Search
  • Follow NativePlanet
Share
» »ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?

ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?

By Vijay

ಇಂದು ಭಾರತದಲ್ಲಿ ಹೇಳಲಾಗುವ "ಮೋಸ್ಟ್ ಎಕ್ಸ್ ಪೆನ್ಸಿವ್ ಪಿನ್ ಕೋಡ್" ಪ್ರದೇಶಗಳಲ್ಲಿ ಬಂಜಾರಾ ಹಿಲ್ಸ್ ಸಹ ಒಂದು. ಇದರರ್ಥ ಇಷ್ಟೆ, ಭಾರತದಲ್ಲಿರುವ ಮಹಾನಗರಗಳ ಅಥವಾ ಕಾಸ್ಮೋಪಾಲಿಟನ್ ನಗರಗಳ ಅತಿ ಪ್ರತಿಷ್ಠಿತ ಹಾಗೂ ಶ್ರೀಮಂತ ಬಡಾವಣೆ ಅಥವಾ ಪ್ರದೇಶಗಳು ಇವು ಆಗಿವೆ ಎಂದು.

ಪ್ರಸ್ತುತ ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದಲ್ಲಿರುವ ಬಂಜಾರಾ ಹಿಲ್ಸ್ ಸಾಕಷ್ಟು ಪ್ರಸಿದ್ಧಿ ಹಾಗೂ ಪ್ರತಿಷ್ಠೆಗಳಿಸಿರುವ ಬಡಾವಣೆ ಪ್ರದೇಶವಾಗಿದೆ. ಇಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಬಹು ಮಹಡಿ ಕಟ್ಟಡಗಳು, ಬಹುರಾಷ್ಟ್ರೀಯ ಕಂಪನಿಯ ಕಚೇರಿಗಳು, ತಾರಾ ಹೋಟೆಲುಗಳು, ಶಾಪಿಂ ಮಾಲ್ ಗಳು ಕಂಡುಬರುತ್ತವೆ.

ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?

ಚಿತ್ರಕೃಪೆ: Cephas 405

ಸಾಕಷ್ಟು ಸ್ವಚ್ಛತೆಯಿಂದ ಕೂಡಿರುವ ಹಾಗೂ ವಿಶಾಲಮಯವಾದ ರಸ್ತೆಗಳು, ಅಲ್ಲಲ್ಲಿ ಕಾಣುವ ಉದ್ಯಾನಗಳು ಬಡಾವಣೆಯ ಅಂದಚೆಂದವನ್ನು ಹೆಚ್ಚಿಸಿವೆ. ಈ ಬಡಾವಣೆಯ ಇನ್ನೊಂದು ವಿಶೇಷತೆ ಎಂದರೆ ಇಲ್ಲಿರುವ ಹದಿನಾಲ್ಕು ರಸ್ತೆಗಳಿಂದ ಇದು ಪ್ರತ್ಯೇಕಿಸಲ್ಪಟ್ಟಿದ್ದು ಪ್ರತಿಯೊಂದು ರಸ್ತೆಯೂ ಸಹ ಅದರದ್ದೆ ಆದ ವಿಶೇಷತೆಯನ್ನು ಹೊಂದಿದೆ.

ಇನ್ನುಳಿದಂತೆ ತೆಲುಗು ಚಿತ್ರೋದ್ಯಮದ ಹಲವಾರು ಪ್ರತಿಷ್ಠಿತ ತಾರೆಯರ ಮನೆಗಳು ಇಲ್ಲಿವೆ. ಅಲ್ಲದೆ ಬಂಜಾರಾ ಹಿಲ್ಸ್ ತನ್ನಲ್ಲಿರುವ ಐಷಾರಾಮಿ ಹೋಟೆಲುಗಳು, ಆಧುನಿಕ ಶಾಪಿಂಗ್ ಮಾಲ್ ಗಳಿಗಾಗಿ ಸಾಕಷ್ಟು ಪ್ರಖ್ಯಾತಿಗಳಿಸಿದೆ. ಇಲ್ಲಿ ದೊರಕುವ ವೈವಿಧ್ಯಮಯ ತಿಂಡಿಗಳೂ ಸಹ ಜನಪ್ರೀಯತೆಗಳಿಸಿವೆ. ಹಾಗಾಗಿ ಸುತ್ತಾಡಲು ಇದೊಂದು ಸುಂದರವಾದ ಪ್ರದೇಶವಾಗಿದೆ.

ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?

ಚಿತ್ರಕೃಪೆ: Cephas 405

ಇದರ ಇತಿಹಾಸವನ್ನು ಗಮನಿಸಿದಾಗ ತಿಳಿಯುವ ವಿಚಾರವೆಂದರೆ ಹಿಂದೆ ಈ ಪ್ರದೇಶವು ಚಿಕ್ಕದಾದ ಬೆಟ್ಟ ಗುಡ್ಡಗಳಿಂದ ಕೂಡಿದ್ದ ಅರಣ್ಯ ಪ್ರದೇಶವಾಗಿತ್ತು. ಜನವಾಸವಂತೂ ಹೆಚ್ಚು ಕಡಿಮೆ ಇದ್ದೆ ಇರಲಿಲ್ಲ. ಹೈದರಾಬಾದ್ ಸಂಸ್ಥಾನದ ನವಾಬನ ರಾಜವಂಶಸ್ಥರಷ್ಟೆ ಕೆಲವು ಜನ ಇಲ್ಲಿ ವಾಸಿಸುತ್ತಿದ್ದರು.

ಪ್ರಮುಖವಾಗಿ ಬೇಟೆಯಾಡುವಲ್ಲಿ ಹೆಸರುವಾಸಿಯಾಗಿದ್ದರಿಂದ ಆ ಒಂದು ಹವ್ಯಾಸವನ್ನು ಪೋಷಿಸಿಕೊಳ್ಳುತ್ತ ರಾಜ ವಂಶಸ್ಥರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕ್ರಮೇಣ ಕಾಲ ಕಳೆದಂತೆ ಎಲ್ಲೆಡೆ ಜಾಗತೀಕರಣ ಉದಯವಾದಂತೆ ಹೈದರಾಬಾದ್ ಸಹ ಐಟಿ ಕ್ಷೇತ್ರದಲ್ಲಿ ದಾಪು ಗಾಲು ಇಡಲು ಪ್ರಾರಂಭಿಸಿತು.

ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?

ಜಗನ್ನಾಥ ದೇವಾಲಯ, ಚಿತ್ರಕೃಪೆ: Sadasiv Swain

ಭಾರತದಲ್ಲಿ ಮಂಚೂಣಿಯಲ್ಲಿರುವ ಐಟಿ ಕ್ಷೇತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹೈದರಾಬಾದ್ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಸಾಧಿಸಿತು. ಅಂತೆಯೆ ಇಲ್ಲಿನ ಜನಸಂಖ್ಯೆಯೂ ಗಮನಾರ್ಹವಾಗಿ ಏರತೊಡಗಿತು. ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹಸಿರಿನಿಂದ ಕೂಡಿದ ಪ್ರದೇಶಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

ಬೆಂಗಳೂರಿನ ಝಗಮಗಿಸುವ ಬಡಾವಣೆಗಳು

ಆ ಕಾರಣದಿಂದಾಗಿ ಬಂಜಾರಾ ಹಿಲ್ಸ್ ನಗರ ವ್ಯಾಪ್ತಿಗೆ ಒಳಪಡುವುದಲ್ಲದೆ ಸಾಕಷ್ಟು ಸ್ವಚ್ಛ ಹಾಗೂ ಹಸಿರಿನಿಂದ ಕೂಡಿರುವ ಸ್ಥಳವಾಗಿದ್ದರಿಂದ ಬೇಡಿಕೆಯುಂಟಾಗಿ ಒಂದು ಪ್ರತಿಷ್ಠಿತ ತಾಣವಾಗಿ ಪರಿವರ್ತಿತವಾಯಿತು. ಅಲ್ಲದೆ ಹೆಚ್ಚೆ ಹೆಚ್ಚು ಶ್ರೀಮಂತರು, ಉದ್ಯಮಿಗಳು ಇಲ್ಲಿ ವಾಸಿಸತೊಡಗಿದ ಕಾರಣ ಶ್ರೀಮಂತ ಬಡಾವಣೆಯಾಗಿಯೂ ಹೆಸರುವಾಸಿಯಾಯಿತು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more