Search
  • Follow NativePlanet
Share
» »ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪ್ರಾಣಿಕೋಟಿ ಆಧಾರವಾದುದು ಪಂಚಭೂತಗಳು. ಅವುಗಳೆಂದರೆ ಭೂಮಿ, ಆಕಾಶ, ಗಾಳಿ, ನೀರು, ಬೆಂಕಿ. ಈ ಅಂಶಗಳಿಗೆ ಪ್ರಾತಿನಿಧ್ಯ ವಹಿಸುತ್ತಿರುವುದು ಪಂಚಭೂತ ಸ್ಥಳ ಲಿಂಗಗಳು. ವಿಶ್ವವೆಲ್ಲಾ ಬೆರಗಾಗುವ ವೀರೂಪಾಕ್ಷ ದೇವಾಲಯಲ್ಲಿರುವ ಪಂಚ ಭೂತ ಸ್ಥಳಗಳು ವಿಶಿ

ಪ್ರಾಣಿಕೋಟಿ ಆಧಾರವಾದುದು ಪಂಚಭೂತಗಳು. ಅವುಗಳೆಂದರೆ ಭೂಮಿ, ಆಕಾಶ, ಗಾಳಿ, ನೀರು, ಬೆಂಕಿ. ಈ ಅಂಶಗಳಿಗೆ ಪ್ರಾತಿನಿಧ್ಯ ವಹಿಸುತ್ತಿರುವುದು ಪಂಚಭೂತ ಸ್ಥಳ ಲಿಂಗಗಳು. ವಿಶ್ವವೆಲ್ಲಾ ಬೆರಗಾಗುವ ವೀರೂಪಾಕ್ಷ ದೇವಾಲಯಲ್ಲಿರುವ ಪಂಚ ಭೂತ ಸ್ಥಳಗಳು ವಿಶಿಷ್ಟವಾದುದು. ದಕ್ಷಿಣ ಭಾರತ ದೇಶದ ಈ ಪಂಚ ಭೂತಗಳ ಸ್ಥಳಗಳನ್ನು ಶಿವರಾತ್ರಿಯ ದಿನದಂದು ಭೇಟಿ ನೀಡಿದರೆ ಜನ್ಮ ಧನ್ಯವಾಗುತ್ತದೆ ಎಂದು ಭಾವಿಸುತ್ತಾರೆ ಭಕ್ತ ಜನರು. ಲಯಕಾರನಾದ ಶಿವನನ್ನು ಎಲ್ಲಿ ಹುಡುಕಬೇಕು ಎಂದು ಪರಿತಪಿಸುವ ಭಕ್ತರಿಗೆ ಈ ಪಂಚಭೂತ ಸ್ಥಳ ಲಿಂಗಗಳು ಆಹ್ವಾನಿಸುತ್ತದೆ.

ಇವುಗಳಲ್ಲಿ ನಾಲ್ಕು ದೇವಾಲಯಗಳು ತಮಿಳುನಾಡಿನಲ್ಲಿದ್ದರೆ, ಉಳಿದ ಒಂದು ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ಹಾಗಾದರೆ ಆ ದೇವಾಲಯ ಹೇಗೆ ಪ್ರತಿಷ್ಟಾಪನೆಯಾಯಿತು. ಪಂಚಭೂತಗಳಲ್ಲಿ ಯಾವುದು ಎಲ್ಲಿಲ್ಲೆ ಇವೆ? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯಿರಿ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಆಕಾಶ ಲಿಂಗ, ನಟರಾಜಸ್ವಾಮಿ ದೇವಾಲಯ (ಚಿದಂಬರಂ)
ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿನ ಮುಖ್ಯವಾದ ಪಟ್ಟಣ ಚಿದಂಬರಂ. ಚೆನ್ನೈನಿಂದ 231 ಕಿ.ಮೀ ದೂರದಲ್ಲಿದೆ. ಪರಮಶಿವನು ಆನಂದತಾಂಡವ ಮಾಡಿದ ಸ್ಥಳವಾಗಿ ಇದು ಪ್ರಸಿದ್ಧಿಯನ್ನು ಪಡೆದಿದೆ. ಹಾಗಾಗಿಯೇ ಶಿವನು ನಟರಾಜ ಸ್ವಾಮಿಯಾಗಿ ಇಲ್ಲಿ ನೆಲೆಸಿರುತ್ತಾರೆ. ಈಅದ್ಭುತವಾದ ದೇವಾಲಯಕ್ಕೆ 9 ದ್ವಾರಗಳಿರುತ್ತವೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಆಕಾಶ ಲಿಂಗ, ನಟರಾಜಸ್ವಾಮಿ ದೇವಾಲಯ (ಚಿದಂಬರಂ)
