Search
  • Follow NativePlanet
Share
» »ಆಗುಂಬೆ: ದಕ್ಷಿಣ ಚಿರಾಪುಂಚಿ

ಆಗುಂಬೆ: ದಕ್ಷಿಣ ಚಿರಾಪುಂಚಿ

ಬೆಂಗಳೂರಿನ ಪ್ರಯಾಣಿಕರು ಆಗುಂಬೆಯನ್ನು ಹೆಚ್ಚಾಗಿ ಭೇಟಿ ನೀಡುತ್ತಾರೆ. ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಒಂದು ಊರು. ಈ ಪ್ರದೇಶವು ಪ್ರಮುಖ ಆರ್ಕಷಣೀಯ ಸ್ಥಳವಾಗಿದೆ. ಈ ಸ್ಥಳವು ಮಳೆಗಾಲದ ಸಮಯದಲ್ಲಿ ಅದ್ಭುತವಾದ ದೃಶ್ಯಗಳನ್ನು

ಬೆಂಗಳೂರಿನ ಪ್ರಯಾಣಿಕರು ಆಗುಂಬೆಯನ್ನು ಹೆಚ್ಚಾಗಿ ಭೇಟಿ ನೀಡುತ್ತಾರೆ. ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಒಂದು ಊರು. ಈ ಪ್ರದೇಶವು ಪ್ರಮುಖ ಆರ್ಕಷಣೀಯ ಸ್ಥಳವಾಗಿದೆ. ಈ ಸ್ಥಳವು ಮಳೆಗಾಲದ ಸಮಯದಲ್ಲಿ ಅದ್ಭುತವಾದ ದೃಶ್ಯಗಳನ್ನು ಪ್ರವಾಸಿಗರಿಗೆ ನೀಡುತ್ತದೆ.

ಆಗುಂಬೆ ಪಶ್ಚಿಮ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಪ್ರದೇಶವನ್ನು ದಕ್ಷಿಣ ಚಿರಾಪುಂಜಿ ಎಂದು ಕೂಡ ಕರೆಯುತ್ತಾರೆ. ಅರೇಬಿಯಾ ಸಮುದ್ರವು ಆಗುಂಬೆಯಿಂದ 55 ಕಿ,ಮೀ ದೂರದಲ್ಲಿ ಇದೆ. ಅದ್ಭುತ ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಆಗುಂಬೆ ಪ್ರಧಾನವಾದ ಆಕರ್ಷಣೆ ಎಂದೇ ಹೇಳಬಹುದಾಗಿದೆ.

ಆಗುಂಬೆಯಲ್ಲಿನ ಸೂರ್ಯಾಸ್ತಮಾನವನ್ನು ಸವಿಯಲು ಬೆಟ್ಟದ ತುದಿಗೆ ಪ್ರಯಾಣಿಕರು ತೆರಳುತ್ತಿರುತ್ತಾರೆ. ಆಗುಂಬೆಯ ಸೌಂದರ್ಯವನ್ನು ಕಾಣಲು ದೇಶದಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುವ ಸುಂದರವಾದ ತಾಣವಿದು. ಆಗುಂಬೆಯ ಎಲ್ಲಾ ಅದ್ಭುತವಾದ ಪ್ರದೇಶಗಳನ್ನು ಕಾಣಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಇದ್ದರೆ 3 ರಿಂದ 4 ದಿನಗಳ ಕಾಲ ಉಳಿಯಬೇಕಾಗುತ್ತದೆ.

ಪ್ರಸ್ತುತ ಲೇಖನದ ಮೂಲಕ ಆಗುಂಬೆಯ ಕೆಲವು ಸುಂದರವಾದ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ ಹಾಗೆಯೇ ಒಮ್ಮೆ ಭೇಟಿ ಕೊಡಿ.

ಕಿಂಗ್ ಕೊಬ್ರಾ

ಕಿಂಗ್ ಕೊಬ್ರಾ

ಕಿಂಗ್ ಕೊಬ್ರಾ ಎಂದರೆ ಯಾರಿಗೆ ಭಯವಾಗುವುದಿಲ್ಲ ಹೇಳಿ. ಹಾಗಾದರೆ ಕೇಳಿ ಕಿಂಗ್ ಕೊಬ್ರಾ ಹುಟ್ಟಿದ್ದು ಈ ಆಗುಂಬೆಯಲ್ಲಿ. ಸುಪ್ರಸಿದ್ಧ ಹಾವುಗಳ ಪರಿಶೊಧಕ ರೊಮುಲಸ್ 1970 ರಲ್ಲಿ ಆಗುಂಬೆ ಪ್ರದೇಶದಲ್ಲಿ ಮೊದಲ ಬಾರಿಗೆ ಕಿಂಗ್ ಕೊಬ್ರಾವನ್ನು ಕಂಡನು. ಹೀಗಾಗಿಯೇ ಆತನಿಗೆ ಬ್ರಿಟೀಷ್ ಸರ್ಕಾರವು ಆತನಿಗೆ ಆವಾರ್ಡ್ ನೀಡಿ ಗೌರವಿಸಿದರು.


