• Follow NativePlanet
Share
» »ಚಿಲ್ಕೂರ್ ಬಾಲಾಜಿಯ ವೀಸಾ ಎಫೆಕ್ಟ್...!

ಚಿಲ್ಕೂರ್ ಬಾಲಾಜಿಯ ವೀಸಾ ಎಫೆಕ್ಟ್...!

Posted By:

ಚಿಲುಕೂರು ಬಾಲಾಜಿ ದೇವಾಲಯ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದಲ್ಲಿನ ಚಿಲುಕೂರು ಗ್ರಾಮದಲ್ಲಿದೆ. ಬಾಲಾಜಿ ವೆಂಕಟೇಶ್ವರನ ಆನೇಕ ನಾಮಗಳಲ್ಲಿ ಒಂದಾಗಿದೆ.

ದೇವಾಲಯ ಪ್ರಾಮುಖ್ಯತೆ

ಈ ದೇವಾಲಯವು ಅಷ್ಟು ವಿಜೃಂಬಣೆ ಇಲ್ಲದೇ ಸರಳವಾಗಿರುತ್ತದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ದರ್ಶನ ಮಾಡಿಕೊಳ್ಳುತ್ತಾರೆ. ಅನೇಕ ಮಂದಿ ಭಕ್ತರು ಪ್ರದಕ್ಷಿಣೆಗಳು ಮಾಡುತ್ತಾರೆ. ಇಲ್ಲಿ ಬಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಅಂತವರಿಗೆ ಬೇಗ ವೀಸಾ ದೊರೆಯುತ್ತದೆ ಎಂದು ಅಲ್ಲಿನ ಭಕ್ತರ ನಂಬಿಕೆಯಾಗಿದೆ. ಹಾಗಾಗಿಯೇ ಇಲ್ಲಿನ ಬಾಲಾಜಿಯನ್ನು ವಿಸಾ ಬಾಲಾಜಿ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಪಾರ್ಥಿಸುವಾಗ ಕಾಣಿಕೆಯನ್ನು ಅರ್ಪಿಸುತ್ತಾರೆ. ಆದರೆ ವಿಚಿತ್ರ ಏನೆಂದರೆ ಹೈದರಾಬಾದ್‍ನ ಹೊರವಲಯದಲ್ಲಿರುವ ಚಿಲ್ಕುರ್‍ನಲ್ಲಿ ಬಾಲಾಜಿ ದೇವಾಲಯವಿದೆ. ಅಲ್ಲಿ ವೀಸಾವನ್ನು ನೀಡುವ ಅಧಿಕಾರವನ್ನು ಹೊಂದಿದೆ. ಪ್ರಸ್ತುತ ಲೇಖನದಲ್ಲಿ ವೀಸಾ ನೀಡುವ ಅಧಿಕಾರ ಹೊಂದಿರುವ ದೇವಾಲಯದ ಕುರಿತು ತಿಳಿಯೋಣ.

1.ಚಿಲ್ಕೂರು ಬಾಲಾಜಿ ಭಾರತೀಯರಿಗೆ ವರವಾಗಿದೆ ಎಂದೇ ಹೇಳಬಹುದು. ತ್ವರಿತವಾಗಿ ಚಿಲಕೂರಿ

1.ಚಿಲ್ಕೂರು ಬಾಲಾಜಿ ಭಾರತೀಯರಿಗೆ ವರವಾಗಿದೆ ಎಂದೇ ಹೇಳಬಹುದು. ತ್ವರಿತವಾಗಿ ಚಿಲಕೂರಿ

ಬಾಲಾಜಿ ಬಿಸಿನೆಸ್ ಬಿದ್ದು ಹೋಗುತ್ತದೆಯೇ? ವಿಸಾ ವೆಂಕಟೇಶ್ವರ ಎಂದು ಹೆಸರುವಾಸಿಯಾಗಿರುವ ಈ ದೇವರಿಗೆ ವ್ಯಾಪಾರವೆಲ್ಲಾ ಟ್ರಂಪ್‍ನಿಂದಾಗಿ ಬಿದ್ದು ಹೋಗುತ್ತದೆಯೇ? ಇನ್ನು ಮೇಲೆ ದೇವರಿಗೆ ನೋಡುವುದಕ್ಕೆ ಬರುವ ಭಕ್ತರು ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತಾ ಇರುತ್ತದೆಯೇ? ಎಂದರೆ ಹೌದು ಎಂದೇ ಹೇಳಬಹುದು.

