• Follow NativePlanet
Share
» »ತಮಿಳುನಾಡಿನಲ್ಲಿರುವ ಜಲಪಾತಗಳನ್ನು ಕಂಡಿದ್ದೀರಾ?

ತಮಿಳುನಾಡಿನಲ್ಲಿರುವ ಜಲಪಾತಗಳನ್ನು ಕಂಡಿದ್ದೀರಾ?

Posted By: Manjula Balaraj Tantry

ಅದ್ಭುತವಾದ ಭೂಭಾಗವನ್ನು ಹೊಂದಿದ ತಮಿಳುನಾಡು ಅನೇಕ ಜಲಪಾತಗಳಿಗೂ ನೆಲೆಯಾಗಿದೆ. ಇವುಗಳಲ್ಲಿ ಎರಡು ಅನಿಲಗಳು ಸೇರಿ ಒಂದು ಸುಂದರವಾದ ವಿಸ್ಮಯವನ್ನು ತಂದು ನೀಡುತ್ತದೆ ಮತ್ತು ಅನೇಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಋತುವಿನಲ್ಲಿ ತಮಿಳುನಾಡಿನಲ್ಲಿ ಭೇಟಿ ಕೊಡಲೇ ಬೇಕಾದ ಕೆಲವು ಜಲಪಾತಗಳ ಪಟ್ಟಿ ಇಲ್ಲಿವೆ.

ಭೂತ ಮೇಳ ನಡೆಯುತ್ತಂತೆ ಈ ದೇವಾಲಯದಲ್ಲಿ ...ಏನಿದರ ವಿಶೇಷತೆ?

1. ಮಂಕಿ ಜಲಪಾತ

1. ಮಂಕಿ ಜಲಪಾತ

P C : Siva301in

ದೂರ (ಕೊಯಂಬತ್ತೂರು) 67 ಕಿ.ಮೀ

60 ಅಡಿ ಎತ್ತರದಿಂದ ಧುಮುಕುವ ಇದರ ನೀರು ಒಂದು ವಿಶಾಲವಾದ ದ್ರವ ಗೋಡೆಯಂತೆ ಕಾಣುತ್ತದೆ. ಸಾಧ್ಯವಾದರೆ ಇಲ್ಲಿ ಈ ಜಲಪಾತದ ಅಡಿಯಲ್ಲಿ ಒಮ್ಮೆ ಸ್ನಾನ ಮಾಡಿ ಆದರೆ ಇಲ್ಲಿ ಮಳೆಗಾಲದಲ್ಲಿ ಸ್ನಾನ ಮಾಡುವುದು ಅಪಾಯಕಾರಿ ಎನಿಸಬಹುದು. ಕೊಯಂಬತ್ತೂರಿನಿಂದ 67 ಕಿ.ಮೀ ಅಂತರದಲ್ಲಿರುವ ಮಂಕಿ ಜಲಪಾತವು ಒಂದು ಪ್ರಶಾಂತವಾದ ಸ್ಥಳವಾಗಿದ್ದು ನಿಮ್ಮ ದಿನವು ಸುಂದರವಾಗಿ ಕಳೆಯಲು ಸೂಕ್ತವಾದುದಾಗಿದೆ.

2. ಹೊಗೈನಕಲ್ ಜಲಪಾತ

2. ಹೊಗೈನಕಲ್ ಜಲಪಾತ

P C : Mithun Kundu

ದೂರ (ಧರ್ಮಪುರಿನಿಂದ): 46 ಕಿಮೀ

ಒಂದು ಜಲಪಾತವನ್ನು " ಭಾರತದ ನಯಾಗರ" ಎಂದು ಕರೆಯಬೇಕಾದರೆ ಇದು ನೀವು ಹೋಗುತ್ತಿರುವ ಜಲಪಾತವು ಸಾಮಾನ್ಯವಾದ ಸ್ಥಳವಲ್ಲ ಎಂಬುದು ನಿಮಗೆ ತಿಳಿದಿರುವ ಸಂಗತಿಯೇ ಆಗಿದೆ. ನಯವಾದ ಬಿಳಿ ನೀರಿನ ಜೊತೆಗೆ ಸುಂದರವಾಗಿ ಸುತ್ತುತ್ತಿರುವಂತೆ ಕಾಣುವ ಕೊಳದವು ಖಚಿತವಾಗಿಯೂ ಭಯಂಕರವಾಗಿ ಕಾಣುತ್ತದೆ. ಈ ಹೊಗೇನಿಕಲ್ ಜಲಪಾತವು ನಿಮ್ಮ ಅತಿಯಾದ ನಿರೀಕ್ಷೆಯನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ಚೆನ್ನೈ ನಿಂದ ಸುಮಾರು 335 ಕಿಮೀ ಅಂತರದಲ್ಲಿರುವ ಹೊಗೇನಿಕಲ್ ಜಲಪಾತವು 14 ಚಾನೆಲ್ ಗಳನ್ನು ಹೊಂದಿದ್ದು ಅದು ಸುಮಾರು 15 ಮತ್ತು 65ಅಡಿ ಎತ್ತರದಿಂದ ಧುಮುಕುತ್ತದೆ.

