
ನೀವು ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯುವ ತಾಣಗಳಿಗೆ ಭೇಟಿ ಕೊಡಲು ನೋಡುತ್ತಿದ್ದಲ್ಲಿ ಬೇರೆ ಎಲ್ಲೂ ಹುಡುಕಾಡಬೇಡಿ ಕೊಡನಾಡ್ ಆನೆಗಳ ನಾಡಿಗೆ ಭೇಟಿ ಕೊಡಿ. ಇದು ಪೆರಿಯಾರ್ ನದಿಯ ದಡದಲ್ಲಿದ್ದು, ಕೊಚ್ಚಿ ಯಿಂದ 45ಕಿ.ಮೀ ದೂರದಲ್ಲಿದೆ. ಕೊಡಾನಾಡ್ ಒಂದು ಆಕರ್ಷಕ ಸಬ್ರೇಕ್ವೆಟ್, ಒಂದು 'ಆನೆಗಳ' ಅನಾಥಾಶ್ರಮ. ಜಗತ್ತಿನಾದ್ಯಂತದ ಪ್ರವಾಸಿಗರು ಆನೆಗಳಿರುವ ಈ ಸ್ಥಳಕ್ಕೆ ಅವುಗಳನ್ನು ನೋಡಲು ಮತ್ತು ಇಲ್ಲಿಯ ನದಿಯಲ್ಲಿ ಈಜಲು ತಂಡೋಪತಂಡದಲ್ಲಿ ಭೇಟಿ ಕೊಡುತ್ತಾರೆ.

1. ಆನೆಗಳ ಕ್ರಾಲ್
Augustus Binu
ಆನೆಗಳ ಕ್ರಾಲ್ ಅನ್ನು ಮತ್ತು ಕಪಾಟುಗಳನ್ನು ಮರದಿಂದ ತಯಾರಿಸಲಾಗಿದ್ದು ಇದು ನಾಲ್ಕು ಆನೆಗಳಿಗೆ ಆಶ್ರಯ ನೀಡಬಲ್ಲದು .ಇಲ್ಲಿರುವ ಪ್ರಮುಖ ಆಕರ್ಷಣೆಯೆಂದರೆ ಒಂದು ಸಣ್ಣ ಹಳ್ಳಿ. ಇಲ್ಲಿ 10 ವರ್ಷಗಳಿಗೂ ಮೇಲ್ಪಟ್ಟು ತರಬೇತಿ ನೀಡಲಾದ ಆನೆಗಳಿದ್ದು ಇವುಗಳನ್ನು ದೇವಸ್ಥಾನದ ಉತ್ಸವದ ಸಮಯದಲ್ಲಿ ಕೆಲವು ಕೆಲಸಗಳಿಗೆ ಬಳಸಲಾಗುತ್ತದೆ ಅಲ್ಲದೆ ಈ ತರಬೇತಿ ನೀಡಲಾದ ಆನೆಗಳನ್ನು ಮರದ ಸಾಗಣೆ ಮಾಡುವ ಸಲುವಾಗಿಯೂ ಬಳಸಿಕೊಳ್ಳಲಾಗುತ್ತದೆ.

2. ಸಾಹಸಪ್ರಿಯರಿಗೆ ಸೂಕ್ತ
Dharmendra prakash
ಪ್ರವಾಸಿಗರು ಪೆರಿಯಾರ್ ನದಿಯ ಇನ್ನೊಂದು ದಡದಲ್ಲಿರುವ ಮಲಯತೂರ್ ಚರ್ಚ್ ಗೆ ಕೂಡಾ ಯಾತ್ರೆ ಹೋಗಬಹುದಾಗಿದೆ. ಇಲ್ಲಿಯ ಇನ್ನೊಂದು ಕಡೆಯಲ್ಲಿರುವ ಶಾಂತಯುತವಾದ ಕಾಡು ಸಾಹಸಪ್ರಿಯರಿಗೆ ಒಂದು ಸೂಕ್ತವಾದ ಸ್ಥಳವೆನಿಸಿದೆ. ಕೊಡನಾಡ್ ನಲ್ಲಿ ಸಣ್ಣ ಪ್ರಾಣಿ ಸಂಗ್ರಹಾಲಯ ಕೂಡಾ ಇದ್ದು ಇಲ್ಲಿ ನೀವು ಆನೆಗಳು ಆಹಾರ ತಿನ್ನುವುದನ್ನು ನೋಡಬಹುದಾಗಿದೆ.