ಇದು (ನವ ದ್ವಾರಗಳು) ಮಾನವನಲ್ಲಿನ ನವರಂಧ್ರಗಳನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ. ಗರ್ಭಗುಡಿಯಲ್ಲಿ ನಟರಾಜಸ್ವಾಮಿಯ ಬಲಭಾಗದಲ್ಲಿ ಒಂದು ಚಿಕ್ಕದಾದ ದ್ವಾರವಿರುತ್ತದೆ. ಅದಕ್ಕೆ ಒಂದು ತೆರೆಯನ್ನು ಹಾಕಿರುತ್ತಾರೆ. ಆ ಗೋಡೆಯ ಮೇಲೆ ಯಂತ್ರ ಎನ್ನುವ ಚಿತ್ರವು ಪ್ರತಿಬಿಂಬಿಸುತ್ತದೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಆಕಾಶ ಲಿಂಗ, ನಟರಾಜಸ್ವಾಮಿ ದೇವಾಲಯ (ಚಿದಂಬರಂ)
ಆ ತೆರೆಯನ್ನು ತೆಗೆದ ನಂತರ ಭಗವಂತನು ಇದ್ದಾನೆ ಎಂಬುದಕ್ಕೆ ಬಂಗಾರದ ಬಿಲ್ವಪತ್ರೆಗಳು ವಾಲಾಡುತ್ತಿರುವುದನ್ನು ಕಾಣಿಸುತ್ತದೆ. ಈ ತೆರೆಯ ಹೊರಭಾಗದಲ್ಲಿ ಅಜ್ಞಾನವನ್ನು ಸೂಚಿಸುವ ಕಪ್ಪುಬಣ್ಣ, ಒಳ ಭಾಗದಲ್ಲಿ ಜ್ಞಾನವನ್ನು ಸೂಚಿಸುವ ಕೆಂಪುಬಣ್ಣವನ್ನು ಸೂಚಿಸುತ್ತದೆ. ಪಂಚಭೂತದಲ್ಲಿ ಒಂದಾದ ಆಕಾಶಕ್ಕೆ ಪ್ರತೀಕವಾಗಿ ಗರ್ಭಗುಡಿಯಲ್ಲಿ ಮೂಲ ವಿಗ್ರಹ ಇರುವ ಸ್ಥಳದಲ್ಲಿ ಖಾಲಿಯಾಗಿರುತ್ತದೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಆಕಾಶ ಲಿಂಗ, ನಟರಾಜಸ್ವಾಮಿ ದೇವಾಲಯ (ಚಿದಂಬರಂ)

ನಿರಾಕಾರನಾಗಿರುವ ಸ್ವಾಮಿಗೆ ಇಲ್ಲಿ ಪೂಜೆಗಳನ್ನು ಮಾಡುತ್ತಾರೆ. ತಮಿಳುನಾಡು ಶಿವಾಲಯಗಳಿಗೆ ಜನ್ಮಸ್ಥಳ ಎಂದು ಹೇಳಬಹುದು. ಚೋಳರು ಹಾಗು ಪಾಂಡ್ಯ ಚಕ್ರವರ್ತಿಗಳು ಶಿವನ ಮೇಲೆ ಇರುವ ಭಕ್ತಿಯ ಪ್ರತೀಕವಾಗಿ ಅನೇಕ ಶಿವಾಲಯಗಳನ್ನು ನಿರ್ಮಾಣ ಮಾಡಿದರು. ತಿಲ್ಲೈ ಕಾಳಿ ದೇವಾಲಯ, ಪಶುಪತೀಶ್ವರ ದೇವಾಲಯ, ಅನ್ನಾಮಲೈ ವಿಶ್ವವಿದ್ಯಾಲಯ, ಇನ್ನು ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಚೆನ್ನೈನಿಂದ ಚಿದಂಬರಕ್ಕೆ ನೇರವಾಗಿ ರೈಲಿನ ಮೂಲಕ ಸೇರಿಕೊಳ್ಳಬಹುದು.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪೃಥ್ವಿಲಿಂಗಂ, ಏಕಾಂಬರೇಶ್ವರ ದೇವಾಲಯ, ಕಂಚಿ