3. ಕ್ಯಾಥರೀನ್ ಜಲಪಾತ

3. ಕ್ಯಾಥರೀನ್ ಜಲಪಾತ

P C : Sandip Bhattacharya

ದೂರ (ಕೂನೂರುನಿಂದ): 20 ಕಿಮೀ

ಊಟಿಯಿಂದ ಸುಮಾರು 30 ಕಿ.ಮೀ ಅಂತರದಲ್ಲಿಉರ್ವ ಕ್ಯಾಥರೀನ ಜಲಪಾತವು ನೀಲಗಿರಿ ಬೆಟ್ಟಗಳಲ್ಲಿ ಹರಿಯುವ ಎರಡನೇ ದೊಡ್ಡ ಜಲಪಾತವೆನಿಸಿದೆ. ಇದರ ಎತ್ತರದ ಬಗ್ಗೆ ಹೇಳಬೇಕಾದರೆ ಇದು ಮನಮೋಹಕವಾಗಿದ್ದು ಸುಮಾರು 250 ಅಡಿ ಎತ್ತರದಿಂದ ಧುಮುಕುತ್ತದೆ. ಈ ಸ್ಥಳವು ಸುಂದರವಾದ ಕಾಡುಗಳು ಚಹಾದ ತೋಟಗಳು ಮತ್ತು ಚಾರಣಕ್ಕಾಗಿ ಜನಪ್ರಿಯವಾದ ಭವ್ಯವಾದ ಮೆಟ್ಟು ಪಾಳಯಂ ಬಯಲು ಪ್ರದೇಶದಿಂದ ಸುತ್ತುವರಿಯ್ಪಲ್ಪಟ್ಟಿದೆ.

4. ಸಿರುವಾಣಿ ಜಲಪಾತ

4. ಸಿರುವಾಣಿ ಜಲಪಾತ

P C : VasuVR

ದೂರ (ಕೊಯಂಬತ್ತೂರು ಜಂಕ್ಷನ್ ನಿಂದ): 36 ಕಿ.ಮೀ

ಕೊವೈ ಕುಟ್ರಾಲಂ ಜಲಪಾತ ಎಂದೂ ಕರೆಯಲ್ಪಡುವ ಈ ಜಲಪಾತವು ತಮಿಳುನಾಡಿನ ಸಿರುವಾನಿ ಬೆಟ್ಟದಲ್ಲಿದೆ. ಈ ಸುಂದರವಾದ ಜಲಪಾತವು ದಟ್ಟವಾದ ಕಾಡುಗಳ ಮಧ್ಯೆ ಕಂಡು ಬರುತ್ತದೆ ಮತ್ತು ಈ ಜಲಪಾತವನ್ನು ತಲುಪಲು ಹತ್ತಿರದ ಸ್ಥಳದಿಂದ 4 ಕಿ.ಮೀ ವರೆಗೆ ಚಾರಣ ಹೋಗಬೇಕಾಗುತ್ತದೆ. ಆದರೆ ಇದು ಕೊಯಂಬತ್ತೂರು ರೈಲ್ವೇ ನಿಲ್ದಾಣದಿಂದ ಕೇವಲ 36 ಕಿ.ಮೀ ದೂರದಲ್ಲಿದ್ದು ನೀವು ಆನಂದಿಸಲು ಇಲ್ಲಿಗೆ ಹೋಗದೇ ಇರಲು ಕಾರಣವೇ ಇಲ್ಲ.