3. ನಿರಂತರ ಮೋಜು
Amolnaik3k
ಕೊಡನಾಡ್ ಉದ್ಯಾನವನವು ಆನೆಗಳ ಸಫಾರಿಯ ಸೌಲಭ್ಯವನ್ನು ಹೊಂದಿದೆ ಮತ್ತು ನಿಮ್ಮ ಪ್ರಯಾಣದಲ್ಲಿ ಮಾವುತನು ನಿಮಗೆ ಸಹಕರಿಸುತ್ತಾನೆ. ನೀವು ಬೆಳಿಗ್ಗೆ 8 ರ ಸಮಯದಲ್ಲಿ ಈ ಜಾಗಕ್ಕೆ ಹೋದಲ್ಲಿ ಆನೆಗಳು ಸ್ನಾನ ಮಾಡುವುದನ್ನು ನೋಡಬಹುದಾಗಿದೆ. ಪೆರಿಯಾರ್ ನದಿಯ ನೀರನ್ನು ಸುತ್ತಮುತ್ತಲಿನ ಸ್ಥಳೀಯರು ಉಪಯೋಗಿಸುವುದರಿಂದ ಈ ಆನೆಗಳಿಂದ ನೀರು ಕಲುಷಿತವಾಗದಿರಲು ಆನೆಗಳನ್ನು ಉದ್ಯಾನವನದಿಂದ 1 ಕಿ.ಮೀ ದೂರದಲ್ಲಿರುವ ನದಿ ದಡಕ್ಕೆ ಕರೆದೊಯ್ಯಲಾಗುತ್ತದೆ.

4. ಆನೆಗೆ ಸ್ನಾನ ಮಾಡಿಸಬಹುದು
Suresh Babunair
ಮಾವುತನಿಗೆ ಸಹಾಯ ಮಾಡುವ ಇಚ್ಚೆ ಇದ್ದ ಪ್ರವಾಸಿಗರು ಆನೆಗಳನ್ನು ತೆಂಗಿನ ಹೊಟ್ಟು ಬಳಸಿ ಆನೆಗಳನ್ನು ಉಜ್ಜುವಲ್ಲಿ ಸಹಾಯ ಮಾಡಬಹುದು ಅಥವಾ ಅವುಗಳೊಂದಿಗೆ ಆಟವಾಡಬಹುದಾಗಿದೆ. ಇಲ್ಲಿ ನೀವು ಟ್ರಕ್ಕಿಂಗ್ ಗೆ ಕೂಡಾ ಹೋಗಬಹುದು. ಪ್ರವಾಸಿಗರಿಗಾಗಿ ಕೊಡನಾಡಿನಿಂದ 3 ಕಿ.ಮೀ ದೂರದಲ್ಲಿರುವ ಕಾಪ್ರಿಕ್ಕಾಡ್ ನಲ್ಲಿ ಪರಿಸರ ಸ್ನೇಹಿ ಗ್ರಾಮವನ್ನು ಸರಕಾರ ಸ್ಥಾಪಿಸಿದೆ.

5. ಇಲ್ಲಿಗೆ ತಲುಪುವುದು ಹೇಗೆ ?
Jaseem Hamza
ಇದು ನಗರದಿಂದ ಕೇವಲ 45 ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ಹೋಗಲು ಬಾಡಿಗೆ ಕ್ಯಾಬ್ ಮೂಲಕ ಪ್ರಯಾಣಿಸಬಹುದಾಗಿದೆ. ಕೊಡನಾಡ್ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಕಿ.ಮೀ ದೂರದಲ್ಲಿದೆ. ಕಾಲಾಡಿಯಿಂದ ಹತ್ತಿರದ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ. ಕಾಲಾಡಿಯಿಂದ ಕೊಡನಾಡ್ ಗೆ ಕೆಲವು ರೈಲುಗಳೂ ಇವೆ.

6. ನೀವು ಉಳಿದು ಕೊಳ್ಳುವ ಸ್ಥಳ
കാക്കര
ಥನಿ ಇಲ್ಲಂ, ಕೊಡನಾಡ್ ನ ತೊಟ್ಟುವಾದಲ್ಲಿ ಪರಿಸರ ಸ್ನೇಹಿ ಹೋಮ್ ಸ್ಟೇ ಯಲ್ಲಿ ನೀವು ತಂಗಬಹುದು ಇದು ನಿಮ್ಮ ಪ್ರವಾಸವನ್ನು ಆಹ್ಲಾದಕರ ಮತ್ತು ಸ್ಮರಣೀಯಗೊಳಿಸುವುದು. ಮನೆಯಲ್ಲಿ ತಯಾರಿಸಿದ ಮತ್ತು ಆರೋಗ್ಯಕರ ಸಸ್ಯಾಹಾರಿ ಆಹಾರ, ಕರೆ ಮಾಡಿದ ಕೂಡಲೇ ವೈದ್ಯರ ಸೌಲಭ್ಯ, ಆಯುರ್ವೇದದ ಚಿಕಿತ್ಸೆ, ಯೋಗ, ಧ್ಯಾನ, ತಾಂತ್ರಿಕ ಆಚರಣೆಗಳು ಮತ್ತು ಅನೇಕ ವಿಷಯಗಳನ್ನು ಕಲಿಸುವ ತರಗತಿಗಳು ರಾಷ್ಟ್ರೀ ಯ ಮತ್ತು ಅಂತರಾಷ್ಟ್ರೀಯ ಕರೆಗಳನ್ನು ಮಾಡುವ ಸೌಕರ್ಯ, ಅಂತರ್ಜಾಲ ಸೌಲಭ್ಯ, ಮತ್ತು ಪ್ರಯಾಣಕ್ಕೆ ಸಹಾಯ ಇವು ಈ ಹೋಂ ಸ್ಟೇಯಲ್ಲಿ ಸಿಗುವ ಕೆಲವು ಆಕರ್ಷಣೀಯ ಸೌಲಭ್ಯಗಳು.