Search
  • Follow NativePlanet
Share
» » ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಭಾರತವನ್ನು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಎನ್ನಲಾಗುತ್ತದೆ. ಇಲ್ಲಿ ಅನೇಕ ಸಂಪ್ರದಾಯ, ಆಚಾರ ವಿಚಾರಗಳನ್ನು ಕಾಣಬಹುದಾಗಿದೆ. ಒಂದೊಂದು ರಾಜ್ಯದ ಸಂಪ್ರದಾಯವು ಇನ್ನೊಂದು ರಾಜ್ಯಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ರಾಜ್ಯಗಳು ಸಂಸ್ಕೃತಿಯನ್ನು ಎತ್ತಿ ಹಿಡಿದರೆ ಇನ್ನೂ ಕೆಲವು ರಾಜ್ಯಗಳ ಸಂಸ್ಕೃತಿ, ಆಚಾರಗಳು ಬಹಳ ವಿಭಿನ್ನವಾಗಿರುತ್ತದೆ. ಅಂತಹದ್ದೇ ಒಂದು ಹಳ್ಳಿಯ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಮಲಾನ ಎಂಬ ಸಣ್ಣ ಹಳ್ಳಿ

ಮಲಾನ ಎಂಬ ಸಣ್ಣ ಹಳ್ಳಿ

PC:Jaypee

ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿನ ಸಣ್ಣ ಹಳ್ಳಿ ಮಲಾನ ದೇಶದ ಇತರ ಹಳ್ಳಿಗಳಿಗಿಂತ ತುಂಬಾನೇ ಭಿನ್ನವಾಗಿದೆ. ಮಲಾನಾ ಹಳ್ಳಿಯಲ್ಲಿ ಅನೇಕ ರಹಸ್ಯಗಳಿವೆ ಹಾಗಾಗಿ ಇದು ಪ್ರವಾಸಿಗರ ನಡುವಿನ ಒಂದು ಪ್ರವಾಸಿ ಕೇಂದ್ರವಾಗಿಬಿಟ್ಟಿದೆ. ವಿಚಿತ್ರ ಆಚರಣೆಗಳು ಈ ಹಳ್ಳಿಯಲ್ಲಿದೆ. ಇಂದಿಗೂ ನಡೆಯುತ್ತಾ ಬಂದಿದೆ.

ವಿಚಿತ್ರ ಆಚರಣೆಗಳು

ವಿಚಿತ್ರ ಆಚರಣೆಗಳು

PC: Anees Mohammed KP

ಮಲನಾ ಸಂಸ್ಕೃತಿಯು ಬಹಳ ನಿಗೂಢವಾಗಿದೆ. ಅವರ ಸಂಪ್ರದಾಯಗಳು ಭಾರತದ ಇತರ ಸಾಂಪ್ರದಾಯಗಳಿಗಿಂತ ವಿಭಿನ್ನವಾಗಿವೆ. ಸತ್ಯದಲ್ಲಿ, ಭಾರತೀಯರು ತಮ್ಮನ್ನು ತಾವು ನೋಡುವ ದೃಷ್ಠಿಯೇ ಇಲ್ಲಿ ಬದಲಾಗಿದೆ.

ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ! ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!

ಡ್ರಗ್ ಮಾಫಿಯಾ

ಡ್ರಗ್ ಮಾಫಿಯಾ

PC:Anees Mohammed KP A

ಡ್ರಗ್ ಮಾಫಿಯಾ ಮತ್ತು ಕಾರ್ಟೆಲ್‌ಗಳಿಗೆ ಹೆಸರು ವಾಸಿಯಾಗಿದೆ. ಕ್ಯಾನ್ಯಾಬಿಸ್ ಅನ್ನು ಪರ್ವತಗಳಲ್ಲಿ ದೊಡ್ಡ ಸಾಕಣೆ ಕೇಂದ್ರಗಳಲ್ಲಿ ಬೆಳೆಯಲಾಗುತ್ತದೆ. ಇದು ಹೆಚ್ಚಿನ ಬೆಲೆಯಲ್ಲಿ ರಫ್ತಾಗುತ್ತದೆ ಮತ್ತು ಸಂಸ್ಕೃತಿಯ ಭಾಗವಾಗಿ ಯುವಕರನ್ನು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವೆ ಮಾಲನಿಗಳ ಆದಾಯದ ಮುಖ್ಯ ಮೂಲವಾಗಿದೆ.

ಗೋಡೆ ಮುಟ್ಟುವಂತಿಲ್ಲ

ಗೋಡೆ ಮುಟ್ಟುವಂತಿಲ್ಲ

PC: Anees Mohammed KP

ಪ್ರವಾಸಿಗರಿಗೆ ಅಥವಾ ಹೊರಗಿನವರನ್ನು ಸೂಚಿಸಲಾದ ಸ್ಥಳದಲ್ಲಿಯೇ ನಿಲ್ಲಬೇಕು. ಅಲ್ಲಿನ ಯಾವುದೇ ಗೋಡೆಗಳು, ಮನೆಗಳು, ಜನರು ಮತ್ತು ಯಾವುದೇ ವಸ್ತುವನ್ನು ಮುಟ್ಟಬಾರದು. ಒಂದು ವೇಳೆ ಅಲ್ಲಿನ ಗೋಡೆಯನ್ನಾಗಲಿ ಯಾವುದನ್ನಾಗಲಿ ಮುಟ್ಟಿದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಮನೆಯನ್ನೆಲ್ಲಾ ಶುದ್ಧೀಕರಿಸಬೇಕಾಗುತ್ತದೆ.