5. ಸಿಲ್ವರ್ ಕ್ಯಾಸ್ಕೇಡ್

5. ಸಿಲ್ವರ್ ಕ್ಯಾಸ್ಕೇಡ್

P C : Nijumania

ದೂರ (ಕೊಡೈಕೆನಾಲ್ ಸೆಂಟ್ರಲ್ ಬಸ್ ನಿಲ್ದಾಣದಿಂದ): 8 ಕಿ.ಮೀ

ಸಿಲ್ವರ್ ಕ್ಯಾಸ್ಕೇಡ್ 150 ಅಡಿ ಎತ್ತರದಿಂದ ಧುಮುಕಿದರೂ ಕೂಡಾ ಇಲ್ಲಿ ಈಜುವುದು ಸೂಕ್ತವಲ್ಲ. ಈ ಜಲಪಾತವು ಮುಖ್ಯ ರಸ್ತೆಯಿಂದ ಸುಲಭವಾಗಿ ತಲುಪುವಂತಹುದಾಗಿದ್ದು ಕುಟುಂಬದವರೊಡನೆ ಸಮಯ ಕಳೆಯಲು ಈ ಜಾಗವು ಸೂಕ್ತವಾದುದಾಗಿದೆ.

6 ಬೇರ್ ಶೋಲಾ ಫಾಲ್ಸ್

6 ಬೇರ್ ಶೋಲಾ ಫಾಲ್ಸ್

P C : Marcus334

ದೂರ (ಕೊಡೈಕೆನಾಲ್ ಸೆಂಟ್ರಲ್ ಬಸ್ ನಿಲ್ದಾಣದಿಂದ): 3 ಕಿ.ಮೀ

ಈ ಜಲಪಾತದ ಎತ್ತರದ ಅಂದರೆ ಧುಮುಕುವ ಜಾಗದಲ್ಲಿ ಹಿಮಕರಡಿಗಳು ಇಲ್ಲಿಯ ನೀರು ಕುಡಿಯಲು ಬಳಸುತ್ತಿದ್ದವು ಎಂದು ಕೆಲವು ಮೋಡಿ ಮಾಡುವಂತಹ ಕಾಲ್ಪನಿಕ ಕಥೆಗಳನ್ನು ಹೊಂದಿದೆ. ಆದರೆ ಇವೆಲ್ಲ ಮಾತ್ರ ಸೇರಿ ಈ ಜಲಪಾತವನ್ನು ಆಕರ್ಷಣೆ ಮಾಡುವುದಿಲ್ಲ ಈ ಜಾಗವು ಕೊಡೈಕೆನಾಲ್ ನಿಂದ 3 ಕಿ.ಮೀ ದೂರದಲ್ಲಿರುವುದೂ ಇದರ ಪ್ರಸಿದ್ದಿಗೆ ಕಾರಣವೆನಿಸಿದೆ. ಈ ಜಲಪಾತವು ಅಭಯಾರಣ್ಯದ ಒಳಗೆ ನೆಲೆಸಿದೆ. ಇಲ್ಲಿ ರಸ್ತೆಯಿಂದ ಒಳಗೆ ಜಲಪಾತದ ಕಡೆಗೆ ನಡೆದಾಡುವ ದಾರಿಯು ನಿಮ್ಮನ್ನು ದಟ್ಟವಾದ ಕಾಡುಗಳ ಮಧ್ಯೆ ಕೊಂಡೊಯ್ಯುತ್ತದೆ ಇಲ್ಲಿ ದೃಶ್ಯಗಳು ಮತ್ತು ಸದ್ದುಗಳು ನಗರೀಕರಣದ ಆತ್ಮಕ್ಕೆ ಒಂದು ಮುಲಾಮು ಹಚ್ಚಿದಂತಿದೆ. ಕಾಡಿನ ಮೂಲಕ ನಡೆದ ನಂತರ ಒಂದು ಸುದೀರ್ಘ ನಡಿಗೆಯ ಕೊನೆಯಲ್ಲಿ ನಿಮ್ಮನ್ನು ಸ್ವಾಗತಿಸುವ ಜಲಪಾತವು ಆಹ್ಲಾದಕರವಾಗಿದೆ ಮತ್ತು ನಿಮ್ಮನ್ನು ಸೆಳೆಯುತ್ತದೆ. ಈ ಜಲಪಾತಕ್ಕೆ ಮಳೆಗಾಲದಲ್ಲಿ ಭೇಟಿ ಕೊಡುವುದು ಸೂಕ್ತವಾದ ಸಮಯ.

