Search
  • Follow NativePlanet
Share
» »ಶಿವನ ಆಕರ್ಷಕ ಭೂಗತ ದೇವಾಲಯವಿದು!

ಶಿವನ ಆಕರ್ಷಕ ಭೂಗತ ದೇವಾಲಯವಿದು!

By Vijay

ರಾಜ್ಯ - ಕರ್ನಾಟಕ
ಜಿಲ್ಲೆ - ಬಳ್ಳಾರಿ
ತಾಣ - ಹಂಪಿ

ವಿಶೇಷತೆ : ವಿಜಯನಗರ ಸಾಮ್ರಾಜ್ಯದ ವೈಭವತೆಯನ್ನು ಎತ್ತಿ ತೋರುವ ಅಗಾಧ ಸಂಖ್ಯೆಯಲ್ಲಿರುವ ಸ್ಮಾರಕ ರಚನೆಗಳ ಸಮೂಹ ಹಾಗೂ ಯುನೆಸ್ಕೊದಿಂದ ವಿಶ್ವಪಾರಂಪರಿಕ ತಾಣದ ಮಾನ್ಯತೆ

ಹಂಪಿ ಕಿರು ಪರಿಚಯ

ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ.

ಶಿವನ ಆಕರ್ಷಕ ಭೂಗತ ದೇವಾಲಯವಿದು!

ಚಿತ್ರಕೃಪೆ: Sid Mohanty

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. 14 ರಿಂದ 16 ನೆಯ ಶತಮಾನದವರೆಗೆ ಕರ್ನಾಟಕವನ್ನಾಳಿದ ವಿಜಯನಗರ ಸಾಮ್ರಾಜ್ಯದ ಅತಿ ವೈಭವಯುತ ರಾಜಧಾನಿಯಾಗಿದ್ದ ಹಂಪಿ ನಗರವು ಆಕರ್ಷಕ ಶಿಲ್ಪಕಲಾ ರಚನೆಗಳಿಗೆ ಪ್ರಸಿದ್ಧಿಪಡೆದಿದೆ.

ತುಂಗಭದ್ರಾ ನದಿಯ ಅತಿ ಪುರಾತನ ಹೆಸರು ಪಂಪ. ಆಂಗ್ಲೀಕರಣದ ಪ್ರಭಾವದಿಂದಾಗಿ ಕ್ರಮೇಣ ಇದಕ್ಕೆ ಹಂಪೆ ಅಥವಾ ಹಂಪಿ ಎಂಬ ಹೆಸರು ಬಂದಿತು. ಏಕೆಂದರೆ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯ ಮೇಲೆಯೆ ನೆಲೆಸಿದೆ. ಕಾಲಕ್ರಮೇಣ ಇದನ್ನು ವಿಜಯನಗರ ಅಥವಾ ವಿರೂಪಾಕ್ಷಪುರ ಎಂಬ ಹೆಸರುಗಳಿಂದಲೂ ಸಹ ಕರೆಯಲಾಯಿತು.

ಶಿವನ ಆಕರ್ಷಕ ಭೂಗತ ದೇವಾಲಯವಿದು!

ಚಿತ್ರಕೃಪೆ: Arun Varadarajan

ಇಲ್ಲಿ ಸುತ್ತಾಡಿದದರೆ ಒಂದಕ್ಕಿಂತ ಒಂದು ವೈಭವಯುತವಾದ ದೇವಾಲಯ ರಚನೆಗಳು ಕಂಡುಬರುತ್ತವೆ. ವಿಶೇಷವಾಗಿ ಶಿಲ್ಪಕಲಾತ್ಮಕತೆ ಎದ್ದು ಕಾಣುತ್ತದೆ. ವಿಠ್ಠಲ ಮಂದಿರ, ವಿರೂಪಾಕ್ಷ ದೇವಾಲಯ, ಹಜಾರ ರಾಮನ ದೇವಾಲಯ, ಸಾಸಿವೆಕಾಳು ಗಣೇಶ, ಪಟ್ಟಾಭಿರಾಮನ ದೇವಾಲಯ, ಕಲ್ಲಿನ ರಥ, ಗಜಶಾಲೆ, ಮೆಟ್ಟಿಲು ಬಾವಿ, ಅಂತಃಪುರ, ಕಮಲದ ಅರಮನೆಗಳಂತಹ ಅತ್ಯಂತ ಕಲಾತ್ಮಕವಾದ ಸ್ಮಾರಕಗಳನ್ನು ಒಳಗೊಂಡಿದೆ.

ಭೂಗತ ಶಿವ ದೇವಾಲಯ

ಹಮ್ಪಿಯಲ್ಲಿ ಕಂಡುಬರುವ ಇನ್ನೊಂದು ಕುತೂಹಲಕರ ದೇವಾಲಯ ರಚನೆ ಇದಾಗಿದೆ. ಇದು ಭೂಮಿಯ ಮೇಲ್ಮೈನಿಂದ ಕೆಲವು ಮೀಟರುಗಳಷ್ಟು ನೆಲೆವನ್ನು ಕೊರೆದು ಕಟ್ಟಿದ ದೇವಾಲಯವಾಗಿರುವುದರಿಂದ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಯಾವ ಕಾರಣಗಳಿಗಾಗಿ ಇದು ಭೂಗತವಾಗಿ ನಿರ್ಮಿತವಾಗಿದೆ ಎಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.

