Search
  • Follow NativePlanet
Share
» »ನೀರಿನಲ್ಲಿ ಸಾಹಸ ಮಾಡಬಹುದಾದ ಈ 7 ತಾಣಗಳಿಗೆ ನಿಮ್ಮ ಸಂಗಾತಿಯೊಡನೆ ಬೇಸಿಗೆಯ ರಜಾದಿನಗಳಲ್ಲಿ ಭೇಟಿ ಕೊಡಿ

ನೀರಿನಲ್ಲಿ ಸಾಹಸ ಮಾಡಬಹುದಾದ ಈ 7 ತಾಣಗಳಿಗೆ ನಿಮ್ಮ ಸಂಗಾತಿಯೊಡನೆ ಬೇಸಿಗೆಯ ರಜಾದಿನಗಳಲ್ಲಿ ಭೇಟಿ ಕೊಡಿ

ಹಲವಾರು ನವದಂಪತಿಗಳು ಅದರಲ್ಲೂ ಸಾಹಸಿ ದಂಪತಿಗಳು ಸುತ್ತಾಡಬೇಕೆಂದು ಬಯಸುವವರಿಗಾಗಿ ಗಿರಿಧಾಮ ಅಥವಾ ಚಳಿಗಾಲದ ತಾಣಗಳಲ್ಲಿ ಮಧುಚಂದ್ರವು ಎಂದಿಗೂ ಪ್ರಯಾಣದ ಆಯ್ಕೆಯಾಗಿರುವುದಿಲ್ಲ. ಅಂತವರಿಗಾಗಿ ವಿಶ್ರಾಂತಿ ರಜೆಯ ಬದಲಿಗೆ, ಹೆಚ್ಚು ಹೆಚ್ಚು ನವವಿವಾಹಿತರು ಅಡ್ರಿನಾಲಿನ್-ಪಂಪಿಂಗ್ ಚಟುವಟಿಕೆಗಳನ್ನು ಒಳಗೊಂಡಿರುವ ಪ್ರಯಾಣ ಪ್ಯಾಕೇಜ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ, ವಿಶೇಷವಾಗಿ ನೀರಿನ ಚಟುವಟಿಕೆಗಳು ಮತ್ತು ಕ್ರೀಡೆಗಳು ಅವರ ಮೆಚ್ಚಿನ ಆಯ್ಕೆಗಳಾಗಿರುತ್ತದೆ.

ಇಂತಹ ರೋಚಕ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಜೋಡಿಗಳಿಗಾಗಿ ನಮ್ಮಲ್ಲಿ ಭೇಟಿ ಕೊಡಬಹುದಾದ ಅತ್ಯುತ್ತಮ ಸ್ಥಳಗಳ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ. ಭಾರತದಲ್ಲಿ ನಿಮ್ಮ ಬೇಸಿಗೆ ರಜೆಯಲ್ಲಿ ಪ್ರಯತ್ನಿಸಲು 7 ಜಲ ಸಾಹಸಗಳು ಇಲ್ಲಿವೆ; ಅವುಗಳಿ ಖಚಿತವಾಗಿಯು ಮಿಡಿಯುವ ಅನುಭವವನ್ನು ಸೃಷ್ಟಿಸುತ್ತವೆ.