7. ಕುಂಬಕ್ಕರೈ ಜಲಪಾತಗಳು

7. ಕುಂಬಕ್ಕರೈ ಜಲಪಾತಗಳು

P C : Ashok Prabhakaran

ದೂರ (ಮಧುರೈನಿಂದ): 85 ಕಿ.ಮೀ

ಚಾರುಣಿಗರು ತಮ್ಮ ಚಾರಣವನ್ನು ಕೊಡೈ ಬೆಟ್ಟಗಳ ತಪ್ಪಲಿನಲ್ಲಿ ಜಲಪಾತಗಳ ಹತ್ತಿರದಲ್ಲಿ ಶಿಬಿರ ಹೂಡುವುದು ಸಾಮಾನ್ಯವಾದುದಾಗಿದೆ. ನೀವು ಚಾರಣ ಮಾಡುವವರಲ್ಲವಾದಲ್ಲಿ 87 ಅಡಿ ಎತ್ತರದಿಂದ ಧುಮುಕುವ ಭವ್ಯವಾದ ಜಲಪಾತದ ಕಡೆಗೆ ಹೋಗುವುದು ಸೂಕ್ತವಾದುದಾಗಿದೆ. ಈ ಜಲಪಾತವು ಹಚ್ಚ ಹಸಿರಿನ ಮಧ್ಯೆ ನೆಲೆಸಿದ್ದು ನಾವು ಮನೆಯಲ್ಲಿ ಬಳಸುವ ಯಾವುದಾದರೂ ಬಣ್ಣವನ್ನು ವಿವರಿಸುವ ಒಂದು ನುಡಿಗಟ್ಟಾದ " ಹಸಿರು ಹಾಸು" ಎಂಬ ಪದಕ್ಕಿಂತಲೂ ಹೆಚ್ಚಾದ ಬಣ್ಣವನ್ನು ಹೊಂದಿದ ಹಚ್ಚ ಹಸಿರಿನ ಜಾಗದ ಮೇಲೆ ನಡೆದಾಡುವ ಅನುಭವವನ್ನು ಈ ಜಾಗದಲ್ಲಿ ಅನುಭವಿಸಬಹುದಾಗಿದೆ. ಈ ಜಲಪಾತದ ಪಕ್ಕದಲ್ಲಿ 500 ವರ್ಷಗಳಷ್ಟು ಹಳೆಯದಾದ ದೇವಾಲಯವಿದ್ದು ದೇವಿ ತಾಡಗೈ ನಚ್ಚಿಯಮ್ಮನ್ ಇಲ್ಲಿಯ ಪ್ರಮುಖವಾಗಿ ಪೂಜಿಸ್ಪಡುವ ದೇವತೆ. ಈ ಜಾಗವು ಒಂದು ಅಮ್ಯೂಸ್ ಮೆಂತ್ ಪಾರ್ಕ್ ಅನ್ನು ಕೂಡಾ ಹೊಂದಿದೆ.

8. ತಲೈಯಾರ್ ಫಾಲ್ಸ್

8. ತಲೈಯಾರ್ ಫಾಲ್ಸ್

P C : Barbaragailblock

ದೂರ (ಕೊಡೈಕೆನಾಲ್ ನಿಂದ): 40 ಕಿ.ಮೀ

ಸಾಹಸಮಯವಾಗಿ ಸುಂದರವಾಗಿ ಸೆಳೆಯುವ ರೀತಿಯ ಜಲಪಾತವೆಂದರೆ ಅದು ತಲೈಯರ್ ಜಲಪಾತ ಆದರೆ ಈ ಜಲಪಾತವನ್ನು ಪ್ರವೇಶಿಸಲು ಬಹಳ ಕಷ್ಟ. ಈ ಜಲಪಾತವು 975 ಅಡಿ ಎತ್ತರದಿಂದ ಧುಮುಕುವ ಕಾರಣದಿಂದಾಗಿ ನೀವು ದಿಂಡುಗಲ್ ಗೆ ರಸ್ತೆಯ ಮೂಲಕ ಪ್ರಯಾಣಿಸುವಾಗ ಅತ್ಯಂತ ದೂರದಲ್ಲಿ ಇದನ್ನು ವೀಕ್ಷಿಸಬೇಕಾಗುತ್ತದೆ. ಈ ಜಲಪಾತವನ್ನು ತಲುಪಲು ಕೊಡೈಕೆನಾಲ್ ನಿಂದ ಘಾಟ್ ನ ರಸ್ತೆಯ ಮೂಲಕ 34 ಕಿಮೀ ರಸ್ತೆ ಪ್ರಯಾಣದ ಮೂಲಕ ಹೊರಟು ಸುಮಾರು 6 ಕಿಮೀ ಚಾರಣ ಮಾಡುವ ಮೂಲಕ ಈ ಜಲಪಾತವನ್ನು ಪ್ರವೇಶಿಸುವ ಏಕೈಕ ಮಾರ್ಗವಾಗಿದೆ. ಆದರೂ ಈ ಪ್ರವಾಸವು ಒಂದು ಮೌಲ್ಯಯುತವಾದುದಾಗಿದೆ. ಈ ಜಲಪಾತವು ತಮಿಳುನಾಡಿನ ಅತ್ಯಂತ ಎತ್ತರದ ಜಲಪಾತವೆನಿಸಿದ್ದು (ಭಾರತದ ಮೂರನೇ ಅತ್ಯಂತ ಎತ್ತರದ ಜಲಪಾತ) ಈ ಪರಿಗಣನೆಯು ನಿಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಸಂಶಯವಿಲ್ಲ.

