Search
  • Follow NativePlanet
Share
» »ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಅಭಯಾರಣ್ಯಗಳು ಎಂದರೆ ಒಂದು ಜೀವ ಸಂಕುಲದ ಪರಿವಾರವನ್ನು ಕಂಡು ಬರುವುದು. ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹಲವಾರು ಅಭಯಾರಣ್ಯಗಳನ್ನು ಕಾಣಬಹುದಾಗಿದೆ. ಇತ್ತೀಚಿಗೆ ನಮ್ಮ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು, ಯಾವುದಾದರು ಪ್ರಾಣಿಗಳನ್ನು ಕಾಣಬೇ

ಅಭಯಾರಣ್ಯಗಳು ಎಂದರೆ ಒಂದು ಜೀವ ಸಂಕುಲದ ಪರಿವಾರವನ್ನು ಕಂಡು ಬರುವುದು. ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹಲವಾರು ಅಭಯಾರಣ್ಯಗಳನ್ನು ಕಾಣಬಹುದಾಗಿದೆ. ಇತ್ತೀಚಿಗೆ ನಮ್ಮ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು, ಯಾವುದಾದರು ಪ್ರಾಣಿಗಳನ್ನು ಕಾಣಬೇಕಾದರೆ ಅಂರ್ತಜಾಲಕ್ಕೆ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.

ವಿಶೇಷವಾಗಿ ಮಕ್ಕಳಿಗೆ ಪುಸ್ತಕದ ಚಿತ್ರಗಳ ಮೂಲಕ ಅಥವಾ ಅಂರ್ತಜಾಲದ ಮೂಲಕ ಪ್ರಾಣಿಗಳನ್ನು ತೋರಿಸಿವುದರಿಂದ ಮಕ್ಕಳ ಮೇಲೆ ಏನು ಪರಿಣಾಮ ಬೀಳುವುದಿಲ್ಲ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗು ಸರಿಯಾದ ಕಲಿಕೆ ಕಲಿಸಬೇಕು ಎಂದು ನಿಮ್ಮ ಆಸೆಯಾಗಿದ್ದರೆ ಒಮ್ಮೆ ನಮ್ಮ ಕರ್ನಾಟಕದಲ್ಲಿಯೇ ಇರುವ ಅದ್ಭುತವಾದ ಅಭಯಾರಣ್ಯಕ್ಕೆ ಕೆರದುಕೊಂಡು ಹೋಗಿ. ಇದರಿಂದಾಗಿ ಮಕ್ಕಳಿಗೆ ಉತ್ತಮವಾದ ಕಲಿಕೆ ದೊರೆಯುತ್ತದೆ.

ಸಾಮಾನ್ಯವಾಗಿ ಅಭಯಾರಣ್ಯಕ್ಕೆ ತೆರಳಬೇಕೆಂದರೆ ಎಲ್ಲರಿಗೂ ಪ್ರಿಯವಾದುದು. ಆ ಪ್ರಾಣಿಗಳನ್ನು ಕಾಣುತ್ತಾ ಕೆಲವು ಸುಂದರವಾದ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಲೇಖನದ ಮೂಲಕ ನಮ್ಮ ಕರ್ನಾಟಕದಲ್ಲಿನ ಸುಂದರವಾದ ಹಾಗು ಪ್ರಸಿದ್ಧವಾದ ಅಭಯಾರಣ್ಯಕ್ಕೆ ಭೇಟಿ ನೀಡೋಣ.

ಬಂಡೀಪುರ ನ್ಯಾಷನಲ್ ಪಾರ್ಕ್

ಬಂಡೀಪುರ ನ್ಯಾಷನಲ್ ಪಾರ್ಕ್

ಮೈಸೂರಿನಿಂದ ಸುಮಾರು 80 ಕಿ.ಮೀ ದೂರ, ಊಟಿಯಿಂದ 70 ಕಿ.ಮೀ ಹಾಗು ಬೆಂಗಳೂರಿನಿಂದ ಸುಮಾರು 215 ಕಿ.ಮೀ ದೂರದಲ್ಲಿ ಈ ಅದ್ಭುತವಾದ ಬಂಡೀಪುರ ನ್ಯಾಷನಲ್ ಪಾರ್ಕ್ ಇದೆ. ಇದೊಂದು ಭಾರತದಲ್ಲಿಯೇ ಸಂರಕ್ಷಿತವಾದ ಅಭಯಾರಣ್ಯವಾಗಿದೆ. ಈ ಸುಂದರವಾದ ಪಾರ್ಕ್ 874 ಚ.ಕಿ.ಮೀ ಉದ್ದವಿದೆ. ಇಲ್ಲಿ 70 ಕ್ಕೂ ಹೆಚ್ಚು ಹುಲಿಗಳು ಮತ್ತು 300 ಏಷ್ಯಾದ ಆನೆಗಳು, ಚಿರತೆ, ಕರಡಿಗಳು, ವಿವಿಧ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.


