗಳನ್ನು ರಚಿಸಲಾಗುವುದು ಎನ್ನಲಾಗುತ್ತಿದೆ.

ಮರವನ್ನು ದತ್ತು ಪಡೆಯೋದು

ಮರವನ್ನು ದತ್ತು ಪಡೆಯೋದು

ಇದರ ಪ್ರಕಾರ ಯಾರೂ ಕೂಡಾ ಮರವನ್ನು ತನ್ನ ಸಹೋದರನಾಗಿಯೋ ಅಥವಾ ಮಗುವಾಗಿಯೋ ದತ್ತು ಪಡೆಯಬಹುದು. ಈ ಮೂಲಕ ಮರ ಹಾಗೂ ಮನುಷ್ಯನ ನಡುವಿನ ಬಾಂಧವ್ಯವನ್ನು ಇನ್ನಷ್ಟು ಉತ್ತಮವಾಗಿಸಲು ಸಾಧ್ಯವಾಗುತ್ತದೆ. ಅಥವಾ ಪರಲೋಕವನ್ನು ಸೇರಿರುವವರ ನೆನಪಿಗಾಗಿಯೂ ಮರವನ್ನು ದತ್ತು ಪಡೆಯಬಹುದಾಗಿದೆ.

ದತ್ತು ಪಡೆಯುವ ವಿಧಾನ

ದತ್ತು ಪಡೆಯುವ ವಿಧಾನ

ಈಗ ನೀವು ಒಂದು ಮಗುವನ್ನು ದತ್ತು ತೆಗೆದುಕೊಳ್ಳುವಾಗ ಏನೆಲ್ಲಾ ರೀತಿ ನೀತಿಗಳಿವೆಯೋ ಅದೇ ರೀತಿ ಒಂದು ಮರವನ್ನು ತೆಗೆದುಕೊಳ್ಳುವಾಗಲೂ ಎಲ್ಲಾ ರೀತಿಯ ಪೇಪರ್ ಚೆಕ್ ಮಾಡಿ, ವಿಚಾರಣೆ ಎಲ್ಲಾ ನಡೆಸಿದ ನಂತರವೇ ಆ ಮರವನ್ನು ಅವರ ಹೆಸರಿಗೆ ರಿಜಿಸ್ಟ್ರರ್ ಮಾಡಲಾಗುವುದು.

ಒಡೆತನ ಬದಲಾದಾಗ

ಒಡೆತನ ಬದಲಾದಾಗ

ಒಂದು ವೇಳೆ ಆ ಮರದ ಒಡೆತನ ಬೇರೆಯವರಿಗೆ ವರ್ಗಾವಣೆಯಾಗುವುದಾದರೆ ಅಥವಾ ಬೇರೆಯಾರಾದರೂ ಕೊಳ್ಳುವುದಾದರೆ ಆ ಮರದ ಈಗಿನ ಒಡೆಯ ಹಾಗೂ ಅದನ್ನು ಕೊಳ್ಳುವವನ ನಡುವೆ ಒಪ್ಪಂದ ನಡೆದು ಎಗ್ರಿಮೆಂಟ್ ಪೇಪರ್‌ಗೆ ಸಹಿಹಾಕಬೇಕು. ಒಂದು ವೇಳೆ ದತ್ತು ತೆಗೆದುಕೊಳ್ಳುವ ಮರ ಸಾರ್ವಜನಿಕ ಸ್ಥಳದಲ್ಲಿದ್ದರೆ ಮಾಲಿಕ ಸರ್ಕಾರದ ಅನುಮತಿ ಪಡೆದು ಅದನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು.

ಸಣ್ಣ ರಾಜ್ಯ

ಸಣ್ಣ ರಾಜ್ಯ

PC:No machine

ಸಿಕ್ಕಿಂ ಹಿಮಾಲಯಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯವಾಗಿದೆ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ. ಸುಮಾರು 75 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕೃಷಿ ಜಮೀನನ್ನು ಸುಸ್ಥಿರ ಬೇಸಾಯ ಪದ್ಧತಿಗೆ ಅಳವಡಿಸುವ ಮೂಲಕ ದೇಶದ ಮೊದಲ ಸಾವಯವ ರಾಜ್ಯ ಎಂಬ ಹೆಗ್ಗಳಿಕೆಗೆ ಸಿಕ್ಕಿಂ ಪಾತ್ರವಾಗಿದೆ.