PC:Shashidhara halady

ಕುಂಚಿಕಲ್ ಜಲಪಾತ

ಕುಂಚಿಕಲ್ ಜಲಪಾತ

ಕುಂಚಿಕಲ್ ಜಲಪಾತವು ಆಗುಂಬೆಯ ಸುಂದರವಾದ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಕುಂಚಿಕಲ್ ಜಲಪಾತವು ಸುಮಾರು 455 ಮೀಟರ್ ಎತ್ತರ ಹೊಂದಿದೆ. ಈ ಕುಂಚಿಕಲ್ ಜಲಪಾತವು ವರಾಹಿ ನದಿಯಿಂದ ನಿರ್ಮಾಣವಾಗಿದೆ. ಜೋಗ ಜಲಪಾತಕ್ಕಿಂತ ಹೆಚ್ಚಾಗಿ ಪರಿಗಣಿಸಲಾಗಿರುವ ಈ ಜಲಪಾತವು ಭಾರತದಲ್ಲಿನ ಅತ್ಯುನ್ನತ ಶ್ರೇಣಿಕೃತವಾದ ಜಲಪಾತವಾಗಿದೆ. ಈ ಜಲಪಾತವನ್ನು ಕಾಣಲು ಸಾವಿರಾರು ದೇಶ, ವಿದೇಶಿಯ ಪ್ರವಾಸಿಗರು ಭೇಟಿ ನೀಡುತ್ತಾರೆ.

PC:Saurabhsawantphoto

ಬರ್ಕನಾ ಜಲಪಾತ

ಬರ್ಕನಾ ಜಲಪಾತ

ಆಗುಂಬೆಯ ಮತ್ತೊಂದು ಸುಂದರವಾದ ಜಲಪಾತಗಳಲ್ಲಿ ಬರ್ಕನಾ ಜಲಪಾತವು ಒಂದಾಗಿದೆ. ಈ ಜಲಪಾತವು ಭಾರತದ 11 ನೇ ಅತಿ ಎತ್ತರವಾದ ಜಲಪಾತವಾಗಿದೆ. ಈ ಜಲಪಾತವು 850 ಅಡಿ ಎತ್ತರದಿಂದ ಹಾಲಿನಂತೆ ಇರುವ ಜಲವು ಧುಮುಕುತ್ತದೆ. ಈ ಪ್ರದೇಶದ ಮೂಲಕ ಹರಿಯುವ ಸೀತಾ ನದಿ ಜಲಪಾತವನ್ನು ರೂಪಿಸುತ್ತದೆ. ಈ ಜಲಪಾತವು ತನ್ನ ಹೆಸರನ್ನು "ಬರ್ಕ" ದಿಂದ ಪಡೆಯಲಾಗಿದೆ. ಇದು ಹತ್ತಿರದ ಜಿಂಕೆ ವಾಸಿಸುವ ಸ್ಥಳವಾಗಿದೆ.

PC:Arun ghanta

ಒನಕೆ ಅಬ್ಬಿ ಜಲಪಾತ

ಒನಕೆ ಅಬ್ಬಿ ಜಲಪಾತ

ಆಗುಂಬೆಯ ಮತ್ತೊಂದು ಜಲಪಾತ ಒನಕೆ ಅಬ್ಬಿ ಜಲಪಾತ. ಒನಕೆ ಅಬ್ಬಿ ಜಲಪಾತವು ಆಗುಂಬೆಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಒನಕೆ ಎಂಬ ಪದದಿಂದ ಉಂಟಾಗುತ್ತದೆ. ಇಲ್ಲಿಂದ ಆಗುಂಬೆ ಕಣಿವೆಗಳ ಸುಂದರವಾದ ನೋಟವನ್ನು ಕಾಣಬಹುದಾಗಿದೆ. ಈ ಜಲಪಾತವನ್ನು ಕಾಣಲು ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

