Search
  • Follow NativePlanet
Share
» »ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಮದುವೆಯಾದ ದಂಪತಿಗಳು ಹೊಸದರಲ್ಲಿ ತಿರುಗಾಡಲು ಬೇರೆ ಬೇರೆ ಸ್ಥಳಗಳಿಗೆ ಹೋಗುವುದನ್ನು ಇಂಗ್ಲಿಷ್‌ನಲ್ಲಿ ಹನಿಮೂನ್ ಎಂದು ಕರೆಯುತ್ತೇವೆ. ಹನಿಮೂನ್‌ಗೆ ಸಾಮಾನ್ಯವಾಗಿ ಬೇರೆ ದೇಶ ಅಥವಾ ಬೇರೆ ರಾಜ್ಯವನ್ನು ಆಯ್ಕೆ ಮಾಡುವವರೇ ಹೆಚ್ಚು. ಹೀಗಿರುವಾಗ ಹನಿಮೂನ್‌ ಹೋಗೋರಿಗಾಗಿಯೇ ಒಂದು ಸ್ಥಳ ನಮ್ಮ ಕರ್ನಾಟಕದಲ್ಲಿದೆ. ಅದುವೇ ಹಾಫ್ ಮೂನ್ ಬೀಚ್. ಇದು ಸುಂದರ ಪ್ರವಾಸಿ ತಾಣವೂ ಆಗಿದೆ. ವಿದೇಶಿಗರು ಹೆಚ್ಚಾಗಿ ಈ ಬೀಚ್‌ಗೆ ಬರುತ್ತಾರೆ. ಇಲ್ಲಿ ಉಳಿದುಕೊಳ್ಳಲು ರೆಸಾರ್ಟ್ ಸೌಲಭ್ಯವೂ ಇದೆ.

ಹಾಫ್ ಮೂನ್ ಬೀಚ್

ಹಾಫ್ ಮೂನ್ ಬೀಚ್

ಗೋಕರ್ಣ ಕರಾವಳಿ ತೀರದ ಮೂರನೇ ಬೀಚ್ ಹಾಫ್ ಮೂನ್ ಬೀಚ್ ಆಗಿದೆ. ಈ ಕಡಲತೀರವು ರಸ್ತೆಯ ಮೂಲಕ ಸಂಪರ್ಕ ಹೊಂದಿಲ್ಲ ಮತ್ತು ಆದ್ದರಿಂದ ಮೋಟಾರು ದೋಣಿಗಳ ಸಹಾಯಪಡೆಯಬೇಕು. ಹಾಫ್ ಮೂನ್ ಬೀಚ್ ಗೆ ಹೋಗುವುದಾದರೆ, ಓಂ ಕಡಲತೀರದ ದಕ್ಷಿಣದ ತುದಿಯಲ್ಲಿ ಒಂದು ಡಾಲ್ಫಿನ್ ಕೆಫೆಗೆ ಹೋಗಬೇಕು ಆ ಕೆಫೆಯು ಓಂ ಬೀಚ್‌ನಿಂದ ಸುತ್ತುವರಿದಿದ್ದು ಸುಂದರ ಸ್ಥಳವನ್ನು ಹೊಂದಿದೆ. ಕೆಫೆಯ ಹೊರಗೆ ಹಾಫ್ ಮೂನ್ ಬೀಚ್ ಕಡೆಗೆ ಹೋಗುವ ದಿಕ್ಕನ್ನು ಸೂಚಿಸಲಾಗಿದೆ.

ಅರ್ಧ ಚಂದ್ರನ ಹೋಲಿಕೆ

ಅರ್ಧ ಚಂದ್ರನ ಹೋಲಿಕೆ

PC:Abhijit Shylanath

ಅರ್ಧ ಚಂದ್ರನ ಹೋಲಿಕೆ ಇರುವುದರಿಂದಾಗಿ ಈ ಬೀಚ್ ಗೆ ಹಾಫ್ ಮೂನ್ ಬೀಚ್ ಎನ್ನುವ ಹೆಸರು ಬಂದಿದೆ. ಈ ಕಡಲತೀರದಲ್ಲಿ ಸಾಕಷ್ಟು ಬಂಡೆಗಳಿವೆ, ಮರಳಿನ ಪ್ಯಾಚ್‌ಗಳಿವೆ. ಇಲ್ಲಿನ ಮರಳು ಸ್ವಚ್ಛವಾಗಿ ಹೊಳೆಯುತ್ತದೆ.

