Search
  • Follow NativePlanet
Share
» » ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ತೆಲಂಗಾಣದ ಅವಳೀ ನಗರಗಳಾದ ಹೈದರಾಬಾದ್ ಹಾಗೂ ಸಿಖಂದರಾಬಾದ್‌ನಲ್ಲಿ ಟ್ರಾಫೀಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಿಗೆ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗದಂತಾಗಿದೆ. ಹೀಗಿರುವಾಗ ಆಫೀಸ್‌, ಟ್ರಾಫೀಕ್ ಜಂಜಾಟದಿಂದ ಎಲ್ಲಾದರೂ ಪ್ರಶಾಂತ, ಪ್ರಕೃತಿಯ ಸೌಂದರ್ಯದ ಜಾಗಕ್ಕೆ ಪ್ರವಾಸ ಹೋಗಬೇಕು. ಸ್ವಲ್ಪ ದಿನಗಳನ್ನು ಅಲ್ಲಿ ಕಳೆಯಬೇಕೆಂದು ನಿಮಗೆ ಅನಿಸಬಹುದು. ಆದರೆ ಆಫೀಸ್‌ನಲ್ಲಿ ರಜೆಯ ಸಮಸ್ಯೆಯಿಂದಾಗಿ ನಾವು ಅಂದುಕೊಂಡಂತೆ ಕಾಲ ಕಳೆಯಲು ಸಾಧ್ಯವಿಲ್ಲ.

ಆಕ್ಸಿಜನ್ ಪಾರ್ಕ್‌

ಆಕ್ಸಿಜನ್ ಪಾರ್ಕ್‌

PC: Mohammed Azharuddin Azzu

ಹೈದರಾಬಾದ್ ಹಾಗೂ ಸಿಖಂದರಾಬಾದ್‌ನ ಜನತೆಗೆ ಸ್ವಲ್ಪ ಕಾಲ ಹಚ್ಚಹಸಿರಿನ ನಡುವೆ ನೈಸರ್ಗಿಕ ಗಾಳಿ ಸೇವಿಸುವ ಅವಕಾಶ ಸಿಗುತ್ತಿದೆ. ಅದೇನೆಂದರೆ ಸಿಖಂದರಾಬಾದ್‌ನಲ್ಲಿ ಆಕ್ಸಿಜನ್ ಪಾರ್ಕ್‌ನ ನಿರ್ಮಾಣವಾಗಿದೆ. ಜನತೆಗೆ ಶುದ್ಧ ಗಾಳಿ ಒದಗಿಸುವ ಉದ್ದೇಶದಿಂದ ಈ ಪಾರ್ಕ್‌ನ ನಿರ್ಮಾಣ ಮಾಡಲಾಗಿದೆ.

ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ! ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ವಾಕಿಂಗ್ ಟ್ರ್ಯಾಕ್

ವಾಕಿಂಗ್ ಟ್ರ್ಯಾಕ್

75 ಎಕರೆಯಲ್ಲಿ ನಿರ್ಮಿಸಲಾಗಿರುವ ಈ ಪಾರ್ಕ್‌ನ ನಾಲ್ಕು ಕಡೆಗಳಲ್ಲಿ 2.2ಕಿ.ಮೀ ಉದ್ದದ ವಾಕಿಂಗ್ ಟ್ರಾಕ್ ನಿರ್ಮಿಸಲಾಗಿದೆ. ನೀವು ಬೆಳಗ್ಗೆ ಅಥವಾ ಸಂಜೆ ಇಲ್ಲಿ ವಾಕ್ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ 260 ಮೀಟರ್ ಉದ್ದದ ಕ್ಯಾನಪಿ ವಾಕ್‌ನ್ನೂ ಕೂಡಾ ಪಾರ್ಕ್‌ನ ಒಳಗೆ ಮಾಡಲಾಗಿದೆ.

100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

 ಪಿಕ್‌ನಿಕ್ ಹೋಗಬಹುದು

ಪಿಕ್‌ನಿಕ್ ಹೋಗಬಹುದು

ಮರದ ನೆರಳಿನಲ್ಲಿ ಕುಳಿತು ಫ್ಯಾಮಿಲಿ ಜೊತೆ, ಸ್ನೇಹಿತರ ಜೊತೆ ಪಿಕ್‌ನಿಕ್ ಮಾಡಬೇಕೆನ್ನುವ ಪ್ಲ್ಯಾನ್ ಏನಾದರೂ ಇದ್ದರೆ ಕಂಡಲಾಕೋಯಾ ಪಾರ್ಕ್‌ ನಿಮಗೆ ಸೂಕ್ತವಾದ ತಾಣವಾಗಿದೆ. ಇಲ್ಲಿ ಪಿಕ್‌ನಿಕ್‌ಗಾಗಿಯೇ ವಿಶೇಷ ಸ್ಥಳಗಳಿವೆ. ಅಷ್ಟೇ ಅಲ್ಲದೆ ಶಾಲೆಯ ಮಕ್ಕಳಿಗಾಗಿ 2 ಮಾಡಲ್ ಕ್ಲಾಸ್‌ ರೂಂನ್ನೂ ನಿರ್ಮಿಸಲಾಗಿದೆ.

ಪಾರ್ಕ್‌ನ ವಿಶೇಷತೆ ಏನು ?

ಪಾರ್ಕ್‌ನ ವಿಶೇಷತೆ ಏನು ?

PC: thelangana tourism

ಈ ಪಾರ್ಕ್‌ನಲ್ಲಿ ಎರಡು ಫೋಟೋ ಪಾಯಿಂಟ್‌ಗಳಿವೆ. ಒಂದು ಸಣ್ಣ ಕೆರೆಯಿದೆ. ಅದರಲ್ಲಿ ಬಟರ್‌ಫ್ಲೈ ಗಾರ್ಡನ್ ಮಾಡಲಾಗಿದೆ. ಯೋಗ ಮಾಡುವವರಿಗೆ ಶೆಡ್‌ನ ವ್ಯವಸ್ಥೆ ಕೂಡಾ ಇದೆ. ಟ್ರೀ ಹೌಸ್, ಹರ್ಬಲ್ ಗಾರ್ಡನ್, ಓಪನ್ ಏರ್‌ ಜಿಮ್, ಮಕ್ಕಳ ಆಟಕ್ಕಾಗಿ ಪ್ಲೇ ಏರಿಯಾ ಹಾಗೂ ವಾಚ್ ಟವರ್ ಕೂಡಾ ನಿರ್ಮಿಸಲಾಗಿದೆ.

ಎಂಟ್ರಿ ಶುಲ್ಕ ಎಷ್ಟು?

ಎಂಟ್ರಿ ಶುಲ್ಕ ಎಷ್ಟು?

PC: Mohammed Azharuddin Azzu

11 ಗಂಟೆಯಿಂದ ಸಂಜೆ 6ಗಂಟೆ
ಶುಲ್ಕ ವಯಸ್ಕರಿಗೆ 15 ರೂ. ಮಕ್ಕಳಿಗೆ 10 ರೂ.
ವಾಕಿಂಗ್ ಸಮಯ ಬೆಳಗ್ಗೆ 5.30 ರಿಂದ ಬೆಳಗ್ಗೆ 9 ಗಂಟೆ
ವಾಕಿಂಗ್ ಪಾಸ್ ತಿಂಗಳಿಗೆ100 ರೂ.
ಆರು ತಿಂಗಳಿಗೆ 400 ರೂ.
1 ವರ್ಷಕ್ಕೆ 800 ರೂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X