Search
  • Follow NativePlanet
Share
» »ತ್ರಿನೇತ್ರನಾಗಿ ನೆಲೆಸಿದ್ದಾನೆ ನಮ್ಮ ಗಣಪತಿ!

ತ್ರಿನೇತ್ರನಾಗಿ ನೆಲೆಸಿದ್ದಾನೆ ನಮ್ಮ ಗಣಪತಿ!

ಹಿಂದೂ ಧರ್ಮದಲ್ಲಿ ಗಣಪತಿಯನ್ನು ಮೊದಲ ಪೂಜೆಯಲ್ಲಿ ಪ್ರಾರ್ಥಿಸಬೇಕು ಎಂಬ ಪದ್ಧತಿ ಇದೆ. ಇದರ ಅರ್ಥ ಯಾವುದೇ ಒಂದು ಕಾರ್ಯ ಮಾಡುವ ಸಂದರ್ಭದಲ್ಲಿ ವಿಘ್ನ ಒದಗಬಾರದು ಎಂಬ ಉದ್ದೇಶವೇ ಆಗಿದೆ. ಗಣಪತಿ ಎಂದರೆ ಚಿಕ್ಕ ಮಕ್ಕಳಿಗಂತೂ ಬಲು ಇಷ್ಟ. ಸಂಭ್ರಮ, ಸಡಗರದಿಂದ ಗಣಪತಿ ಹಬ್ಬ ಬಂದಾಗ ಆಚರಿಸುತ್ತಾರೆ. ಗಣೇಶನನ್ನು ಹಲವಾರು ಹೆಸರುಗಳಿಂದ ಕರೆದು ಭಕ್ತಿಯಿಂದ ಆರಾಧಿಸುತ್ತಾರೆ.

ಇನ್ನು ಗಣೇಶನಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ಸಾವಿರಾರು ದೇವಾಲಯಗಳಿವೆ. ಪ್ರತಿ ರಾಜ್ಯದಲ್ಲಿಯೂ ಗಣೇಶನಿಗೆ ಮುಡಿಪಾದ ಪ್ರತ್ಯೇಕವಾದ ದೇವಾಲಯಗಳಿರುವುದನ್ನು ನಾವು ಕಾಣಬಹುದು. ಆನೇಕ ಕೋಟೆಗಳನ್ನು, ಅರಮನೆಗಳನ್ನು ಹೊಂದಿ ಶ್ರೀಮಂತವಾದ ರಾಜ್ಯವಾಗಿ ಕಂಗೊಳಿಸುತ್ತಿರುವ ರಾಜಸ್ಥಾನದಲ್ಲಿಯೂ ಸಹ ಹೆಸರುವಾಸಿಯಾದ ಒಂದು ಗಣೇಶನ ದೇವಾಲಯವಿದೆ. ಆ ಗಣಪತಿಯ ಮಹಿಮೆ ಏನು? ಆ ಗಣಪತಿ ವಿಶೇಷವಾದ ರೂಪವನ್ನು ಏಕೆ ಪಡೆದಿದ್ದಾನೆ? ಎಂಬ ಹಲವಾರು ವಿಷಯವನ್ನು ಲೇಖನದ ಮೂಲಕ ತಿಳಿಯೋಣ.

1.ಎಲ್ಲಿದೆ ಈ ದೇವಾಲಯ?

1.ಎಲ್ಲಿದೆ ಈ ದೇವಾಲಯ?

ಸಾಮಾನ್ಯವಾಗಿ ಗಣಪತಿಯು 2 ಕಣ್ಣುಗಳನ್ನು ಹೊಂದಿದ್ದು, ಶಾಂತ ಸ್ವರೂಪಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ. ಆದರೆ ರಾಜಸ್ಥಾನದ ರಣಥಂಬೋರ್ ಕೋಟೆಯ ಅವರಣದಲ್ಲಿ ಈ ಗಣೇಶನ ದೇವಾಲಯವಿದೆ. ದೆಹಲಿ ಹಾಗು ಮುಂಬೈ ರೈಲು ಮಾರ್ಗದಲ್ಲಿ ಬರುವ ಸವಾಯಿ ಮಾಧೋಪುರ್ ನಗರ ರೈಲು ನಿಲ್ದಾಣದಿಂದ ಸುಮಾರು ಹನ್ನೇರಡು ಕಿ.ಮೀ ದೂರದಲ್ಲಿ ರಣಥಂಬೋರ್ ಕೋಟೆ ಇದೆ. ಅಲ್ಲಿ ಒಂದು ಗಣೇಶನ ದೇವಾಲಯವಿದ್ದು, ತ್ರಿನೇತ್ರನಾಗಿ ದರ್ಶನವನ್ನು ಭಕ್ತರಿಗೆ ನೀಡುತ್ತಿದ್ದಾನೆ.