9. ಕಲ್ಹಟ್ಟಿ ಜಲಪಾತ

9. ಕಲ್ಹಟ್ಟಿ ಜಲಪಾತ

pc: youtube

ದೂರ (ಊಟಿಯಿಂದ): 14 ಕಿ.ಮೀ

ಕಲಟ್ಟಿ - ಮಾಸಿನಗುಡಿ ಇಳಿಜಾರಿನಲ್ಲಿ ನೆಲೆಸಿರುವ ಈ ಜಲಪಾತವು ಶ್ರೀಮಂತ ವನ್ಯಜೀವಿಗಳ ನೆಲೆಗೆ ಸಾಕ್ಷಿಯಾಗಿದೆ. ಇಲ್ಲಿ ವನ್ಯಜೀವಿಗಳಲ್ಲಿ ಪ್ಯಾಂಥರ್ಸ್, ಕಾಡು ಎಮ್ಮೆಗಳು ಮತ್ತು ಚುಕ್ಕೆಗಳ ಜಿಂಕೆ ಮುಂತಾದುವುಗಳನ್ನು ಕಾಣಬಹುದು. ಕಲ್ಹಟ್ಟಿ ಜಲಪಾತವನ್ನು ತಲುಪಲು ಖಾಸಗಿ ಚಹಾ ಎಸ್ಟೇಟ್ ರಸ್ತೆಯ ಮೂಲಕ ಪ್ರವೇಶಿಸಬಹುದು.

10. ಸುರುಳಿ ಜಲಪಾತಗಳು

10. ಸುರುಳಿ ಜಲಪಾತಗಳು

pc: youtube

ದೂರ (ಮಧುರೈನಿಂದ): 123 ಕಿ.ಮೀ

ಸುರುಳಿ ಜಲಪಾತವು ಒಂದು ಸುತ್ತಿನ-ವರ್ಷದ ಜಲಪಾತವಾಗಿದ್ದು ಅಪರೂಪದ ವ್ಯತ್ಯಾಸವನ್ನು ಹೊಂದಿದೆ ಆದರೆ ಅಕ್ಟೋಬರ್ ನಿಂದ ಜೂನ್ ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.150 ಅಡಿಗಳಷ್ಟು ಎತ್ತರದಿಂದ ಧುಮುಕುವ ನೀರಿನ ಹೊರತಾಗಿ ಈ ಜಲಪಾತದ ಸುತ್ತ 19 ಗುಹೆಗಳಿವೆ. ಅವುಗಳಲ್ಲಿ ಕೈಲಾಸನಾಥರ್ ಗುಹಾಂತರ ದೇವಾಲಯವೂ ಸೇರಿದೆ. ಇದು ಬೇಸಿಗೆಯ ಉತ್ಸವಗಳು ನಡೆಯುವ ಸ್ಥಳವಾಗಿದ್ದು ಇದನ್ನು ತಮಿಳುನಾಡು ಪ್ರವಾಸೋದ್ಯಮದಿಂದ ಪ್ರತೀ ವರ್ಷ ನಡೆಸಲಾಗುತ್ತದೆ. ಈ ಜಲಪಾತವನ್ನು ತಲುಪಲು ನೀವು 1-2 ಕಿಮೀ ಗಳಷ್ಟು ಹತ್ತಿರದ ರಸ್ತೆಯಿಂದ ಚಾರಣ ಕೈಗೊಳ್ಳಬೇಕಾಗುವುದು.

Read more about: waterfalls summer tamilnadu

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