• Follow NativePlanet
Share
Menu
» »ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?

ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?

Written By:

ಆದಿ, ಅಂತ್ಯ ಈ ಸೂತ್ರವು ಸೃಷ್ಠಿಯಲ್ಲಿ ಸೂಕ್ಷ್ಮ ಜೀವಿಗಳಿಗೂ ಅನ್ವಯಿಸುವಂತಹದು. ಯುಗಾಂತ್ಯದ ಸಿದ್ಧಾಂತಗಳನ್ನು ನಾವು ದಿನನಿತ್ಯ ಕೇಳುತ್ತಲೇ ಇರುತ್ತೇವೆ.

ಪ್ರಾರಂಭವಾದ ಪ್ರತಿ ಯುಗವು ಯಾವುದೋ ಒಂದು ಸಮಯದಲ್ಲಿ ಅಂತ್ಯವಾಗಲೇಬೇಕು.

ಅಂತ್ಯವಾದ ಪ್ರತಿಬಾರಿ ನೂತನ ಯುಗಕ್ಕೆ ನಾಂದಿಯಾಗುತ್ತದೆ.

ಇದೇ ಸೃಷ್ಠಿಯ ನಿಯಮ ಎಂದು ನಮ್ಮ ವೇದಗಳು ಹೇಳುತ್ತವೆ.

ಈ ಸೃಷ್ಟಿಯಲ್ಲಿ ಯಾವುದೇ ಒಂದು ಕಾರ್ಯವಾಗಬೇಕಾದರು ಕೂಡ ಅದಕ್ಕೆ ಒಂದು ಕಾರಣ ಎನ್ನುವುದು ಇದ್ದೇ ಇರುತ್ತದೆ.

ಹಾಗೆಯೇ ಈ ಕಲಿಯುಗ ಅಂತ್ಯವಾಗುವುದಕ್ಕೆ ಕೆಲವು ಪ್ರತ್ಯೇಕವಾದ ಲಕ್ಷಣಗಳನ್ನು ಇರುತ್ತವೆ ಎಂದು ಕೆಲವು ಪುರಾಣಗಳು ಹೇಳುತ್ತವೆ.

ಮುಂದೆ ನಡೆಯುವ ಭವಿಷ್ಯವನ್ನು ಹೇಳುತ್ತಿದ್ದವರು ದಕ್ಷಿಣ ಭಾರತದ ಪ್ರಸಿದ್ಧ ಕಾಲಾಜ್ಞಾನಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ.

ಆ ಸ್ವಾಮಿಯು ಲಿಖಿತ ರೂಪದಲ್ಲಿ ಬರೆದಿರುವ ಕಾಲಾಜ್ಞಾನದಲ್ಲಿ ಕಲಿಯುಗ ಅಂತ್ಯವಾಗುವ ಸಮಯದಲ್ಲಿನ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ.

ಅವುಗಳಲ್ಲಿ ಪ್ರತ್ಯೇಕವಾಗಿ ಬರೆದಿರುವ ಯಾಗಂಟಿ ಪರಮೇಶ್ವರ ದೇವಾಲಯ ಒಂದು.......

ಕಲಿಯುಗ ಅಂತ್ಯಕ್ಕೆ ಮತ್ತೊಂದು ಹೆಸರೇ....ಯಾಗಂಟಿ

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಆ ಮಾಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ವೀರಬ್ರಹ್ಮೇಂದ್ರ ಸ್ವಾಮಿ ನಿವಾಸಿಸಿದ್ದ ಬನಗಾನಪಲ್ಲಿಗೆ ಸುಮಾರು 12 ಕಿ.ಮೀ ದೂರದಲ್ಲಿ. ಈ ಪ್ರದೇಶದ ಸುತ್ತಲೂ ಅತ್ಯಂತ ಸುಂದರವಾದ ನಲ್ಲಮಲ ಅರಣ್ಯ ಪ್ರದೇಶವಿದೆ. ಆ ಅರಣ್ಯ ಪ್ರದೇಶದಲ್ಲಿ ಅತ್ಯಂತ ಶುಭಾಮಾನವಾಗಿರುವ ಒಂದು ಪರಮ ಪುಣ್ಯಕ್ಷೇತ್ರವಿದೆ. ಅದೇ ಯಾಗಂಟಿ ದೇವಾಲಯ.

