• Follow NativePlanet
Share
» »ಇದು ಶಿವನ ರಹಸ್ಯವಾದ ಪರ್ವತ...!

ಇದು ಶಿವನ ರಹಸ್ಯವಾದ ಪರ್ವತ...!

Posted By:

ಮಹಾಶಿವನಿಗೆ ದೇಶದಾದ್ಯಂತ ಪೂಜೆಗಳನ್ನು ಮಾಡುತ್ತಾರೆ. ಶಿವನು ಅಂತರ್‍ಯಾಮಿ ಸೃಷ್ಟಿಯ ಆದಿಯು ಅವನೇ ಅಂತ್ಯವೂ ಅವನೇ. ಶಿವನನ್ನು ದರ್ಶನ ಮಾಡಲು ಅನೇಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತೇವೆ. ಮೂಲತಃ ಶಿವನು ರಹಸ್ಯವಾಗಿ ಅಡಗಿಸಿಕೊಂಡಿರುವ ಪರ್ವತವು ಇಂದಿಗೂ ಒಂದು ಮಹಾಅದ್ಭುತವೆಂದೇ ಹೇಳಬಹುದು. ಆತನು ಹೆಚ್ಚಾಗಿ ಬೆಟ್ಟಗಳ ಮೇಲೆ ಪರ್ವತಗಳ ಮೇಲೆ ಲಿಂಗ ರೂಪದಲ್ಲಿ ನೆಲೆಸಿರುತ್ತಾನೆ ಎಂದು ಅನೇಕರು ಹೇಳುತ್ತಾರೆ. ಆದರೆ ದೇವತಾಮೂರ್ತಿಯಾದ ಶಿವನು ಭಯದಿಂದ ಹಾಗು ರಹಸ್ಯದಿಂದ ಒಂದು ಪರ್ವತದ ಮೇಲೆ ಅಡಗಿಸಿಕೊಂಡಿದ್ದಾನೆ ಎಂದು ಒಂದು ಕಥೆ ಕೂಡ ಪ್ರಚಾರಸಲ್ಲಿದೆ. ಅಷ್ಟಕ್ಕೂ ಸಕಲ ಜೀವಿಯನ್ನು ಸಲುಹುವ ಆ ಪರಮೇಶ್ವರನು ಏಕೆ ಭಯಬಿದ್ದನು? ಎನ್ನುವುದರ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ಎಲ್ಲಿದೆ?

1.ಎಲ್ಲಿದೆ?

ಮಹಾಶಿವನು ನೆಲೆಸಿರುವ ಸ್ಥಳ ಬೇರೆಲ್ಲೂ ಇಲ್ಲ ಬದಲಾಗಿ ನಮ್ಮ ಕರ್ನಾಟಕ ಜಿಲ್ಲೆಯೇ ಇದೆ. ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿನಲ್ಲಿ ವಿಸ್ತರಿಸಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಯಾಣದ ಸಮೀಪದಲ್ಲಿ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ಸ್ಥಳವನ್ನು ಭೈರವ ಶಿಖರ ಎಂದು ಕರೆಯುತ್ತಾರೆ. ಇಲ್ಲಿನ ಪರ್ವತದ ಮಧ್ಯದ ಸುತ್ತ ಕಲ್ಲಿನ ನಿರ್ಮಾಣವು ಏರ್ಪಟ್ಟು ಅತ್ಯಂತ ಸುಂದರವಾದ ಪ್ರದೇಶವೇ ಯಾಣ.

2.ಇದು ಶಿವನ ರಹಸ್ಯವಾದ ಪರ್ವತ...!

2.ಇದು ಶಿವನ ರಹಸ್ಯವಾದ ಪರ್ವತ...!

ಅಲ್ಲಿಗೆ ಸೇರಿಕೊಳ್ಳಬೇಕಾದರೆ ಮಾತ್ರ ತುಂಬ ಕಠಿಣವಾದುದು. ಏಕೆಂದರೆ ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶವಿದ್ದು, ಮೊಗಿಲೆತ್ತರದ ಬೆಟ್ಟಗಳು, ಎಂಥವರನ್ನು ಮಂತ್ರಮುಗ್ಧರನ್ನಾಗಿಸುವ ಜಲಪಾತಗಳು. ಅವುಗಳನ್ನು ದಾಟುತ್ತಾ ಹೋದರೆ ಯಾಣ ಸೇರಿಕೊಳ್ಳಬಹುದು. ಅಲ್ಲಿಯೇ ಇದೆ ಶಿವನು ಅಡಗಿಸಿಕೊಂಡಿರುವ ಬೆಟ್ಟವೇ ಭೈರವಶ್ವೇರ ಶಿಖರ.

