Search
  • Follow NativePlanet
Share
» »ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಎಲ್ಲಿದೆ? ಇದರ ಬಗ್ಗೆ ಇನ್ನಷ್ಟು ತಿಳಿಯೋಣ

ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಎಲ್ಲಿದೆ? ಇದರ ಬಗ್ಗೆ ಇನ್ನಷ್ಟು ತಿಳಿಯೋಣ

ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಇಲ್ಲಿದೆ! ನೋಡೋಣ ಬನ್ನಿ

ಹಿಂದೂ ಮಹಾಕಾವ್ಯ ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥವಾಗಿದ್ದು, ಇದನ್ನು ಮೋಕ್ಷ ಸಾಧನೆಯ ಮಾರ್ಗವೆಂದೂ ಪರಿಗಣಿಸಲಾಗುತ್ತದೆ. ರಾಮಾಯಣವು ರಾಮನ ಇಡೀ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ ಇದರಲ್ಲಿ ರಾಮದೇವರ ಜನನದಿಂದ ಹಿಡಿದು ಭೂಮಿಯ ಮೇಲೆ ಅವರ ಅವತಾರ ಕೊನೆಯಾಗುವವರೆಗೂ ವಿವರಿಸಲಾಗುತ್ತದೆ. ನೀವು ರಾಮಾಯಣದ ಕಥೆಯ ಬಗ್ಗೆ ಚಿರ ಪರಿಚಿತರಾದಲ್ಲಿ ನಿಮಗೆ ಇದರಲ್ಲಿ ಬರುವ ಸಂಜೀವಿನಿ ಪರ್ವತದ ಬಗ್ಗೆಯೂ ತಿಳಿದಿರ ಬೇಕು ಅಲ್ಲವೆ? ಈ ಪವಿತ್ರ ಪರ್ವತವು ರಾಮ ರಾವಣರ ಯುದ್ದದ ಸಮಯದಲ್ಲಿ ಹಲವಾರು ಜನರ ಜೀವವನ್ನು ಉಳಿಸಿರುವುದು ನಮಗೆ ಗೊತ್ತೇ ಇದೆ.

ಆದರೆ ಈ ಸಂಜೀವಿನಿ ಪರ್ವತವು ಎಲ್ಲಿದೆ ಎಂದು ನಿಮಗೆ ಗೊತ್ತೆ? ಇಲ್ಲ ಎಂದಾದರೆ, ನೀವು ಖಂಡಿತವಾಗಿಯೂ ಈ ಲೇಖನವನ್ನು ಓದಿ. ಇಲ್ಲಿ ನಾವು ಸಂಜೀವಿನಿ ಪರ್ವತದ ಬಗ್ಗೆ ಕೆಲವು ವಿಷಯಗಳನ್ನು ನೀಡುತ್ತಿದ್ದೇವೆ. ಇದರ ಇತಿಹಾಸದಿಂದ ಹಿಡಿದು ಪ್ರಸ್ತುತ ಸ್ಥಳದವರೆಗೆ ನೀವು ಈ ಲೇಖನದಲ್ಲಿ ಓದಿ ತಿಳಿಯಬಹುದಾಗಿದೆ.

sanjeeviwhytovisit

ಸಂಜೀವಿನಿ ಪರ್ವತದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ

ಹಿಂದೂ ಪುರಾಣಗಳ ಪ್ರಕಾರ ಸಂಜೀವಿನಿ ಬೆಟ್ಟವು ಹಿಮಾಲಯದ ದೋಣಗಿರಿ ಶ್ರೇಣಿಯಲ್ಲಿರುವ ಪರ್ವತವಾಗಿದ್ದು, ಈ ಪರ್ವತವು ಹಲವಾರು ಕಾಯಿಲೆ ಮತ್ತು ಗಾಯಗಳನ್ನು ಗುಣಪಡಿಸುವಂತಹ ವೈದ್ಯಕೀಯ ಮತ್ತು ಪವಿತ್ರ ಸಸ್ಯಗಳ ನೆಲೆಯಾಗಿತ್ತು.

ಆದುದರಿಂದ ಲಕ್ಷ್ಮಣನು ಅಸುರ ರಾವಣನೊಂದಿಗೆ ಯುದ್ದದಲ್ಲಿ ತೀವ್ರ ಗಾಯಗೊಂಡು ಪ್ರಜ್ಞಾಹೀನನಾದಾಗ ರಾಮನ ಅಣತಿಯಂತೆ ಹನುಮಂತನು ಲಕ್ಷ್ಮಣನ ಗಾಯಗಳನ್ನು ಗುಣಪಡಿಸಲು ಈ ಪರ್ವತವನ್ನೇ ಎತ್ತಿಕೊಂಡು ಬಂದನು ಎಂದು ಪುರಾಣ ಹೇಳುತ್ತದೆ. ಅದರ ಪ್ರಕಾರ ಪವಿತ್ರ ಸಸ್ಯಗಳನ್ನು ಹೊಂದಿದ ಈ ಪರ್ವತವು ಎಂದಿಗೂ ಪವಿತ್ರ ತಾಣವೆಂದು ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲದೆ ಈ ಪರ್ವತವು ಹಲವಾರು ಋಷಿ ಮುನಿಗಳಿಗೆ ಹಾಗೂ ಆಧ್ಯಾತ್ಮಿಕ ಗುರುಗಳ ನೆಲೆಯಾಗಿತ್ತು ಎನ್ನಲಾಗುತ್ತದೆ.