ಹೂಗ್ಲಿ ನದಿ - ಕ್ರೂಸ್ ಪ್ರವಾಸ

ಹೂಗ್ಲಿ ನದಿ - ಕ್ರೂಸ್ ಪ್ರವಾಸ

ಒಂದು ಪ್ರಣಯ ಭರಿತ ನೈಟ್ ಕ್ರೂಸ್ ನ ಅನುಭವವನ್ನು ಗಂಗಾನದಿಯು ಹೂಗ್ಲಿ ನದಿಯುದ್ದಕ್ಕೂ ಕರೆದೊಯ್ಯುತ್ತದೆ. ಇದು ಫರಕ್ಕಾದಿಂದ ಮುಖ್ಯ ನದಿಯಲ್ಲಿ ಕೊಲ್ಕತ್ತಾಕ್ಕೆ ಹರಿಯುತ್ತದೆ. ಕ್ರೂಸ್ ನಿಮಗೆ ನಿಕಟ ಪ್ರಯಾಣಕ್ಕಾಗಿ ಹೆಚ್ಚು ಅಗತ್ಯವಿರುವ ಗೌಪ್ಯತೆಯನ್ನು ಒದಗಿಸುತ್ತದೆ. ಹಾಗೆಯೇ ಕೋಲ್ಕತ್ತಾ ಮತ್ತು ಯುರೋಪಿಯನ್ ವಸಾಹತುಗಳ ಅತ್ಯುತ್ತಮ ದೃಶ್ಯವೀಕ್ಷಣೆ, ನದಿಯ ಉದ್ದಕ್ಕೂ ತೇಲುತ್ತಿರುವಾಗ, ವೀಕ್ಷಿಸಬಹುದಾಗಿದೆ. ಈ ನದಿಯು ಒಂದು ಕಾಲದಲ್ಲಿ ಬಂಗಾಳದ ನವಾಬರ ರಾಜಧಾನಿಯಾಗಿದ್ದ ಮುರ್ಷಿದಾಬಾದ್ ಕಡೆಗೆ ಮತ್ತು ನಂತರ ಮಧ್ಯಕಾಲೀನ ಇಸ್ಲಾಮಿಕ್ ರಾಜಧಾನಿ ಗೌರ್‌ಗೆ ಪ್ರಯಾಣ ಮುಂದುವರಿಯುತ್ತದೆ. ಪ್ರಯಾಣದ ಪ್ರಮುಖ ಅಂಶವೆಂದರೆ ಸುಂದರವಾದ ಬಂಗಾಳಿ ಟೆರಾಕೋಟಾ ದೇವಾಲಯಗಳು.

ಉಪಹಾರದಿಂದ ಪಾನೀಯಗಳವರೆಗೆ, ಈ ಕ್ರೂಸ್ ಟ್ರಿಪ್ ಎಲ್ಲದಕ್ಕೂ ಏನನ್ನಾದರೂ ನೀಡುತ್ತದೆ ಮತ್ತು ದಂಪತಿಗಳಿಗೆ ಪಾಲ್ಗೊಳ್ಳಲು ಅತ್ಯುತ್ತಮವಾದ ನೀರಿನ ಚಟುವಟಿಕೆಗಳಲ್ಲಿ ಒಂದಾಗಿದೆ.

ಕುಮಾರಕೋಮ್ ಹಿನ್ನೀರಿನ ಸ್ಥಳ - ಕಯಾಕಿಂಗ್

ಕುಮಾರಕೋಮ್ ಹಿನ್ನೀರಿನ ಸ್ಥಳ - ಕಯಾಕಿಂಗ್

ರಾಫ್ಟಿಂಗ್ ಅಥವಾ ಸ್ಕೂಬಾ ಡೈವಿಂಗ್‌ನಂತಹ ಅಡ್ರಿನಾಲಿನ್-ಪಂಪಿಂಗ್ ವಾಟರ್ ಸ್ಪೋರ್ಟ್ಸ್‌ಗಿಂತ ಭಿನ್ನವಾಗಿ ನೀವು ವಿಶ್ರಮಿತ ನೀರಿನ ಅನ್ವೇಷಣೆಯನ್ನು ಬಯಸಿದರೆ, ಹಿನ್ನೀರಿನಲ್ಲಿ ಅತ್ಯುತ್ತಮ ಕಯಾಕಿಂಗ್ ಅನುಭವಕ್ಕಾಗಿ ನೀವು ಕೇರಳಕ್ಕೆ ಭೇಟಿ ನೀಡಬಹುದು. ಕುಮಾರಕೋಮ್ ಕೇರಳದ ಹಲವಾರು ಹಿನ್ನೀರಿನ ತಾಣಗಳಲ್ಲೊಂದಾಗಿದ್ದು ಇಲ್ಲಿ ಕಯಾಕಿಂಗ್ ಕೇವಲ ಜಲಕ್ರೀಡೆಯಾಗಿರದೆ ಇಲ್ಲಿಯ ಜೀವನ ಶೈಲಿಯ ಒಂದು ಅಂಗ ಎನ್ನಬಹುದು .

