Search
  • Follow NativePlanet
Share
» »ರಾಯಲ್ ವೆಡ್ಡಿಂಗ್; ಈಗ ಟ್ರೈನ್‍ನಲ್ಲೂ ಮದುವೆಯಾಗಬಹುದು...ಖರ್ಚು ಎಷ್ಟಾಗುತ್ತೆ ಗೊತ್ತಾ?

ರಾಯಲ್ ವೆಡ್ಡಿಂಗ್; ಈಗ ಟ್ರೈನ್‍ನಲ್ಲೂ ಮದುವೆಯಾಗಬಹುದು...ಖರ್ಚು ಎಷ್ಟಾಗುತ್ತೆ ಗೊತ್ತಾ?

ಸಾಕಷ್ಟು ಮಂದಿಗೆ ಟ್ರೈನ್‍ನಲ್ಲಿ ಓಡಾಡೊದಂದ್ರೆ ಇಷ್ಟ. ಯಾಕಂದ್ರೆ ಟ್ರೈನ್‍ನಲ್ಲಿ ಕಂಫರ್ಟೇಬಲ್ ಆಗಿರಬಹುದು. ಅತ್ತಿತ್ತ ಓಡಾಡಬಹುದು. ರೈಲಿನಲ್ಲಿ ಓಡಾಡೋ ಮಜಾ ವಿಮಾನದಲ್ಲಿ ಎಲ್ಲಿ ಬರುತ್ತೆ ಹೇಳಿ? ನೀವು ಹಲವಾರು ಡೆಸ್ಟೀನೇಶನ್ ವೆಡ್ಡಿಂಗ್ ಬಗ್ಗೆ ಕೇಳಿರಬಹುದು. ನೋಡಿರಬಹುದು. ಹಾಗೆಯೇ ಟ್ರೈನ್‍ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಕೇಳಿದ್ದೀರಾ? ಟ್ರೈನ್‍ನಲ್ಲಿ ಮದುವೆಯಾಗೋದರ ಮಜಾನೇ ಬೇರೆ. ಈ ಮದುವೆಯ ಜೊತೆ ನೀವು ಭಾರತದ ದರ್ಶನ ಕೂಡಾ ಮಾಡಬಹುದು. ಇದೊಂದು ಥರಾ ಯಾರಲ್ ವೆಡ್ಡಿಂಗ್ ಟೈಪ್. ಹಾಗಾದ್ರೆ ಯಾವ ರೀತಿ ರೈಲಿನಲ್ಲಿ ಮದುವೆಯಾಗುತ್ತದೆ. ಅದಕ್ಕೆ ಏನೆಲ್ಲಾ ತಯಾರಿ ಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಡೀಟೇಲ್ಸ್.

22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!

ಟ್ರೈನ್‍ನಲ್ಲಿ ನಡೆಯುತ್ತೇ ಮದುವೆ

ಟ್ರೈನ್‍ನಲ್ಲಿ ನಡೆಯುತ್ತೇ ಮದುವೆ

Pc: Simon Pielow

ಐಆರ್‍ಸಿಟಿಸಿಯಿಂದ ನೀವು ವೆಡ್ಡಿಂಗ್ ಆನ್ ವೀಲ್ಸ್ ಪ್ಯಾಕೇಜ್ ಮುಖಾಂತರ ಚಲಿಸುತ್ತಿರುವ ಟ್ರೈನ್‍ನಲ್ಲಿ ಮದುವೆಯಾಗಬಹುದು. ಜೊತೆಗೆ ನೀವು ಭಾರತ ದರ್ಶನ ಮಜಾವನ್ನೂ ಪಡೆಯಬಹುದು. ಆದರೆ ಟ್ರೈನ್‍ನಲ್ಲಿ ಮದುವೆಯಾಗಿ ಭಾರತ ದರ್ಶನವನ್ನು ಮಾಡಬಹುದು.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

Pc:Simon Pielow

ಐಆರ್‍ಸಿಟಿಸಿ ವತಿಯಿಂದ ವೆಡ್ಡಿಂಗ್ ಆನ್ ವೀಲ್ಸ್ ಡೆಸ್ಟಿನೇಶನ್ ವೆಡ್ಡಿಂಗ್ ಲವರ್ಸಗಳಿಗೆ ಉತ್ತಮವಾಗಿದೆ. ನಿಮಗೂ ರೈಲಿನಲ್ಲಿ ಮದುವೆಯಾಗಬೇಕೆಂಬ ಆಸೆ ಇದ್ದರೆ ನೀವೂ ಮಹಾರಾಜ ಎಕ್ಸ್‍ಪ್ರೆಸ್ ನಲ್ಲಿ 8 ದಿನಗಳ ಪ್ಯಾಕೇಜ್ ತೆಗೆದುಕೊಳ್ಳಬಹುದು.

 ಎಷ್ಡು ಖರ್ಚಾಗುತ್ತದೆ?

ಎಷ್ಡು ಖರ್ಚಾಗುತ್ತದೆ?

Pc:Simon Pielow

ನೀವು ಸುಮಾರು 5.5 ಕೋಟಿ ನೀಡಬೇಕು. ಒಂದು ವೇಳೆ ನಿಮಗೆ ಇದರಲ್ಲಾಗುವ ಮದುವೆಯನ್ನು ನೋಡಬೇಕೆಂದಿದ್ದರೆ ನೀವು ಸುಮಾರು 4. 5 ಲಕ್ಷದಿಂದ 15. 8 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ.