cover-23-1495531863-1663830862.jpg -Properties

ಸಂಜೀವಿನಿ ಪರ್ವತದ ಪ್ರಸ್ತುತ ಸ್ಥಳ

ಪ್ರಸ್ತುತ ಸಂಜೀವಿನಿ ಬೆಟ್ಟವು ಎಲ್ಲಿರುವುದೆಂದು ನಿಮಗೆ ತಿಳಿದಿದೆಯೆ? ಇಲ್ಲವೆಂದಾದಲ್ಲಿ ಇದರ ಬಗ್ಗೆ ತಿಳಿಯೋಣ ಬನ್ನಿ! ಇದು ತಮಿಳುನಾಡು ರಾಜ್ಯದ ಅತ್ಯಂತ ಪ್ರಸಿದ್ದ ತಾಣವಾಗಿದ್ದು ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂದು ಈ ಬೆಟ್ಟವು ರಾಜಪಾಲಯಂ ನ ಒಂದು ಭಾಗವಾಗಿದ್ದು, ನೈಸರ್ಗಿಕ ಮತ್ತು ಧಾರ್ಮಿಕ ಮಹತ್ವವನ್ನು ಪಡೆದಂತಹ ತಾಣವೆನಿಸಿದೆ.

ಸಂಜೀವಿನಿ ಬೆಟ್ಟದ ಮೇಲೆ ಮುರುಗನ್ ದೇವಾಲಯವು ನೆಲೆಸಿದ್ದು, ಇದು ಇಲ್ಲಿಯ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಈ ಪ್ರದೇಶವು ದಟ್ಟವಾದ ಕಾಡುಗಳಿಗೆ ನೆಲೆಯಾಗಿದ್ದು ದಟ್ಟ ಸಸ್ಯವರ್ಗ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.ಈ ಸ್ಥಳವು ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿರುವುದರಿಂದ ಇದನ್ನು ಸವಿಯಲು ಎದುರು ನೋಡುತ್ತಿರುವ ಹಲವಾರು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.

cats-04-1509785107-1663830870.jpg -Properties

ಸಂಜೀವಿನಿ ಪರ್ವತದ ಇತರ ಭಾಗಗಳು

ಪ್ರಜ್ಞಾಹೀನ ಲಕ್ಶ್ಮಣನನ್ನು ಗುಣ ಪಡಿಸಲು ಹನುಮಂತ ದೇವನು ಸಂಜೀವಿನಿ ಪರ್ವತವನ್ನು ತನ್ನ ಹಸ್ತದಲ್ಲಿರಿಸಿಕೊಂಡು ರಾಮನಿದ್ದೆಡೆಗೆ ಹಾರುವ ಸಮಯದಲ್ಲಿ ಪರ್ವತದ ಹಲವಾರು ಭಾಗಗಳು ಕೆಲವು ಕೆಳಗೆ ಬೀಳುತ್ತವೆ. ಈ ಈ ತುಣುಕುಗಳು ಕಾಲಾನಂತರದಲ್ಲಿ ಬೆಳೆದು ದಟ್ಟ ಕಾಡುಗಳ ವಿಶಾಲ ವಿಸ್ತಾರಗಳಾಗಿ ಪರಿವರ್ತನೆಗೊಂಡವು. ಇಂದು, ಅವರು ತಮಿಳುನಾಡಿನ ದಿಂಡಿಗಲ್ ಮತ್ತು ಮಧುರೈ ಜಿಲ್ಲೆಗಳಲ್ಲಿ ನೆಲೆಸಿದ್ದು, ಇವುಗಳು ಸಿರುಮಲೈ ಮತ್ತು ಸತುರಗಿರಿ ಬೆಟ್ಟಗಳು ಎಂದು ಜನಪ್ರಿಯವಾಗಿವೆ.

ಸಂಜೀವಿನಿ ಬೆಟ್ಟಕ್ಕೆ ಭೇಟಿಕೊಡಲೇ ಬೇಕು ಏಕೆ?