ಇಲ್ಲಿ ಕಯಾಕಿಂಗ್ ಅತ್ಯುತ್ತಮ ಮಟ್ಟದ ಚಲನೆಯನ್ನು ನೀಡುವುದಲ್ಲದೆ ಇಲ್ಲಿಗೆ ದೋಣಿಗಳು ಹೋಗಲು ಸಾಧ್ಯವೇ ಇಲ್ಲದೆ ಇರುವ ಕಡೆಗೆ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ

ನೀವು ಸಂಪೂರ್ಣ ಶಾಂತಿ ಮತ್ತು ಪ್ರಶಾಂತತೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ನಿಮ್ಮ ಮನಸ್ಸಿಗೆ ಮುದನೀಡುವ ಚಟುವಟಿಕೆಗಳಲ್ಲಿ ಇದು ಒಂದಾಗಿದೆ. ನೀವು ಮತ್ತು ನಿಮ್ಮ ಸಂಗಾತಿಯು ರೋಮ್ಯಾಂಟಿಕ್ ಸಮಯವನ್ನು ಇಲ್ಲಿ ಕಳೆಯಬಹುದಾಗಿದ್ದು ಕ್ಯಾನೋದಲ್ಲಿ ಹಿನ್ನೀರಿನ ಉದ್ದಕ್ಕೂ ಯಾವುದೇ ಅಡೆತಡೆಗಳಿಂದ ದೂರವಾಗಿ ರಮಣೀಯ ಸೌಂದರ್ಯದ ನಡುವೆ ಸಮಯ ಕಳೆಯಲು ಉತ್ತಮವಾದ ಸ್ಥಳವಾಗಿದೆ. ಆದ್ದರಿಂದ, ಕಯಾಕಿಂಗ್ ಭಾರತದಲ್ಲಿ ದಂಪತಿಗಳಿಗೆ ಭಾಗವಹಿಸಲು ಅತ್ಯುತ್ತಮ ನೀರಿನ ಚಟುವಟಿಕೆಗಳಲ್ಲಿ ಒಂದಾಗಿದೆ.

ಭೀಮೇಶ್ವರಿ - ರಾಫ್ಟಿಂಗ್

ಭೀಮೇಶ್ವರಿ - ರಾಫ್ಟಿಂಗ್

ಗಿರಿಧಾಮಗಳಿಗೆ ಭೇಟಿ ಕೊಡುವುದಕ್ಕೆ ಸ್ವಲ್ಪ ಸಮಯ ವಿರಾಮ ಕೊಟ್ಟು ಅಡ್ರಿನಾಲಿನ್ ಪ್ರಯಾಣವನ್ನು ಕಾವೇರಿ ನದಿ ದಡದಲ್ಲಿ ಮಂತ್ರಮುಗ್ದಗೊಳಿಸುವ ಪರಿಸರದ ಮತ್ತು ಸೌಂದರ್ಯತೆಯೊಂದಿಗೆ ಭೇಟಿ ಕೊಡಿ. ಹಸಿರು ಬೆಟ್ಟದ ಅದ್ಭುತ ನೋಟ ಮತ್ತು ಎರಡೂ ಬದಿಗಳಲ್ಲಿ ದೂರದ ಹಳ್ಳಿಗಳು ಭೀಮೇಶ್ವರಿ ಪ್ರವಾಸಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಸಾಹಸ ವಿಹಾರಕ್ಕೆ ಭೀಮೇಶ್ವರಿ ಒಂದು ಅನನ್ಯ ಮತ್ತು ಸುಂದರ ತಾಣವಾಗಿದೆ. ಬೇರೇನೂ ಇಲ್ಲದಿದ್ದರೆ, ನೀವು ಆ ಇನ್‌ಸ್ಟಾ ಚಿತ್ರಗಳನ್ನು ಪಡೆಯುವಿರಿ.