 ಕಂಚನ್ ಜುಂಗಾ ಪರ್ವತ

ಕಂಚನ್ ಜುಂಗಾ ಪರ್ವತ

PC:AmarChandra

ಸಮುದ್ರ ಮಟ್ಟದಿಂದ ಸುಮಾರು 280 ಮೀ. ನಿಂದ ಹಿಡಿದು 8,585 ಮೀ ವರೆಗೆ ಎತ್ತರವಾಗಿವೆ. ಇಲ್ಲಿರುವ ಅತಿ ಎತ್ತರದ ಪ್ರದೇಶ ಕಂಚನ್ ಜುಂಗಾ ಪರ್ವತ. ಇದು ಜಗತ್ತಿನಲ್ಲಿಯೆ ಮೂರನೇಯ ಅತಿ ಎತ್ತರದ ಗಿರಿ ಶೃಂಗವಾಗಿದೆ. ಈ ರಾಜ್ಯದಲ್ಲಿ 28 ಗಿರಿಶೃಂಗಗಳು, 227 ಅತಿ ಎತ್ತರದಲ್ಲಿ ರೂಪಗೊಂಡಿರುವ ಕೆರೆಗಳು ಮತ್ತು 80 ಹಿಮನದಿಗಳನ್ನು ಕಾಣಬಹುದು.

ಪ್ರತಿವರ್ಷ ಹಿಮಪಾತವಾಗುತ್ತದೆ

ಪ್ರತಿವರ್ಷ ಹಿಮಪಾತವಾಗುತ್ತದೆ

ಭಾರತದಲ್ಲಿ ಪ್ರತಿ ವರ್ಷ ನಿರಂತರವಾಗಿ ಹಿಮಪಾತವಾಗುವ ಕೆಲವೇ ಕೆಲವು ಪ್ರದೇಶಗಳಲ್ಲಿ ಸಿಕ್ಕಿಂ ಕೂಡ ಒಂದು. ಆದ್ದರಿಂದ ಇಲ್ಲಿನ ಜನರು ಯಾವಾಗಲೂ ಒಂದು ಬಗೆಯ ಹಿತಕರವಾದ ವಾತಾವರಣವನ್ನು ಅನುಭವಿಸುತ್ತಾರೆ. ಇಲ್ಲಿನ ಮಳೆಗಾಲ ಕೊಂಚ ಅಪಾಯಕಾರಿ ಎಂದೆ ಹೇಳಬಹುದು.

ನೇಪಾಳಿಯರು ಆಚರಿಸುವ ಉತ್ಸವಗಳು

ನೇಪಾಳಿಯರು ಆಚರಿಸುವ ಉತ್ಸವಗಳು

PC:Carsten.nebel

ಇಲ್ಲಿ ಆಚರಿಸಲಾಗುವ ಕೆಲವು ಸಾಂಪ್ರದಾಯಿಕ ಉತ್ಸವಗಳೆಂದರೆ, ಮಘೈ ಸಂಕ್ರಾಂತಿ, ಭೀಮ್ ಸೇನ್ ಪೂಜಾ, ದ್ರುಪ್ಕಾ ತೇಶಿ, ಲೊಸರ್, ಬುಮ್ಚು, ಸಾಗಾ ದವಾ ಮತ್ತು ಲೂಸಂಗ್. ಎಲ್ಲ ವಿಧದ ಹಿಂದೂ ಉತ್ಸವಗಳನ್ನು ಇಲ್ಲಿ ನೆಲೆಸಿರುವ ನೇಪಾಳಿ ಮೂಲದವರಿಂದ ಆಚರಿಸಲ್ಪಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X