Search
  • Follow NativePlanet
Share
» »ಟ್ರಾವೆಲ್ ಮಾಡುವಾಗ ದುಡ್ಡು ಉಳಿಸ್ಬೇಕಾ, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ… 

ಟ್ರಾವೆಲ್ ಮಾಡುವಾಗ ದುಡ್ಡು ಉಳಿಸ್ಬೇಕಾ, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ… 

ಅನೇಕರಿಗೆ ಪ್ರವಾಸ ಪ್ರವೃತ್ತಿಯಾಗಿರುತ್ತದೆ. ಆದರೆ ಪ್ರವಾಸ ಹಮ್ಮಿಕೊಳ್ಳುವಾಗ ಕೆಲವು ಸ್ಥಳಗಳು ನೀವು ಬಯಸಿದಷ್ಟೇ ಅಗ್ಗವಾಗಿರಬಹುದು ಅಥವಾ ದುಬಾರಿಯಾಗಿರಬಹುದು. ಮತ್ತೆ ಕೆಲವರು ಪ್ರಯಾಣಿಸುವಾಗ ಪ್ಲಾನ್ ಇಲ್ಲದೆ ಖರ್ಚು ಮಾಡುತ್ತಾರೆ. ನಮ್ಮ ಬಳಿ ಹಣ ಇದ್ದರೆ ಓಕೆ, ಆದರೆ ಎಲ್ಲರಿಗೂ ಆ ಸವಲತ್ತು ಇರುವುದಿಲ್ಲ. ಹಾಗಾಗಿ ಸ್ವಲ್ಪ ಎಚ್ಚರ ವಹಿಸುವ ಮೂಲಕ ನಿಮ್ಮ ಪ್ರವಾಸ ಆಯೋಜಿಸುವುದು ಒಳ್ಳೆಯದು.

ಅಂದಹಾಗೆ ಈ ಕೆಳಗಿನ ಸಲಹೆಗಳು ನಿಮಗೆ ಸ್ವಲ್ಪ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಸ್ವದೇಶದಲ್ಲಿ ಪ್ರಯಾಣ ಮಾಡುವುದು ಬೆಸ್ಟ್. ಏಕೆಂದರೆ ನಿಮ್ಮ ಬಜೆಟ್‌'ಗೆ ತಕ್ಕ ಹಾಗೆ ಅದ್ದೂರಿಯಾಗಿ ನೀವು ಪ್ರಯಾಣಿಸಬಹುದು. ಒಂದು ವೇಳೆ ಹಣದ ಸಮಸ್ಯೆಯಾದರೆ, ನಿಮ್ಮ ಅಗತ್ಯಗಳನ್ನು ಪೂರೈಸಲು ಕೆಲವು ಟಿಪ್ಸ್'ಗಳಿವೆ. ಹಾಗಾದರೆ ಬನ್ನಿ, ಪ್ರಯಾಣಿಸುವಾಗ ಹಣವನ್ನು ಹೇಗೆ ಉಳಿಸುವುದು ಎಂಬುದನ್ನು ನೋಡೋಣ...

