Search
  • Follow NativePlanet
Share
» »ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕೇರಳದ ಅತ್ಯಂತ ಅಪರೂಪದ ದೇವಾಲಯವೆಂದರೆ ವೆಟ್ಟಿಕೊಡ್ ನಾಗರಾಜ ದೇವಸ್ಥಾನ. ಈ ದೇವಾಲಯದ ನಿರ್ಮಾಣವು ಪರಶುರಾಮನಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ.ಇನ್ನೂ ದೇವಾಲಯದ ನಿರ್ಮಾಣದ ಸಮಯದಲ್ಲಿ ತ್ರಿಮೂರ್ತಿಗಳು ಸಹಕಾರವನ್ನು ಒದಗಿಸಿದರು ಎಂದು ಹೇಳಲಾಗುತ್ತದೆ.

ಆದ್ದರಿಂದಲೇ ವೆಟ್ಟಿಕೊಡ್‌ ದೇವಾಲಯದಿಂದಾಗಿ ಕೇರಳ ರಾಜ್ಯವು ಪವಿತ್ರವಾಯಿತು ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿನ ಸ್ವಾಮಿಯನ್ನು ಆರಾಧಿಸಿದರೆ ಸರ್ಪ ಹಾಗು ಕಾಲ ಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

ನೋಡಲು ಚಿಕ್ಕ ದೇವಾಲಯವಾಗಿದ್ದರು ಕೂಡ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಲೇಖನದ ಮ‌ೂಲಕ ಸಂಕ್ಷಿಪ್ತವಾಗಿ ಈ ವಿಶೇಷವಾದ ದೇವಾಲಯ ಬಗ್ಗೆ ಮಾಹಿತಿ ಯನ್ನು ಪಡೆಯೊಣ.

1.ಪರಶುರಾಮನು

1.ಪರಶುರಾಮನು

PC:YOUTUBE

ಪರಶುರಾಮನು ತನ್ನ ತಂದೆಯ ಮರಣಕ್ಕೆ‌ ಕಾರಣವಾಗಿದ್ದ ಕ್ಷತ್ರಿಯರನ್ನು ಭೂ ಲೋಕವೆಲ್ಲಾ ಸುತ್ತಾಡಿ ಹತ್ಯೆ ಮಾಡುತ್ತಿರುತ್ತಾನೆ. ಸುಮಾರು 24 ಬಾರಿ ಭುಲೋಕ ಪ್ರವಾಸ ಮಾಡಿ ಹಲವಾರು ಕ್ಷತ್ರಿಯರನ್ನು ಕೊಲ್ಲುತಿರುತ್ತಾನೆ.ಇದರಿಂದಾಗಿ ಒಟ್ಟು ಭೂ ಮಂಡಲವೆಲ್ಲಾ ರಕ್ತಸಿಕ್ತವಾಗಿ ಮಾರ್ಪಾಟಾಗುತ್ತದೆ. ಕ್ಷತ್ರಿಯ ಹತ್ಯೆಯ ಪಾಪದಿಂದ ಪರಿಹಾರ ವಾಗಿ ಕಶ್ಯಪ ಮಹರ್ಷಿಗೆ ಒಂದು ಭೂಮಿಯನ್ನು ದಾನವಾಗಿ ನೀಡುತ್ತಾನೆ.

೨.ಭೂಮಿ

೨.ಭೂಮಿ

PC:YOUTUBE

ಆದರೆ ಭೂ ಮಂಡಲವೆಲ್ಲಾ ರಕ್ತಸಿಕ್ತ ವಾಗಿ ಮಾರ್ಪಾಟಾದ ಕಾರಣ, ಯಾವುದೇ ಬೇಸಾಯಕ್ಕೂ ಕೂಡ ಆ ಭೂಮಿ ಯೋಗ್ಯವಾಗಿರುವುದಿಲ್ಲ. ಬಂಜರು ಭೂಮಿಯನ್ನು ತಾನು ತೆಗೆದುಕೊಂಡು ಏನು ಮಾಡಲಿ ಎಂದು ಪರಶುರಾಮನಿಗೆ ಹಿಂದಿರುಗಿಸುತ್ತಾನೆ.

೩.ಆಯುಧ

೩.ಆಯುಧ

PC:YOUTUBE

ಇದರಿಂದಾಗಿ ಪರಶುರಾಮನಿಗೆ ತೀವ್ರವಾದ ಕೋಪದಿಂದ ತನ್ನ ಆಯುಧವನ್ನು ಸಮುದ್ರಕ್ಕೆ ಎಸೆಯುತ್ತಾನೆ. ಇನ್ನು ಶಾಂತನಾಗಿ ಸಮುದ್ರ ದೇವನಿಗೆ ಪ್ರಾರ್ಥನೆ ಮಾಡಿ ತನ್ನ ಕೊಡಲಿಯಷ್ಟು ಭೂಮಿಯನ್ನು ನೀಡು ಎಂದು ಬೇಡಿಕೊಳ್ಳುತ್ತಾನೆ‌.