PC:bm.iphone

ಬಂಡೀಪುರ ನ್ಯಾಷನಲ್ ಪಾರ್ಕ್

ಬಂಡೀಪುರ ನ್ಯಾಷನಲ್ ಪಾರ್ಕ್

ಇಲ್ಲಿ ಜೀಪ್ ಸಫಾರಿ ಕೂಡ ಆನಂದಿಸಬಹುದಾಗಿದೆ. ಸಫಾರಿ ಮಾಡಬೇಕು ಎಂದಾದರೆ ಮೊದಲು ಅರಣ್ಯಧಿಕಾರಿಗಳ ಹತ್ತಿರ ಅನುಮತಿ ಪಡೆದು ಸಾಗಬೇಕು. ಇಲ್ಲಿ ಆನೆ ಸಫಾರಿ ಕೂಡ ಮಾಡಬಹುದು. ಒಬ್ಬರಿಗೆ 50 ರೂಪಾಯಿ. ಈ ಸಫಾರಿ ಮಾಡಲು ಬೆಳಗ್ಗೆ 6:30 ರಿಂದ 9:30 ರವೆಗೆ ಹಾಗು 3:30 ರಿಂದ 5:30 ರವರೆಗೆ ತೆರೆದಿರಲಾಗುತ್ತದೆ. ಆನೆ ಸಫಾರಿ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ.


PC:bm.iphone

ನಾಗರಹೊಳೆ ನ್ಯಾಷನಲ್ ಪಾರ್ಕ್

ನಾಗರಹೊಳೆ ನ್ಯಾಷನಲ್ ಪಾರ್ಕ್

ಈ ನ್ಯಾಷನಲ್ ಪಾರ್ಕ್ ಕುಟ್ಟಾದಿಂದ 10 ಕಿ,ಮೀ, ಮೈಸೂರಿನಿಂದ 88 ಕಿ.ಮೀ, ಬೆಂಗಳೂರಿನಿಂದ 218 ಕಿ.ಮೀ ದೂರದಲ್ಲಿದೆ. ಇದು ಕೂಡ ಕರ್ನಾಟಕದ ಅತ್ಯಂತ ಉತ್ತಮವಾದ ಅಭಯಾರಣ್ಯವಾಗಿದೆ. ಈ ಸುಂದರವಾದ ಪಾರ್ಕ್‍ನಲ್ಲಿ ಮೊದಲು ಮೈಸೂರಿನ ರಾಜಮನೆತನದವರು ಭೇಟೆ ಮಾಡುತ್ತಿದ್ದರು. ಇಲ್ಲಿ ಹಲವಾರು ಪ್ರಾಣಿ ಸಂಕುಲವನ್ನು ಕಾಣಬಹುದಾಗಿದೆ.


PC:bm.iphone

ನಾಗರಹೊಳೆ ನ್ಯಾಷನಲ್ ಪಾರ್ಕ್

ನಾಗರಹೊಳೆ ನ್ಯಾಷನಲ್ ಪಾರ್ಕ್

ಈ ನ್ಯಾಷನಲ್ ಪಾರ್ಕ್‍ಗೆ 2 ಕನ್ನಡ ಪದಗಳು ಹೊಂದಿದೆ. ಅದು ನಾಗ ಎಂದರೆ ಹಾವು ಮತ್ತು ಹೊಳೆ ಎಂಬ ಪದದಿಂದ ಬಂದಿದೆ. ಇಲ್ಲಿ ಹಲವಾರು ಹೊಳೆಗಳನ್ನು ಕಾಣಬಹುದು. ಪ್ರಕೃತಿಯ ಜೊತೆ ಜೊತೆಗೆ ಸುಂದರವಾದ ಪ್ರಾಣಿ ಸಂಕುಲವನ್ನು ಕೂಡ ಕಾಣಬಹುದಾಗಿದೆ. ಇಲ್ಲಿ ಹಲವಾರು ವನ್ಯ ಮೃಗಗಳು ಮತ್ತು ಪಕ್ಷಿಗಳನ್ನು ಕಾಣಬಹುದಾಗಿದೆ. ಇಲ್ಲಿ ಭೇಟಿ ನೀಡುವ ಸಮಯ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವೆರೆಗೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಬೆಂಗಳೂರಿನಿಂದ ಈ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಸುಮಾರು 23 ಕಿ.ಮೀ ದೂರದಲ್ಲಿದೆ. ಇದೊಂದು ಪ್ರಸಿದ್ಧವಾದ ಅಭಯಾರಣ್ಯವಾಗಿದೆ. ಈ ಅಭಯಾರಣ್ಯವನ್ನು 1974 ರಲ್ಲಿ ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು. ಇದು ಸರಿ ಸುಮಾರು 25,000 ಎಕರೆಗಳು ಹರಡಿದೆ. ಇಲ್ಲಿ ಹಲವಾರು ಪ್ರವಾಸಿಗರು ಇಲ್ಲಿನ ಪ್ರಾಣಿ ಸಂಕುಲವನ್ನು ಕಾಣಲು ಭೇಟಿ ನೀಡುತ್ತಾರೆ.

