Search
  • Follow NativePlanet
Share
» »ಸ್ವರ್ಣ ದೇವಾಲಯಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತ?

ಸ್ವರ್ಣ ದೇವಾಲಯಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತ?

By Sowmyabhai

ಭಾರತ ದೇಶದಲ್ಲಿನ ಸ್ವರ್ಣ ದೇವಾಲಯಗಳು ಎರಡು. ಅದರಲ್ಲಿ ಒಂದು ಉತ್ತರ ದಿಕ್ಕಿನಲ್ಲಿದ್ದರೆ, ಮತ್ತೊಂದು ದಕ್ಷಿಣದ ದಿಕ್ಕಿಗೆ ಇದೆ. ಉತ್ತರದ ದಿಕ್ಕಿನಲ್ಲಿರುವ ದೇವಾಲಯವು ಪಂಜಾಬ್ ರಾಜ್ಯದಲ್ಲಿನ ಅಮೃತ್‍ಸರ್‍ನಲ್ಲಿ, ದಕ್ಷಿಣದ ದಿಕ್ಕಿನಲ್ಲಿರುವ ತಮಿಳುನಾಡು ರಾಜ್ಯದಲ್ಲಿನ ವೆಲ್ಲೂರ್‍ನಲ್ಲಿದೆ. 2 ದೇವಾಲಯಗಳು ಸ್ವರ್ಣ ದೇವಾಲಯಳಾದರೂ ಕೂಡ ದೇವರು ಮಾತ್ರ ಬೇರೆ-ಬೇರೆ. ಹಾಗಾದರೆ ಈ 2 ದೇವಾಲಯದ ಬಗ್ಗೆ ಒಮ್ಮೆ ತಿಳಿದುಕೊಳ್ಳೊಣ.

ಭಾರತ ದೇಶದಲ್ಲಿನ ಸ್ವರ್ಣ ದೇವಾಲಯಗಳು ಎಷ್ಟಿದೆ ಎಂಬುದು ನಿಮಗೆ ಗೊತ್ತ? ಅವು ಎಲ್ಲಿವೆ? ಅದನ್ನು ನಿರ್ಮಾಣ ಮಾಡಲು ಎಷ್ಟು ಬಂಗಾರವನ್ನು ಉಪಯೋಗಿಸಿದರು ಎಂದು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಸಂಶಯವೇ ಇಲ್ಲ. ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಇದ್ದರು ಕೂಡ ಸ್ವರ್ಣ ದೇವಾಲಯವು ತನ್ನದೇ ಆದ ಮಹತ್ವವನ್ನು ಪಡೆದಿದೆ.

1.ಸ್ವರ್ಣ ದೇವಾಲಯ, ಅಮೃತಸರ್

1.ಸ್ವರ್ಣ ದೇವಾಲಯ, ಅಮೃತಸರ್

ಅಮೃತ್ ಸರ್‍ಗೆ ಆ ಹೆಸರು ಗೋಲ್ಡ್‍ನ್ ಟೆಂಪಲ್‍ನಲ್ಲಿನ ಪವಿತ್ರವಾದ ಸರೋವರದಿಂದ ಹೆಸರು ಬಂದಿದೆ. ಅಮೃತ್ ಸರ್ ಸ್ವರ್ಣ ದೇವಾಲಯವು ಸಿಖ್‍ರ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಸಿಖ್ ಧರ್ಮದ ಪ್ರಜೆಗಳು ಇಲ್ಲಿಗೆ ಬಂದು ಪ್ರಾರ್ಥನೆಯನ್ನು ಮಾಡುತ್ತಾರೆ. ಸಂದರ್ಶಕರು ಅಥವಾ ಪ್ರವಾಸಿಗರು ಸರೋವರದ ಮಧ್ಯ ನಿರ್ಮಾಣ ಮಾಡಿದ ಈ ದೇವಾಲಯದ ವೈಭವ ಕಾಣಲು ಭೇಟಿ ನೀಡುತ್ತಿರುತ್ತಾರೆ.

ಅಮೃತ್‍ಸರ್ ಸ್ವರ್ಣ ದೇವಾಲಯ ವಿಶಾಲವಾದುದು. ಸಿಖ್ ಧರ್ಮದ ಚರಿತ್ರೆ, ಸಂಸ್ಕøತಿಯನ್ನು ಕಾಣಬಹುದು. ಈ ಗುರುದ್ವಾರವನ್ನು "ಶ್ರೀ ಹಾರಮಂದಿರ್ ಸಾಹಿಬ್" ಎಂದು ಕೂಡ ಕರೆಯುತ್ತಾರೆ. ಸ್ವರ್ಣ ದೇವಾಲಯದಲ್ಲಿ ಒಂದು ಸರೋವರವಿದೆ. ಇದು ಮಾನವ ನಿರ್ಮಿತ ಸರೋವರ. ಸಿಖ್‍ರ 4 ನೇ ಗುರುವಾದ ಗುರು ರಾಂ ದಾಸ್ ಆಗಿದೆ.