ಹಿಂದೂ ಪುರಾಣದ ಕಾಲಕ್ಕೆ ಹಿಂತಿರುಗಿ ಇದರ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇಲ್ಲವೆ? ಇದೆ ಎಂದಾದಲ್ಲಿ, ನೀವು ನಿಮ್ಮ ಮುಂದಿನ ಪ್ರಯಾಣ ಪಟ್ಟಿಯಲ್ಲಿ ಸಂಜೀವಿನಿ ಬೆಟ್ಟಗಳಿಗೆ ಪ್ರವಾಸಕ್ಕೆ ಆಯೋಜಿಸಿ. ಈ ಪ್ರದೇಶವು ದಟ್ಟವಾದ ಸಸ್ಯವರ್ಗದಿಂದ ಆಶೀರ್ವದಿಸಲ್ಪಟ್ಟಿರುವುದರಿಂದ ನೀವು ಇಲ್ಲಿಯ ಪ್ರಕೃತಿಯ ಅಸ್ಪ್ರಶ್ಯ ಸೌಂದರ್ಯತೆಯನ್ನು ಮತ್ತು ಪ್ರಶಾಂತತೆಯ ಸಾರವನ್ನು ಅನುಭವಿಸಬಹುದಾಗಿದೆ. ಈ ಪ್ರದೇಶವು ಹಲವಾರು ಅಪರೂಪದ ಹಾಗೂ ಅಳಿವಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳನ್ನೂ ಶ್ರೀಮಂತವಾಗಿ ಹೊಂದಿದೆ.

ನೀವು ವನ್ಯಜೀವಿ ಛಾಯಾಗ್ರಹಣವನ್ನು ಪ್ರೀತಿಸುತ್ತಿದ್ದರೆ, ಸಂಜೀವಿನಿ ಬೆಟ್ಟವು ನಿಮಗೆ ಒಂದು ಅತ್ಯುತ್ತಮವಾದ ತಾಣವಾಗಿದೆ. ಇಲ್ಲಿ ವಿಷಯಗಳೆಂದರೆ ಟ್ರೆಕ್ಕಿಂಗ್, ಕ್ಯಾಂಪಿಂಗ್ ಮತ್ತು ಹೈಕಿಂಗ್ ನಂತಹ ಇತ್ಯಾದಿ ಚಟುವಟಿಕೆಗಳನ್ನೂ ಮಾಡಬಹುದಾಗಿದೆ. ಹಾಗಾದರೆ, ಸಂಜೀವಿನಿ ಬೆಟ್ಟಕ್ಕೆ ಪ್ರವಾಸವು ಅದ್ಭುತ ಅನುಭವ ಎಂದು ನೀವು ಭಾವಿಸುವುದಿಲ್ಲವೇ?

Rajapalam

ರಾಜಾಪಾಲಯಂ ಗೆ ತಲುಪುವುದು ಹೇಗೆ?

ವಿಮಾನದ ಮೂಲಕ: ರಾಜಪಾಲಯಂ ಗೆ ವಿಮಾನದ ಮೂಲಕ ತಲುಪಲು ಉತ್ತಮ ಮಾರ್ಗವೆಂದರೆ ಮಧುರೈ ವಿಮಾನ ನಿಲ್ದಾಣಕ್ಕೆ ನೇರ ವಿಮಾನದಲ್ಲಿ ಮತ್ತು ಅಲ್ಲಿಂದ ರಾಜಪಾಲಯಂಗೆ ನೇರ ಬಸ್ ಅಥವಾ ಕ್ಯಾಬ್. ಮಧುರೈ ವಿಮಾನ ನಿಲ್ದಾಣ ಮತ್ತು ರಾಜಪಾಳ್ಯಂ ನಡುವಿನ ಅಂತರವು 90 ಕಿ.ಮೀ ಆಗಿದ್ದು, ನಿಮ್ಮ ಗಮ್ಯಸ್ಥಾನವನ್ನು ತಲುಪಲು ಇದು ಅಂದಾಜು 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ರೈಲುಮಾರ್ಗದ ಮೂಲಕ: ರಾಜಪಾಲಯಂ ಎಲ್ಲಾ ಇತರ ನಗರಗಳು ಮತ್ತು ಪಟ್ಟಣಗಳಿಗೆ ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಆದ್ದರಿಂದ, ನೀವು ರಾಜಪಾಳ್ಯಂ ಜಂಕ್ಷನ್‌ಗೆ ನೇರ ರೈಲನ್ನು ಹಿಡಿಯಬಹುದು. ನೀವು ನಿಲ್ದಾಣವನ್ನು ತಲುಪಿದ ನಂತರ, ನೀವು ಸಂಜೀವಿ ಬೆಟ್ಟದ ತಪ್ಪಲಿಗೆ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು.

ರಸ್ತೆಯ ಮೂಲಕ: ರಾಜಪಾಲಯಂ ತಮಿಳುನಾಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಇದು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಇದನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X