2.ಕಾರಣ

2.ಕಾರಣ

ಅಮೆರಿಕಾದಲ್ಲಿ ಹೆಚ್-1ಬಿ ಮೇಲೆ ನಡೆಯುತ್ತಿರುವ ದಾಳಿಗಳು ಸಾಮಾನ್ಯವಾದುದು ಅಲ್ಲ. ಇಷ್ಟು ವರ್ಷಗಳಿಂದ ನಾವೆಲ್ಲಾ ಟ್ರಂಪ್‍ಯಿಂದಲೇ ಈ ವಿವಾದ ನಡೆಯುತ್ತಿದೆ ಎಂದು ಭಾವಿಸಿದ್ದೆವು. ಆದರೆ ಅಲ್ಲವಂತೆ. ರಿಪಬ್ಲಿಕ್ಸ್, ಡೆಮೊಕ್ರೆಟಿಕ್ಸ್‍ಗಳು ಪ್ರತಿಯೊಬ್ಬ ಭಾರತೀಯರು ಉದ್ಯೋಗಗಳನ್ನು ಪಡೆಯುತ್ತಿದ್ದಾರಂತೆ. ಅಸಲಿಗೆ ಚಿಲ್ಕೂರು ಬಾಲಾಜಿಯ ಬಗ್ಗೆ ನಿಮಗೆಷ್ಟು ಗೊತ್ತ? ಹಾಗಾದರೆ ಲೇಖನದ ಮೂಲಕ ತಿಳಿದುಕೊಳ್ಳಿ

3.ಎಲ್ಲಿದೆ? '

3.ಎಲ್ಲಿದೆ? '

"ವೀಸಾ ಬಾಲಾಜಿ ದೇವಾಲಯ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಿಲ್ಕೂರಿ ಬಾಲಾಜಿ ದೇವಾಲಯವು ಹೈದ್ರಾಬಾದ್‍ನ ಉಸ್ಮಾನ್ ಸಾಗರ್ ದಂಡೆಯಲ್ಲಿರುವ ಬಾಲಾಜಿಯ ಪುರಾತನ ದೇವಾಲಯ. ಈ ದೇವಾಲಯವು ಹಳೆಯ ದೇವಾಲಯಗಳಲ್ಲಿ ಇದು ಕೂಡ ಒಂದು. ಈ ದೇವಾಲಯದ ನಿರ್ಮಾಣವನ್ನು ಮಾಡಿದವರು ಮುದ್ದಣ್ಣ ಮತ್ತು ಅಕ್ಕಣ್ಣ. ಎಲ್ಲ ದೇವಾಲಯಗಳಂತೆ ಈ ದೇವಾಲಯದಲ್ಲಿ ಹುಂಡಿ ಇಲ್ಲ. ಭಕ್ತರಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ.

4.ಚಿಲ್ಕುರ್ ಬಾಲಾಜಿ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾ

4.ಚಿಲ್ಕುರ್ ಬಾಲಾಜಿ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾ

ಇರುತ್ತಾರೆ. ಈ ದೇವಾಲಯಕ್ಕೂ ಕೂಡ ಒಂದು ಸುಂದರವಾದ ಕಥೆಯಿದೆ. ಅದೆನೆಂದರೆ...ಒಮ್ಮೆ ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತನು ಪ್ರತಿ ವರ್ಷವೂ ತಿರುಪತಿಗೆ ಹೋಗಿ ಸ್ವಾಮಿಯ ದರ್ಶನವನ್ನು ಮಾಡಿಕೊಳ್ಳುತ್ತಿದ್ದ. ವರ್ಷಗಳು ಕಳೆದಂತೆ ಆತನಿಗೆ ಕೆಲವು ರೋಗಗಳಿಂದ ನರಳುತ್ತಿದ್ದನು. ಹೀಗಾಗಿ ತಿರುಪತಿಗೆ ತಿಮ್ಮಪ್ಪನ ದರ್ಶನವನ್ನು ಪಡೆಯದಾದ.

