Search
  • Follow NativePlanet
Share
» »ಶನಿಕಾಟದಿಂದ ವಿಮುಕ್ತಿ ಹೊಂದಬೇಕೆ ಹಾಗಾದರೆ ಭೇಟಿ ನೀಡಿ....

ಶನಿಕಾಟದಿಂದ ವಿಮುಕ್ತಿ ಹೊಂದಬೇಕೆ ಹಾಗಾದರೆ ಭೇಟಿ ನೀಡಿ....

By Sowmyabhai

ನವಗ್ರಹಗಳಲ್ಲಿ ಒಂದಾದ ಶನಿ ದೇವನು ಅತ್ಯಂತ ಪ್ರಭಾವಿ ದೇವತಾ ಮೂರ್ತಿ ಎಂದು ಭಕ್ತರು ಆರಾಧಿಸುತ್ತಾರೆ. ಆತನ ದೃಷ್ಟಿ ಒಳ್ಳೆಯದ್ದಿದ್ದರೆ ಒಳ್ಳೆಯದಾಗುತ್ತದೆ, ಕೆಟ್ಟ ದೃಷ್ಟಿ ಇದ್ದರೆ ಕೆಟ್ಟದಾಗುವುದಂತು ಖಚಿತ. ಆತನ ಕೃಪಾ ಕಟಾಕ್ಷವನ್ನು ಪಡೆಯಲು ನೂರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಶನಿ ದೇವರಿಗೆ ಎಳ್ಳು ಎಣ್ಣೆಯಿಂದ ಆರಾಧನೆ ಮಾಡಿದರೆ ಶಾಂತನಾಗುತ್ತಾನೆ ಎಂಬ ನಂಬಿಕೆ ಇದೆ.

ತಮ್ಮ ಅನೇಕ ಪಾಪ ಕಾರ್ಯಗಳ ಪ್ರಕಾರ ಶನಿಯು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಷ್ಟಗಳನ್ನು ನೀಡುತ್ತಾನೆ. ಸಾಡೆ ಸಾತಿ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬರುತ್ತದೆ. ಹಾಗಾಗಿ ಆತನನ್ನು ನಿಷ್ಠೆ, ಭಕ್ತಿಯಿಂದ ಆರಾಧಿಸಿದರೆ ಜೀವನದಲ್ಲಿ ಒದಗಬಹುದಾದ ಕಷ್ಟಗಳೆಲ್ಲಾ ದೂರ ಮಾಡುತ್ತಾನೆ.

ಹಾಗಾದರೆ ಆತನನ್ನು ಪೂಜಿಸಲು ಯಾವ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಒಳ್ಳೆಯದು ಎಂದು ಅಲೋಚಿಸುತ್ತಿದ್ದೀರಾ? ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

1.ಶನಿಧಾಮ ದೇವಾಲಯ

1.ಶನಿಧಾಮ ದೇವಾಲಯ

PC:rajkumar1220

ದೇಹಲಿಯ ದಕ್ಷಿಣ ಭಾಗದಲ್ಲಿರುವ ಛತರಪುರ ದೇವಾಲಯ ಸಂಕೀರ್ಣದಿಂದ ಕೇವಲ 6 ಕಿ.ಮೀ ಗಳಷ್ಟು ದೂರದಲ್ಲಿದೆ. ಶನಿ ಧಾಮ ದೇವಾಲಯವು ಶನಿ ದೇವರ ಭಕ್ತರ ನೆಚ್ಚಿನ ದೇವಾಲಯವಾಗಿದೆ. ನಿಮಗೆ ಗೊತ್ತ ಈ ದೇವಾಲಯದಲ್ಲಿ ಶನಿ ದೇವರ ಮೂರ್ತಿಯು ಜಗತ್ತಿನಲ್ಲಿ 2 ನೇ ಎತ್ತರದ ಮೂರ್ತಿಯಾಗಿದೆ.

2.ಉಡುಪಿಯ ಬನ್ನಂಜೆಯ ಶನಿ ದೇವ ದೇವಾಲಯ

2.ಉಡುಪಿಯ ಬನ್ನಂಜೆಯ ಶನಿ ದೇವ ದೇವಾಲಯ

PC:Vaikoovery

ಉಡುಪಿಯ ಬನ್ನಂಜೆಯದಲ್ಲಿರುವ ಶನಿ ಮಹಾತ್ಮನು ಸಹ ಅಪಾರವಾದ ಭಕ್ತರು ಹೊಂದಿದ್ದಾನೆ. ಇಲ್ಲಿ ಪ್ರತಿಷ್ಟಾಪಿಸಲಾಗಿರುವ ಶನಿ ದೇವರ ಮೂರ್ತಿಯು ಸುಮಾರು 23 ಅಡಿಗಳಷ್ಟು ಎತ್ತರದಲ್ಲಿದೆ. ಅತ್ಯಂತ ಆಕರ್ಷಕವಾದ ಈ ಮೂರ್ತಿಯನ್ನು ಕಂಡಾಗ ಆ ಶನಿ ದೇವನ ಮೇಲೆ ಅತ್ಯಂತ ಭಕ್ತಿ ತುಂಬಿ ತುಳುಕುತ್ತದೆ. ಶನಿವಾರದಂದು ಅನೇಕ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