ಶಿವನ ಆಕರ್ಷಕ ಭೂಗತ ದೇವಾಲಯವಿದು!

ಚಿತ್ರಕೃಪೆ: Harshap3001

ನೆಲದಡಿಯಲ್ಲಿ ಈ ದೇವಾಲಯವಿರುವುದರಿಂದ ಇದರ ನೆಲವೂ ಸದಾ ನೀರಿನಿಂದ ಆವೃತವಾಗಿರುವುದನ್ನು ಗಮನಿಸಬಹುದು. ಇದರ ಅಕ್ಕ ಪಕ್ಕದಲ್ಲಿ ನೀರಿನ ಕಾಲುವೆಯ ರಚನೆಗಳಿದ್ದರೂ ಅಲ್ಲಿ ಇಂದು ನೀರಿಲ್ಲ. ಮೆಟ್ಟಿಲುಗಳನ್ನು ಇಳಿದು ಈ ದೇವಾಲಯದೊಳಗೆ ಪ್ರವೇಶಿಸಿ ಒಂದಿ ನಿರ್ದಿಷ್ಟ ಸ್ಥಳದವರೆಗೂ ಮಾತ್ರ ನಡೆಯಬಹುದಾಗಿದೆ. ನಂತರ ಒಳ ಮುನ್ನುಗುವುದು ಅಸಾಧ್ಯ.

ಶಿವನ ಆಕರ್ಷಕ ಭೂಗತ ದೇವಾಲಯವಿದು!

ಚಿತ್ರಕೃಪೆ: Ilya Mauter

ಶಿವನ ಮಡದಿಯಾ ಪಾರ್ವತಿ ದೇವಿಗೆ ಮುಡಿಪಾದ ಚಿಕ್ಕ ಸನ್ನಿಧಿಯೊಂದನ್ನೂ ಸಹ ಈ ದೇವಾಲಯದಲ್ಲಿ ಕಾಣಬಹುದು. ಇನ್ನೊಂದು ವಿಶೇಷವೆಂದರೆ ಭೂಮಿಯ ಕೆಳಗಿರುವುದರಿಂದ ಹಾಗೂ ಸದಾ ಇಲ್ಲಿ ನೀರಿರುವುದರಿಂದ ಇದು ನೈಸರ್ಗಿಕ ಹವಾ ನಿಯಂತ್ರಕದಂತಿದ್ದು ತಂಪಾಗಿರುತ್ತದೆ.

ಹಂಪಿ: ಅವಶೇಷಗಳ ಮಧ್ಯದಲೊಂದು ವೈಭವದ ಸಾಮ್ರಾಜ್ಯ

ಈ ದೇವಾಲಯದ ಸುತ್ತಲೂ ಹಸಿರು ಹುಲ್ಲಿನ ಹಾಸು ಮನಸೂರೆಗೊಳ್ಳುವಂತಿದೆ. ಜನರು ಹೆಚ್ಚಾಗಿ ಇಲ್ಲಿ ಕಾಣಸಿಗುವುದಿಲ್ಲ. ಹಜಾರ ರಾಮನ ದೇವಾಲಯಕ್ಕೆ ಸಾಗುವಾಗ ಈ ದೇವಾಲಯದ ಮುಖಾಂತರ ಹೋಗುಬೇಕಾಗುತ್ತದೆ. ದೇವಾಲಯದ ಎದುರಿಗೆ ನೀರು ಹಾಗೂ ತಮ್ಪು ಪಾನೀಯಗಳನ್ನು ಮಾರುವವ ಕಂಡುಬರುತ್ತಾನೆ.

ತಲುಪುವ ಬಗೆ

ರಸ್ತೆ ಮಾರ್ಗವು ಪ್ರಮುಖವಾದ ಮಾಧ್ಯಮವಾಗಿದ್ದು ಹಂಪಿಯನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 340 ಕಿ.ಮೀ ದೂರವಿರುವ ಈ ಐತಿಹಾಸಿಕ ಪಟ್ಟಣವನ್ನು ತುಮಕೂರು, ಚಿತ್ರದುರ್ಗ, ಹೊಸಪೇಟೆ ಮಾರ್ಗವಾಗಿ ಸುಲಭವಾಗಿ ಬಸ್ಸಿನ ಮೂಲಕ ತಲುಪಬಹುದು. ಇನ್ನೂ ರೈಲಿನಲ್ಲಿ ಪ್ರಯಾಣಿಸಬೇಕೆಂದಿದ್ದರೆ, 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ರೈಲು ನಿಲ್ದಾಣವು ಹಂಪಿಗೆ ಹತ್ತಿರವಾದ ರೈಲು ನಿಲ್ದಾಣವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಬಿಜಾಪುರ ಮುಂತಾದ ಕಡೆಗಳಿಂದ ಹೊಸಪೇಟೆಗೆ ರೈಲುಗಳು ಲಭ್ಯವಿದೆ.

ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more