Search
  • Follow NativePlanet
Share
» »ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಹಂಪಿಯ ಹೆಸರು ಕೇಳಿದರೆ ಸಾಕು ವಿಜಯನಗರದ ಸೌಂದರ್ಯಗಳು, ಅವುಗಳ ಪ್ರಖ್ಯಾತ ಶಿಥಿಲಗಳು ಗುರುತಿಗೆ ಬರುತ್ತದೆ. ಹಂಪಿ ಪಟ್ಟಣ ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿ. ಈ ಪಟ್ಟಣದಲ್ಲಿ ಹೊಯ್ಸಳರ ಶಿಲ್ಪ ಸಂಪತ್ತನ್ನು ಕಾಣಬಹುದು. ಇಲ್ಲಿನ ಕಲ್ಲಿನ ಶಿಲ್ಪಗಳ

ಹಂಪಿಯ ಹೆಸರು ಕೇಳಿದರೆ ಸಾಕು ವಿಜಯನಗರದ ಸೌಂದರ್ಯಗಳು, ಅವುಗಳ ಪ್ರಖ್ಯಾತ ಶಿಥಿಲಗಳು ಗುರುತಿಗೆ ಬರುತ್ತದೆ. ಹಂಪಿ ಪಟ್ಟಣ ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿ. ಈ ಪಟ್ಟಣದಲ್ಲಿ ಹೊಯ್ಸಳರ ಶಿಲ್ಪ ಸಂಪತ್ತನ್ನು ಕಾಣಬಹುದು. ಇಲ್ಲಿನ ಕಲ್ಲಿನ ಶಿಲ್ಪಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಹಂಪಿ ಒಂದು ಪ್ರಾಚೀನವಾದ ಪಟ್ಟಣವೇ ಆಲ್ಲ, ಇದರ ಬಗ್ಗೆ ರಾಮಾಯಣದಲ್ಲಿಯೂ ಕೂಡ ಹೇಳಲಾಗಿದೆ. ಇದನ್ನು ಆ ಕಾಲದಲ್ಲಿ ಕಿಷ್ಕಿಂಧ ಎಂದು ಕರೆಯುತ್ತಿದ್ದರಂತೆ.

13 ರಿಂದ 16ನೇ ಶತಮಾನದವರೆವಿಗೂ ವಿಜಯನಗರ ರಾಜರ ಆಳ್ವಿಕೆಯ ಸಮಯದಲ್ಲಿ ಶ್ರೀಮಂತವಾಗಿ ಬೆಳೆಯಿತು. ಈ ಸುಂದರವಾದ ಹಂಪಿ ಕರ್ನಾಟಕಕ್ಕೆ ಉತ್ತರ ಭಾಗಕ್ಕೆ ಬೆಂಗಳೂರಿನಿಂದ ಸುಮಾರು 350 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಹಂಪಿಗೆ ಅನೇಕ ಬಸ್ಸುಗಳು ಲಭ್ಯವಿವೆ. ಇದು ವಿಶ್ವ ಪರಂಪರೆ ಪ್ರದೇಶವಾಗಿ ಅಂತರ್‍ಜಾತಿ ಸಂಸ್ಥೆಯಾದ ಯುನೆಸ್ಕೋ ಗುರುತಿಸಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡಲು ತೆರಳುತ್ತಾರೆ. ಈ ದೇವಾಲಯದಲ್ಲಿಯು ವಿಚಿತ್ರವಾದ ಹಾಗು ನಂಬಲು ಅಸಾಧ್ಯವಾದ ಘಟನೆ ನಡೆಯುತ್ತದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಹಂಪಿಯ ಅಂದವನ್ನು ಕಾಣಬೇಕಾದರೆ ಸ್ಥಳೀಯವಾಗಿ ಒಂದು ಸೈಕಲ್‍ಅನ್ನು ಬಾಡಿಗೆಗೆ ತೆಗೆದುಕೊಂಡು ಅದರ ಮೇಲೆ ಸಾವರಿ ಮಾಡುತ್ತಾ ನೋಡಿದರೆ ಮಾತ್ರ ಹಂಪಿಯನ್ನು ಪೂರ್ತಿಯಾಗಿ ಆನಂದಿಸಬಹುದು. ಅಸಲಿಗೆ ಪ್ರವಾಸಿಗರು ಹಂಪಿಯನ್ನು ಏಕೆ ಇಷ್ಟ ಪಡುತ್ತಾರೆ?. ಹಂಪಿ ಪಟ್ಟಣ ಅದರ ಶಿಥಿಲಗಳಿಗೂ ಮತ್ತು ಚರಿತ್ರೆಗೂ ಪ್ರಾಧಾನ್ಯತೆ ಹೊಂದಿದೆ. ಇಲ್ಲಿ ಅನೇಕ ದೇವಾಲಯಗಳು ಕೂಡ ಇವೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವೀರೂಪಾಕ್ಷ ದೇವಾಲಯ, ವಿಠಲ ದೇವಾಲಯ, ಅಂಜನೆಯಾದ್ರಿ ಮೊದಲಾದ ದೇವಾಲಯಗಳು ಇಲ್ಲಿವೆ. ಕರ್ನಾಟಕದಲ್ಲಿನ ಪ್ರಧಾನವಾದ ನದಿಗಳಲ್ಲಿ ಒಂದಾದ ತುಂಗಭದ್ರ ಈ ಪಟ್ಟಣದ ಸಮೀಪದಲ್ಲಿ ಪ್ರವಹಿಸುತ್ತದೆ. ಹಂಪಿ ಪಟ್ಟಣದಲ್ಲಿನ ದೇವಾಲಯಗಳ ನಿರ್ಮಾಣ ವಿಜಯನಗರ ರಾಜರು ಅಲ್ಲಿನ ಸಮೀಪದ ಬೆಟ್ಟದ ಕಲ್ಲಿನ ಮೇಲೆ ಕೆತ್ತನೆ ಮಾಡಿ ನಿರ್ಮಾಣ ಮಾಡಿದ್ದಾರೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಇಲ್ಲಿನ ದೇವಾಲಯಗಳು ಸಹಜವಾದ ಸೌಂದರ್ಯವನ್ನೇ ಅಲ್ಲದೇ ಅನೇಕ ನದಿಗಳು ಕೂಡ ಇಲ್ಲಿವೆ. ಅದ್ಭುತವಾದ ಭವನಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಪಟ್ಟಣ ನಿರ್ಮಾಣದಲ್ಲಿ ವಿಜಯನಗರ ರಾಜರ ಎಷ್ಟೊ ಪ್ರಣಾಳಿಕೆಗಳನ್ನು ಕಾಣಬಹುದು. 13 ರಿಂದ 15ನೇ ಶತಮಾನದಲ್ಲಿ ಈ ಪಟ್ಟಣದಲ್ಲಿ ಆಧುನಿಕ ಪ್ರಣಾಳಿಕೆ ವಿಧಾನವನ್ನು ಆಚಾರಿಸುತ್ತಿದ್ದರಂತೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ತುಂಗಭದ್ರ ನದಿಯ ಬಳಿಯಿರುವ ಒಂದು ಭಾಗದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಪ್ರಾಕೃತಿಕ ಸೌಂದರ್ಯಗಳನ್ನು ಕೂಡ ಪ್ರವಾಸಿಗರು ಅಸ್ವಾಧಿಸಬಹುದು. ಅದೇ ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಸಾಕ್ಷಿ. ಅಲ್ಲಿನ ಎತ್ತರವಾದ ಬೆಟ್ಟದ ಮೇಲೆ ಅಡಗಿಕೊಂಡಿರುವ ಶಿಲ್ಪಕಲಾ ಸೌಂದರ್ಯವನ್ನು ಬರೇ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಅಂಥಹ ಸ್ಮಾರಕಗಳನ್ನು ಹಾಗು ಶಿಲ್ಪಸೌಂದರ್ಯದ ವೈಭವವನ್ನು ತಿಳಿದುಕೊಳ್ಳಬೇಕಾದರೆ ಒಮ್ಮೆ ಹಂಪಿಗೆ ಭೇಟಿ ನೀಡಲೇಬೇಕು. ಇಂದಿನ ಕರ್ನಾಟಕ ರಾಜ್ಯದಲ್ಲಿನ ಹಂಪಿ ಗ್ರಾಮವು ಅಂದಿನ ವಿಜಯನಗರ ರಾಜರ ಕಾಲದಲ್ಲಿ ಎಷ್ಟೊ ಪ್ರಮುಖ್ಯತೆಯನ್ನು ಹೊಂದಿತ್ತು.