ದೇವಾಲಯದಲ್ಲಿನ ಮತ್ತೊಂದು ವಿಶೇಷ

ದೇವಾಲಯದಲ್ಲಿನ ಮತ್ತೊಂದು ವಿಶೇಷ

ಈ ದೇವಾಲಯದಲ್ಲಿ ಶ್ರೀ ಉಮಾ ಮಾಹೇಶ್ವರ ಸ್ವಾಮಿಯು ಲಿಂಗಾಕಾರವಾಗಿ ಅಲ್ಲದೇ ವಿಗ್ರಹ ರೂಪದಲ್ಲಿರುವುದು ಮತ್ತೊಂದು ವಿಶೇಷವಾಗಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಸ್ಥಳ ಪುರಾಣದ ಪ್ರಕಾರ ಪೂರ್ವ ಈ ಪ್ರದೇಶದಲ್ಲಿ ಅಗಸ್ತ್ಯ ಮಹಾಮುನಿ ನಿವಾಸವಿದ್ದರಂತೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಆತನು ನಿವಾಸಿಸಿದ್ದ ಆ ಪ್ರದೇಶದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ಅವರ ಆಸೆಯಾಗಿತ್ತು. ಆದೇ ಪ್ರಕಾರವಾಗಿ ಅಲ್ಲಿ ದೇವಾಲಯದ ನಿರ್ಮಾಣ ಪ್ರಾರಂಭಿಸಿದರು.

ಸ್ವಾಮಿಯ ವಿಗ್ರಹದ ಕೆತ್ತನೆ

ಸ್ವಾಮಿಯ ವಿಗ್ರಹದ ಕೆತ್ತನೆ

ಆ ದೇವಾಲಯದಲ್ಲಿ ಪ್ರತಿಷ್ಟಾಪಿಸಿದ ಸ್ವಾಮಿಯ ಮೂಲ ವಿರಾಟನನ್ನು ಸ್ವಯಂ ತನ್ನ ಕೈಯಲ್ಲಿಯೇ ಕೆತ್ತಬೇಕು ಎಂದು ಭಾವಿಸಿದ್ದರಂತೆ. ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡುವ ಸಮಯದಲ್ಲಿ ಆತನ ಕೈಯ ಬೆರಳಿಗೆ ಗಾಯವಾಯಿತಂತೆ.

ಸಂಕಲ್ಪದಲ್ಲಿ ಲೋಪ

ಸಂಕಲ್ಪದಲ್ಲಿ ಲೋಪ

ತನ್ನ ಸಂಕಲ್ಪದಲ್ಲಿ ಲೋಪವಿರಬಹುದು ಎಂದು ಭಾವಿಸಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡುವುದನ್ನು ನಿಲ್ಲಿಸಿದರಂತೆ.

ಸ್ವಯಂ ಭೂ

ಸ್ವಯಂ ಭೂ

ಆಗಲೇ ದೇವಾಲಯದ ನಿರ್ಮಾಣ ಪೂರ್ತಿವಾದ ಕಾರಣ ಆ ಊರಿನಲ್ಲಿ ಮತ್ತೊಂದು ದೇವತಾ ಮೂರ್ತಿಯನ್ನು ಪ್ರತಿಷ್ಟಾಪಿಸಲು ಈ ದೇವಾಲಯಕ್ಕೆ ಕೆಲವು ದೂರದಲ್ಲಿ ಸ್ವಯಂಭೂವಾಗಿ ನೆಲೆಸಿದ್ದ ಊಮಾ ಮಾಹೇಶ್ವರ ಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಬಂದು ಪ್ರತಿಷ್ಟಾಪಿಸಿದರಂತೆ.

ವೆಂಕಟೇಶ್ವರ ಸ್ವಾಮಿ ವಿಗ್ರಹ

ವೆಂಕಟೇಶ್ವರ ಸ್ವಾಮಿ ವಿಗ್ರಹ

ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ಆ ದೇವಾಲಯದಲ್ಲಿನ ಒಂದು ಗುಹೆಯಲ್ಲಿ ಪ್ರತಿಷ್ಟಾಪಿಸಿದರು.