೪.ಲವಣಾಂಶ

೪.ಲವಣಾಂಶ

PC:YOUTUBE

ಸಾಕ್ಷಾತ್ ವಿಷ್ಣು ರೂಪದಲ್ಲಿರುವ ಪರಶುರಾಮನ ಮಾತಿನಂತೆ ಸಮುದ್ರ ದೇವನು ತನ್ನಲ್ಲಿರುವ ನೀರಿನ ಮಟ್ಟವನ್ನು ಮೇಲೆ ತರುತ್ತಾನೆ. ಆ ಸ್ಥಳವು ಕೇರಳ ರಾಜ್ಯದಲ್ಲಿದೆ. ಆದರೆ ಸಮುದ್ರ ಲವಣಾಂಶದಿಂದಾಗಿ ಆ ಭೂಮಿಯು ವ್ಯವಸಾಯಕ್ಕೆ ಅಲ್ಲದೇ ವಾಸ ಮಾಡಲು‌ ಕೂಡ ಯೋಗ್ಯವಾಗಿಲ್ಲ.

೫. ಘೋರವಾದ ತಪಸ್ಸು ಆಚರಿಸುತ್ತಾನೆ

೫. ಘೋರವಾದ ತಪಸ್ಸು ಆಚರಿಸುತ್ತಾನೆ

PC:YOUTUBE

ಈ ಕುರಿತು ಪರಶುರಾಮನು ನಾಗರಾಜನನ್ನು ಕುರಿತು ಘೋರವಾದ ತಪಸ್ಸುನ್ನು ಆಚರಿಸುತ್ತಾನೆ. ಪರಶುರಾಮನ ತಪಸ್ಸಿಗೆ ಮೆಚ್ಚಿದ ನಾಗರಾಜನು ವರವನ್ನು ಕೇಳು ಎಂದು ಹೇಳುತ್ತಾನೆ. ತನ್ನ ಭೂಮಿಯು ಫಲವತ್ತತೆಯಿಂದಾಗಿ ಕೂಡಿರುವಂತೆ ಮಾಡು ಎಂದು ಕೇಳಿಕೊಳ್ಳುತ್ತಾನೆ.

 ೬.ನಾಗರಾಜ

೬.ನಾಗರಾಜ

PC:YOUTUBE

ಇದರಿಂದಾಗಿ ನಾಗರಾಜನು ತನ್ನ ಜಾತಿಯ ಹಾವುಗಳನ್ನು ‌ಆ ಸ್ಥಳಕ್ಕೆ ಕರೆಸಿ‌ ಭೂಮಿಯಲ್ಲಿರುವ ಲವಣಾಂಶವನ್ನು ತಗೆದು ತಮ್ಮೊಳಗೆ ಸೇರಿಕೊಳ್ಳುವಂತೆ ಮಾಡಿಕೊಳ್ಳಿ‌ ಎಂದು ಆದೇಶವನ್ನು ನೀಡುತ್ತಾನೆ. ನಾಗರಾಜನ ಆದೇಶವನ್ನು ಪಾಲಿಸಿ ಸಮುದ್ರದಲ್ಲಿನ ಲವಣಾಂಶವನ್ನು ಭೂಮಿಯಿಂದ ಹೊರತೆಗೆಯುತ್ತಾರೆ. ಹಾಗಾಗಿಯೇ ಕೇರಳ ರಾಜ್ಯವು ಸಸ್ಯ‌ಶ್ಯಾಮಲವಾಗಿ ಮಾರ್ಪಾಟಾಯಿತು ಎಂದು ನಂಬಲಾಗಿದೆ.

೭.ದೇವಾಲಯದ ನಿರ್ಮಾಣ

೭.ದೇವಾಲಯದ ನಿರ್ಮಾಣ

PC:YOUTUBE

ಹೀಗಾಗಿಯೇ ಕೇರಳ ಅತ್ಯಂತ ಸುಂದರವಾದ ಪ್ರದೇಶವಾಗಿದೆ. ನಾಗರಾಜನು ಮಾಡಿದ ಈ ಉಪಕಾರದಿಂದಾಗಿ ನಾಗರಾಜನಿಗೆ ಒಂದು ದೇವಾಲಯವನ್ನು‌ ನಿರ್ಮಾಣ ಮಾಡಬೇಕು ಎಂದು ಭಾವಿಸುತ್ತಾನೆ. ದೇವಾಲಯದ ನಿರ್ಮಾಣಕ್ಕೆ ತ್ರಿಮೂರ್ತಿಗಳ ‌ಸಹಾಯವನ್ನು ಕೋರುತ್ತಾನೆ.

