Search
  • Follow NativePlanet
Share
» »ಸೃಷ್ಟಿ ನಾಶವನ್ನು ಮುಂದೆಯೇ ತಿಳಿಸುವ ಪ್ರದೇಶ....

ಸೃಷ್ಟಿ ನಾಶವನ್ನು ಮುಂದೆಯೇ ತಿಳಿಸುವ ಪ್ರದೇಶ....

ಕೇದಾರನಾಥೇಶ್ವರ ಗುಹಾಲಯ. ಈ ಗುಹಾಲಯದಲ್ಲಿ ಯುಗಾಂತ್ಯಕ್ಕೆ ಮುಂದೆಯೇ ಮುನ್ಸೂಚನೆನೀಡುತ್ತದೆ ಎಂದು ಅಲ್ಲಿನ ಸ್ಥಳೀಯರ ಕಥನವಾಗಿದೆ. ಅಷ್ಟೇ ಅಲ್ಲ ಆ ಗುಹೆಯಲ್ಲಿನ ಪ್ರತಿವಿಷಯವು ಇಂದಿಗೂ ನಿಗೂಢ ರಹಸ್ಯವಾಗಿಯೇ ಉಳಿದಿರುವುದನ್ನು ಕಾಣಬಹುದು.

By Sowmyabhai

ಯುಗಾಂತ್ಯ...ಈ ವಿಷಯದ ಕುರಿತು ವಿಶ್ವ ವ್ಯಾಪಕವಾಗಿ ಅನಾದಿ ಕಾಲದಿಂದಲೂ ಎಷ್ಟೋ ಪರಿಶೋಧನೆಗಳು ನಡೆದಿವೆ. ಇಂದಿಗೂ ನಡೆಯುತ್ತಲೇ ಇವೆ. ಆದರೆ ಅದಕ್ಕೆ ಉತ್ತರ ಮಾತ್ರ ಇಂದಿಗೂ ದೊರೆತ್ತಿಲ್ಲ. ಭಾರತ ದೇಶದಲ್ಲಿಯೂ ಕೂಡ ಯುಗಾಂತ್ಯಕ್ಕೆ ಸಂಬಂಧಿಸಿದ ವಿಷಯಗಳು ದೇವಾಲಯದ ಗೋಡೆಗಳ ಮೇಲೆ, ಪ್ರಾಚೀನ ತಾಳಪತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ದೇವಾಲಯಕ್ಕೆ ಸಂಬಂಧಿಸಿದ್ದೇ ಕೇದಾರನಾಥೇಶ್ವರ ಗುಹಾಲಯ. ಈ ಗುಹಾಲಯದಲ್ಲಿಇ ಯುಗಾಂತ್ಯಕ್ಕೆ ಮುಂದೆಯೇ ಮುನ್ಸೂಚನೆ ನೀಡುತ್ತದೆ ಎಂದು ಅಲ್ಲಿನ ಸ್ಥಳೀಯರ ಕಥನವಾಗಿದೆ. ಅಷ್ಟೇ ಅಲ್ಲ ಆ ಗುಹೆಯಲ್ಲಿನ ಪ್ರತಿ ವಿಷಯವು ಇಂದಿಗೂ ನಿಗೂಢ ರಹಸ್ಯವಾಗಿಯೇ ಉಳಿದಿರುವುದನ್ನು ಕಾಣಬಹುದು.

ಅಷ್ಟಕ್ಕೂ ಆ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ? ಹೇಗೆ ಯುಗಾಂತ್ಯವನ್ನು ಸೂಚಿಸುತ್ತದೆ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

1.ಕಲಿಯುಗ ಅಂತ್ಯವಾದರೆ, ಸೃಷ್ಟಿ ನಾಶನ...

1.ಕಲಿಯುಗ ಅಂತ್ಯವಾದರೆ, ಸೃಷ್ಟಿ ನಾಶನ...

