Search
  • Follow NativePlanet
Share
» »ಭಸ್ಮಾಸುರನಿಗೂ ಯಾಣಕ್ಕೂ ಏನ್‌ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?

ಭಸ್ಮಾಸುರನಿಗೂ ಯಾಣಕ್ಕೂ ಏನ್‌ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?

ನಮ್ಮೂರ ಮಂದಾರ ಹೂವೇ ಸಿನಿಮಾ ನೋಡಿದವರಿಗೆಲ್ಲಾ ಯಾಣದ ಬಗ್ಗೆ ಗೊತ್ತಿರಬಹುದು. ಯಾಣವು ಒಂದು ಪ್ರಸಿದ್ಧ ಚಾರಣ ಸ್ಥಳವೂ ಆಗಿದೆ. ಪ್ರಕೃತಿಯ ನಡುವೆ ಇರುವ ಈ ಸ್ಥಳವು ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಾಣವು ಬೈರವೇಶ್ವರ ಶಿಖರ ಹಾಗೂ ಮೋಹಿನಿ ಶಿಖರ ಎನ್ನುವ ಎರಡು ಬಂಡೆಗಳಿಗೆ ಫೇಮಸ್ ಆಗಿದೆ. ಯಾಣ ಒಂದು ಅದ್ಭುತ ತಾಣ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇಂತಹ ಒಂದು ರಮಣೀಯ ತಾಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಈಗ ಆನ್‌ಲೈನ್‌ ಟ್ರೈನ್ ಟಿಕೆಟ್ ಬುಕ್ ಮಾಡೋದು ಇನ್ನೂ ಸುಲಭ

ಎಲ್ಲಿದೆ ಈ ಯಾಣ?

ಎಲ್ಲಿದೆ ಈ ಯಾಣ?

ಯಾಣವು ಕುಮಟಾದ ಕಾಡುಗಳಲ್ಲಿರುವ ಒಂದು ಗ್ರಾಮವಾಗಿದ್ದು, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದು ಅಸಾಮಾನ್ಯ ಕಾರ್ಸ್ಟ್ ಶಿಲಾ ರಚನೆಗಳಿಗೆ ಹೆಸರುವಾಸಿಯಾಗಿದೆ. ಇದು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿ, ಕಾರವಾರ ಬಂದರು, ಶಿರಸಿಯಿಂದ 40 ಕಿಲೋಮೀಟರ್ ಮತ್ತು ಕುಮಟಾದಿಂದ 31 ಕಿಲೋಮೀಟರ್ವರೆಗೆ 60 ಕಿಲೋಮೀಟರ್‌ ದೂರದಲ್ಲಿದೆ. ಗ್ರಾಮದ ಸಮೀಪವಿರುವ ಎರಡು ವಿಶಿಷ್ಟವಾದ ಬಂಡೆಗಳು ಹೊರಭಾಗಗಳು ಪ್ರವಾಸಿ ಆಕರ್ಷಣೆಯಾಗಿದೆ.

ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ಎರಡು ಶಿಖರಗಳು

ಎರಡು ಶಿಖರಗಳು

ಯಾಣದಲ್ಲಿ ಮುಖ್ಯವಾಗಿ ಗಮನಸೆಳೆಯುವಂತಹದ್ದು ಎರಡು ಶಿಖರಗಳು. ಬೈರವೇಶ್ವರ ಶಿಖರ ಹಾಗೂ ಮೋಹಿನಿ ಶಿಖರ. ಬೈರವೇಶ್ವರ ಶಿಖರ 120ಮೀ. ಎತ್ತರವಿದ್ದರೆ ಮೋಹಿನಿ ಶಿಖರ 90 ಮೀ. ಎತ್ತರದಲ್ಲಿದೆ.

ಧಾರ್ಮಿಕ ಸ್ಥಳವೂ ಹೌದು

ಧಾರ್ಮಿಕ ಸ್ಥಳವೂ ಹೌದು

PC:Ramesh Meda

ಯಾಣವು ಧಾರ್ಮಿಕ ಸ್ಥಳವೂ ಆಗಿದೆ. ಇಲ್ಲಿನ ಬೈರವೇಶ್ವರ ಶಿಖರದ ಕೆಳಗೆ ಒಂದು ಗುಹಾದೇವಾಲಯವಿದೆ. ಅಲ್ಲಿ ಸ್ವಯಂಭೂ ಶಿವಲಿಂಗವಿದೆ. ಈ ಶಿವಲಿಂಗದ ಮೇಲೆ ಬಂಡೆಮೇಲಿನಿಂದ ನೀರು ಒಸರುತ್ತಿರುತ್ತದೆ. ಬೈರವೇಶ್ವರ ಶಿಖರದ ಕೆಳಗೆ ೩ ಮೀ. ಅಗಲದ ದ್ವಾರವಿದೆ. ಅದು ಗುಹೆಯೊಳಗೆ ಹೋಗುತ್ತದೆ. ಅದಲ್ಲಿ ಚಂಡಿಕೆಯ ಕಂಚಿನ ವಿಗ್ರಹವಿದೆ. ಚಂಡಿಕ ದುರ್ಗೆಯ ಅವತಾರ ಎನ್ನಲಾಗುತ್ತದೆ.