ಈ ಸೀಸನ್’ನಲ್ಲಿ ಪ್ರಯಾಣಿಸಬೇಡಿ

ಈ ಸೀಸನ್’ನಲ್ಲಿ ಪ್ರಯಾಣಿಸಬೇಡಿ

ನೀವು ವಿಶೇಷವಾಗಿ ಭಾರತದಲ್ಲಿ ಪ್ರವಾಸ ಮಾಡುವಾಗ ಟೂರಿಸಮ್ ಸೀಸನ್ ಬಿಟ್ಟು ಬೇರೆ ಸಮಯದಲ್ಲಿ ಪ್ರಯಾಣಿಸಿದರೆ ಹಣವನ್ನು ಉಳಿಸಬಹುದು. ಅಷ್ಟೇ ಅಲ್ಲ, ಐಷಾರಾಮಿ ಹೋಟೆಲ್‌'ನಲ್ಲಿ ಉಳಿಯಲು ನಿಮಗೆ ಅವಕಾಶ ಸಿಗುತ್ತದೆ. ಉದಾಹರಣೆಗೆ ಕೋವಲಂ, ಗೋವಾ ಮತ್ತು ರಾಜಸ್ಥಾನದ ಹೋಟೆಲ್‌ಗಳು ಸಾಮಾನ್ಯವಾಗಿ ಅಕ್ಟೋಬರ್‌'ನಿಂದ ಮಾರ್ಚ್‌ವರೆಗೆ ಪೀಕ್ ಸೀಸನ್. ಇನ್ನು ನೀವು ಪರ್ವತ ಪ್ರದೇಶಗಳಿಗೆ ಹೋಗುತ್ತಿದ್ದರೆ, ಬೇಸಿಗೆಯಲ್ಲಿ ಹೆಚ್ಚು ಜನಸಂಖ್ಯೆ ಹೆಚ್ಚಿರುತ್ತದೆ. ದೀಪಾವಳಿ, ಕ್ರಿಸ್ಮಸ್ ಮತ್ತು ಹೊಸ ವರ್ಷದಂತಹ ಭಾರತೀಯ ರಜಾದಿನಗಳಲ್ಲಿ ಬೆಲೆಗಳು ಗಗನಕ್ಕೇರುತ್ತವೆ. ಜೂನ್‌ನಿಂದ ಆಗಸ್ಟ್‌ವರೆಗಿನ ಮಾನ್ಸೂನ್‌ನಲ್ಲಿ ನೀವು 50% ವರೆಗೆ ಉಳಿಸಬಹುದು. ಅಂದಹಾಗೆ ಮಾನ್ಸೂನ್ ಸಮಯದಲ್ಲಿ ಪ್ರವಾಸಕ್ಕೆ ತೆರಳಲು ಕೆಲವು ಉತ್ತಮವಾದ ಸ್ಥಳಗಳಿವೆ.

ತೆರಿಗೆಗಳ ಬಗ್ಗೆ ಗಮನವಿರಲಿ

ತೆರಿಗೆಗಳ ಬಗ್ಗೆ ಗಮನವಿರಲಿ

ಭಾರತ ಸರ್ಕಾರವು 2017 ರಲ್ಲಿ ಜಿಎಸ್'ಟಿ ಪರಿಚಯಿಸಿತು. ಇದು ರೆಸ್ಟೋರೆಂಟ್‌'ಗಳಲ್ಲಿ ವಸತಿ ಮತ್ತು ಊಟದ ವೆಚ್ಚದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿತು. ಸಾಮಾನ್ಯವಾಗಿ ಕೊಠಡಿ ದರ ಕಡಿಮೆ ಇದ್ದರೆ ಯಾವುದೇ ಜಿಎಸ್'ಟಿ ಇರುವುದಿಲ್ಲ. ಆದರೆ 1,000 ಮತ್ತು 7,500 ರೂಪಾಯಿಗಳ ನಡುವೆ ಕೊಠಡಿ ದರವಿದ್ದರೆ ಜಿಎಸ್ ಟಿ ಹೆಚ್ಚಿರುತ್ತದೆ. ಅದರಲ್ಲೂ 7,500 ರೂಪಾಯಿಗಿಂತ ಕೊಠಡಿ ದರ ಹೆಚ್ಚಿದ್ದರೆ ಜಿಎಸ್ ಟಿ ದರವು ಹೆಚ್ಚಾಗುವುದಲ್ಲದೆ, ಹೋಟೆಲ್‌'ಗಳ ಒಳಗೆ ಇರುವ ರೆಸ್ಟೋರೆಂಟ್‌'ಗಳ ಮೇಲೂ ಜಿಎಸ್ ಟಿ ಹೆಚ್ಚಾಗುತ್ತದೆ. ಅಂದರೆ ಇತರ ರೆಸ್ಟೋರೆಂಟ್‌'ಗಳಲ್ಲಿ ಕೇವಲ 5% ಜಿಎಸ್‌ಟಿ ಇದ್ದರೆ, ಇಂತಹ ರೆಸ್ಟೋರೆಂಟ್‌ಗಳಲ್ಲಿ ಊಟದ ಮೇಲೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇದರಿಂದ ನಿಮ್ಮ ಬಿಲ್‌ ಕೂಡ ಜಾಸ್ತಿಯಾಗುತ್ತದೆ.