Image source

ಹಿಂದೂ ಪುರಾಣಗಳ ಪ್ರಕಾರ ಕಾಲಮಾನವನ್ನು ನಾಲ್ಕು ಯುಗಗಳಾಗಿ ವಿಭಾಜಿಸಿದ್ದಾರೆ. ಅವುಗಳೆಂದರೆ ಕೃತಯುಗ, ತ್ರೇತಾಯುಗ. ದ್ವಾಪರಯುಗ ಹಾಗು ಕಲಿಯುಗ. ಪ್ರಸ್ತುತ ನಾವು ಇರುವುದು ಕಲಿಯುಗದಲ್ಲಿಯೇ. ಈ ಯುಗಾಂತ್ಯದಿಂದ ಸಕಲ ಸೃಷ್ಟಿ ಅಂತ್ಯವಾಗುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಈ ವಿಷಯವನ್ನು ಇತರ ದೇಶಗಳಿಗೆ ಸೇರಿದ ಅನೇಕ ಮಂದಿ ಕೂಡ ನಂಬುತ್ತಾರೆ.

2.ಲಯಕಾರಕನಾದ ಪರಮಶಿವನೇ ಹೇಳುತ್ತಾನೆ...

2.ಲಯಕಾರಕನಾದ ಪರಮಶಿವನೇ ಹೇಳುತ್ತಾನೆ...

Image source

ಹಿಂದೂ ಪುರಾಣಗಳ ಪ್ರಕಾರ ಮಹಾಶಿವನನ್ನು ಲಯಕಾರನು ಎಂದು ಕೂಡ ಕರೆಯುತ್ತಾರೆ. ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಆತನ ಅನುಮತಿ ತಪ್ಪದೇ ಇರಬೇಕು ಎಂಬುದು ಸಾಮಾನ್ಯವಾಗಿ ಎಲ್ಲಾ ಆಸ್ತಿಕರಿಗೂ ತಿಳಿದಿರುವುದೇ. ಅಂತಹ ಲಿಂಗವಿರುವ ಒಂದು ಗುಹಾಲಯವು ನಮಗೆ ಯುಂಗಾತ್ಯವಾಗುವ ಮುನ್ಸೂಚನೆಯ ಬಗ್ಗೆ ತಿಳಿಸುತ್ತದೆ.

3.ನಾಲ್ಕು ಯುಗಗಳಿಗೆ ನಾಲ್ಕು ಸ್ತಂಭಗಳು

3.ನಾಲ್ಕು ಯುಗಗಳಿಗೆ ನಾಲ್ಕು ಸ್ತಂಭಗಳು

Image source

ಈ ಗುಹೆಯಲ್ಲಿ ನಾಲ್ಕು ಸ್ತಂಭಗಳ ಮಧ್ಯೆ 5 ಅಡಿ ಎತ್ತರವಾದ ಶಿವಲಿಂಗವಿದೆ. ಈ ಲಿಂಗವನ್ನು ಯಾರು, ಯಾವಾಗ ಪ್ರತಿಷ್ಟಾಪನೆ ಮಾಡಿದರು ಎಂಬುದಕ್ಕೆ ಸರಿಯಾದ ಉತ್ತರ ಮಾತ್ರ ಇಂದಿಗೂ ಕೂಡ ಯಾರು ಹೇಳಲಾಗುತ್ತಿಲ್ಲ. ಆ ನಾಲ್ಕು ಸ್ತಂಭಗಳು ಒಂದೊಂದು ಯುಗಕ್ಕೆ ಎಂದರೆ ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಕ್ಕೆ ಹೋಲಿಸಲಾಗುತ್ತದೆ.