3.ಇದು ಶಿವನ ರಹಸ್ಯವಾದ ಪರ್ವತ...!

3.ಇದು ಶಿವನ ರಹಸ್ಯವಾದ ಪರ್ವತ...!

ಭಸ್ಮಾಸುರನು ಶಿವನನ್ನು ತನ್ನಲ್ಲಿ ನೆಲೆಸಿಕೊಳ್ಳಬೇಕು ಎಂಬ ಅತಿ ಆಸೆಯಿಂದ ಶಿವನಿಗಾಗಿ ಹುಡುಕಾಟ ಮಾಡುತ್ತಿದ್ದನು. ಲೋಕ ಕಲ್ಯಾಣಕ್ಕಾಗಿ ಶಿವನು ಮಹಾರಾಕ್ಷಸನಾದ ಭಸ್ಮಾಸುರನಿಂದ ತಪ್ಪಿಸಿಕೊಂಡು ರಹಸ್ಯವಾಗಿ ಅಡಗಿಸಿಕೊಂಡ ಎಂದು ಪುರಾಣ ಇತಿಹಾಸ ಹೇಳುತ್ತವೆ.

4.ಇದು ಶಿವನ ರಹಸ್ಯವಾದ ಪರ್ವತ...!

4.ಇದು ಶಿವನ ರಹಸ್ಯವಾದ ಪರ್ವತ...!

ಚರಿತ್ರೆ ಹೇಳುತ್ತಿರುವ ಹಾಗೆ ಇದು ಅತ್ಯಂತ ರಹಸ್ಯವಾದ ಪ್ರದೇಶವಾಗಿ ಕಾಣಿಸುತ್ತದೆ. ಇಲ್ಲಿ ಚಿತ್ರ-ವಿಚಿತ್ರಗಳು ಹೆಚ್ಚಾಗಿಯೇ ಕಾಣಿಸುತ್ತವೆ. ಸುತ್ತಲೂ ಅದ್ಭುತವಾಗಿ ಕಾಣುವ ಆ ಪ್ರದೇಶದ ಒಂದು ಗುಹೆಯಲ್ಲಿ ಶಿವಲಿಂಗವಿದೆ. ಆ ಶಿವಲಿಂಗದ ಮೇಲೆ ಯಾವಾಗಲೂ ಬೆಳಕು ಇರುತ್ತದೆ ಎಂತೆ. ಅದಕ್ಕೆ ಮುಖ್ಯವಾದ ಕಾರಣವೆನೆಂದರೆ ಆಕಾಶದಿಂದ ನೇರವಾಗಿ ಈ ಪ್ರದೇಶಕ್ಕೆ ಮಾರ್ಗವಿದೆ ಎನ್ನುವ ಹಾಗೆ ಇರುವ ಬೆಟ್ಟದ ಸೌಂದರ್ಯವೇ ಇದಕ್ಕೆ ಮುಖ್ಯವಾದ ಕಾರಣವಾಗಿದೆ.

5.ಇದು ಶಿವನ ರಹಸ್ಯವಾದ ಪರ್ವತ...!

5.ಇದು ಶಿವನ ರಹಸ್ಯವಾದ ಪರ್ವತ...!

ಇನ್ನು ಶಿವನು ಜಗತ್ತಿಗೆ ಕಾಣಿಸದೇ ಭಸ್ಮಾಸುರನಿಗೆ ಅಡ್ಡಾವಾಗಿ ನಿಂತ ಒಂದು ಬೆಟ್ಟವಿದೆ. ಆ ಬೆಟ್ಟವಾಗಿ ಮೋಹಿನಿ ಪರ್ವತವು ಹೆಸರುವಾಸಿಯಾಗಿದೆ. ಯಾಣ ಗುಹೆಯಲ್ಲಿ ಜಗನ್ಮೋಹಿನಿ ಎಂಬ ಒಂದು ಕಲ್ಲಿನ ನಿರ್ಮಾಣವಿದೆ. ಪುರಾಣಗಳ ಪ್ರಕಾರ ಶಿವನನ್ನು ಕಾಪಾಡುವ ಸಲುವಾಗಿ ಮೋಹಿನಿಯ ಅವತಾರವನ್ನು ಎತ್ತಿ ಶ್ರೀ ಮಹಾವಿಷ್ಣು ಅಲ್ಲಿ ಬೆಟ್ಟವಾಗಿ ನೆಲೆಸಿದನು ಎಂದು ಭಕ್ತರು ಆ ಕಲ್ಲನ್ನು ಪೂಜಿಸುತ್ತಾರೆ.

6.ಇದು ಶಿವನ ರಹಸ್ಯವಾದ ಪರ್ವತ...!

6.ಇದು ಶಿವನ ರಹಸ್ಯವಾದ ಪರ್ವತ...!