2.ಸ್ವರ್ಣ ದೇವಾಲಯ, ಅಮೃತಸರ್

2.ಸ್ವರ್ಣ ದೇವಾಲಯ, ಅಮೃತಸರ್

PC:: gags9999

ಅಮೃತ್ ಸರ್ ದೇವಾಲಯದಲ್ಲಿ ಸಿಖ್‍ರ ಪವಿತ್ರ ಗ್ರಂಥವಾದ ಆದಿ ಗ್ರಂಥ ಎಂದು ಹೇಳುತ್ತಾರೆ. ಇದನ್ನು ಪ್ರತಿ ದಿನ ಬೆಳಗ್ಗೆ ಓದುತ್ತಾರೆ. ಸರೋವರದಲ್ಲಿನ ಒಂದು ದಾರಿಯ ಮೂಲಕ ಇದನ್ನು ಸೇರಿಕೊಳ್ಳಬೇಕು. ಸಾಂಪ್ರದಾಯಿಕ ವಸ್ತ್ರಗಳು ಧರಿಸಿದ ರಕ್ಷಕ ಭಟರು ಇದನ್ನು ಕಾವಲು ಕಾಯುತ್ತಾರೆ. ಗುರುದ್ವಾರದಲ್ಲಿನ ಮೇಲಿನ ಅಂತಸ್ತನ್ನು 400 ಕೆ.ಜಿ ಬಂಗಾರದಿಂದ ನಿರ್ಮಾಣ ಮಾಡಿದ್ದಾರೆ.

ಹಾಗಾಗಿಯೇ ಇದನ್ನು ಗೋಲ್ಡ್‍ನ್ ಟೆಂಪಲ್ ಅಥವಾ ಸ್ವರ್ಣ ದೇವಾಲಯ ಎನ್ನುತ್ತಾರೆ. ಇದರಲ್ಲಿ "ಗುರು ಗ್ರಂಧ ಸಾಹಿಬಾ" ಎಂದು ಹೇಳಲಾಗುವ ಒಂದು ಪವಿತ್ರ ಗ್ರಂಥವಿದೆ. ಈ ಭವನಕ್ಕೆ ಎದುರಿನಲ್ಲಿ ಸಿಖ್ ಧರ್ಮ ಚರಿತ್ರೆಯನ್ನು ತಿಳಿಸುವ ಒಂದು ಮ್ಯೂಸಿಯಂ ಕೂಡ ಇದೆ. ಗುರುದ್ವಾರಾದಲ್ಲಿನ ಪ್ರಧಾನವಾದ ಪ್ರವೇಶ ದ್ವಾರದ ಸಮೀಪದಲ್ಲಿ ಒಂದು ದೊಡ್ಡ ವಿಕ್ಟೋರಿಯನ್ ಕ್ಲಾಕ್ ಟವರ್ ಇರುತ್ತದೆ. ಭಕ್ತರು ದೇವಾಲಯದ ಒಳಗೆ ಹೋಗುವ ಮುಂದೆ ತಮ್ಮ ಪಾದಗಳನ್ನು ಸ್ವಚ್ಛಗೊಳಿಸುತ್ತಾರೆ.

3.ಸ್ವರ್ಣ ದೇವಾಲಯ, ಅಮೃತಸರ್

3.ಸ್ವರ್ಣ ದೇವಾಲಯ, ಅಮೃತಸರ್

ಗುರುದ್ವಾರದಲ್ಲಿನ ಡೈನಿಂಗ್ ಹಾಲ್ ಅನ್ನು "ಲಂಗಾರ್" ಎಂದು ಕರೆಯುತ್ತಾರೆ. ಬೋಜನ ಇಲ್ಲಿ ಎಲ್ಲರಿಗೂ ಉಚಿತ. ಈ ಭವನವು ಪ್ರವೇಶದಲ್ಲಿಯೇ ಭಕ್ತರಿಗೆ ಪ್ಲೇಟ್‍ಗಳು ಹಾಗು ಸ್ಪೂನ್‍ಗಳು ನೀಡುತ್ತಾರೆ. ಅವುಗಳನ್ನು ಒಳಗೆ ತೆಗೆದುಕೊಂಡು ಕುಳಿತುಕೊಳ್ಳಬೇಕು. ಅಡುಗೆಯವರು ದೊಡ್ಡ ದೊಡ್ಡ ಪ್ರಾತೆಗಳಲ್ಲಿ ಆಹಾರ ಪದಾರ್ಥಗಳನ್ನು ಅಂದರೆ, ಚಪಾತಿ, ರೋಟಿ ತೆಗೆದುಕೊಂಡು ಬಂದು ಬಡಿಸುತ್ತಾರೆ. ಈ ಕಾರ್ಯದಲ್ಲಿ ಎಲ್ಲಾ ಧರ್ಮದವರು ಕೂಡ ಪಾಲ್ಗೊಳ್ಳುತ್ತಾರೆ. ಡೈನಿಂಗ್ ಹಾಲ್‍ನ ಒಳಗೆ ಚಪ್ಪಲಿಯ ಧರಿಸುವುದಕ್ಕೆ ಅನುಮತಿಯನ್ನು ನೀಡುವುದಿಲ್ಲ.