5.ತನ್ನ ಭಕ್ತನು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವುದುನ್ನು ಕಂಡ ಶ್ರೀ

5.ತನ್ನ ಭಕ್ತನು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವುದುನ್ನು ಕಂಡ ಶ್ರೀ

ವೆಂಕಟೇಶ್ವರ ಸ್ವಾಮಿಯು ಭಕ್ತನ ಕನಸ್ಸಿನಲ್ಲಿ ಹೋಗಿ ನಿನಗೆ ನಾನು ಇದ್ದೇನೆ ಎಂದು ಅಭಯ ಹಸ್ತವನ್ನು ನೀಡಿದನು. ಒಮ್ಮೆ ಸ್ವಾಮಿಯು ಭಕ್ತನ ಕನಸ್ಸಿನಲ್ಲಿ ಬಂದು ಒಂದು ಪ್ರದೇಶದ ಕುರಿತು ತಿಳಿಸಿದನು.

6.ಭಕ್ತನು ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಶ್ರೀ ದೇವಿ ಹಾಗೂ ಭೂ ದೇವಿಯ ಸಮೇತ

6.ಭಕ್ತನು ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಶ್ರೀ ದೇವಿ ಹಾಗೂ ಭೂ ದೇವಿಯ ಸಮೇತ

ಸ್ವಾಮಿ ವೆಂಕಟೇಶ್ವರ ಸ್ವಾಮಿ ಕೂಡ ದರ್ಶನ ನೀಡುತ್ತಾನಂತೆ. ನಂತರ ಭಕ್ತನು ಶಾಸ್ತ್ರೋತ್ರವಾಗಿ ವಿಗ್ರಹವನ್ನು ಪ್ರತಿಷ್ಟಾಪಿಸಿ ದೇವಾಲಯ ನಿರ್ಮಾಣ ಮಾಡಿದನಂತೆ.

7.ವೆಂಕಟೇಶ್ವರ ಸ್ವಾಮಿಯು ಕೋರುವ ಕೋರಿಕೆಗಳನ್ನು ತಿರಿಸುವ ಕಲಿಯುಗ ವೈಕುಂಠ ಪುರುಷ

7.ವೆಂಕಟೇಶ್ವರ ಸ್ವಾಮಿಯು ಕೋರುವ ಕೋರಿಕೆಗಳನ್ನು ತಿರಿಸುವ ಕಲಿಯುಗ ವೈಕುಂಠ ಪುರುಷ

ಎಂದು ಪ್ರಸಿದ್ಧಿ ಹೊಂದಿದ್ದಾನೆ. ಚಿಲ್ಕೂರಿನಲ್ಲಿರುವ ಬಾಲಾಜಿ ದೇವಾಲಯದಲ್ಲಿ ಮೊದಲ ಬಾರಿಗೆ ದರ್ಶನ ಮಾಡಲು ಬರುವ ಭಕ್ತರು 11 ಪ್ರದಕ್ಷಿಣೆಯನ್ನು ಮಾಡಿ ಕೋರಿಕೆಗಳನ್ನು ಕೋರಬೇಕಂತೆ. ಹಾಗೇಯೇ ಕೋರಿಕೆಗಳು ನೆರವೇರಿದ ನಂತರ 108 ಪ್ರದಕ್ಷಿಣೆಯನ್ನು ಮಾಡಬೇಕಂತೆ.

8.ಚಿಲ್ಕೂರಿನ ಬಾಲಾಜಿ ದೇವಾಲಯವನ್ನು ವೀಸಾ ಗಾಡ್ ಎಂದು ಸಹ ಕರೆಯುತ್ತಾರೆ. ಕೆಲವು

8.ಚಿಲ್ಕೂರಿನ ಬಾಲಾಜಿ ದೇವಾಲಯವನ್ನು ವೀಸಾ ಗಾಡ್ ಎಂದು ಸಹ ಕರೆಯುತ್ತಾರೆ. ಕೆಲವು

ವರ್ಷಗಳ ಹಿಂದೆ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ವಿಧ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ವೀಸಾ ಇಲ್ಲದೇ ತೊಂದರೆಯನ್ನು ಅನುಭವಿಸುತ್ತಿದ್ದರು.