PC:Kenny

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಇಲ್ಲಿ ಕೇವಲ ದೇಶದಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಪ್ರಾಣಿ ಸಂಕುಲವನ್ನು ಆನಂದಿಸುವವರಿಗೆ ಇದೊಂದು ಸ್ವರ್ಗದಂತೆ ಗೋಚರಿಸುತ್ತದೆ. ಇಲ್ಲಿ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತದೆ. ಮಂಗಳವಾರದ ದಿನದಂದು ರಜಾ ದಿನಗಳು

ಭದ್ರ ನ್ಯಾಷನಲ್ ಪಾರ್ಕ್

ಭದ್ರ ನ್ಯಾಷನಲ್ ಪಾರ್ಕ್

ಈ ಅಭಯಾರಣ್ಯವು ಕೆಮ್ಮಣ್ಣುಗುಂಡಿಯಿಂದ 53 ಕಿ.ಮೀ, ಚಿಕ್ಕಮಗಳೂರಿನಿಂದ 79 ಕಿ.ಮೀ ಮತ್ತು ಶಿವಮೊಗ್ಗದಿಂದ 33 ಕಿ.ಮೀ ದೂರದಲ್ಲಿದೆ. ಇದು ಸುಮಾರು 490 ಚದರ ವಿಸ್ತೀರ್ಣದಲ್ಲಿ ಹರಡಿದೆ. ಭದ್ರ ವನ್ಯಜೀವಿ ಧಾಮವನ್ನು ಮುಥೋಡಿ ವನ್ಯಜೀವಿ ಧಾಮ ಎಂದು ಸಹ ಕರೆಯುತ್ತಾರೆ. ಇಲ್ಲಿ ಹಲವಾರು ಹುಲಿಗಳನ್ನು ಕಾಣಬಹುದಾಗಿದೆ. ಇದನ್ನು 1998 ರ ಭಾರತದ 25 ನೇ ಪ್ರಾಜೆಕ್ಟ್ ಟೈಗರ್ ಎಂದು ಘೋಷಿಸಲ್ಪಟ್ಟಿದೆ.

PC:bm.iphone

ಭದ್ರ ನ್ಯಾಷನಲ್ ಪಾರ್ಕ್

ಭದ್ರ ನ್ಯಾಷನಲ್ ಪಾರ್ಕ್

ಈ ಅಭಯಾರಣ್ಯವು ಸಮುದ್ರ ಮಟ್ಟದಿಂದ 750 ಮೀಟರ್ ನಿಂದ 1875 ಮೀಟರ್ ಎತ್ತರದಲ್ಲಿದೆ. ಇಲ್ಲಿ ಹಲವಾರು ವಿವಿಧ ಜಾತಿಯ ಪ್ರಾಣಿಗಳನ್ನು ಕಾಣಬಹುದಾಗಿದೆ. ಸರೀಸೃಪಗಳು ಕೂಡ ಇಲ್ಲಿ ಇವೆ. ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯವಾಗಿದೆ.

PC:bm.iphone

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮ

ಮೈಸೂರು ಮತ್ತು ಶ್ರೀರಂಗ ಪಟ್ಟಣದಿಂದ ಸುಮಾರು 3 ಕಿ.ಮೀ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮವಿದೆ. ಇದು ಸುಮಾರು 67 ಚದರ ಕಿ.ಮೀ ವ್ಯಾಪ್ತಿ ಹರಡಿದ್ದು, ಒಂದು ಸಣ್ಣ ಅಭಯಾರಣ್ಯವಾಗಿದೆ. ಶ್ರೀರಂಗ ಪಟ್ಟಣಕ್ಕೆ ಭೇಟಿ ನೀಡುವ ಜನಪ್ರಿಯ ತಾಣಗಳಲ್ಲಿ ಇದೂ ಕೂಡ ಒಂದಾಗಿದೆ.


PC:jgphaneuf

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮ

ಇದು ಪಕ್ಷಿ ವೀಕ್ಷಕರಿಗೆ ಸ್ವರ್ಗ ಸುಖ ನೀಡುವಂತಹ ಅದ್ಭುತವಾದ ತಾಣ ಇದಾಗಿದೆ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತಾರೆ. ಇಲ್ಲಿ ಚಿತ್ರ, ವಿಚಿತ್ರದ ಪಕ್ಷಿಗಳನ್ನು ಕಂಡು ಆನಂದಿಸಬಹುದಾಗಿದೆ. ಇಲ್ಲಿ ನಿಮಗೆ ಇಷ್ಟವಾದ ದೋಣಿ ಸವಾರಿ ಕೂಡ ಮಾಡಬಹುದಾಗಿದೆ. ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ. ಒಮ್ಮೆ ಭೇಟಿ ಕೊಡಿ.

PC:Mathias Appel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X