ಈ ಸೀಸನ್‌ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದುಈ ಸೀಸನ್‌ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು

ಬೇರೆಯವರು ಮಾಡಿದ ಅಡುಗೆ ಸೇವಿಸೋಲ್ಲ

ಬೇರೆಯವರು ಮಾಡಿದ ಅಡುಗೆ ಸೇವಿಸೋಲ್ಲ

PC:Ravi Raj Gupta

ಹೊರ ಊರಿನಿಂದ ಯಾರೇ ಆ ಊರಿಗೆ ಬಂದರೆ ಕೆಲವು ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಇಲ್ಲಿನ ಜನರು ತಮ್ಮ ಮನೆಯಲ್ಲಿ ಮಾಡಲಾದ ಅಡುಗೆಯನ್ನಷ್ಟೇ ಸೇವಿಸುತ್ತಾರೆಯೇ ಹೊರತು ಹೊರಗಿನವರು ನೀಡಿದ ಆಹಾರವನ್ನು ಸೇವಿಸುವುದಿಲ್ಲ. ಆದರೆ ತಾವು ಅಡುಗೆ ಮಾಡಿ ಇತರರಿಗೆ ನೀಡುತ್ತಾರೆ.

 ಕ್ಯಾನಬಿಯನ್ ಗಿಡ

ಕ್ಯಾನಬಿಯನ್ ಗಿಡ

PC:Anees Mohammed KP

ಯಾರಿಗೂ ಕ್ಯಾನಬಿಯನ್ ಗಿಡಗಳನ್ನು ಮುಟ್ಟಲು ಬಿಡುವುದಿಲ್ಲ. ಅಷ್ಟೇ ಅಲ್ಲ ತಮ್ಮ ಮನೆಯ ಹೆಣ್ಮಕ್ಕಳ ಬಗ್ಗೆ ಹೆಚ್ಚು ಸುರಕ್ಷತೆಯಿಂದ ಇರುತ್ತಾರೆ. ಮಹಿಳೆಯರನ್ನು ಮುಟ್ಟಲೂ ಬಿಡುವುದಿಲ್ಲ. ಯಾರೇ ಆಗಲಿ ಹೆಣ್ಮಗಳಿಗೆ ಯಾವುದೇ ರೀತಿಯ ಹಿಂಸೆ ನೀಡಿದ್ದಲ್ಲಿ ಬ್ಲೇಡ್, ಚಾಕುವಿನಿಂದ ಹಲ್ಲೆ ಮಾಡುತ್ತಾರೆ.

ಎಲೆಕ್ಟ್ರಾನಿಕ್ಸ್ ವಸ್ತು

ಎಲೆಕ್ಟ್ರಾನಿಕ್ಸ್ ವಸ್ತು

PC: Nikhil.m.sharma

ಬೆಟ್ಟಗಳಲ್ಲಿ ಇರುವುದರಿಂದ ಅವರು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪಡೆಯುವಲ್ಲಿ ಸಂತೋಷ ಪಡುತ್ತಿದ್ದರು. ನೀವು ಅವರಿಗೆ ಹೊಸ ಫೋನ್, ಸ್ಪೀಕರ್ ಅಥವಾ ಉಪಯುಕ್ತ ಸಾಧನವನ್ನು ತಂದುಕೊಟ್ಟರೆ ಅವರು ನಿಮ್ಮ ಪ್ರಯತ್ನವನ್ನು ಮೆಚ್ಚುತ್ತಾರೆ ಮತ್ತು ಪ್ರತಿಯಾಗಿ ಹೆಚ್ಚಿನದನ್ನು ಮಾಡುತ್ತಾರೆ.

ಮಲನಾದ ಸ್ಥಳೀಯ ಭಾಷೆ

ಮಲನಾದ ಸ್ಥಳೀಯ ಭಾಷೆ

PC: Rohansandhu

ಮಲನಾದ ಸ್ಥಳೀಯರು 'ಕಾನಾಶಿ' ಭಾಷೆಯನ್ನು ಮಾತನಾಡುತ್ತಾರೆ. ಅದು ನೆರೆಯ ಹಳ್ಳಿಗಳಲ್ಲಿ ಮಾತನಾಡುವ ಯಾವುದೇ ಉಪಭಾಷೆಗಳಂತೆ ಅನಿಸುವುದಿಲ್ಲ. ಈ ಹಳ್ಳಿಯು ಗ್ರಾಮದ ರಹಸ್ಯಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ, ಈ ಭಾಷೆಯನ್ನು ಇತರ ಹಳ್ಳಿಗಳ ಹೊರಗಿನವರನ್ನು ಬಳಸಲು ಅನುಮತಿಸಲಾಗುವುದಿಲ್ಲ.

ಶಿವ ಭಕ್ತರು

ಶಿವ ಭಕ್ತರು

PC: Nikhil.m.sharma

ಮಲಾನ ಜನರು ಶಿವ ಭಕ್ತರು. ಇವರು ಶಿವನನ್ನು ಪೂಜಿಸುತ್ತಾರೆ. ಅವರ ಸಂಪ್ರದಾಯಗಳು ಭಾರತದ ಇತರ ಸಾಂಪ್ರದಾಯಗಳಿಗಿಂತ ವಿಭಿನ್ನವಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X