• Follow NativePlanet
Share
Menu
» »ಭೂತ ಪ್ರೇತಾತ್ಮವನ್ನು ಒದ್ದು ಓಡಿಸುವ ಈ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಭೂತ ಪ್ರೇತಾತ್ಮವನ್ನು ಒದ್ದು ಓಡಿಸುವ ಈ ದೇವಾಲಯದ ಬಗ್ಗೆ ನಿಮಗೆ ಗೊತ್ತ?

Written By:

ಭಯಪಡುವ ಸಿನಿಮಾಗಳನ್ನು ನೋಡಿದಾಗ ನಮ್ಮಲ್ಲಿ ಕೆಲವರಿಗೆ ಭಯ ಅವರಿಸುವುದು ಸಹಜವಾದುದೇ. ಭಯಗೊಳಿಸುವ ಸಿನಿಮಾಗಳು ಸಾಮಾನ್ಯವಾಗಿ ವಿಪರೀತವಾದ ಉದ್ರೇಕವನ್ನು ಉಂಟು ಮಾಡುತ್ತದೆ. ಆದರೆ ಅವುಗಳನ್ನು ನೀವು ವಾಸ್ತವವಾಗಿ ನೋಡಿದಾಗ ನೀವು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸ್ಥಿತಿಗೆ ತಲುಪುತ್ತಾರೆ. ರೋಮನ್, ಕ್ಯಾಥೋಲಿಕ್ ಮತಾಧಿಕಾರಿಗಳು ಭೂತ ವೈದ್ಯ ಮಾಡುವುದರಲ್ಲಿ ವಿಪರೀತವಾದ ಹೆಸರನ್ನು ಸಂಪಾದಿಸಿದ್ದಾರೆ ಎಂಬ ವಿಷಯ ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ.