ಭಸ್ಮಾಸುರನಿಗೂ ಯಾಣಕ್ಕೂ ಏನ್ ಸಂಬಂಧ

ಭಸ್ಮಾಸುರನಿಗೂ ಯಾಣಕ್ಕೂ ಏನ್ ಸಂಬಂಧ

ಭಸ್ಮಾಸುರ ಹಾಗೂ ಯಾಣಕ್ಕೂ ಒಂದು ಸಂಬಂಧವಿದೆ. ಪುರಾಣದ ಪ್ರಕಾರ ಭಸ್ಮಾಸುರನು ಶಿವನಿಂದ ಒಂದು ವಿಶೇಷ ವರವನ್ನು ಪಡೆಯುತ್ತಾನೆ. ಅದರ ಪ್ರಕಾರ ಆತ ಯಾರ ತಲೆ ಮೇಲೆ ಕೈ ಇಡುತ್ತಾನೋ ಅವರು ಭಸ್ಮವಾಗಿ ಹೋಗುತ್ತಾರೆ. ತನಗೆ ಸಿಕ್ಕಿದ ವರವನ್ನು ಪರೀಕ್ಷಿಸಲು ಭಸ್ಮಾಸುರನು ಶಿವನ ತಲೆ ಮೇಲೆ ಕೈ ಇಡಲು ಮುಂದಾಗುತ್ತಾನೆ. ಶಿವನು ತಪ್ಪಿಸಿಕೊಂಡು ವಿಷ್ಣುವಿನ ಮೊರೆ ಹೋಗುತ್ತಾನೆ.

ಭಸ್ಮಾಸುರನ ಸಂಹರಿಸಿದ ಮೋಹಿನಿ

ಭಸ್ಮಾಸುರನ ಸಂಹರಿಸಿದ ಮೋಹಿನಿ

PC:Raja Ravi Varma

ವಿಷ್ಣುವು ಶಿವನನ್ನು ಭಸ್ಮಾಸುರನಿಂದ ಕಾಪಾಡಲು ಮೋಹಿನಿಯ ಅವತಾರ ತಾಳಿ ನೃತ್ಯಕ್ಕೆ ಚಾಲೆಂಜ್ ಮಾಡಿ ತನ್ನೊಂದಿಗೆ ಕುಣಿಸುತ್ತಾಳೆ. ಕೊನೆಗೆ ಮೋಹಿನಿ ಭಸ್ಮಾಸುರನಿಗೆ ಅರಿವಿಲ್ಲದಂತೆಯೇ ಆತನ ಕೈಯನ್ನು ಆತನ ತಲೆಗೆ ಇಡುವ ನೃತ್ಯ ಭಂಗಿ ಮಾಡುತ್ತಾಳೆ. ಭಸ್ಮಾಸುರನು ಅದೇ ರೀತಿ ಮಾಡುತ್ತಾನೆ. ಭಸ್ಮಾಸುರನ ಕೈ ತಲೆಗೆ ತಗುಲಿದ ಕೂಡಲೇ ಭಸ್ಮವಾಗಿ ಹೋಗುತ್ತಾನೆ.

ಭಸ್ಮಾಸುರನ ಬೂದಿ

ಭಸ್ಮಾಸುರನ ಬೂದಿ

ಈ ಘಟನೆಯಿಂದಾಗಿ ತೀವೃವಾದ ಬೆಂಕಿ ಸಂಭವಿಸಿದ್ದು ಯಾಣ ಪ್ರದೇಶದ ಸುಣ್ಣದ ರಚನೆ ಕಪ್ಪಾದವು ಎನ್ನಲಾಗುತ್ತದೆ. ಈ ಪ್ರದೇಶದಲ್ಲಿನ ಎರಡು ದೊಡ್ಡ ಬಂಡೆಗಳ ರಚನೆಗಳ ಸುತ್ತಲೂ ಕಂಡುಬರುವ ಸಡಿಲವಾದ ಕಪ್ಪು ಮಣ್ಣು ಅಥವಾ ಬೂದಿ ಭಸ್ಮಾಸುರವ ಸಾವಿನಿಂದ ಉಂಟಾಗಿರುವುದು ಎನ್ನುವುದು ಪುರಾಣದ ಪುರಾಯಲ್ಲಿ ಉಲ್ಲೇಖಿಸಲಾಗಿದೆ.

ಮಹಾಮಸ್ತಕಾಭಿಷೇಕ

ಮಹಾಮಸ್ತಕಾಭಿಷೇಕ

ಶಿವರಾತ್ರಿ ದಿನ 10 ದಿನಗಳ ಕಾಲ ಉತ್ಸವ ನಡೆಯುತ್ತದೆ. ಈ ಸಂದರ್ಭ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕೆಲವರು ಗೋಕರ್ಣಕ್ಕೆ ಹೋದರೆ ಇನ್ನು ಕೆಲವರು ಯಾಣಕ್ಕೆ ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more