ಇಷ್ಟು ದಟ್ಟವಾದ ಬೆಟ್ಟಗಳ ಮಧ್ಯೆ ಒಂದು ಸುಂದರವಾದ ಜಲಪಾತವು ಪ್ರವಾಸಿಗರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಬೆಟ್ಟದ ಪಕ್ಕದಿಂದ ತೆರಳುತ್ತಿರುವ ಪರ್ವತರೋಹಿಗಳಿಗೆ ಜಲಧಾರಿಯ ಶಬ್ಧವು ಕೇಳಿಸುತ್ತದೆ. ಆದರೆ ಆದು ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲವಂತೆ. ಆದರೆ ಯಾಣ ಗುಹೆಯಲ್ಲಿ ಕಲ್ಲಿನ ಮಧ್ಯೆ ಪ್ರವಹಿಸಿ ನೀರು ನೇರವಾಗಿ ಒಂದು ನದಿಯಾಗಿ ಮಾರ್ಪಾಟಾಗುತ್ತದೆ ಎಂದು ಹೇಳುತ್ತಾರೆ.

7.ಇದು ಶಿವನ ರಹಸ್ಯವಾದ ಪರ್ವತ...!

7.ಇದು ಶಿವನ ರಹಸ್ಯವಾದ ಪರ್ವತ...!

ಅದು ಚಂಡಿಹೋಲ್ ಎಂಬ ನದಿಯಾಗಿ ಏರ್ಪಟ್ಟು ಆದು ಅಘನಾಶಿನಿ ಎಂಬ ಮತ್ತೊಂದು ನದಿಯಲ್ಲಿ ಲೀನವಾಗುತ್ತದೆ ಎಂತೆ. ಗುಹೆಯಲ್ಲಿ ಪ್ರವಹಿಸುವ ಈ ಪವಿತ್ರವಾದ ನೀರು ಶಿವನ ಜಟಾಜೂಟದಿಂದ ಉದ್ಭವಿಸುತ್ತದೆ ಎಂಬುದು ಅಲ್ಲಿನ ಪ್ರಜೆಗಳ ನಂಬಿಕೆಯಾಗಿದೆ.

8.ಇದು ಶಿವನ ರಹಸ್ಯವಾದ ಪರ್ವತ...!

8.ಇದು ಶಿವನ ರಹಸ್ಯವಾದ ಪರ್ವತ...!

ಭೈರವ ಶಿಖರವು ಮಹಾದ್ಭುತವಾಗಿ ಕಾಣಿಸುತ್ತದೆ. ಸ್ವಯಂಭೂವಾಗಿ ನೆಲೆಸಿರುವ ಶಿವಲಿಂಗವು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ. ಅಷ್ಟೇ ಅಲ್ಲ ದುರ್ಗಾ ಮಾತೆಯ ಅವತಾರವಾದ ಚಂದ್ರಿಕ ಕಾಂಶ್ಯ ವಿಗ್ರಹವು ಕೂಡ ಈ ಭೈರವೇಶ್ವರ ಬೆಟ್ಟದಲ್ಲಿ ಇದೆ. ಯಾಣ ಪ್ರದೇಶದಲ್ಲಿ ವಿಭೂತಿ ಜಲಪಾತವು ಪ್ರಸಿದ್ಧಿಯನ್ನು ಹೊಂದಿದೆ.

9.ಇದು ಶಿವನ ರಹಸ್ಯವಾದ ಪರ್ವತ...!

9.ಇದು ಶಿವನ ರಹಸ್ಯವಾದ ಪರ್ವತ...!

30 ಅಡಿ ಎತ್ತರದಿಂದ ಕೆಳಗೆ ಬೀಳುವ ಈ ಜಲಪಾತವು ಪ್ರವಾಸಿಗರಿಗೆ, ಟ್ರೆಕ್ಕಿಂಗ್ ಪ್ರೇಮಿಗಳಿಗೆ ಆನಂದವನ್ನು ಉಂಟು ಮಾಡುತ್ತದೆ ಎನ್ನಬಹುದು. ಎಷ್ಟೊ ರಹಸ್ಯವನ್ನು ಹೊಂದಿರುವ ಆ ಪರ್ವತವನ್ನು ಕಂಡು ಮನಸ್ಸನ್ನು ಆಕರ್ಷಿಸದೇ ಇರದು. ಹೀಗಾಗಿಯೇ ಕರ್ನಾಟಕದಲ್ಲಿನ ಅನೇಕ ಮಂದಿ ಈ ಸುಂದರವಾದ ದೃಶ್ಯಗಳನ್ನು ಕಾಣಲು ಯಾಣಗೆ ಭೇಟಿ ನೀಡುತ್ತಿರುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