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಈ ಪಟ್ಟಣವು ತುಂಗಭದ್ರ ನದಿ ತೀರದಲ್ಲಿ ನಿರ್ಮಾಣ ಮಾಡಿದ್ದಾರೆ, ತುಂಗಭದ್ರ ನದಿಯನ್ನು ಒಂದು ಕಾಲದಲ್ಲಿ ಪಂಪಾ ನದಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಆ ಪಂಪಾನದಿಯನ್ನೇ ಕನ್ನಡ ಭಾಷೆಯಲ್ಲಿ ಹಂಪಿ ಎಂದು ಕರೆಯುತ್ತಿದ್ದರು.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಈ ಪಟ್ಟಣದಲ್ಲಿ ಅಂದಿನ ವಿಜಯನಗರದ ರಾಜರು ವೀರೂಪಾಕ್ಷ ಸ್ವಾಮಿ ದೇವಾಲಯವನ್ನು ನಿರ್ಮಾಣ ಮಾಡಿದರು. ವೀರೂಪಾಕ್ಷ ದೇವಾಲಯವು ತನ್ನದೇ ಆದ ವೈಭವವನ್ನು ಹೊಂದಿ ಕಂಗೊಳಿಸುತ್ತಿದೆ. ಇಲ್ಲಿ ತ್ರಿನೇತ್ರ ಅಥವಾ ಮಹಾ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಕ್ಷೇತ್ರವು ತುಂಗಭದ್ರ ನದಿಯ ದಕ್ಷಿಣ ತೀರದಲ್ಲಿದೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಪಾರ್ವತಿ ದೇವಿ ಈ ಕ್ಷೇತ್ರದಲ್ಲಿ ಪಂಪಾದೇವಿಯಾಗಿ ಜನಿಸಿದ್ದಾಳೆ. ಶಿವನನ್ನು ತನ್ನ ಪತಿಯಾಗಿ ಮಾಡಿಕೊಳ್ಳುವ ಸಲುವಾಗಿ ಆಕೆಯು ಈ ಕ್ಷೇತ್ರದಲ್ಲಿ ಎಷ್ಟೊ ಕಾಲ ತಪಸ್ಸು ಮಾಡಿದಳು. ಆಕೆಯ ತಪಸ್ಸಿಗೆ ಮೆಚ್ಚಿದ ಪರಮಶಿವನು ಪ್ರತ್ಯಕ್ಷವಾಗಿ ಆಕೆಯನ್ನು ವಿವಾಹ ಮಾಡಿಕೊಂಡನು ಎಂಬ ಕಥೆ ಪ್ರಚಾರದಲ್ಲಿದೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಪಾರ್ವತಿ ಪರಮೇಶ್ವರರು ಅಂದು ವಿವಾಹ ಮಾಡಿಕೊಂಡ ಪ್ರದೇಶದಲ್ಲಿಯೇ ಪ್ರಸ್ತುತ ವೀರೂಪಾಕ್ಷಸ್ವಾಮಿ ಪ್ರಧಾನ ದೇವಾಲಯವಿದೆ. ದೇಶ ವ್ಯಾಪಕವಾಗಿರುವ ಅನೇಕ ಮಂದಿ ಶಿವಭಕ್ತರು ವೀರೂಪಾಕ್ಷ ದೇವಾಲಯವನ್ನು ಕಾಣಲು ಶಿವಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಆ ಅದ್ಭುತವೆನೆಂದರೆ ವೀರೂಪಾಕ್ಷ ದೇವಾಲಯದ ಹಿಂದೆ ಇರುವ ಸಾಲು ಮಂಟಪ. ಅದರ ಗೋಡೆಯ ಮೇಲೆ ರಾಜಗೋಪುರದ ನೆರಳು ತಲೆಕೆಳಗಾಗಿ ಬೀಳುತ್ತದೆ. ರಾಜಗೋಪುರದಿಂದ 3ವರೆ ಅಡಿ ದೂರದಲ್ಲಿ ಈ ಸಾಲುಮಂಟಪದ ಗೋಡೆ ಇದೆ. 