9.ಚಿಲ್ಕೂರಿನ ಬಾಲಾಜಿಯ ದೇವಾಲಯದ ಬಗ್ಗೆ ತಿಳಿದುಕೊಂಡ ಕೆಲವು ಭಕ್ತರು ಈ ದೇವಾಲಯಕ್ಕೆ

9.ಚಿಲ್ಕೂರಿನ ಬಾಲಾಜಿಯ ದೇವಾಲಯದ ಬಗ್ಗೆ ತಿಳಿದುಕೊಂಡ ಕೆಲವು ಭಕ್ತರು ಈ ದೇವಾಲಯಕ್ಕೆ

ಬಂದು ವೀಸಾಗಾಗಿ ಪಾರ್ಥನೆ ಮಾಡತೊಡಗಿದರು. ಅವರು ಕೋರುವ ಕೋರಿಕೆಗಳು ನೇರವೇರುತ್ತಿದ್ದರಿಂದ ಬಾಲಾಜಿಯನ್ನು ಚಿಲ್ಕೂರಿನ ಬಾಲಾಜಿ ಎಂದು ಹೆಸರು ಬಂದಿತು.

10.ಈ ದೇವಾಲಯದಲ್ಲಿ ಯಾವುದೇ ಜಾತಿ, ಭೇದ, ಭಾವ, ಮೇಲು, ಕೀಳು ಎಂಬ ಭೇದವಿಲ್ಲದೇ

10.ಈ ದೇವಾಲಯದಲ್ಲಿ ಯಾವುದೇ ಜಾತಿ, ಭೇದ, ಭಾವ, ಮೇಲು, ಕೀಳು ಎಂಬ ಭೇದವಿಲ್ಲದೇ

ಭಕ್ತರನ್ನು ಕಾಣಲಾಗುತ್ತದೆ. ಪ್ರಧಾನ ಮಂತ್ರಿಯಾದರೂ ಕೂಡ ಈ ದೇವಾಲಯದಲ್ಲಿ ಮಾಮೂಲಿ ದರ್ಶನ ಮಾಡಿಕೊಳ್ಳಬೇಕಷ್ಟೆ.

11.ಈ ದೇವಾಲಯದ ಪ್ರಾಂಗಣದಲ್ಲಿ 350 ವರ್ಷಗಳ ಚರಿತ್ರೆ ಇರುವ ಆಶ್ವಥ ವೃಕ್ಷವಿದೆ. ಈ

11.ಈ ದೇವಾಲಯದ ಪ್ರಾಂಗಣದಲ್ಲಿ 350 ವರ್ಷಗಳ ಚರಿತ್ರೆ ಇರುವ ಆಶ್ವಥ ವೃಕ್ಷವಿದೆ. ಈ

ಪವಿತ್ರವಾದ ಮರವನ್ನು ಮುಟ್ಟಿ ನಮಸ್ಕರಿಸಿದರೆ ಒಳ್ಳೆದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಬಾಲಾಜಿ ದೇವಾಲಯದಲ್ಲಿ ದರ್ಶನ, ಅಭಿಷೇಕ್ಕಾಗಿ ಪ್ರತ್ಯೇಕವಾದ ಟಿಕೆಟ್‍ಗಳು ಇರುವುದಿಲ್ಲ. ಬದಲಾಗಿ ಕೋರಿಕೆಯನ್ನು ಕೋರಿ 11 ಪ್ರದಕ್ಷಿಣೆ ಹಾಕಿದರೆ ಸಾಕು.