ವಸತಿ ಸೌಕರ್ಯ

ವಸತಿ ಸೌಕರ್ಯ

ವಸತಿ ಸೌಕರ್ಯಈ ಕಡಲತೀರದಲ್ಲಿ ವಸತಿ ಸೌಕರ್ಯಗಳು ನವೆಂಬರ್‌ನಿಂದ ಫೆಬ್ರುವರಿವರೆಗೆ ಋತುಮಾನವಾಗಿದ್ದು, ಸ್ಥಳೀಯರು ವಸತಿ ಸೌಕರ್ಯಗಳಿಗೆ ಸ್ಥಳಾಂತರಿಸುತ್ತಾರೆ. ಈ ಗುಡಿಸಲುಗಳು ಅತ್ಯಂತ ಕಡಿಮೆ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ವಿದ್ಯುತ್ ಸೌಕರ್ಯವಿರುವುದಿಲ್ಲ.

ಟೇಸ್ಟೀ ಹಾಗೂ ದುಬಾರಿ ಆಹಾರ

ಟೇಸ್ಟೀ ಹಾಗೂ ದುಬಾರಿ ಆಹಾರ

ಈ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಷಾಕ್ ರೆಸ್ಟಾರೆಂಟ್‌ಗಳನ್ನು ಆರಂಭಿಸಲಾಗಿದೆ. ಈ ರೆಸ್ಟೋರೆಂಟ್‌ನಲ್ಲಿ ನೀಡಲಾಗುವ ಆಹಾರ ತುಂಬಾ ಟೇಸ್ಟಿಯಾಗಿರುತ್ತದೆ. ಹಾಗೆಯೇ ದುಬಾರಿ ಕೂಡಾ. ಏಕೆಂದರೆ ಎಲ್ಲಾ ಆಹಾರ ಉತ್ಪನ್ನಗಳನ್ನು ಮೋಟಾರು ಬೋಟ್‌ಗಳ ಮೂಲಕ ಕಡಲತೀರಕ್ಕೆ ತರಲಾಗುತ್ತದೆ. ಬಿಯರ್ ಕೂಡ ಈ ರೆಸ್ಟೋರೆಂಟ್‌ನಲ್ಲಿ ಮಾರಾಟಮಾಡುತ್ತಾರೆ. ಆದರೆ ನಿಜವಾದ ಬೆಲೆಗಿಂತಲು40% ರಷ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ.

ಈಜದಂತೆ ಎಚ್ಚರಿಕೆ

ಈಜದಂತೆ ಎಚ್ಚರಿಕೆ

ಹಾಫ್ ಮೂನ್ ಬೀಚ್ ತುಂಬಾ ಆಳವಾಗಿದ್ದು ಈಜಲು ನೀರಿಗೆ ಇಳಿಯದಂತೆ ಸಲಹೆ ನೀಡಲಾಗಿದೆ. ಸಾಕಷ್ಟುಮಂದಿ ಈಜಲು ಹೋಗಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಇನ್ನು ಮಳೆಗಾಲದಲ್ಲಿ ಬೋಟಿಂಗ್‌ನ್ನು ನೀಷೇಧಿಸಲಾಗಿದೆ.

ವಿಶ್ರಾಂತಿಗೆ ಸೂಕ್ತ

ವಿಶ್ರಾಂತಿಗೆ ಸೂಕ್ತ

ಈ ಹಾಫ್ ಮೂನ್ ಬೀಚ್ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರಗಳು ಕುಟುಂಬಗಳಿಗೆ ಉತ್ತಮ ತಾಣವಲ್ಲ ಆದರೆ ಪ್ರವಾಸಿಗರು ಹಾಗೂ ಪ್ರಯಾಣಿಗಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ತಾಣವಾಗಿದೆ. ಗೋಕರ್ಣ ಕಡಲ ತೀರಕ್ಕೆ ಹತ್ತಿರದಲ್ಲಿರುವ ಈ ಬೀಚ್ ಬಳಿ ಒಂದೆಡೆ ಅರಬಿಕಡಲಿನ ಸೌಂದರ್ಯ ಮತ್ತು ಇನ್ನೊಂದಕ್ಕೆ ಪಶ್ಚಿಮದ ಕರಾವಳಿ ತೀರದ ಸುಂದರವಾದ ನೋಟವನ್ನು ಕಾಣಬಹುದು. ಅಷ್ಟೊಂದು ಜನಜಂಗುಳಿಯಿಂದ ಕೂಡಿರದ ಈ ಬೀಚ್ ಏಕಾಂತವಾಗಿ ಕಾಲಕಳೆಯಲು ಉತ್ತಮವಾಗಿದೆ. ವರ್ಷದ ಎಲ್ಲಾ ಕಾಲದಲ್ಲಿಯು ಈ ಬೀಚ್‌ಗೆ ಭೇಟಿ ನೀಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+