• Follow NativePlanet
Share
» »ಇವು ಬೆಂಗಳೂರಿನ ಸಮೀಪದಲ್ಲಿರುವ ಬಡವರ ಊಟಿ...!

ಇವು ಬೆಂಗಳೂರಿನ ಸಮೀಪದಲ್ಲಿರುವ ಬಡವರ ಊಟಿ...!

Posted By:

ಊಟಿ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ ಎತ್ತರದಲ್ಲಿದೆ. ಊಟಿಯ ಸೌಂದರ್ಯಕ್ಕೆ ಯಾರೇ ಆಗಲಿ ಬೆರಗಾಗಲೇಬೇಕು. 12 ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳನ್ನು ಕೂಡ ಕಾಣಬಹುದು. ಊಟಿ ಎಂದರೆ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯ, ಹಿತಕರವಾದ ವಾತಾವರಣ ಹಾಗು ಕಂಗೊಳಿಸುವ ನಯನಮನೊಹರವಾದ ದೃಶ್ಯಾವಳಿಗಳಿಂದ ಭೂಲೋಕದ ಸ್ವರ್ಗದಂತೆಯೇ ಕಾಣುವಂತಹ ಅದ್ಭುತ ಗಿರಿಧಾಮವಾಗಿದೆ.

ಬೆಂಗಳೂರಿನಿಂದ 220 ಕಿ.ಮೀ ಗಳಷ್ಟು ದೂರದಲ್ಲಿದೆ. ವಾರಾಂತ್ಯದ ರಜೆಗಳಲ್ಲಿ ಸುಲಲಿತವಾಗಿ ಈ ಗಿರಿಧಾಮಕ್ಕೆ ಭೇಟಿ ನೀಡಿ ಬರಬಹುದು. ಬೆಂಗಳೂರಿನ ಸಮೀಪದಲ್ಲಿರುವ ಊಟಿಯಂತಹ ಸುಂದರವಾದ ತಾಣವಿದೆ. ಅದನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.

1.ಸೆರ್ವರಾಯ

1.ಸೆರ್ವರಾಯ

PC:vinod velayudhan

ಯೇರ್ಕಾಡ್ ಗಿರಿಧಾಮದಲ್ಲಿ ಕಂಡುಬರುವ ಅತಿ ಎತ್ತರದ ಸ್ಥಳದಲ್ಲಿ ಒಂದು ದೇವಾಲಯವಿದೆ. ಅದನ್ನು ಸೆರ್ವರಾಯನ ದೇವಾಲಯ ಎಂದು ಕೂಡ ಕರೆಯುತ್ತಾರೆ. ಸೆರ್ವರಾಯ ಸ್ಥಳೀಯವಾಗಿ ಆರಾಧಿಸಲ್ಪಡುವ ಪ್ರಮುಖ ದೈವವಾಗಿದೆ. ಯೇರಿ ಹಾಗು ಕಾಡು ಎಂಬ ಎರಡು ಪದಗಳು ಸಂಯೋಜನೆಗೊಂಡು ಈ ಗಿರಿಧಾಮಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ. ಅಂದರೆ ಮುಖ್ಯವಾಗಿ ತಿಳಿದಿರಬೇಕಾದ ವಿಷಯವೆಂದರೆ ಈ ಪ್ರದೇಶವು ವಿಶಾಲವಾದ ಕೆರೆ ಹಾಗು ಸುತ್ತಲೂ ಅತಿ ದಟ್ಟವಾದ ಕಾಡಿನಿಂದ ಆವರಿಸಿದೆ. ಈ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಂದಲೆ "ದಕ್ಷಿಣದ ರತ್ನ" ಅಂದರೆ "ಜೆವೆಲ್ ಆಫ್ ಸೌತ್" ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

2.ದಟ್ಟವಾದ ಹಸಿರಿನ ರಾಶಿ

2.ದಟ್ಟವಾದ ಹಸಿರಿನ ರಾಶಿ

PC:Thangaraj Kumaravel

ಈ ಗಿರಿಧಾಮವು ಅತಿ ಸುಂದರವಾದ ಮನಸ್ಸಿಗೆ ಮುದ ನೀಡುವ ಆಕರ್ಷಕ ಗಿಡಮರಗಳಿಂದ ಕೂಡಿರುವ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ವೈವಿಧ್ಯಮಯವಾದ ಸಸ್ಯಗಳು ಹಾಗು ಬಣ್ಣ-ಬಣ್ಣದ ಹೂವುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ರಿಸಾರ್ಟ್ ಹಾಗು ಹೋಟೆಲ್‍ಗಳು ವ್ಯವಸ್ಥೆ ಕೂಡ ಇಲ್ಲಿದೆ. ಯೇರ್ಕಾಡ್ ಕೆರೆ, ಭವ್ಯ ಹಾಗು ಮನಮೋಹಕ ಕೆರೆಯಾಗಿದ್ದು, ಇದರಲ್ಲಿ ದೋಣಿ ವಿಹಾರ ಸೌಲಭ್ಯವು ಸಹ ದೊರೆಯುತ್ತದೆ.