ಬ್ಯಾಕ್‌ಪ್ಯಾಕರ್ ಟ್ರಿಪ್

ಬ್ಯಾಕ್‌ಪ್ಯಾಕರ್ ಟ್ರಿಪ್

ನೀವು ಚಿಕ್ಕವರಾಗಿದ್ದರೆ ಮತ್ತು ಕಡಿಮೆ ದರದಲ್ಲಿ ಭಾರತವನ್ನು ನೋಡಲು ಬಯಸಿದರೆ, ಬ್ಯಾಕ್‌ಪ್ಯಾಕರ್‌ ಟ್ರಿಪ್ ಕಡಿಮೆ ವೆಚ್ಚವಾಗುತ್ತದೆ. ಗುಂಪು ಪ್ರವಾಸಗಳು ಅತ್ಯುತ್ತಮ ಆಯ್ಕೆಯಾಗಿದೆ. ಕೆಲವು ಕಂಪೆನಿಗಳು 18 ರಿಂದ 30 ವರ್ಷ ವಯಸ್ಸಿನವರಿಗೆ ಸಣ್ಣ ಗುಂಪು ಪ್ರವಾಸಗಳನ್ನು ಆಯೋಜಿಸುತ್ತದೆ. ಈ ಪ್ರವಾಸಗಳು ಅಗ್ಗವಾಗಿದ್ದು, ಸಮಾನ ಮನಸ್ಸಿನ ಜನರೊಂದಿಗೆ ಪ್ರಯಾಣಿಸಲು ಬಯಸುವವರಿಗೆ ಸೂಕ್ತವಾಗಿದೆ.

ವಸತಿ ಪ್ರದೇಶಗಳಲ್ಲಿ ಬಾಡಿಗೆ ದರ ಇಳಿಕೆ

ವಸತಿ ಪ್ರದೇಶಗಳಲ್ಲಿ ಬಾಡಿಗೆ ದರ ಇಳಿಕೆ

ನಿಮೆಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ನಗರಗಳಲ್ಲಿ ಹೋಟೆಲ್ ದರಗಳು ಗಗನಕ್ಕೇರಿವೆ. ಪ್ರತಿ ವರ್ಷವೂ ಹೆಚ್ಚುತ್ತಲೇ ಇರುತ್ತವೆ. ಮುಂಬೈ, ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಪ್ರತಿ ರಾತ್ರಿಗೆ ಕಡಿಮೆ ಎಂದರೂ 300-500 ರೂ. ಇರುತ್ತದೆ. ಆದ್ದರಿಂದ ನೀವು ವಸತಿ ಪ್ರದೇಶಗಳತ್ತ ರೂಂ ಬಾಡಿಗೆ ಪಡೆಯುವುದರಿಂದ ಸ್ವಲ್ಪ ಪ್ರಮಾಣದಲ್ಲಿ ದುಡ್ಡು ಉಳಿಸುತ್ತೀರಿ. ಜೊತೆಗೆ ಪ್ರವಾಸಿ ತಾಣದಿಂದ ದೂರವಿರುವ ಕೊಠಡಿಗಳು ಹೆಚ್ಚು ಶಾಂತಿಯುತವಾಗಿರುತ್ತವೆ.