12.ಹೈದ್ರಾಬಾದ್ ನಿಂದಲೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಈ

12.ಹೈದ್ರಾಬಾದ್ ನಿಂದಲೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಈ

ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಒಳಭಾಗದಲ್ಲಿ ಒಂದು ಪತ್ರಿಕೆಯನ್ನು ನಡೆಸುತ್ತಿದೆ. ಈ ಪತ್ರಿಕೆಯ ಆದಾಯದ ಮುಖಾಂತರವೇ ದೇವಾಲಯದ ನಿರ್ವಹಣ ನಡೆಯುತ್ತಿದೆ.

13.ಅಮೇರಿಕಾ, ಆಸ್ಟೇಲಿಯದಂತಹ ದೇಶಗಳಿಗೆ ಐ.ಟಿ ರಂಗಗಳಿಗೆ ಉದ್ಯೋಗವಕಾಶವು ಹೆಚ್ಚಾಯಿತು.

13.ಅಮೇರಿಕಾ, ಆಸ್ಟೇಲಿಯದಂತಹ ದೇಶಗಳಿಗೆ ಐ.ಟಿ ರಂಗಗಳಿಗೆ ಉದ್ಯೋಗವಕಾಶವು ಹೆಚ್ಚಾಯಿತು.

ಯುವಕರೆಲ್ಲಾರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ತಿ ಮಾಡಿ ವಿದೇಶಕ್ಕಾಗಿ ವೀಸಾಗೆ ತೊಂದರೆ ಅನುಭವಿಸುವಾಗ ಈ ದೇವಾಲಯಕ್ಕೆ ಬಂದು ತಮ್ಮ ವೀಸಾಗಳಿಗೆ ಅಪ್ಲೀಕೇಶನ್ ಹಾಕತೊಡಗಿದರು. ಹಾಗಾಗಿಯೇ ಬಾಲಾಜಿಗೆ ವೀಸಾ ಗಾಡ್ ಎಂದು ಭಾರತ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆಯಿತು.

14.ಚಿಲ್ಕೂರಿನ ಬಾಲಾಜಿ ದೇವಾಲಯವು ಮುಂಜಾನೆ 5 ಗಂಟೆಯಿಂದ ರಾತ್ರಿ 7:45 ಗಂಟೆಯ ವರೆಗೆ

14.ಚಿಲ್ಕೂರಿನ ಬಾಲಾಜಿ ದೇವಾಲಯವು ಮುಂಜಾನೆ 5 ಗಂಟೆಯಿಂದ ರಾತ್ರಿ 7:45 ಗಂಟೆಯ ವರೆಗೆ

ಭಕ್ತರಿಗೆ ಬಾಲಾಜಿ ಸ್ವಾಮಿಯು ದರ್ಶನವನ್ನು ನೀಡುತ್ತಾನೆ. ಪ್ರತ್ಯೇಕವಾದ ದರ್ಶನ ಟಿಕಿಟ್, ಪೂಜೆಗಳು ಇರುವುದಿಲ್ಲ. ಯಾರಾದರೂ ಸರಿ ಕ್ಯೂ ನಲ್ಲಿಯೇ ಹೋಗಬೇಕು.

15.ಚಿಲ್ಕೂರಿನ ಬಾಲಾಜಿ ದೇವಾಲಯವು ಬೆಂಗಳೂರಿನಿಂದ ಸುಮಾರು 570 ಕಿ,ಮೀ ದೂರದಲ್ಲಿದೆ.

15.ಚಿಲ್ಕೂರಿನ ಬಾಲಾಜಿ ದೇವಾಲಯವು ಬೆಂಗಳೂರಿನಿಂದ ಸುಮಾರು 570 ಕಿ,ಮೀ ದೂರದಲ್ಲಿದೆ.

ಹೈದ್ರಾಬಾದ್‍ನಿಂದ ಚಿಲ್ಕೂರಿಗೆ ಸುಮಾರು 30 ಕಿ,ಮೀ ದೂರದಲ್ಲಿದೆ. ಇಲ್ಲಿಂದ ಚಿಲ್ಕೂರಿಗೆ ಹಲವಾರು ಬಸ್ ಸೌಕರ್ಯ ವ್ಯವಸ್ಥೆಗಳಿವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