ಎಷ್ಟು ಜನರು ಈ ಮದುವೆಯಲ್ಲಿ ಪಾಲ್ಗೊಳ್ಳಬಹುದು

ಎಷ್ಟು ಜನರು ಈ ಮದುವೆಯಲ್ಲಿ ಪಾಲ್ಗೊಳ್ಳಬಹುದು

Pc: Simon Pielow

5.5 ಕೋಟಿ ಖರ್ಚು ಮಾಡಲಾಗುವ 8 ದಿನಗಳ ಈ ಡೆಸ್ಟಿನೇಶನ್ ಮದುವೆಯಲ್ಲಿ ಟ್ರೈನ್‍ನಲ್ಲಿರುವವರಿಗೆಲ್ಲರಿಗೂ ಭಾಗಿಯಾಗುವಂತಿಲ್ಲ ಬದಲಾಗಿ ಕೇವಲ 88 ಜನರು ಮಾತ್ರ ಭಾಗವಹಿಸಬಹುದು.

ಎಲ್ಲೆಂಲ್ಲಿಂದ ಹೋಗುತ್ತದೆ ಈ ಟ್ರೈನ್?

ಎಲ್ಲೆಂಲ್ಲಿಂದ ಹೋಗುತ್ತದೆ ಈ ಟ್ರೈನ್?

Pc: Simon Pielow

ಮಹಾರಾಜ ಎಕ್ಸ್‍ಪ್ರೆಸ್ ಮುಂಬೈನಿಂದ ದೆಹಲಿಗೆ ಅಜಂತಾ, ಉದಯ್‍ಪುರ, ಜೋಧ್‍ಪುರ, ಬಿಕನೇರ್, ಜಯಪುರ ಹಾಗೂ ಆಗ್ರಾ ಮಾರ್ಗವಾಗಿ ಹೋಗುತ್ತದೆ. ಇನ್ನೊಂದು ಪ್ಯಾಕೇಜ್‍ನಲಿ ಟ್ರೈನ್ ಜೈಪುರ, ಆಗ್ರಾ, ಗ್ವಾಲಿಯರ್, ಖಜರಾಹೋ, ವಾರಣಾಸಿ ಹಾಗೂ ಲಖ್ನೋ ಮೂಲಕ ದೇಶದ ರಾಜಧಾನಿ ದೆಹಲಿಗೆ ಚಲಿಸುತ್ತದೆ.

ರೆಸಾರ್ಟನಲ್ಲಿ ನಡೆಯೋ ಮದುವೆಯಂತೆಯೇ ಟ್ರೈನ್‍ನಲ್ಲಿ ಮದುವೆ

ರೆಸಾರ್ಟನಲ್ಲಿ ನಡೆಯೋ ಮದುವೆಯಂತೆಯೇ ಟ್ರೈನ್‍ನಲ್ಲಿ ಮದುವೆ

Pc: Simon Pielow

ಹೋಟೆಲ್ ಅಥವಾ ರೆಸಾರ್ಟನಲ್ಲಿ ಮದುವೆಯನ್ನು ಹೇಗೆ ಮಾಡಲಾಗುತ್ತದೋ ಅದೇ ರೀತಿ ಟ್ರೈನ್‍ನಲ್ಲಿ ಮಾಡಲಾಗುತ್ತದೆ. ಮದುವೆಯ ಎಲ್ಲಾ ತಯಾರಿ ಗ್ರ್ಯಾಂಡ್ ಆಗಿ ನಡೆಸಲಾಗುತ್ತದೆ.

ಮಹಾರಾಜ ಎಕ್ಸ್‍ಪ್ರೆಸ್

ಮಹಾರಾಜ ಎಕ್ಸ್‍ಪ್ರೆಸ್

Pc:Simon Pielow

ಅತ್ಯಂತ ದುಬಾರಿ ಪ್ರಯಾಣವಾಗಿರುವ ಮಹಾರಾಜ ಎಕ್ಸ್‍ಪ್ರೆಸ್ ರೈಲನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ 20 ಡಿಲಕ್ಸ್ ಕ್ಯಾಬಿನ್, 18 ಜ್ಯೂನಿಯರ್ ಸ್ವಿಟ್, 4 ಸ್ವಿಟ್ ಹಾಗೂ ಒಂದು ಪ್ರೆಸಿಂಡೆನ್ಸಿಯಲ್ ಸ್ವಿಟ್ ಇರುತ್ತದೆ. ಈ ನಾಲ್ಕರಲ್ಲಿ ಪ್ರೆಜಿಡೆಂಶಿಯಲ್ ಸ್ವಿಟ್ ಸುಂದರವಾಗಿದೆ. ಇದರಲ್ಲಿ ನಾಲ್ಕು ಜನ ಆರಾಮವಾಗಿ ಯಾತ್ರೆಯನ್ನು ಎಂಜಾಯ್ ಮಾಡಬಹುದು. ಇದರಲ್ಲಿ 2 ಬೆಡ್‍ರೂಂ, ಬಾತ್‍ರೂಮ್ ಜೊತೆಗೆ ಸೀಟಿಂಗ್ ಹಾಗೂ ಡೈನಿಂಗ್ ರೂಂ ಸೇರಿಕೊಂಡಿದೆ.

Read more about: india travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X