Search
  • Follow NativePlanet
Share
» »ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

By Vijay

ರಾಜ್ಯ - ಕರ್ನಾಟಕ
ಜಿಲ್ಲೆ - ತುಮಕೂರು
ತಾಲೂಕು - ಕುಣಿಗಲ್

ವಿಶೇಷತೆ : ಕುಣಿಗಲ್ ತಾಲೂಕಿನಲ್ಲಿ ಯಡಿಯೂರು ಗ್ರಾಮದ ಪ್ರಖ್ಯಾತ ಶ್ರಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ

ದೇವಾಲಯ ಪರಿಚಯ

ಕರುನಾಳು ಯಡಿಯೂರ ವಾಸ....ಸಿದ್ಧಲಿಂಗೇಶ, ಪೊರೆಯೋ ಹೇ ಪರಮೇಶ ದೇವಾಧಿ ದೇವ....ಎಂಬ ಹಾಡು ಬಹುತೇಕರು ಕೇಳಿರಲೇಬೇಕು. ಎಸ್ ಪಿ ಬಿ ಅವರ ಮಧುರ ಧ್ವನಿಯಲ್ಲಿ ಸೊಗಸಾಗಿ ಮೂಡಿಬಂದ ಆ ಗೀತೆಯು ಯಡಿಯೂರಿನಲ್ಲಿ ನೆಲೆಸಿರುವ ಸಿದ್ಧಲಿಂಗೇಶ್ವರ ಸ್ವಾಮಿಗೆ ಸಮರ್ಪಿತವಾಗಿದೆ. ಅಂತೆಯೆ ಯಡಿಯೂರಿನ ಸಿದ್ಧಲಿಂಗೇಶ್ವರನ ಸನ್ನಿಧಾನವು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ.

ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ಲಿಂಗಾಯತ ಸಮುದಾಯದವರ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಯಡಿಯೂರು ಕರ್ನಾಟಕದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಹದಿನೈದನೇಯ ಶತಮಾನದಲ್ಲಿದ್ದ ಲಿಂಗಾಯತ ಮತದ ಪರಮ ಸಂತರಾದ ತೊಂಟದ ಸಿದ್ಧಲಿಂಗರವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ಪ್ರತಿ ವರ್ಷದ ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರನ ಸನ್ನಿಧಾನದಲ್ಲಿ ಉತ್ಸವಗಳನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯಂದ ಸಹಸ್ರ ರುದ್ರಾಭಿಶೇಕವನ್ನೂ ಹಾಗೂ ಯುಗಾದಿಯು ಸಿದ್ಧಲಿಂಗೇಶ್ವರರು ಸಮಾಧಿ ತೆಗೆದುಕೊಂಡುದರ ಸೂಚಕವಾಗಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ.

ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ಶಾರವಣ ಮಾಸದಲ್ಲಿ ಸಹಸ್ರ ಕಮಲ ಪೂಜೆ, ಲಕ್ಷ ಬಿಲ್ವಾರ್ಚನೆ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ಕುಂಬಾಭಿಶೇಕ ನಡೆದರೆ, ದೀಪಾವಳಿಯಂದು ಲಕ್ಷ ದೀಪೋತ್ಸವವನ್ನು ಆಯೋಜನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯ ಗೋಪುರವು ಎಣ್ಣೆ ದೀಪಳಿಂದ ಕಂಗೊಳಿಸುತ್ತದೆ.

ಸಿದ್ಧಲಿಂಗೇಶ್ವರ ಸ್ವಾಮಿ ಪರಿಚಯ

ವೀರಶೈವ-ಲಿಂಗಾಯತ ಸಮುದಾಯದಲ್ಲಿ ಶರಣ ಸಂಸ್ಕೃತಿ ಅತ್ಯಂತ ಉಚ್ಛವಾದ ಸ್ಥಾನಮಾನ ಪಡೆದಿದ್ದು ಅದರಲ್ಲಿ ಬರುವ ಪ್ರಮುಖ ವಚನಕಾರ ಹಾಗೂ ಸಂತರುಗಳಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಒಬ್ಬರು. ಹದಿನೈದನೇಯ ಶತಮಾನದಲ್ಲಿದ್ದ ಸಿದ್ಧಲಿಂಗೇಶ್ವರರು ಬಸವಣ್ಣ, ಅಲ್ಲಮಪ್ರಭು ಅವರಿಂದ ಪ್ರಭಾವಿತರಾಗಿ ಇಷ್ಟಲಿಂಗದ ಕುರಿತು ದೇಶ ಸಂಚಾರ ಮಾಡುತ್ತ ಬೋಧನೆ ಮಾಡಿದರು.

ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!

ಚಿತ್ರಕೃಪೆ: Akshatha Inamdar

ತಮ್ಮ ದೇಶ ಪರ್ಯಟನೆಯ ಸಂದರ್ಭದಲ್ಲಿ ಅನೇಕ ರೀತಿಯ ಪವಾಡಗಳನ್ನು ಮಾಡುತ್ತ ಜನರಿಗೆ ಬಹು ಹತ್ತಿರವಾದರು. ಯಾವುದೆ ಜಾತಿ ಮತ ಧರ್ಮ ಬೇಧಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದರು. ಒಕ್ಕೊಲಿಗರೊಬ್ಬರ ತೋಟದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ತಪಗೈದು ಹೆಚ್ಚಿನ ಸಾಧನೆಗೈದರು. ಇಲ್ಲಿಂದಲೆ ಅವರಿಗೆ ತೊಂಟದ ಸಿದ್ಧಲಿಂಗೇಶ ಎಂಬ ಹೆಸರು ಬಂದಿತು.

ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ

ಮುಂದೆ ಮುರ್ಗಾ ಮಠದ ಪೀಠಾಧಿಪತಿಗಳಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದರು. ಲಿಂಗಾಯತ ಮತದಲ್ಲಿ ಅದ್ಭುತವಾಗಿ ಬರೆದವರನೇಕರು ಇವರ ಅನುಯಾಯಿಗಳಾಗಿದ್ದರು. ಶತಸ್ಥಳ ಜ್ಞಾನ ಸಾರಾಮೃತವನ್ನು ಹೊರತಂದ ಇವರು ಅದರಲ್ಲಿ 701 ವಚನಗಳನ್ನು ರಚಿಸಿದ್ದಾರೆ. ಅಲ್ಲದೆ ಐಕ್ಯವಾಗುವ ಬಗೆಯ ಕುರಿತು ಸಾಕಷ್ಟು ಬೆಳಕು ಚೆಲ್ಲಿದ್ದಾರೆ.

ಎಲ್ಲಿದೆ ಹಾಗೂ ತಲುಪುವ ಬಗೆ

ಯಡಿಯೂರು ತಮುಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಬರುವ ಒಂದು ಹಳ್ಳಿ. ತುಮಕೂರು ನಗರ ಕೇಂದ್ರದಿಂದ 60 ಹಾಗೂ ಕುಣಿಗಲ್ ನಿಂದ 25 ಕಿ.ಮೀ ಗಳಷ್ಟು ದೂರದಲ್ಲಿದೆ. ತುಮಕೂರಿನಿಂದ ಕುಣಿಗಲ್ ಗೆ ತೆರಳಿ ಅಲ್ಲಿಂದ ಯಡಿಯೂರನ್ನು ಸುಲಭವಾಗಿ ತಲುಪಬಹುದಾಗಿದೆ.

ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more