ಭಾಗೀರಥಿ ನದಿ- ರಿವರ್ ರಾಫ್ಟಿಂಗ್

ಭಾಗೀರಥಿ ನದಿ- ರಿವರ್ ರಾಫ್ಟಿಂಗ್

ವಾರಾಂತ್ಯದಲ್ಲಿ ಸಾಹಸ ಚಟುವಟಿಕೆಗಳನ್ನು ಅನುಭವಿಸಬೇಕಾದಲ್ಲಿ ಈ ಸ್ಥಳವು ನಿಮಗಾಗಿಯೇ ಎನ್ನಬಹುದು. ಸುಂದರವಾದ ಹಳ್ಳಿಗಳು ಮತ್ತು ಪ್ರಯಾಸಕರ ಕಮರಿಗಳು, ಇಲ್ಲಿ ರಾಫ್ಟಿಂಗ್ ನಿಮಗೆ ನಿಜವಾದ ವೈಟ್ ವಾಟರ್ ರಾಫ್ಟಿಂಗ್ ಅನುಭವವನ್ನು ನೀಡುತ್ತದೆ. ನಿಮ್ಮ ಕೆಲಸ ಜೀವನದಿಂದ ಶಾಂತವಾದ ವಾರಾಂತ್ಯದ ರಜೆಯನ್ನು ಬಯಸುವ ದಂಪತಿಗಳಿಗೆ ಈ ತಾಣವು ಪರಿಪೂರ್ಣವಾಗಿದೆ. ಅಲ್ಲದೆ, ನೀವು ಅದ್ಭುತ ಪ್ರವಾಸಕ್ಕಾಗಿ ಕಯಾಕಿಂಗ್‌ನಲ್ಲಿ ಭಾಗವಹಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಅಸಾಧಾರಣ ಸಮಯ ರಿವರ್ ರಾಫ್ಟಿಂಗ್ ಮಾಡುವಾಗ ಭಾಗೀರಥಿ ನದಿಯಲ್ಲಿ ಸಾಹಸದ ಆನಂದವನ್ನು ಅನುಭವಿಸಿ.

ರಿಷಿಕೇಶ- ರಿವರ್ ರಾಫ್ಟಿಂಗ್

ರಿಷಿಕೇಶ- ರಿವರ್ ರಾಫ್ಟಿಂಗ್

ಭಾರತದ ಲಕ್ಷಾಂತರ ಜನರಿಗೆ ಗಂಗ ನದಿಯು ಪವಿತ್ರ ನದಿಯಾಗಿದ್ದು, ಅದರ ದಡದಲ್ಲಿರುವ ರಿಷಿಕೇಶವು ಸಾಹಸಪ್ರಿಯರಿಗೆ ಜಲಕ್ರೀಡೆಯ ಸಾಹಸ ಚಟುವಟಿಕೆಗಳಿಗಾಗಿ ಅತ್ಯಂತ ಜನಪ್ರಿಯವಾಗಿದೆ. ರಿಷಿಕೇಶವು ಸಾಹಸ ಚಟುವಟಿಕೆಗಳಿಗೆ ರಾಜಧಾನಿ ಎನ್ನಬಹುದು. ಆದುದರಿಂದ ವಿಶ್ವದಾದ್ಯಂತದ ಸಹಸ್ರಾರು ಜನರು ರಿವರ್ ರಾಫ್ಟಿಂಗ್ ಅನುಭವವನ್ನು ಪಡೆಯಲು ರಿಶಿಕೇಶವನ್ನು ಭೇಟಿಕೊಡಲು ಬರುತ್ತಾರೆ.