೮.ತ್ರಿಮೂರ್ತಿ

೮.ತ್ರಿಮೂರ್ತಿ

PC:YOUTUBE

ಪರಮೇಶ್ವರ, ಬ್ರಹ್ಮ, ವಿಷ್ಣು ಪ್ರತ್ಯಕ್ಷವಾಗಿ ದೇವಸ್ಥಾನವನ್ನು ನಿರ್ಮಿಸಲು ಸಹಕಾರ ಒದಗಿಸುತ್ತಾರೆ. ಮಹಾ ಬ್ರಹ್ಮನು ಬ್ರಹ್ಮ ಮುಹೂರ್ತವನ್ನು ನಿರ್ಧರಿಸಿದನು. ಹಾಗೆಯೇ ಶಿವನು ಎಲ್ಲಾ ಅಗತ್ಯ ವಸ್ತುಗಳನ್ನು ತರುತ್ತಾನೆ. ವಿಷ್ಣವು ಸ್ವತಃ ನಾಗರಾಜನ ವಿಗ್ರಹವನ್ನು ತಯಾರು ಮಾಡುತ್ತಾನೆ.

 ೯.ಕಾಲ ಸರ್ಪ ದೋಷವು ಪರಿಹಾರ

೯.ಕಾಲ ಸರ್ಪ ದೋಷವು ಪರಿಹಾರ

PC:YOUTUBE

ಹೀಗೆ ತ್ರಿಮೂರ್ತಿಗಳು ನಾಗರಾಜನ ದೇವಾಲಯದ ನಿಮಾಣಕ್ಕೆ‌ ಕಾರಣರಾದರು ಎನ್ನಲಾಗುತ್ತದೆ. ಸ್ವಯಂ ತ್ರಿಮೂರ್ತಿಗಳೇ ನಿರ್ಮಾಣ ಮಾಡಿರುವ ಈ‌ ಕ್ಷೇತ್ರವು ಪರಮಪವಿತ್ರವಾದುದು ಎಂದು ಭಾವಿಸಲಾಗಿದೆ. ಅಷ್ಟೇ ಅಲ್ಲದೆ ತ್ರಿಮೂರ್ತಿ ಗಳಲ್ಲಿ ಒಬ್ಬನಾದ ಶ್ರೀ ಮಹಾವಿಷ್ಣುವಿನ ಅವತಾರವಾದ ಪರಶುರಾಮನು ತನ್ನ ಕೈಯಾರೇ ಮಾಡಿರುವ ನಾಗರಾಜನ ವಿಗ್ರಹಕ್ಕೆ ಶ್ರದ್ಧೆ ಭಕ್ತಿಯಿಂದ ಆರಾಧಿಸಿದರೆ ಕಾಲ ಸರ್ಪ ದೋಷವು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

10.ವೆಟ್ಟಿಕೋಡ್ ನಾಗರಾಜ ದೇವಾಲಯ

10.ವೆಟ್ಟಿಕೋಡ್ ನಾಗರಾಜ ದೇವಾಲಯ

PC:YOUTUBE

ಅದ್ದರಿಂದಲೇ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಷ್ಟೇ ಅಲ್ಲ, ಈ ದೇವಾಲಯದ ಪರಿಸರ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಾವುಗಳಿರುವುದನ್ನು ಕಾಣಬಹುದು. ಆಶ್ಚರ್ಯ ಏನಪ್ಪ ಎಂದರೆ ಇಂದಿನವರೆವಿಗೂ ಯಾರೊಬ್ಬರಿಗೂ ಹಾವುಗಳಿಂದ ಅಪಾಯ ಸಂಭವಿಸಿಲ್ಲದೇ ಇರುವುದು.

11.ವೆಟ್ಟಿಕೋಡ್ ನಾಗರಾಜ ದೇವಾಲಯ

11.ವೆಟ್ಟಿಕೋಡ್ ನಾಗರಾಜ ದೇವಾಲಯ

PC:YOUTUBE

ಈ ದೇವಾಲಯವು ಕೇರಳದಲ್ಲಿನ ಅಲಪ್ಪಿ ಜಿಲ್ಲೆಯಲ್ಲಿನ ಪಲ್ಲಿಕ್ಕಲ್ ಎಂಬಲ್ಲಿ ವೆಟ್ಟಿಕೋಡ್ ಎಂಬ ಗ್ರಾಮದಲ್ಲಿದೆ. ಈ ಕ್ಷೇತ್ರಕ್ಕೆ ಸಮೀಪದಲ್ಲಿಯೇ ಕಾಯಂಕುಲಂ, ಮಾವೆಲಿಕ್ಕರ್ ಎಂಬ ರೈಲ್ವೆ ನಿಲ್ದಾಣವು ಸಮೀಪವಾಗಿದೆ. ಪನಲೂರಿನಿಂದ ಕಾಯಂಕುಲಂಗೆ ತೆರಳುವ ರಸ್ತೆ ಮಾರ್ಗದಲ್ಲಿ ಪ್ರತಿ ಬಸ್ಸು ಕೂಡ ಅಲ್ಲಿಗೆ ತೆರುಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X