ಮುಂಗಡ ಬುಕ್ಕಿಂಗ್‌ ಮಾಡಿಸಿ

ಮುಂಗಡ ಬುಕ್ಕಿಂಗ್‌ ಮಾಡಿಸಿ

ನೀವು ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡಿದರೆ ಮುಂಗಡ ಬುಕ್ಕಿಂಗ್‌'ಗಳಿಗೆ ಹೆಚ್ಚು ಆದ್ಯತೆ ನೀಡಿ. ಭಾರತದಲ್ಲಿನ ಹೆಚ್ಚಿನ ದೇಶೀಯ ವಿಮಾನಯಾನ ಸಂಸ್ಥೆಗಳು ಮುಂಗಡ ಬುಕ್ಕಿಂಗ್‌'ಗಳಿಗೆ ರಿಯಾಯಿತಿ ನೀಡುತ್ತವೆ. ಒಂದು ವೇಳೆ ತಡವಾಗಿ ಪ್ಲಾನ್ ಮಾಡಿದರೆ ಬೆಲೆಗಳು ಏರುತ್ತವೆ. ಅದರಲ್ಲೂ ನೀವು ಕೊನೆಯ ನಿಮಿಷದಲ್ಲಿ ಕಾಯ್ದಿರಿಸಿದರೆ, ಮುಂಗಡ ಬುಕ್ಕಿಂಗ್‌ ಗಿಂತ ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಇನ್ನೊಂದು ಮುಖ್ಯವಾದ ವಿಚಾರವೆಂದರೆ ವಿಮಾನ ನಿಲ್ದಾಣಕ್ಕೆ ಬೆಳ್ಳಂಬೆಳಗ್ಗೆ ಅಥವಾ ತಡರಾತ್ರಿಯಲ್ಲಿ ಬರಲು ಸ್ವಲ್ಪ ಅನಾನುಕೂಲವಾಗಬಹುದು. ಆದರೆ ಬೇರೆ ಸಮಯದಲ್ಲಿ ಪ್ರಯಾಣಿಸುವುದಕ್ಕಿಂತ ಈ ಸಮಯದಲ್ಲಿ ಹೆಚ್ಚಿನ ಲಭ್ಯತೆಯನ್ನು ನೀವು ಕಾಣುತ್ತೀರಿ. ಜೊತೆಗೆ, ನೀವು ಇಡೀ ದಿನ ವಿಶ್ರಾಂತಿ ಪಡೆಯಬಹುದು. ಪ್ರಯಾಣದ ದಿನ ಪೂರ್ತಿ ವ್ಯರ್ಥ ಮಾಡಬೇಕಾಗಿಲ್ಲ.

ರೈಲು ಮತ್ತು ಬಸ್: ಯಾವುದು ಬೆಸ್ಟ್?

ರೈಲು ಮತ್ತು ಬಸ್: ಯಾವುದು ಬೆಸ್ಟ್?

ಭಾರತದಾದ್ಯಂತ ಪ್ರಯಾಣಿಸಲು ಭಾರತೀಯ ರೈಲ್ವೆ ಅತ್ಯುತ್ತಮ ಮಾರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ, ನೀವು ರಾತ್ರಿ ಸಮಯ ಪ್ರಯಾಣಿಸಿದರೆ, ನೀವು ಹೋಟೆಲ್‌ ನಲ್ಲಿ ಉಳಿಯಬೇಕಾಗಿಲ್ಲ. ಭಾರತೀಯ ರೈಲ್ವೆಯು ರೈಲು ಪ್ರವಾಸದ ಪ್ಯಾಕೇಜ್‌'ಗಳನ್ನು ಸಹ ನೀಡುತ್ತದೆ. ಭಾರತದಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುವುದು ಸ್ವಲ್ಪ ಕಷ್ಟ. ಆದರೆ ಹತ್ತಿರದ ಊರುಗಳಿಗೆ ಪ್ರಯಾಣಿಸುವಾಗ ಇದು ನಿಜವಾಗಿಯೂ ಪರಿಣಾಮಕಾರಿ ಮತ್ತು ಅನುಕೂಲಕರ ಮಾರ್ಗವಾಗಿದೆ. ವಿಶೇಷವಾಗಿ ಬಸ್ ಸೇವೆಗಳು ದಕ್ಷಿಣ ಭಾರತದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚೆನ್ನಾಗಿರುತ್ತದೆ. ಅಲ್ಲದೆ, ಹಾಲಿಡೇ ಪ್ಯಾಕೇಜ್‌'ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮಗೆ ಸಾಮಾನ್ಯವಾಗಿ ವಿಮಾನಗಳು ಮತ್ತು ಹೋಟೆಲ್‌'ಗಳ ವೆಚ್ಚ ಕಡಿಮೆ ಬೀಳುತ್ತದೆ.