3.ತಿರುನಲ್ಲಾರ್ ಶನೀಶ್ವರರ್ ದೇವಾಲಯ

3.ತಿರುನಲ್ಲಾರ್ ಶನೀಶ್ವರರ್ ದೇವಾಲಯ

PC:Rsmn

ದಕ್ಷಿಣ ಭಾರತದಲ್ಲಿನ ಪ್ರಸಿದ್ಧವಾದ ಶನಿ ಮಹಾತ್ಮನ ದೇವಾಲಯಗಳಲ್ಲಿ ತಿರುನಲ್ಲಾರ್ ಶನೀಶ್ವರ ದೇವಾಲಯವು ಒಂದು. ಈ ಮಹಿಮಾನ್ವಿತವಾದ ದೇವಾಲಯವು ತಮಿಳುನಾಡಿನ ಪುದುಚೆರಿಯ ಕಾರೈಕಾಲ್ ಜಿಲ್ಲೆಯಲ್ಲಿದೆ. ಈ ದೇವಾಲಯವು ವಿಜ್ಞಾನಕ್ಕೆ ಅರ್ಥವಾಗದ ಅದೆಷ್ಟು ಸಂಘಟನೆಗಳು ನಡೆದಿವೆ. ಇಲ್ಲಿನ ಶನಿ ದೇವರ ಮೂಲ ವಿಗ್ರಹವು ದ್ವಾರಪಾಲನಂತೆ ಪ್ರತಿನಿಧಿಸಲಾಗಿದೆ.

4.ಶನಿ ದೇವ ಧಾಮ, ಉತ್ತರ ಪ್ರದೇಶ

4.ಶನಿ ದೇವ ಧಾಮ, ಉತ್ತರ ಪ್ರದೇಶ

PC:Jeeteshroxx

ಶನಿ ದೇವ ಧಾಮ ಉತ್ತರ ಪ್ರದೇಶ ರಾಜ್ಯದ ಪ್ರತಾಪಗಡ್ ಜಿಲ್ಲೆಯಲ್ಲಿರುವ ವಿಶ್ವನಾಥಗಂಜ್ ಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಇಲ್ಲಿನ ಶನಿ ದೇವನು ಕಲ್ಲಿನ ವಿಗ್ರಹವಾಗಿದ್ದು, ಪ್ರತಿ ಶನಿವಾರದಂದು ಹಾಗು ನವರಾತ್ರಿಗಳ ಸಂದರ್ಭದಲ್ಲಿ ವಿಜೃಂಬಣೆಯಿಂದ ಆರಾಧಿಸಲಾಗುತ್ತದೆ.

5.ಲೋಕ ನಾಯಕ ಶನೇಶ್ವರ ದೇವಾಲಯ

5.ಲೋಕ ನಾಯಕ ಶನೇಶ್ವರ ದೇವಾಲಯ

PC:ThangamuthuRaja

ಕೊಯಮತ್ತೂರಿನಲ್ಲಿರುವ ಈ ಲೋಕ ನಾಯಕ ಶನೇಶ್ವರ ದೇವಾಲಯವು ಶನಿ ದೇವರಿಗೆ ಮುಡಿಪಾದ ದೇವಾಲಯಗಳಲ್ಲಿ ಒಂದಾಗಿದೆ. ಕೊಯಮತ್ತೂರಿನ ನಗರದಲ್ಲಿರುವ ಪುಲಿಯಾಕುಲಂ ಎಂಬ ಪ್ರದೇಶದಲ್ಲಿರುವ ಈ ದೇವಾಲಯವು 7 ಅಡಿಗಳಷ್ಟು ಎತ್ತರದ ಶನಿ ದೇವನನ್ನು ಪ್ರತಿಷ್ಟಾಪಿಸಿದ್ದಾನೆ.

6.ಶನಿ ಸಿಂಗ್ನಾಪುರ

6.ಶನಿ ಸಿಂಗ್ನಾಪುರ

PC: Singhmanroop

ಮಹಾರಾಷ್ಟ್ರದಲ್ಲಿರುವ ಶನಿ ಸಿಂಗ್ನಾಪುರವು ಶನಿ ದೇವರಿಗೆ ಮುಡಿಪಾದ ಗ್ರಾಮವಾಗಿದೆ. ಈ ಗ್ರಾಮವು ಶನಿ ದೇವನನ್ನು ಪ್ರತಿನಿಧಿಸುವ ಕಪ್ಪು ಶಿಲೆಯ ವಿಶಿಷ್ಟವಾದ ಮೂರ್ತಿಯಾಗಿ ಹೆಸರುವಾಸಿಯಾಗಿದೆ. ಇದು ದೇಶದಲ್ಲಿಯೇ ಅತ್ಯಂತ ಪ್ರಸಿದ್ಧವಾದ ಶನಿ ದೇವರ ದೇವಾಲಯ. ಇಲ್ಲಿನ ಮತ್ತೊಂದು ಆಶ್ಚರ್ಯಕರವಾದ ವಿಷಯವೆನೆಂದರೆ ಇಲ್ಲಿ ಯಾವುದೇ ಮನೆಗಳಿಗೆ ಬಾಗಿಲುಗಳೇ ಇಲ್ಲ. ಯಾವುದೇ ರೀತಿಯಲ್ಲಿಯೂ ಕಳ್ಳತನ ಕೂಡ ನಡೆಯುವುದಿಲ್ಲ. ಇದೆಲ್ಲಾ ಶನಿ ದೇವರ ಲೀಲೆ ಎಂದೇ ನಂಬಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X