Search
  • Follow NativePlanet
Share
» »ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಕರ್ನಾಟಕದ ಪ್ರಸಿದ್ಧ ಕೃಷ್ಣ ಮಂದಿರದಲ್ಲಿ ಉಡುಪಿಯ ಕೃಷ್ಣ ಮಂದಿರವೂ ಒಂದು. ಇದು ವಿಶ್ವವಿಶ್ಯಾತ ಧಾರ್ಮಿಕ ತಾಣವಾಗಿದೆ. ಉಡುಪಿಯನ್ನು ಮಂದಿರಗಳ ನಗರಿ ಎಂದೂ ಕರೆಯಲಾಗುತ್ತದೆ. ಉಡುಪಿಯಲ್ಲಿ 13ನೇ ಶತಮಾನಕ್ಕೆ ಸಂಬಂಧಿಸಿದ ಕೃಷ್ಣ ಮಂದಿರವೊಂದಿದೆ. ಇಲ್ಲಿ ಶ್ರೀಕೃಷ್ಣನ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

 ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣ ಜನ್ಮಾಷ್ಟಮಿ

PC: Ravikiranr

ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉಡುಪಿಯ ಶ್ರೀ ಕೃಷ್ಣ ಮಂದಿರವು ಕರ್ನಾಟಕದ ಪ್ರೇಕ್ಷಣೀಯ ತಾಣಗಳಲ್ಲೊಂದಾಗಿದೆ. ಇಲ್ಲೇ ಪಕ್ಕದಲ್ಲಿ ಅನಂತೇಶ್ವರ ಮಂದಿರವೂ ಇದೆ. ಇದು ಶಿವನಿಗೆ ಸಮರ್ಪಿತವಾದ ಮಂದಿರವಾಗಿದೆ.

ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

 ವಿಟ್ಲಪಿಂಡಿ ಉತ್ಸವ

ವಿಟ್ಲಪಿಂಡಿ ಉತ್ಸವ

PC:Ashok Prabhakaran

ಜನ್ಮಾಷ್ಟಮಿಯ ತಯಾರಿ 15 ದಿನಗಳ ಮುಂಚಿತವಾಗಿಯೇ ನಡೆಯುತ್ತದೆ. ಸಿಹಿತಿಂಡಿ ತಯಾರಿ ಕಾರ್ಯ ಮುಂಚಿತವಾಗಿಯೇ ಪ್ರಾರಂಭವಾಗುತ್ತದೆ. ಜನ್ಮಾಷ್ಟಮಿಯಂದು ಇಡೀ ದೇವಸ್ಥಾನವನ್ನು ಸಿಂಗರಿಸಲಾಗುತ್ತದೆ. ವಿಟ್ಲಪಿಂಡಿ ಉತ್ಸವವೂ ಕಾಣಸಿಗುತ್ತದೆ.

ಉಡುಪಿ ಪರ್ಯಾಯೋತ್ಸವ

ಉಡುಪಿ ಪರ್ಯಾಯೋತ್ಸವ

PC: Ravikiranr

ಎರಡು ವರ್ಷಗಳಿಗೊಮ್ಮೆ ಉಡುಪಿಯಲ್ಲಿ ಪರ್ಯಾಯೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿನ 8 ಮಠಗಳ ನಡುವೆ ಮಂದಿರವ ಮ್ಯಾನೇಜ್‌ಮೆಂಟ್‌ನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರ ಮಾಡಲಾಗುತ್ತದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಬೀಚ್‌ ಹಾಗೂ ಲೈಟ್‌ಹೌಸ್‌

ಬೀಚ್‌ ಹಾಗೂ ಲೈಟ್‌ಹೌಸ್‌

PC:Shravan Kamath94

ಉಡುಪಿಯಲ್ಲಿ ದೇವಸ್ಥಾನಗಳನ್ನು ಹೊರತುಪಡಿಸಿ ಸೆಂಟ್ ಮೇರಿಸ್ ಬೀಚ್‌, ಮಣಿಪಾಲ ಎಂಡ್ ಪಾಯಿಂಟ್, ಕಾಪು ಲೈಟ್‌ ಹೌಸ್‌ನಂತಹ ಸ್ಥಳಗಳನ್ನು ಸುತ್ತಾಡಬಹುದು. ಒಂದು ವೇಳೆ ನೀವು ಕೂಡಾ ಈ ನಗರವನ್ನು ಸುತ್ತಾಡಬೇಕೆಂದಿದ್ದರೆ ಶ್ರೀಕಷ್ಣಾ ಜನ್ಮಾಷ್ಟಮಿಯಂದು ಉತ್ತಮ ಸಂದರ್ಭವಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Vinayaraj

ನೀವು ಉಡುಪಿ ಹೋಗಬೇಕಾದರೆ ವಿಮಾನದ ಮೂಲಕ ಹೋಗುವುದಾದರೆ ಉಡುಪಿಯಿಂದ ೬೦ ಕಿ.ಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣವನವನ್ನು ತಲುಪಬೇಕು. ಅಲ್ಲಿಂದ ಬಸ್‌ ಅಥವಾ ಕ್ಯಾಬ್ ಮೂಲಕ ಉಡುಪಿ ಮಂದಿರವನ್ನು ತಲುಪಬಹುದು. ಮಂಗಳೂರಿನಿಂದ ಉಡುಪಿಗೆ ಸುಮಾರು 1 ಗಂಟೆಯ ಪ್ರಯಾಣವಿದೆ.

ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ರೈಲಿನ ಮೂಲಕ

ರೈಲಿನ ಮೂಲಕ

PC: Vaikoovery

ರೈಲಿನ ಮೂಲಕ ಬರುವುದಾದರೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಟ್ಯಾಕ್ಸಿ ಹಿಡಿದು ಮಂದಿರವನ್ನು ತಲುಪಬಹುದು.
ಬಸ್‌ನಲ್ಲಿ ಹೋಗುವುದಾದರೆ, ಮಂಗಳೂರು. ಹುಬ್ಬಳ್ಳಿ, ಬೆಂಗಳೂರು, ಚೆನ್ನೈ, ಮೈಸೂರ್‌ ಹಾಗೂ ಇನ್ನಿತರ ಸಮೀಪದ ನಗರದಿಂದ ಅನೇಕ ಖಾಸಗಿ ಹಾಗೂ ಸರ್ಕಾರಿ ಬಸ್‌ ವ್ಯವಸ್ಥೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X