4.ದೊಡ್ಡದಾದ ಬಂಡೆಯನ್ನು ಹೇಗೆ ತಡೆಯಲು ಸಾಧ್ಯವಾಯಿತು

4.ದೊಡ್ಡದಾದ ಬಂಡೆಯನ್ನು ಹೇಗೆ ತಡೆಯಲು ಸಾಧ್ಯವಾಯಿತು

Image source

ಒಂದೊಂದು ಯುಂಗಾತ್ಯದ ಸಮಯದಲ್ಲಿಯೂ ಒಂದೊಂದು ಸ್ತಂಭ ಮುರಿದು ಹೋಯಿತೆಂದೂ, ಕೊನೆಗೆ ಉಳಿದಿರುವ ಕಲಿಯುಗಕ್ಕೆ ಸಂಬಂಧಿಸಿದ ಸ್ತಂಭ ಮಾತ್ರವೇ ಎಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೆ ನಿದರ್ಶನ ಎಂಬಂತೆ ನಮಗೆ ಸ್ತಂಭಗಳು ಮುರಿದು ಹೋಗಿರುವ ವಿಷಯವು ಆ ಗುಹಾಲಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನು ಮುರಿಯದೇ ಉಳಿದಿರುವ ಒಂದೇ ಒಂದು ಸ್ತಂಭವು ದೊಡ್ಡದಾದ ಬಂಡೆಯ ಕಲ್ಲು ಆಧಾರವಾಗಿ ಹಾಗೆಯೇ ಹಿಡಿದುಕೊಂಡು ಇರುವುದು ಆಶ್ಚರ್ಯವೇ ಸರಿ.

5.ಬೇಸಿಗೆ ಕಾಲದಲ್ಲಿ ನೀರು ಇದ್ದು, ಮಳೆಗಾಲದಲ್ಲಿ ಕಾಣಿಸದ ನೀರು

5.ಬೇಸಿಗೆ ಕಾಲದಲ್ಲಿ ನೀರು ಇದ್ದು, ಮಳೆಗಾಲದಲ್ಲಿ ಕಾಣಿಸದ ನೀರು

Image source

ಕೇದಾರೇಶ್ವರ ಗುಹೆಯಲ್ಲಿ ಸುತ್ತಲೂ ಇರುವ 4 ಗೋಡೆಗಳಿಂದ ನಿತ್ಯವೂ ನೀರು ಬರುತ್ತಿರುತ್ತದೆ. ಆ ನೀರು ಎಲ್ಲಿಂದ ಬರುತ್ತದೆ ಎಂಬ ವಿಷಯ ಮಾತ್ರ ಇಂದಿಗೂ ಯಾರಿಗೂ ತಿಳಿದಿಲ್ಲ. ಇನ್ನು ಈ ನೀರು ಅತ್ಯಂತ ತಂಪಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಹಾಗು ಚಳಿಗಾಲದಲ್ಲಿ ಕಾಣಿಸುವ ಈ ನೀರು, ಮಳೆಗಾಲದಲ್ಲಿ ಮಾತ್ರ ಕಾಣಿಸದೇ ಇರುವುದು ವಿಶೇಷ ಎಂದೇ ಹೇಳಬಹುದು.

6.24 ಗಂಟೆಯ ಮುಂಚೆ

6.24 ಗಂಟೆಯ ಮುಂಚೆ

Image source

ಕಲಿಯುಗ ಅಂತ್ಯಕ್ಕೆ ಸರಿಸುಮಾರು 24 ಗಂಟೆಗಳ ಮುಂದೆ ಕೊನೆಯ ನಾಲ್ಕನೇ ಸ್ತಂಭವು ಮುರಿದು ಬೀಳುತ್ತದೆ ಎಂದು ಹೇಳುತ್ತಾರೆ. ಇದರ ನಂತರ ಯುಗಾಂತ್ಯವು ಪ್ರಾರಂಭವಾಗಿ ಒಟ್ಟು 24 ಗಂಟೆಯೊಳಗೆ ಸೃಷ್ಟಿ ನಾಶವಾಗುತ್ತದೆಯಂತೆ ಎಂದು ಹೇಳುತ್ತಾರೆ. ಯುಂಗಾತ್ಯ, ಸೃಷ್ಟಿನಾಶದಂತಹ ವಿಷಯಗಳು ರಷ್ಯಾ, ಈಜಿಫ್ಟ್‍ನಂತಹ ದೇಶಗಳಿಗೆ ಸಂಬಂಧಿಸಿದ ಗ್ರಂಥಗಳಲ್ಲಿಯೂ ಕೂಡ ಇವೆ.