ಸಾಮಾನ್ಯ ಮಾರ್ಗದಿಂದ ಆಧುನಿಕ ರಾಫ್ಟಿಂಗ್ ಮಾರ್ಗಗಳನ್ನು ಒದಗಿಸುತ್ತಾ ಇದು ಜಲಕ್ರೀಡೆ ಚಟುವಟಿಕೆಗಳ ಹಾಟ್ ಸ್ಪಾಟ್ ಎನಿಸಿದೆ ಈ ಸ್ಥಳವು ಆರಂಭಿಕರು ಮತ್ತು ನುರಿತ ಸಾಹಸಿಗಳಿಗಾಗಿ ನದಿಯ ನಿನಾದವನ್ನು ಕೇಳುತ್ತಾ ಸಂಚರಿಸಬಹುದಾಗಿದೆ. ಬ್ರಹ್ಮಪುರಿ, ಮೆರೈನ್ ಡ್ರೈವ್, ಶಿವಪುರಿ, ಮತ್ತು ಕೌಡಿಯಲ ಇಲ್ಲಿಯ ಕೆಲವು ಪ್ರಸಿದ್ದ ರಿವರ್ ರಾಫ್ಟಿಂಗ್ ನಲ್ಲಿ ಭಾಗವಹಿಸುವಂತಹ ಕೇಂದ್ರಗಳಾಗಿವೆ. ರಿವರ್ ರಾಫ್ಟಿಂಗ್ ಹೊರತಾಗಿಯೂ ಸರ್ಫಿಂಗ್ ಮತ್ತು ಕಯಾಕಿಂಗ್ ನಂತಹ ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ.

ಝಂಕಾರ್ ನದಿ - ವೈಟ್ ರಿವರ್ ರಾಫ್ಟಿಂಗ್

ಝಂಕಾರ್ ನದಿ - ವೈಟ್ ರಿವರ್ ರಾಫ್ಟಿಂಗ್

ವೈಟ್ ರಿವರ್ ರಾಫ್ಟಿಂಗ್ ಜಗತ್ತಿನಾದ್ಯಂತದ ಅತ್ಯಂತ ಪ್ರಸಿದ್ದ ಸಾಹಸಿ ಕ್ರೀಡೆಗಳಲ್ಲೊಂದಾಗಿದೆ. ಮತ್ತು ಝಂಕಾರ್ ನದಿಯು ಲಡಾಕ್ ನ ಹತ್ತಿರದಲ್ಲಿದ್ದು ವೈಟ್ ರಿವರ್ ರಾಫ್ಟಿಂಗ್ ನಲ್ಲಿ ಭಾಗವಹಿಸಲು ಮತ್ತು ಅದರ ಆನಂದವನ್ನು ಅನುಭವಿಸಲು ಅತ್ಯುತ್ತಮವಾದ ಸ್ಥಳವೆನಿಸಿದೆ. ವೈಟ್ ರಿವರ್ ರಾಫ್ಟಿಂಗ್ ಝನ್ಕಾರ್ ಸರೋವರದ ಉದ್ದಕ್ಕೂ ವೈಟ್ ರಿವರ್ ರಾಫ್ಟಿಂಗ್ ನಿಮಗೆ ಒಂದು ಬದಿಯಲ್ಲಿ ಪರ್ವತಗಳು ಮತ್ತು ಇನ್ನೊಂದೆಡೆ ಮಠಗಳ ಮೊದಲ ನೋಟವನ್ನು ನೀಡುತ್ತದೆ, ವಿಪರೀತ ಅಡ್ರಿನಾಲಿನ್ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ.

ಝನ್ಸ್ಕಾರ್ ನದಿಯ ಪ್ರಕ್ಷುಬ್ಧ ರಭಸದ ಮೇಲೆ ಅಡ್ರಿನಾಲಿನ್ ಅನುಭವ ಪಡೆಯಿರಿ ಮತ್ತು ಸುಂದರವಾದ ಪ್ರವಾಸಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಸುಂದರವಾದ ಪ್ರವಾಸ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X