3.6 ಅಡಿ ಎತ್ತರದಲ್ಲಿರುವ ಚಿಕ್ಕದಾದ ರಂಧ್ರದ ಮೂಲಕ ಪ್ರಧಾನ ದೇವಾಲಯದ ಗೋಪುರದ ನೆರಳು ಗೋಡೆಯ ಮೇಲೆ ತಲೆ ಕೆಳಗಾಗಿ ಬೀಳುತ್ತದೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಆ ರಂಧ್ರದಿಂದ ಸೂರ್ಯಕಿರಣಗಳು ದೇವಾಲಯದ ಒಳಭಾಗದಲ್ಲಿ ಪಶ್ಚಿಮ ಭಾಗದ ಮೇಲೆ ಬಿದ್ದು, ದೇವಾಲಯದ ಪೂರ್ವ ಅಭಿಮುಖವಾಗಿರುವ ಪ್ರಧಾನವಾದ ರಾಜಗೋಪುರದ ಮೇಲೆ ನೆರಳು ತಲೆಕೆಳಗಾಗಿ ಬೀಳುತ್ತದೆ. ಆ ನೆರಳು ವರ್ಷದಾದ್ಯಂತ ಕಾಣಿಸುತ್ತದೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಈ ರಾಜಗೋಪುರವು ಸಾಲುಮಂಟಪ ಮತ್ತು ರಾಜಗೋಪುರದ ಮಧ್ಯಭಾಗದಲ್ಲಿ ಇದೆ. ಸಾಲು ಮಂಟಪ ನೆಲದ ಮೇಲೆ ಬೀಳುವ ಗೋಪುರದ ಎತ್ತರ ಸುಮಾರು 15 ಅಡಿ ಇರುತ್ತದೆ. ನಿಜವಾಗಿಯೂ ಗೋಪುರದ ಎತ್ತರ ಕೂಡ 15 ಅಡಿ ಎತ್ತರವಾಗಿರುತ್ತದೆ. ಇನ್ನೊಂದು ಅದ್ಭುತ ಕೂಡ ಈ ಕ್ಷೇತ್ರದಲ್ಲಿ ಬೆಳಕಿಗೆ ಬಂದಿತು.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಅದೆನೆಂದರೆ ಈ ಕ್ಷೇತ್ರದಲ್ಲಿರುವ ಪ್ರಧಾನ ದೈವವಾದ ವೀರೂಪಾಕ್ಷ ಸ್ವಾಮಿ ನೆಲೆಸಿರುವ ಗರ್ಭಗುಡಿಯ ನೆರಳು ವೀರೂಪಾಕ್ಷ ದೇವಾಲಯದ ಹಿಂದಿರುವ ಸಾಲುಮಂಟಪದ ಮೇಲೆ ತಲೆಕೆಳಗಾಗಿ ಬೀಳುತ್ತದೆ. ಗರ್ಭಗುಡಿಯ ನೆರಳು ಗರ್ಭಗುಡಿಯ ಮೇಲೆ ಒಂದು ರಂಧ್ರದ ಮೂಲಕ ಸಾಲುಮಂಪಟಗಳಿರುವ ನೆಲದ ಮೇಲೆ ಬೀಳುವುದು.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವೀರೂಪಾಕ್ಷ ದೇವಾಲಯದ ಆ ನೆರಳು ಸೂರ್ಯೋದಯದಿಂದ ಪ್ರಾರಂಭವಾಗಿ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಕೆಲವು ಬಾರಿ ಸಂಜೆಯ ಸಮಯದಲ್ಲಿಯೂ ಈ ನೆರಳು ಕಾಣಿಸುತ್ತದೆ ಎಂತೆ. ವೀರೂಪಾಕ್ಷ ದೇವಾಲಯದ ಪ್ರಾಂಗಣದ ಒಳ ಭಾಗದಲ್ಲಿ ಅನೇಕ ಚಿಕ್ಕ ಚಿಕ್ಕ ದೇವಾಲಯಗಳು ಮತ್ತು ಮಂಟಪಗಳು ನಿರ್ಮಾಣ ಮಾಡಲಾಗಿದೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಮೂರು ತಲೆಗಳನ್ನು ಹೊಂದಿರುವ ನಂದಿ ಈ ಕ್ಷೇತ್ರದಲ್ಲಿರುವ ಮತ್ತೊಂದು ವಿಶೇಷತೆ. ಇನ್ನು ಪ್ರಧಾನ ದೇವಾಲಯದ ಉತ್ತರ ದಿಕ್ಕಿಗೆ ಇರುವ 2 ಉಪ ದೇವಾಲಯದಲ್ಲಿ ಪರಮಶಿವನು ಸತಿಮಣೆಯಾದ ಪಂಪಾದೇವಿ ಮತ್ತು ಭುವನೇಶ್ವರಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಪ್ರಧಾನ ದೇವಾಲಯಕ್ಕೆ ಪೂರ್ವದಿಕ್ಕಿನಲ್ಲಿ ಭೂಮಿ ಒಳಗೆ ಪಾಥಳೇಶ್ವರಸ್ವಾಮಿ ದೇವಾಲಯವಿದೆ. ಈ ದೇವಾಲಯಕ್ಕೆ ತೆರಳಲು ಮೆಟ್ಟಿಲುಗಳು ಕೂಡ ಇವೆ. ಸಮಯವಿದ್ದರೆ ತಲೆ ಕೆಳಗಾಗಿ ಬೀಳುವ ನೆರಳನ್ನು ಹಾಗು ಈ ಅದ್ಭುತವಾದ ದೇವಾಲಯವನ್ನು ಕಣ್ಣಾರೆ ಕಂಡು ಭೇಟಿ ನೀಡಿ ಬನ್ನಿ.

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಇಲ್ಲಿನ ಪುರಾವಸ್ತು ಮ್ಯೂಸಿಯಂ ತಪ್ಪದೇ ಭೇಟಿ ನೀಡಿ ಬನ್ನಿ. ತುಂಗಭದ್ರಾ ನದಿ ಒಂದು ಭಾಗದಲ್ಲಿ, ಮೂರು ಭಾಗದಲ್ಲಿಯೂ ಹಂಪಿ ಪಟ್ಟಣವನ್ನು ಕಂಡು ಆನಂದಿಸಬಹುದು. ಇದೊಂದು ಉತ್ತಮವಾದ ಪ್ರವಾಸಿ ತಾಣವಾಗಿದ್ದು, ತನ್ನದೇ ಆದ ಶಿಲ್ಪಕಲಾ ಸಂಪತ್ತಿಗೆ ಈ ಪಟ್ಟಣವು ಪ್ರಸಿದ್ಧಿಯನ್ನು ಹೊಂದಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಹಂಪಿ ಪಟ್ಟಣಕ್ಕೆ ರಾಜ್ಯದ ಎಲ್ಲಾ ಪ್ರಧಾನವಾದ ನಗರಗಳಿಂದಲೂ ಕೂಡ ಬಸ್ಸುಗಳ, ರೈಲುಗಳ ವ್ಯವಸ್ಥೆಗಳು ಇರುವುದರಿಂದ ಸುಲಭವಾಗಿ ಹಂಪಿಯ ಪ್ರವಾಸವನ್ನು ಕೈಗೊಳ್ಳಬಹುದು. ಹಂಪಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಹೊಸಪೇಟೆ ರೈಲ್ವೆ ನಿಲ್ದಾಣ ಇಲ್ಲಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಬಳ್ಳಾರಿ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 60 ಕಿ.ಮೀ ದೂರದಲ್ಲಿ ಹಂಪಿ ಇದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...

ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X