ಕಂಚಿಯ ಉತ್ತರ ಭಾಗವನ್ನು ಶಿವಕಂಚಿ ಎಂದು ಕರೆಯುತ್ತಾರೆ. ಪಂಚಭೂತ ಸ್ಥಳಗಳಲ್ಲಿ ಒಂದಾದ ಏಕಾಂಬರೇಶ್ವರ ದೇವಾಲಯ ಫೃಥ್ವಿ ಎಂದರೆ ಭೂಮಿಗೆ ಸೂಚಕವಾಗಿದೆ. ಭಾರತ ದೇಶದಲ್ಲಿನ ಅತಿ ದೊಡ್ಡ ಗೋಪುರವನ್ನು ಹೊಂದಿರುವ ದೇವಾಲಯಗಳಲ್ಲಿ ಇದು ಕೂಡ ಒಂದು. ತಮಿಳುನಾಡು ರಾಜ್ಯದ ಕಂಚಿಯಲ್ಲಿ ಮಾವಿನ ಮರದ ಕೆಳಗೆ ಸ್ವಾಮಿಯು ನೆಲೆಸಿರುವ ಕಾರಣವಾಗಿ ಸ್ವಾಮಿಗೆ ಏಕಾಂಬರ ಎಂದು ಹೆಸರು ಬಂದಿತು ಎಂದು ನಂಬಲಾಗಿದೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪೃಥ್ವಿಲಿಂಗಂ, ಏಕಾಂಬರೇಶ್ವರ ದೇವಾಲಯ, ಕಂಚಿ
ದೇವಾಲಯದ ಒಳಗಿನ ಮಂಟಪದಲ್ಲಿ ಸಾವಿರ ಸ್ತಂಭಗಳಿವೆ. ಹಾಗೆಯೇ ದೇವಾಲಯದಲ್ಲಿ ಸಾವಿರದ ಎಂಟು ಶಿವಲಿಂಗಗಳನ್ನು ಕೂಡ ಪ್ರತಿಷ್ಟಾಪನೆ ಮಾಡಿದ್ದಾರೆ. ಸುಮಾರು 3500 ವರ್ಷಗಳ ಪುರಾತನವಾದ ಮಾವಿನ ವೃಕ್ಷವು ಇಲ್ಲಿದೆ. ಪ್ರಸ್ತುತ ಆ ಮಾವಿನ ಮರದ ಕಾಂಡವನ್ನು ಮಾತ್ರ ನಾವು ಕಾಣಬಹುದು.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ವಾಯ ಲಿಂಗ, ಶ್ರೀ ಕಾಳಹಸ್ತಿಶ್ವರ ದೇವಾಲಯ, ಶ್ರೀ ಕಾಳಹಸ್ತಿ
ಆಂಧ್ರ ಪ್ರದೇಶದಲ್ಲಿನ ಚಿತ್ತೂರು ಜಿಲ್ಲೆ ಶ್ರೀ ಕಾಳಹಸ್ತಿಯಲ್ಲಿನ ಈ ದೇವಾಲಯವು ಶ್ರೀ ಎಂದರೆ ಜೇಡ, ಕಾಳ ಎಂದರೆ ಹಾವು. ಹಸ್ತಿ ಎಂದರೆ ಆನೆ. ಈ ಮೂರು ಹೆಸರುಗಳಿಂದ ಹೆಸರುವಾಸಿಯಾಗಿದೆ. ಸ್ವಯಂ ಭೂವಾಗಿ ನೆಲೆಸಿದ ಇಲ್ಲಿನ ಶಿವಲಿಂಗದಿಂದ ಬರುವ ಗಾಳಿಗೆ ಎದುರಿಗೆ ಇರುವ ದೀಪವು ಬಳಕುತ್ತಾ ಇರುತ್ತದೆ. ಈ ವಿಧವಾಗಿ ಈ ಲಿಂಗವು ವಾಯು ಲಿಂಗವಾಗಿ ಪ್ರಸಿದ್ಧಿಯನ್ನು ಹೊಂದಿದೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ವಾಯ ಲಿಂಗ, ಶ್ರೀ ಕಾಳಹಸ್ತಿಶ್ವರ ದೇವಾಲಯ, ಶ್ರೀ ಕಾಳಹಸ್ತಿ