2.ಕುಟುಂಬ ಸಮೇತನಾಗಿ ನೆಲೆಸಿದ್ದಾನೆ

2.ಕುಟುಂಬ ಸಮೇತನಾಗಿ ನೆಲೆಸಿದ್ದಾನೆ

PC: Gopalsinghal7

ಗಣಪತಿಯು ತನ್ನ ತಂದೆಯಾದ ಮಹಾಶಿವನಂತೆ ತ್ರಿನೇತ್ರನಾಗಿ ಕುಟುಂಬ ಸಮೇತನಾಗಿ ನೆಲೆಸಿದ್ದಾನೆ. ಇಲ್ಲಿನ ಗಣಪತಿಯನ್ನು ಕಾಣಲು ಆನೇಕ ಮಂದಿ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ. ಇಲ್ಲಿನ ಸ್ವಾಮಿಯು ಭಕ್ತಾದಿಗಳ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಿ, ಸಕಲ ಸಿದ್ಧಿಯನ್ನು ನೀಡುತ್ತಾನೆ ಎಂದು ನಂಬಲಾಗಿದೆ.

3.ಈ ಗಣೇಶನ ವಿಶೇಷತೆ

3.ಈ ಗಣೇಶನ ವಿಶೇಷತೆ

PC: Jpmeena

ಈ ಗಣೇಶನ ವಿಶೇಷತೆ ಏನೆಂದರೆ ಯಾರ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ಕೆ ಅಡ್ಡಿ- ಆತಂಕಗಳು ಎದುರಾಗದೇ ಇರುವುದಕ್ಕೆ ಮೊದಲ ಅಮಂತ್ರಣದ ಪತ್ರಿಕೆಯನ್ನು ಈ ತ್ರಿನೇತ್ರ ಗಣೇಶನಿಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಶುಭಕಾರ್ಯವನ್ನು ಸುಲಭ ರೀತಿಯಲ್ಲಿ ನೆಡೆಸಿಕೊಡುತ್ತಾನೆ ಎಂದು ನಂಬಲಾಗಿದೆ. ಹಾಗಾಗಿಯೇ ಈ ಸ್ವಾಮಿಯನ್ನು ದರ್ಶನ ಮಾಡಲು ಆನೇಕ ಮಂದಿ ಭಕ್ತರು ಭೇಟಿ ನೀಡುತ್ತಾರೆ.

4.ದಂತ ಕಥೆಯ ಪ್ರಕಾರ

4.ದಂತ ಕಥೆಯ ಪ್ರಕಾರ

ಒಂದು ದಂತಕತೆಯ ಪ್ರಕಾರ 13 ನೇ ಶತಮಾನದಲ್ಲಿ ಈ ಪ್ರದೇಶದ ರಾಜನಾಗಿದ್ದ ಹಮ್ಮೀರನು ಅಲ್ಲಾ ಉದ್ ದಿನ್ ಖಿಲ್ಜಿಯೊಂದಿಗೆ ಯುದ್ಧ ಬೇಕಾದ ಸಂದರ್ಭ ಒದಗಿ ಬಂತು. ಆನೇಕ ವರ್ಷಗಳೇ ಈ ಯುದ್ಧಗಳು ನಡೆದವು. ರಾಜನು ಉಗ್ರಾಣದಲ್ಲಿ ಸಂಗ್ರಹ ಮಾಡಿದ್ದ ಧಾನ್ಯಗಳು ಜನರಿಗಾಗಿ ಬರಿದಾಗತೊಡಗಿದವು, ಆದರೆ ಯುದ್ಧ ಮಾತ್ರ ನಿಲ್ಲಲ್ಲಿಲ್ಲ.