PC:Mylittlefinger

ಜೋಗಿ ಗುಂಡಿ ಜಲಪಾತ

ಜೋಗಿ ಗುಂಡಿ ಜಲಪಾತ

ಆಗುಂಬೆಯ ಮತ್ತೊಂದು ಸುಂದರವಾದ ಜಲಪಾತವಿದು. ಜೋಗಿ ಗುಂಡಿ ಜಲಪಾತವು ಆಗುಂಬೆಯಿಂದ ಸುಮಾರು 3 ಕಿ.ಮೀ ದುರದಲ್ಲಿದೆ. ಬರ್ಕನಾ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿಯೇ ಈ ಜಲಪಾತವಿದೆ. ಇಲ್ಲಿಂದ ಸುಮಾರು 10 ರಿಂದ 15 ನಿಮಿಷಗಳ ಕಾಲ ಕಾಲ್ನಡಿಗೆಯಲ್ಲಿಯೇ ತೆರಳಬಹುದು.

ಈ ಜಲಪಾತವು ಜೋಗಿ ಎಂಬ ಪದದಿಂದ ಹುಟ್ಟಿಕೊಂಡಿದೆ. ಈ ಹೆಸರು ಬರಲು ಕಾರಣವೆನೆಂದರೆ ಈ ಜಲಪಾತದ ಸಮೀಪದಲ್ಲಿ ಜೋಗಿಗಳು ಧ್ಯಾನ ಮಾಡುತ್ತಿದ್ದರಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ ಎಂದು ತಿಳಿದು ಬಂದಿದೆ.

PC:Subramanya C K


ಕೂಡ್ಲು ತೀರ್ಥ ಜಲಪಾತ

ಕೂಡ್ಲು ತೀರ್ಥ ಜಲಪಾತ

ಸುಮಾರು 300 ಅಡಿ ಎತ್ತರದ ಕೊಳದೊಳಗೆ ಬೀಳುವ ಸೀತಾ ನದಿಯಿಂದ ಕೂಡ್ಲು ತೀರ್ಥ ಜಲಪಾತವು ರೂಪುಗಳ್ಳುತ್ತದೆ. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಋಷಿ ಮುನಿಗಳು ತಪ್ಪಸ್ಸು ಮಾಡಿದ್ದರಂತೆ ಹಾಗಾಗಿ ಈ ಕೊಳವನ್ನು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಮಳೆಗಾಲ ಹಾಗು ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಸಮಯ. ಕೂಡ್ಲು ತೀರ್ಥ ಜಲಪಾತದ ಸಮೀಪದಲ್ಲಿ ಮಂಕಿ ಜಲಪಾತವು ಕೂಡ ಇದೆ. ಈ ಜಲಪಾತಕ್ಕೂ ಒಮ್ಮೆ ಭೇಟಿ ಕೊಡಿ.


PC:Balajirakonda

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಆಗುಂಬೆಗೆ ಸಮೀಪದಲ್ಲಿನ ವಿಮಾನ ನಿಲ್ದಾಣವೆಂದರೆ ಅದು ಮಂಗಳೂರು. ಇದು ಆಗುಂಬೆ ಸುಮಾರು 93 ಕಿ.ಮೀ ದೂರದಲ್ಲಿದೆ. ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಆಗುಂಬೆಗೆ ಸೇರಿಕೊಳ್ಳಬಹುದು.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಅಗುಂಬೆಗೆ ಸಮೀಪದಲ್ಲಿಯೇ ಉಡುಪಿ ರೈಲ್ವೆ ಸ್ಟೇಷನ್ ಇದೆ. ಇಲ್ಲಿಂದ ಸುಮಾರು 53 ಕಿ,ಮೀ ದೂರದಲ್ಲಿ ಆಗುಂಬೆ ಇದೆ. ಇಲ್ಲಿಂದ ಹಲವಾರು ಪ್ರವಾಸಿಗರು ಬಸ್ಸು, ಕ್ಯಾಬ್, ಟ್ಯಾಕ್ಸಿಯ ಮೂಲಕ ಆಗುಂಬೆಗೆ ತಲುಪುತ್ತಾರೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಬೆಂಗಳೂರಿನಿಂದ ಕರ್ನಾಟಕ ಸಾರಿಗೆ ಸಂಸ್ಥೆ ಹಲವಾರು ಸರ್ಕಾರಿ ಬಸ್‍ಗಳು ನಡೆಸುತ್ತಿದೆ. ಪ್ರವಾಸಿಗರು ಉಡುಪಿ ಹಾಗೂ ಮಂಗಳೂರಿಗೆ ನೇರವಾದ ಬಸ್ಸುಗಳು ಇರುವುದರಿಂದ ಅಲ್ಲಿಂದ ಸುಲಭವಾಗಿ ಆಗುಂಬೆಗೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X