7.ಕೇದಾರೇಶ್ವರ ದೇವಾಲಯ

7.ಕೇದಾರೇಶ್ವರ ದೇವಾಲಯ

Image source

ಈ ಕೇದಾರೇಶ್ವರ ಗುಹೆಗೆ ಸಮೀಪದಲ್ಲಿಯೇ ಹರಿಶ್ಚಂದ್ರೇಶ್ವರ ದೇವಾಲಯವು ಇದೆ. ಇದರಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಕೊಳ್ಳುತ್ತಿರುವುದು ವಿನಾಯಕನು. ಈ ಗುಹೆಯು ಇಂದಿಗೂ ನಮ್ಮ ದೇಶದ ನಿರ್ಮಾಣ ಚಾತುರ್ಯವನ್ನು ನಿದರ್ಶನವಾಗಿದೆ ಎಂದೇ ಹೇಳಬಹುದು. ಮುಖ್ಯವಾಗಿ ನೀರಿನ ಶೇಖರಣೆಗಾಗಿ ನಿರ್ಮಾಣ ಮಾಡಿದ ಟ್ಯಾಂಕ್‍ಗಳು ಅಂದಿನ ಇಂಜಿನಿಯರಿಂಗ್ ಪ್ರತಿಭೆಯನ್ನು ಮೆಚ್ಚಲೇಬೇಕು. ಈ ಗುಹೆಯ ಸಮೀಪದಲ್ಲಿಯೇ ಮಂಗಳ ಗಂಗಾ ಎಂಬ ನದಿ ಉದ್ಭವಿಸಿತು ಎಂದು ಹೇಳುತ್ತಾರೆ.

8.ಪ್ರವಾಸಿ ಪ್ರಿಯರು ಕೂಡ

8.ಪ್ರವಾಸಿ ಪ್ರಿಯರು ಕೂಡ

Image source

ಈ ಕೇದಾರೇಶ್ವರ ಗುಹೆಯು ಕೇವಲ ಹಿಂದೂ ಭಕ್ತರಿಗೆ ಅಲ್ಲದೇ ಪ್ರವಾಸಿ ಪ್ರಿಯರಿಗೂ ಕೂಡ ಆಕರ್ಷಿಸುತ್ತದೆ. ಇಲ್ಲಿ ಸಮೀಪದಲ್ಲಿಯೇ ಇರುವ ಜಲಪಾತವನ್ನು ಕಂಡು ಆನಂದಿಸಬಹುದು. ಅಷ್ಟೇ ಅಲ್ಲ, ಇಲ್ಲಿ ಸಪ್ತ ತೀರ್ಥ ಪುಷ್ಕರಣಿ ಕೂಡ ಪ್ರಧಾನವಾದ ಆಕರ್ಷಣೆಯೇ ಆಗಿದೆ. ತಾರಾಮತಿ ಶಿಖರದ ಮೇಲೆ ಇರುವ ಈ ಗುಹಾಲಯಕ್ಕೆ ಟ್ರೆಕ್ಕಿಂಗ್‍ನ ಮೂಲಕ ಕೂಡ ಸೇರಿಕೊಳ್ಳಬಹುದು.

9.ಎಲ್ಲಿದೆ? ಹೇಗೆ ಸೇರಿಕೊಳ್ಳಬೇಕು?

9.ಎಲ್ಲಿದೆ? ಹೇಗೆ ಸೇರಿಕೊಳ್ಳಬೇಕು?

Image source

ಈ ಮಹಿಮಾನ್ವಿತವಾದ ದೇವಾಲಯವು ಮಹಾರಾಷ್ಟ್ರದಲ್ಲಿನ ಅಹ್ಮಾದ್ ನಗರ ಜಿಲ್ಲೆಯಲ್ಲಿನ ಹರಿಶ್ಚಂದ್ರ ಕೋಟೆಯಲ್ಲಿ ಕೇದಾರೇಶ್ವರ ಗುಹೆ ಇದೆ. ದೇಶದಲ್ಲಿನ ವಿವಿಧ ಪ್ರದೇಶಗಳಿಂದ ರೈಲು ಹಾಗು ವಿಮಾನ ನಿಲ್ದಾಣಗಳ ಮೂಲಕ ಸುಲಭವಾಗಿ ಅಹ್ಮಾದ್ ನಗರಕ್ಕೆ ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X