ಗುಹೆ

ಗುಹೆ

ಇಂದಿಗೂ ಈ ಪರ್ವತದ ಗುಹೆಯಲ್ಲಿ ನಮ್ಮ ವೆಂಕಟೇಶ್ವರ ಸ್ವಾಮಿ ವಿಗ್ರಹವಿದೆ. ಅಲ್ಲಿ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ.

ಪುಷ್ಕರಣಿ

ಪುಷ್ಕರಣಿ

ಈ ದೇವಾಲಯದ ಎದುರು ಪವಿತ್ರವಾದ ಒಂದು ಪುಷ್ಕರಣಿ ಇದೆ.

ಅಗಸ್ತ್ಯ ಪುಷ್ಕರಣಿ

ಅಗಸ್ತ್ಯ ಪುಷ್ಕರಣಿ

ಆ ಪುಷ್ಕರಣಿ ನೀರು ಅಲ್ಲಿನ ನಂದಿ ಬಾಯಿಯಿಂದ ಬರುತ್ತದೆ. ಪೂರ್ವದಲ್ಲಿ ಈ ಪುಷ್ಕರಣಿಯಲ್ಲಿ ಅಗಸ್ತ್ಯ ಮಹಾ ಮುನಿಯು ಸ್ನಾನ ಮಾಡುತ್ತಿದ್ದರಂತೆ. ಹಾಗಾಗಿ ಈ ಪುಷ್ಕರಣಿಯನ್ನು ಅಗಸ್ತ್ಯ ಪುಷ್ಕರಣಿ ಎಂದು ಕರೆಯುತ್ತಾರೆ.

ವಿಶೇಷ

ವಿಶೇಷ

ಇದರಲ್ಲಿ ಇರುವ ವಿಶೇಷವೆನೆಂದರೆ ಯಾವ ಕಾಲದಲ್ಲಿಯಾದರೂ ಪುಷ್ಕರಣಿಯ ನೀರಿನ ಮಟ್ಟ ಮಾತ್ರ ಒಂದೇ ವಿಧವಾಗಿ ಇರುತ್ತದೆಯಂತೆ.

ಔಷಧಗುಣಗಳು

ಔಷಧಗುಣಗಳು

ಈ ಪವಿತ್ರವಾದ ನೀರಿನಲ್ಲಿ ಔಷಧಗುಣಗಳು ಹೆಚ್ಚಾಗಿ ಇರುವುದರಿಂದ ಈ ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ಮಾಯವಾಗುತ್ತದೆ ಎಂಬುದು ಭಕ್ತರ ವಿಶ್ವಾಸವಾಗಿದೆ.

ಸ್ವಯಂ ಭೂ ಬಸವಣ್ಣ

ಸ್ವಯಂ ಭೂ ಬಸವಣ್ಣ

ಈ ದೇವಾಲಯದಲ್ಲಿನ ಪ್ರಧಾನವಾದ ಅಂಶವೆಂದರೆ ಅದು ಸ್ವಯಂ ಭೂವಾಗಿ ನೆಲೆಸಿರುವ ಬಸವಣ್ಣ ವಿಗ್ರಹ. ಈ ಗುಡಿಯಲ್ಲಿ ನಿರ್ಮಾಣ ಮಾಡಿದ ಕೆಲವು ದಿನಗಳಲ್ಲೇ ದೇವಾಲಯದ ಪ್ರಧಾನ ಮುಖ ಮಂಟಪದ ಈಶಾನ್ಯ ದಿಕ್ಕಿಗೆ ನಂದೀಶ್ವರನು ಸ್ವಯಂ ಭೂವಾಗಿ ನೆಲೆಸಿದನು. ಈ ಬಸವಣ್ಣ ಕಲಿಯುಗ ಅಂತ್ಯವಾಗುವ ಸಮಯದಲ್ಲಿ ಎದ್ದು ನಿಂತು ಘೋರವಾಗಿ ಕೂಗಿಕೊಳ್ಳುತ್ತಾನಂತೆ.