5.ಗಣೇಶನ ಪ್ರಾರ್ಥನೆ

5.ಗಣೇಶನ ಪ್ರಾರ್ಥನೆ

ಗಣೇಶನ ಅಪ್ರತಿಮ ಭಕ್ತನಾಗಿದ್ದ ರಾಜನು ಗಣೇಶನನ್ನು ಮನಸಾರೆ ಪ್ರಾರ್ಥನೆ ಮಾಡಿದ. ಆ ರಾತ್ರಿ ತ್ರಿನೇತ್ರನಾಗಿ ಗಣೇಶನು ರಾಜನ ಕನಸ್ಸಿನಲ್ಲಿ ಕಾಣಿಸಿಕೊಂಡು, ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಅಭಯ ನೀಡಿದ. ಅದರಂತೆ ಮರುದಿನ ಪವಾಡ ಎಂಬಂತೆ ಮತ್ತೆ ಉಗ್ರಾಣದಲ್ಲಿ ಧಾನ್ಯಗಳು ತುಂಬಿದ್ದವು.

6.ಯುದ್ಧ

6.ಯುದ್ಧ

ಕೇವಲ ಉಗ್ರಾಣವೆಲ್ಲಾ ತುಂಬಿದ್ದಲ್ಲದೇ ಇದ್ದಕ್ಕಿದ್ದಂತೆ ಯುದ್ಧವೂ ಕೂಡ ನಿಂತು ರಾಜನಿಗೆ ಜಯ ಲಭಿಸಿತು ಎಂಬ ಶುಭ ಸುದ್ಧಿಯು ರಾಜನ ಕಿವಿಗೆ ಬಿದ್ದಿತು. ಇದರಿಂದ ಸಂತುಷ್ಟನಾದ ರಾಜನು ರಾತ್ರಿ ತನ್ನ ಕನಸ್ಸಿನಲ್ಲಿ ಕಾಣಿಸಿಕೊಂಡ ತ್ರಿನೇತ್ರ ಗಣಪತಿಯ ಪವಾಡವೇ ಇವೆಲ್ಲಾ ಎಂದು ಕೊಂಡು ಒಂದು ದೇವಾಲಯವನ್ನು ನಿರ್ಮಾಣ ಮಾಡಿದನು. ಆ ದೇವಾಲಯವೇ ತ್ರಿನೇತ್ರಾಧಾರಿ ಗಣಪತಿ ದೇವಾಲಯ.

7.ಪ್ರವಾಸಿ ಆಕರ್ಷಣೆಗಳು

7.ಪ್ರವಾಸಿ ಆಕರ್ಷಣೆಗಳು

ರಾಜಸ್ಥಾನದಲ್ಲಿ ಹಲವಾರು ಪ್ರವಾಸಿ ತಾಣಗಳು, ಕೋಟೆಗಳು, ಅರಮನೆಗಳನ್ನು ಕಾಣಬಹುದು. ಅದರಲ್ಲಿ ಅಮೆರ್ ಕೋಟೆ, ಹವಚಾ ಮಹಲ್, ಜೈ ಪೂರ್ ಪ್ಯಾಲೆಸ್ (ಅರಮನೆ), ಉದಯ್‍ಪುರ್ ಪ್ಯಾಲೆಸ್ (ಅರಮನೆ), ಜಂತರ್ ಮಂತರ್ ( ಜೈಪೂರ್), ರಾಂಥೋಂಬರ್ ನ್ಯಾಷನಲ್ ಪಾರ್ಕ್, ಸರಿಸ್ಕಾ ಟೈಗರ್ ರಿಸರ್ವ್, ಜೈಗ್ರಾಹ ಕೋಟೆ ಇನ್ನು ಹಲವಾರು ಪ್ರವಾಸಿ ತಾಣಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ.

8.ರಾಜಸ್ಥಾನಕ್ಕೆ ತೆರಳಲು ಉತ್ತಮವಾದ ಕಾಲಾವಧಿ

8.ರಾಜಸ್ಥಾನಕ್ಕೆ ತೆರಳಲು ಉತ್ತಮವಾದ ಕಾಲಾವಧಿ

PC : Maneesh Soni

ರಾಜಸ್ಥಾನಕ್ಕೆ ಬೇಸಿಗೆ ಕಾಲದಲ್ಲಿ ಪ್ರವಾಸ ಮಾಡುವುದು ಅಷ್ಟು ಉತ್ತಮವಾದುದಲ್ಲ. ಹೀಗಾಗಿ ಚಳಿಗಾಲದಲ್ಲಿ ಈ ಎಲ್ಲಾ ತಾಣಗಳಿಗೆ ಭೇಟಿ ನೀಡುವುದು ಉತ್ತಮವಾಗಿದೆ. ಅಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಪ್ರವಾಸಕ್ಕೆ ಯೋಗ್ಯವಾದ ಕಾಲಾವಧಿಯಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more