ಶ್ರೀಕಾಳಹಸ್ತಿಯನ್ನು ದಕ್ಷಿಣಕಾಶಿ ಎಂದು ಕೂಡ ಕರೆಯುತ್ತಾರೆ. ಮಹಾಶಿವರಾತ್ರಿಯಂದು ಇಲ್ಲಿ ವಿಜೃಂಬಣೆಯಾಗಿ ಉತ್ಸವವನ್ನು ಮಾಡುತ್ತಾರೆ. ದೇವಾಲಯವನ್ನು ಪಲ್ಲವರು ತದನಂತರ ಚೋಳರು ನಿರ್ಮಾಣ ಮಾಡಿರುವುದಾಗಿ ಶಿಲಾಶಾಸನಗಳ ಮೂಲಕ ತಿಳಿದುಬರುತ್ತದೆ. ತಿರುಪತಿಗೆ ಕೇವಲ 40 ಕಿ.ಮೀ ದೂರದಲ್ಲಿ ಇರುವ ಈ ಪುಣ್ಯಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ವಾಯ ಲಿಂಗ, ಶ್ರೀ ಕಾಳಹಸ್ತಿಶ್ವರ ದೇವಾಲಯ, ಶ್ರೀ ಕಾಳಹಸ್ತಿ
ಇಲ್ಲಿಗೆ ತೆರಳಲು ತಿರುಪತಿಯಿಂದ ಪ್ರತಿ 5 ನಿಮಿಷಕ್ಕೆ ಒಮ್ಮೆ ಬಸ್ಸು ಸೌಕರ್ಯವಿದೆ. ಶ್ರೀ ಕಾಳಹಸ್ತಿಗೆ ತೆರಳಲು ಅನೇಕ ರಾಜ್ಯಗಳಿಂದ ಬಸ್ಸುಗಳು ಸೌಕರ್ಯವಿದೆ. ಕೇವಲ 3 ಕಿ.ಮೀ ದೂರದಲ್ಲಿ ಶ್ರೀ ಕಾಳಹಸ್ತಿಗೆ ರೈಲ್ವೆ ನಿಲ್ದಾಣವು ಕೂಡ ಇದೆ. ಹಾಗೆಯೇ ನೆಲ್ಲೂರು ಜಿಲ್ಲೆ ಗೂಡೂರಿಗೆ ತಿರುಪತಿಗೆ ತೆರಳುವ ರೈಲುಗಳು ಕಾಳ ಹಸ್ತಿಯ ಮೂಲಕ ಸಾಗುತ್ತದೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಜಲಲಿಂಗ, ಜಂಬುಕೇಶ್ವರ ದೇವಾಲಯ, ತಿರುಚಿರಾಪಲ್ಲಿ
ತಮಿಳುನಾಡಿನ ತಿರುಚುನಾಪಲ್ಲಿಯಾಗಿ ಕರೆಯುವ ತ್ರಿಚಿಯಿಂದ 11 ಕಿ.ಮೀ ದೂರದಲ್ಲಿ ಪಂಚಭೂತ ಲಿಂಗ ಕ್ಷೇತ್ರಗಳಲ್ಲಿ ಒಂದಾದ ಜಂಬುಕೇಶ್ವರ ದೇವಾಲಯವಿದೆ. ಪವಿತ್ರವಾದ ಕಾವೇರಿ ನದಿ ತೀರದಲ್ಲಿರುವ ಈ ದೇವಾಲಯವು ಪಂಚಭೂತದಲ್ಲಿನ ಜಲವನ್ನು ಸೂಚಿಸುತ್ತದೆ. ತಿರುಚಿನಾಪಲ್ಲಿಗೆ ಅನೇಕ ಹೆಸರುಗಳು ಕೂಡ ಇವೆ. ಆನೆಗಳಿಂದ ಪೂಜೆಗಳನ್ನು ಮಾಡಿಕೊಳ್ಳುತ್ತಿರುವ ಕ್ಷೇತ್ರವೆಂದೂ, ಜಂಬುವೃಕ್ಷಗಳು ಅಧಿಕವಾಗಿ ಇರುವುದರಿಂದ ಈ ದೇವಾಲಯಕ್ಕೆ ಜಂಬುಕೇಶ್ವರ ದೇವಾಲಯ ಎಂಬ ಹೆಸರು ಬಂದಿತು.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಜಲಲಿಂಗ, ಜಂಬುಕೇಶ್ವರ ದೇವಾಲಯ, ತಿರುಚಿರಾಪಲ್ಲಿ