ನಮ್ಮ ಭಾರತ ದೇಶದಲ್ಲಿನ ಪ್ರಮುಖವಾದ ದೇವಾಲಯಗಳು ಮತ್ತು ಪುಣ್ಯಕ್ಷೇತ್ರಗಲ್ಲಿ ಭೂತವೈದ್ಯವನ್ನು ನಿರ್ವಹಿಸುತ್ತಾರೆ. ಅಂತಹ ಪ್ರದೇಶದ ಬಗ್ಗೆ ಈ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿದುಕೊಳ್ಳೋಣ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಹಲವಾರು ಮಂದಿಗೆ ತಾವು ಯಾರದೋ ಸ್ವಾಧೀನದಲ್ಲಿ ಇದ್ದೇವೆ ಎಂದು ಭಾವಿಸಿ, ಅಂಥವರ ಸೆರೆಯಿಂದ ಹೊರಗೆ ಬರಲು ಕೆಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇಂಥಹ ಪ್ರಜೆಗಳು ಅನುಭವಿಸುತ್ತಿರುವ ಭಾದೆಗಳು ನಾವು ಕಣ್ಣಾರೆ ಕಂಡರೆ ಕಣ್ಣಿನಲ್ಲಿ ನೀರು ಸುರಿಯುತ್ತದೆ. ಕೆಲವರು ಭೂತ ಸಮಸ್ಯೆಯಿಂದ ಬಳಲುತ್ತಿರುವವರನ್ನು ಎಂದರೆ ಮತ್ತೆ ಕೆಲವರು ಮಾನಸಿಕ ಬಾಧೆಯಿಂದ ಬಳಲುತ್ತಿರುವವರು ಎಂದು ಹೇಳಲಾಗುತ್ತದೆ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಭಾರತ ದೇಶದಲ್ಲಿ ಯಾವ ಪುಣ್ಯಕ್ಷೇತ್ರದಲ್ಲಿ ಭೂತವೈದ್ಯವನ್ನು ವಿಪರೀತವಾಗಿ ಹೆಸರುವಾಸಿಯಾಗಿದೆ ಎಂಬ ವಿಷಯವನ್ನು ಇನ್ನು ಸ್ವಲ್ಪ ಆಳವಾಗಿ ತಿಳಿಯುವ ಮುಂದೆ ಆ ಭೂತ ಉಚ್ಛಾಟನೆ ಪ್ರಕ್ರಿಯೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆಯೋಣ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಅಸಲು ಭೂತವೈದ್ಯ ಎಂದರೆ ಏನು? ಕ್ಯಾಥೋಲಿಕ್ ಎನ್ನೈಕ್ಲೊಪಿಡಿಯಾ ಪ್ರಕಾರ ಭೂತವೈದ್ಯ ಎಂದರೆ ವ್ಯಕ್ತಿಗಳು, ಪ್ರದೇಶಗಳು ಅಥವಾ ವಸ್ತುಗಳು ಹೀಗೆ ಇವುಗಳಲ್ಲಿಯೂ ಕೂಡ ದೆವ್ವಗಳು ಹಿಡಿಯುತ್ತವೆ ಅಥವಾ ದುಷ್ಟ ಶಕ್ತಿಗಳಿಂದ ತುಂಬಿರುತ್ತದೆ ಎಂದು ಭಾವಿಸುತ್ತಾರೆ. ಆ ದುಷ್ಟ ಶಕ್ತಿಗಳಿಂದ ಹೊರಬರುವಂತೆ ಮಾಡಿ ಅಂಥವರನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾರ್ಪಾಟು ಮಾಡಿ ಕಳುಹಿಸುತ್ತೇವೆ ಎಂದು ಹೇಳುತ್ತಾರೆ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಈ ಭೂತ ವೈದ್ಯದಲ್ಲಿ ಚಿಕ್ಕ ಮಕ್ಕಳು ತಮ್ಮ ಗತಜನ್ಮದಲ್ಲಿ ಮಾಡಿರುವ ಕೆಲವು ಪಾಪಗಳ ಫಲಿತದಿಂದ ವಿಮುಕ್ತಿಯನ್ನು ಪಡೆಯಲು ಬಾಪಿಟೈಜಿಂಗ್ ಎಂಬ ಪ್ರಕ್ರಿಯೆಯ ಮುಖಾಂತರ ಈ ಭೂತವೈದ್ಯವನ್ನು ಮಾಡುತ್ತಾರೆ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಯಾವುದಾದರೂ ಪರಿಸರದಲ್ಲಿ ಅಥವಾ ವಸ್ತುಗಳನ್ನು ದೆವ್ವಗಳ ಒಂದು ಪ್ರಭಾವದಿಂದ ಹೊರಬರಲು ಕೆಲವು ಭೂತ ಉಚ್ಛಾಟನೆ ಮಾಡುತ್ತಾರೆ. ನಮ್ಮ ದೇಶದಲ್ಲಿ ಹಲವಾರು ಭೂತವನ್ನು ಉಚ್ಛಾಟಿಸಲು ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲಿ ರಾಜಸ್ಥಾನದಲ್ಲಿನ ಮೆಹೆಂದಿಪುರ್ ಬಾಲಾಜಿಯು ಕೂಡ ಒಂದು.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಈ ಭೂತ ವೈದ್ಯದ ಮೂಖಾಂತರ ಯಾವುದಾದರೂ ವ್ಯಕ್ತಿಯ ಶರೀರದಲ್ಲಿರುವ ಭೂತವನ್ನು ಹೊರಗೆ ಕಳುಹಿಸಿ ಆಯಾ ವ್ಯಕ್ತಿಗಳನ್ನು ಶುದ್ಧಿ ಮಾಡುವುದಕ್ಕೆ ಉಪಯೋಗಿಸುತ್ತಾರೆ. ಯಾರು ದೆವ್ವಗಳ ಅಧೀನದಲ್ಲಿ ಇರುತ್ತಾರೆಯೋ ಅವರು ಈ ಉಚ್ಛಾಟನೆ ಮಾಡಿದಾಗ ಅವರ ಶರೀರದ ಮೇಲೆ ಕೆಲವು ದೈಹಿಕವಾಗಿ ಪರಿಣಾಮ ಉಂಟಾಗುವುದು ಸಾಮಾನ್ಯ. ಹಾಗೆಯೇ ಕೆಲವು ಸಂದರ್ಭಗಳಲ್ಲಿ ಮರಣ ಹೊಂದುವ ಅವಕಾಶವೂ ಕೂಡ ಇರುತ್ತದೆ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಯಾವಾಗ ದೆವ್ವ ಒಬ್ಬ ವ್ಯಕ್ತಿಯ ಮೇಲೆ ಭಾದೆಯನ್ನು ನೀಡುತ್ತಿರುತ್ತದೆಯೋ ಆ ಸಮಯದಲ್ಲಿ ಅವರೇ ಅವುಗಳಿಗೆ ಆಹಾರ ತೆಗೆದುಕೊಳ್ಳಬಹುದು. ಅಂಥಹ ವಿಭಿನ್ನವಾದ ಬಾಧೆಗಳಿಂದ ಭೂತವೈದ್ಯವನ್ನು ಮಾಡಿ ಉಚ್ಛಾಟನೆ ಮಾಡುತ್ತಾರೆ. ಆ ಸಂದರ್ಭಗಳಲ್ಲಿ ಪುಜಾರಿಯು ದೆವ್ವಗಳ ಜೊತೆಗೆ ನೇರವಾಗಿ ಮಾತನಾಡಿ ಪರಿಹಾರ ಮಾಡುತ್ತಾರೆ.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಈ ಪುಣ್ಯಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದ ನಂತರ ಅಲ್ಲಿನ ಜ್ಞಾನಪಕಗಳು ನಿಮ್ಮನ್ನು ಹಾಗೆಯೇ ಕಾಡುತ್ತಾ ಇರುತ್ತದೆ. ಈ ದೇವಾಲಯವು ಭೂತವೈದ್ಯಕ್ಕೆ ಅತ್ಯಂತ ಪ್ರಸಿದ್ಧಿ ಹೊಂದಿದೆ. ನೀವು ಯಾವಾಗ ಈ ದೇವಾಲಯಕ್ಕೆ ತೆರಳುತ್ತಾರೆಯೋ ಆಗ ಅಲ್ಲಿ ಭೂತಚ್ಛಾಟನೆ ಮಾಡುವುದು ಕಣ್ಣಾರೆ ಕಂಡು ಆನಂದಿಸಬಹುದು.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಇಲ್ಲಿ ಮಂಗಳವಾರದಂದು ಹಲವಾರು ಜನರು ಈ ದೇವಾಲಯಕ್ಕೆ ದೆವ್ವಗಳಿಂದ ತೊಂದರೆ ಅನುಭವಿಸಿದವರು ಭೇಟಿ ನೀಡುತ್ತಾರೆ. ಇಲ್ಲಿ ಮುಖ್ಯವಾಗಿ ಆ ಆಂಜನೇಯ ಸ್ವಾಮಿಯೇ ಭೂತಉಚ್ಛಾಟನೆ ಮಾಡುವ ಸನ್ನಿವೇಶವನ್ನು ಕಾಣಬಹುದು.