ಮರಣ

ಮರಣ

ಆ ಶಬ್ಧಕ್ಕೆ ಭೂಮಿಯಲ್ಲಿರುವ ಸಮಸ್ತ ಜನರು ಹಕ್ಕಿಗಳಂತೆ ಕ್ಷಣದಲ್ಲಿಯೇ ಸಾವನ್ನಪ್ಪುತ್ತಾರಂತೆ. ಅದರಲ್ಲೂ ಪಾಪಗಳು ಹೆಚ್ಚಾಗಿ ಮಾಡಿರುವವರು ಮರಣ ಹೊಂದಿ, ಪುಣ್ಯ ಮಾಡಿದ ಕೆಲವರು ಮಾತ್ರ ಉಳಿಯುತ್ತಾರೆ ಎಂದು ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ.

ದಿನ ದಿನಕ್ಕೆ ದೊಡ್ಡದಾಗುತ್ತಿದೆ

ದಿನ ದಿನಕ್ಕೆ ದೊಡ್ಡದಾಗುತ್ತಿದೆ

ಇಲ್ಲಿನ ಸ್ವಯಂ ಭೂ ಬಸವಣ್ಣ ಸುಮಾರು ಒಂದು ಪರ್ವತದ ಎತ್ತರದಲ್ಲಿ ಬೆಳೆಯುತ್ತಾನೆ ಎಂದು ವೀರಬ್ರಹ್ಮೇಂದ್ರ ಸ್ವಾಮಿ ಹೇಳಿದ್ದಾರೆ. ಹಾಗೆಯೇ ಬಸವಣ್ಣ ಕೂಡ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾನೆ. ಇದನ್ನು ಸ್ವಯಂ ಭಾರತದ ಪುರಾತತ್ವ ಇಲಾಖೆಯವರೇ ಪರೀಕ್ಷಿಸಿದ್ದಾರೆ.

ರಹಸ್ಯ

ರಹಸ್ಯ

90 ವರ್ಷಗಳ ಹಿಂದೆ ನಂದೀಶ್ವರನು 4 ಸ್ತಂಭಗಳ ನಡುವೆ ಇದ್ದು, ಭಕ್ತರು ಪ್ರದಕ್ಷಿಣೆ ಹಾಕಲು ಸ್ಥಳ ಇತ್ತಂತೆ. ಪ್ರಸ್ತುತ ಪ್ರದಕ್ಷಿಣೆ ಹಾಕಲು ಕೊಂಚವು ಸ್ಥಳವಿಲ್ಲದೇ ನಂದೀಶ್ವರನೇ ಕುಳಿತಿದ್ದಾನಂತೆ. ಇದು ಹೇಗೆ ನಡೆಯುತ್ತಿದೆ ಎಂಬುದು ಇಂದಿಗೂ ಒಂದು ರಹಸ್ಯವಾಗಿಯೇ ಉಳಿದಿದೆ.

ಯಾಗಂಟಿ ಕ್ಷೇತ್ರ ದೇವಾಲಯ ಪ್ರವೇಶ ವೇಳೆ

ಯಾಗಂಟಿ ಕ್ಷೇತ್ರ ದೇವಾಲಯ ಪ್ರವೇಶ ವೇಳೆ

ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರವಾಸಿಗರು, ಭಕ್ತರು ದೇವಾಲಯಕ್ಕೆ ತೆರಳಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಕ್ಷೇತ್ರವು ಆಂಧ್ರ ಪ್ರದೇಶದ ಕರ್ನೂಲ್‍ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಕರ್ನೂಲ್, ಬನಗಾನ ಪಲ್ಲಿ, ನಂದ್ಯಾಲದಿಂದ ಯಾಗಂಟಿ ಕ್ಷೇತ್ರಕ್ಕೆ ಬಸ್ಸುಗಳ ಸೌಕರ್ಯವಿದೆ.

ಮೊದಲು ಬೆಂಗಳೂರಿನಿಂದ ಹೈದ್ರಾಬಾದಿಗೆ ತೆರಳಿ ಅಲ್ಲಿಂದ ಕರ್ನೂಲ್‍ಗೆ ಸುಮಾರು 5 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