ಜಂಬುಕೇಶ್ವರನಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವ ಶಿವಲಿಂಗವು ಯಾವಾಗಲೂ ನೀರಿನಿಂದ ಕೂಡಿರುತ್ತದೆ. ಈ ವಿಷಯವನ್ನು ಸೂಚಿಸುವ ಸಲುವಾಗಿ ಲಿಂಗದ ಕೆಳಗೆ ಒಂದು ವಸ್ತ್ರವನ್ನು ಇಡುತ್ತಾರೆ. ಸ್ವಲ್ಪ ಸಮಯದ ನಂತರ ಆ ವಸ್ತ್ರವನ್ನು ಹಿಂಡುತ್ತಾರೆ. ಆ ವಸ್ತ್ರದಿಂದ ನೀರು ಬರುತ್ತದೆ. ಗವಾಕ್ಷಿಗೆ ನವದ್ವಾರ ಗಾವಾಕ್ಷಿ ಎಂಬ ಹೆಸರು ಕೂಡ ಇದೆ. ಚೆನ್ನೈನಿಂದ ಶ್ರೀರಂಗಂ ಅಲ್ಲಿನಿಂದ ತಿರುಚುನಾಪಲ್ಲಿ ಸೇರಿಕೊಳ್ಳುವುದು ಸುಲಭವಾದುದು.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಅಗ್ನಿ ಲಿಂಗ, ಅರುಣಾಚಲೇಶ್ವರ ದೇವಾಲಯ, ತಿರುವಣ್ಣಾಮಲೈ
ದಕ್ಷಿಣ ಭಾರತ ದೇಶದಲ್ಲಿನ ನೆಲೆಸಿರುವ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಭೂತಲಿಂಗಕ್ಕೆ ಅರುಣಾಚಲೇಶ್ವರ ದೇವಾಲಯವು ಪ್ರತೀಕವಾಗಿದೆ. ಇದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿದೆ. ಈ ಕ್ಷೇತ್ರವು ತೇಜು ಲಿಂಗವಾದ್ದರಿಂದ ಅಗ್ನಿ ಲಿಂಗ ಕ್ಷೇತ್ರ ಎಂದು ಕರೆಯುತ್ತಾರೆ. ಈ ದೇವಾಲಯವು ಶಿವಾಜ್ಞೆಯ ಮೇರೆಗೆ ವಿಶ್ವಕರ್ಮನಿಂದ ನಿರ್ಮಾಣ ಮಾಡಲ್ಪಟ್ಟಿತು ಎಂದೂ, ಹಾಗಾಗಿಯೇ ಅರುಣ ಎಂಬ ಪ್ರದೇಶವು ಏರ್ಪಟ್ಟಿತು ಎಂದು ಪುರಾಣಗಳು ಹೇಳುತ್ತವೆ.

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಪಂಚ ಭೂತ ಲಿಂಗಗಳು ಎಲ್ಲಿಲ್ಲೆ ಇವೆ ಗೊತ್ತ?

ಅಗ್ನಿ ಲಿಂಗ, ಅರುಣಾಚಲೇಶ್ವರ ದೇವಾಲಯ, ತಿರುವಣ್ಣಾಮಲೈ
ಅರಣಾಚಲ ಬೆಟ್ಟದ ಸುತ್ತ ಪ್ರದಕ್ಷಿಣೆಯನ್ನು ಮಾಡಿದರೆ ಶಿವನಿಗೆ ಪ್ರದಕ್ಷಿಣೆ ಮಾಡುವುದಕ್ಕೆ ಸಮಾನ ಎಂದು ಭಕ್ತರ ನಂಬಿಕೆಯಾಗಿದೆ. ಗಿರಿಪ್ರದಕ್ಷಿಣೆ ಮಾಡುವುದಕ್ಕೆ ಸಹಾಯಕವಾಗಿ ಸುತ್ತಲೂ ರಸ್ತೆ ಇವೆ. ಚೆನ್ನೈನಿಂದ 185 ಕಿ.ಮೀ ದೂರದಲ್ಲಿ ಅರುಣಾಚಲೇಶ್ವರ ದೇವಾಲಯವಿದೆ. ತಿರುಪತಿಯಿಂದ ರೈಲಿನಲ್ಲಿ ಈ ದೇವಾಲಯಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X