3.ದೇವಾಲಯಗಳು

3.ದೇವಾಲಯಗಳು

PC;Aruna

ಇಲ್ಲಿ ಹಿಂದೂ ದೇವಾಲಯಗಳು ಹಾಗು ಕೆಲವು ಸುಂದರವಾದ ವಾಸ್ತುಶೈಲಿಯ ಚರ್ಚುಗಳನ್ನು ಸಹ ಇಲ್ಲಿ ಕಾಣಬಹುದು. ದೇವಾಲಯದ ಅವರಣದಲ್ಲಿ ಕಾವೇರಿ ದೇವಿಯ ದೇವಾಲಯ, ರಾಜರಾಜೇಶ್ವರಿ ದೇವಿ ದೇವಾಲಯ ಮತ್ತು ಮುರುಗನ್ ಸ್ವಾಮಿಯ ದೇವಾಲಯಗಳಿವೆ. ಯೇಕಾರ್ಡ್ ಕೆರೆಯ ಪಕ್ಕದಲ್ಲಿಯೇ ಉದ್ಯಾನವಿದ್ದು, ಪ್ರವಾಸಿಗರಿಗೆ ಹೆಚ್ಚಿನ ಆನಂದವನ್ನು ಕರುಣಿಸುತ್ತದೆ. ಇದನ್ನು "ಯೇರ್ಕಾಡ್ ಲೇಕ್ ಪಾರ್ಕ್" ಎಂದೇ ಕರೆಯುತ್ತಾರೆ. ಈ ಉದ್ಯಾನವನದಲ್ಲಿ ಕಳೆಯುವ ಕ್ಷಣವು ಆನಂದಮಯವಾಗಿರುವುದರಲ್ಲಿ ಸಂಶಯವೆ ಇಲ್ಲ.

4.ಪಾರ್ಕ್

4.ಪಾರ್ಕ್

PC:Yercaud-elango

ಇಲ್ಲಿ ಮುಖ್ಯವಾಗಿ ಅಣ್ಣಾ ಪಾರ್ಕ್ ಅಥವಾ ಉದ್ಯಾನವನ ಯೇರ್ಕಾಡ್‍ನಲ್ಲಿ ನೋಡಬಹುದಾದ ಇನ್ನೊಂದು ಸುಂದರವಾದ ಸ್ಥಳಗಳು. ವಿಶಾಲವಾದ ಗಿಡ-ಮರಗಳನ್ನು ಹೊಂದಿದ್ದು, ಕುಟುಂಬದವರೊಂದಿಗೆ ವಿಹರಿಸಲು ಹಾಗು ವಿಶ್ರಾಂತಿ ಪಡೆಯಲು ಅದ್ಭುತವಾದ ಸ್ಥಳ ಇದಾಗಿದೆ. ಇಲ್ಲಿ ಬಟಾನಿಕಲ್ ಉದ್ಯಾನ ಹಾಗು ಗುಲಾಬಿ ತೋಟ ಇಲ್ಲಿ ಅಸ್ವಾಧಿಸಬಹುದು. ಇನ್ನೂ ಗುಲಾಬಿ ತೋಟವು ಕೂಡ ಸಾಕಷ್ಟು ಸುಂದರವಾದ ಅನುಭವವನ್ನು ನೀಡುತ್ತದೆ. ವಿವಿಧ ತಳಿಗಳ ಹಾಗು ಬಣ್ಣ-ಬಣ್ಣದ ಹೂವುಗಳನ್ನು ಇಲ್ಲಿ ಕಾಣಬಹುದು.

5.ಜಲಪಾತ

5.ಜಲಪಾತ

PC:Antkriz

ಯೇರ್ಕಾಡ್ ಕೇವಲ ಕುಟುಂಬದವರೊಂದಿಗೆ ಭೇಟಿ ನೀಡಬಹುದಾದ ಸುಂದರ ಗಿರಿಧಾಮವಲ್ಲದೇ ಯುವಕರ ನೆಚ್ಚಿನ ಚಾರಣ ತಾಣವಾಗಿಯೂ ಕೂಡ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಅದ್ಭುತವಾದ ಒಂದು ಜಲಪಾತವಿದೆ. ಅದನ್ನು ಕಿಳಿಯೂರು ಜಲಪಾತ ಎಂದು ಕರೆಯುತ್ತಾರೆ. ಇದು ಸುಮಾರು 90 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಸುಂದರವಾದ ಜಲಪಾತವು ನೋಡಲು ನಯನ ಮನೋಹರವಾಗಿರುತ್ತದೆ.

6.ಬೆಂಗಳೂರಿನ ಸಮೀಪದ ಗಿರಿಧಾಮ

6.ಬೆಂಗಳೂರಿನ ಸಮೀಪದ ಗಿರಿಧಾಮ

PC:Mithun Kundu

ಹೀಗೆ ಅದ್ಭುತವಾದ ಪ್ರವಾಸವನ್ನು ನೀಡುವ ಈ ಗಿರಿಧಾಮವು ನಿಜಕ್ಕೂ ಸಂತಸ ಕರುಣಿಸುವ ಹಾಗು ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವೇ ಇಲ್ಲ. ಬೆಂಗಳೂರಿಗೆ ತುಸು ಹತ್ತಿರದಲ್ಲಿಯೇ ಇರುವ ಈ ಸುಂದರವಾದ ಗಿರಿಧಾಮವು ಪ್ರವಾಸಿಗರನ್ನು ಸದಾ ಸ್ವಾಗತಿಸುತ್ತಿರುತ್ತದೆ. ಒಮ್ಮೆ ಈ ಸುಂದರವಾದ ಗಿರಿಧಾಮಕ್ಕೂ ಕೂಡ ಭೇಟಿ ನೀಡಿ ಬನ್ನಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