ಚೌಕಾಸಿ ಮಾಡಿ

ಚೌಕಾಸಿ ಮಾಡಿ

ಭಾರತದಲ್ಲಿ ಚೌಕಾಸಿ ಮಾಡುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಪ್ರವಾಸಿ ಸ್ಥಳಗಳಲ್ಲಿ ಮಾರುಕಟ್ಟೆಯ ಬೆಲೆಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಕೇಳುತ್ತಾರೆ. ನೀವು ಚೌಕಾಸಿ ಮಾಡದಿದ್ದರೆ, ಅಗತ್ಯಕ್ಕಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನೀವು ಹೋಟೆಲ್‌ಗೆ ಹೋದಾಗ ಸಂಪೂರ್ಣವಾಗಿ ಬುಕ್ ಮಾಡದಿದ್ದಲ್ಲಿ ಸ್ವಲ್ಪ ಕಡಿಮೆ ದರ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಊಟ, ಹೋಟೆಲ್ ಆಯ್ಕೆ ಹೀಗಿರಲಿ

ಊಟ, ಹೋಟೆಲ್ ಆಯ್ಕೆ ಹೀಗಿರಲಿ

ಹೋಟೆಲ್‌'ಗಳಲ್ಲಿ ತಿನ್ನುವುದರಿಂದ ದುಬಾರಿಯಾಗಬಹುದು. ಆದ್ದರಿಂದ ನೀವು ಊಟದ ವೆಚ್ಚವನ್ನು ಉಳಿಸಲು ಬಯಸಿದರೆ, ಉಪಹಾರವನ್ನು ಒಳಗೊಂಡಿರುವ ಕೊಠಡಿಯಲ್ಲಿ ಉಳಿಯಿರಿ. ಅನೇಕ ಹೋಟೆಲ್‌'ಗಳು ಉಪಹಾರ ನೀಡುತ್ತವೆ. ಬೇಕಾದರೆ ಸಣ್ಣ ಸ್ಥಳೀಯ ರೆಸ್ಟೊರೆಂಟ್‌'ಗಳು ಕಡಿಮೆ ಬೆಲೆಯಲ್ಲಿ ಊಟವನ್ನು ನೀಡುತ್ತವೆ. ವಿಭಿನ್ನ ಭಕ್ಷ್ಯಗಳೊಂದಿಗೆ ಬರುವ ಥಾಲಿ (ಪ್ಲ್ಯಾಟರ್) ಆಯ್ಕೆ ಮಾಡಿಕೊಳ್ಳಿ. ಇದರಿಂದ ಕೇವಲ ಒಂದೆರಡು ನೂರು ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ನಿಮ್ಮ ಹೊಟ್ಟೆ ತುಂಬುತ್ತದೆ. ನಮ್ಮ ಕರ್ನಾಟಕ ರಾಜ್ಯದ ಅನೇಕ ದೇವಾಲಯಗಳಲ್ಲಿ, ಸಿಖ್ ಗುರುದ್ವಾರದಲ್ಲಿ ಉಚಿತವಾಗಿ ಊಟವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಉಚಿತ ವಸತಿ ಸೌಕರ್ಯಗಳು ಲಭ್ಯವಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X