ಭೂತ ವೈದ್ಯ ಮಾಡುವ ಸ್ಥಳ

ಭೂತ ವೈದ್ಯ ಮಾಡುವ ಸ್ಥಳ

ಈ ಒಂದು ಪುಣ್ಯಕ್ಷೇತ್ರಕ್ಕೆ ಯಾವ ಕುಲದವರಾದರೂ ತೆರಳಬಹುದು. ಆ ಪುಣ್ಯಕ್ಷೇತ್ರದ ಒಳಗೆ ಯಾವಾಗ ನೀವು ಕಾಲು ಇಡುತ್ತೀರೋ ಆ ಸಮಯದಲ್ಲಿ ದೆವ್ವಗಳಿಂದ ಬಾಧೆಯನ್ನು ಅನುಭವಿಸುತ್ತಿರುವವರನ್ನು ಕಾಣಬಹುದು. ಭೂತದಿಂದ ಬಳಲುತ್ತಿರುವವರು ಅಳುವುದು, ಕಿರುಚಾಡುವುದು ಹೀಗೆ ವಿಪರೀತವಾದ ಭೂತದ ಚಟುವಟಿಕೆಗಳನ್ನು ಕಾಣಬಹುದು. ಒಮ್ಮೆ ರಾಜಸ್ಥಾನದಲ್ಲಿನ ಮೆಹೆಂದಿ ಪುರ್ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