4.ಸ್ವರ್ಣ ದೇವಾಲಯ, ವೆಲ್ಲೂರ್

4.ಸ್ವರ್ಣ ದೇವಾಲಯ, ವೆಲ್ಲೂರ್

PC:: Ag1707

ಶ್ರೀ ಪುರಂ ಸ್ವರ್ಣ ದೇವಾಲಯವು ವೆಲ್ಲೂರ್‍ನಲ್ಲಿನ ಮಲೈಕೊಡಿ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಇದನ್ನೇ "ದಿ ಗೋಲ್ಡ್‍ನ್ ಟೆಂಪಲ್ ಆಫ್ ವೆಲ್ಲೂರ್" ಎಂದು ಕರೆಯುತ್ತಾರೆ. ಈ ದೇವಾಲಯದ ಒಳಗೆ ಹಾಗು ಹೊರಗೆ 2 ಭಾಗದಲ್ಲಿಯೂ ಬಂಗಾರದ ಮಹಾಲಕ್ಷ್ಮೀ ದೇವಾಲಯವಿದೆ. ಶ್ರೀ ಪುರಂ ಸ್ವರ್ಣ ದೇವಾಲಯದಲ್ಲಿ ಕೈಯಲ್ಲಿ ಮಾಡಿದ ಬಂಗಾರದ ಶೀಟ್‍ಗಳನ್ನು ಬಳಸಿ ಮಾಡಿದ್ದಾರೆ. ದೇವಾಲಯವನ್ನು ಸುಮಾರು 1500 ಕೆ.ಜಿ ಬಂಗಾರದಿಂದ ನಿರ್ಮಾಣ ಮಾಡಿದ್ದಾರೆ.

5.ಸ್ವರ್ಣ ದೇವಾಲಯ, ವೆಲ್ಲೂರ್

5.ಸ್ವರ್ಣ ದೇವಾಲಯ, ವೆಲ್ಲೂರ್

PC: briejeshpatel

ಭಕ್ತರು ದೇವಾಲಯದ ಒಳಗೆ ಪ್ರವೇಶಿಸುವ ಸಮಯದಲ್ಲಿ ಡ್ರೆಸ್ ಕೋಡ್ ತಪ್ಪದೇ ಪಾಲಿಸಲೇಬೇಕು. ಮಿಡ್ಡಿಗಳು, ಜೀನ್ಸ್‍ಗಳು ಪೂರ್ತಿಯಾಗಿ ನಿಷೇಧ ಮಾಡಲ್ಪಟ್ಟಿದೆ. ಕೇವಲ ಸೀರೆಗಳು, ಪಂಚೆಗಳು ಕಟ್ಟಿಕೊಂಡು ಅಥವಾ ಸಂಪ್ರದಾಯ ವಸ್ತ್ರವನ್ನು ಧರಿಸಿ ಒಳಗೆ ಹೋಗುವುದು ಉತ್ತಮ. ಮೊಬೈಲ್ ಫೋನ್‍ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ, ಬೆಂಕಿ ಯಾವುದು ಕೂಡ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡುಸವುದಿಲ್ಲ.

ಭೇಟಿ ನೀಡುವ ಸಮಯ

ವರ್ಷದ ಯಾವುದೇ ಸಮಯದಲ್ಲಿಯಾದರು ಶ್ರೀ ಪುರಂ ಸ್ವರ್ಣ ದೇವಾಲಯಕ್ಕೆ ಭೇಟಿ ನೀಡಬಹುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರವೇಶವನ್ನು ನೀಡಲಾಗುತ್ತದೆ. ಅಭಿಷೇಕವು ಬೆಳಗ್ಗೆ 4 ರಿಂದ 8 ಗಂಟೆಯವರೆಗೆ, ಹಾರತಿ ಸೇವೆಯು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನಿರ್ವಹಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X