Search
  • Follow NativePlanet
Share
» »ಟಿಪ್ಪು ಸುಲ್ತಾನನ ಕುಟುಂಬವನ್ನು ಬಂಧಿಸಿದ್ದ ಕೋಟೆ ಇದು...

ಟಿಪ್ಪು ಸುಲ್ತಾನನ ಕುಟುಂಬವನ್ನು ಬಂಧಿಸಿದ್ದ ಕೋಟೆ ಇದು...

ವೆಲೂರ್ ಕೋಟೆಯು ಅತ್ಯಂತ ಸುಂದರವಾದ ಕೋಟೆಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಕೋಟೆಯು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪುರಾತನವಾದ ಕೋಟೆಯಾಗಿದೆ. ಇದನ್ನು ವಿಜಯನಗರದ ರಾಜರಿಂದ ನಿರ್ಮಿಸಲ್ಪಟ್ಟ ಭವ್ಯವಾದ ಕೋಟೆಯಾಗಿದ್ದು, ತಮಿಳುನಾಡು ಜಿಲ್ಲೆಯಲ್ಲಿದೆ. ವೆಲೂರು ನಗರ ಭಾಗದಲ್ಲಿರುವ ಈ ಕೋಟೆಯು ವಿಶಾಲವಾದ ಕಂದಕಗಳು ಮತ್ತು ದೃಢವಾದ ಕಲ್ಲುಗಳಿಂದ ಹೆಸರುವಾಸಿಯಾಗಿದೆ.

ಈ ಕೋಟೆಯು ವಿಜಯನಗರ ರಾಜರು, ಬಿಜಾಪುರ ಸುಲ್ತಾನರು, ಮರಾಠರು, ಕರ್ನಾಟಿಕ್ ನವಾಬರು ಹಾಗು ಅಂತಿಮವಾಗಿ ಬ್ರಿಟೀಷರ ಅಧೀನದಲ್ಲಿಯು ಇತ್ತು. ಈ ಕೋಟೆಯ ಇತಿಹಾಸವೆನೆಂದರೆ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಟಿಪ್ಪು ಸುಲ್ತಾನನ ಕುಟುಂಬ ಮತ್ತು ಶ್ರೀಲಂಕಾದ ಕೊನೆಯ ರಾಜನಾದ, ಶ್ರೀ ವಿಕ್ರಮ ರಾಜಸಿಂಹರನ್ನು ಈ ಕೋಟೆಯಲ್ಲಿಯೇ ಖೈದಿಯನ್ನಾಗಿ ಮಾಡಲಾಯಿತು.

ಇಷ್ಟು ಇತಿಹಾಸವನ್ನು ಹೊಂದಿರುವ ಈ ಕೋಟೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು ಅಲ್ಲವೇ?

ವೆಲೂರು ಕೋಟೆ

ವೆಲೂರು ಕೋಟೆ

ಈ ಅದ್ಭುತವಾದ ಕೋಟೆಯು ತಮಿಳುನಾಡು ರಾಜ್ಯದ ವೆಲೂರಿನಲ್ಲಿದೆ. ಇಲ್ಲಿ ಜಲಕಂಟೇಶ್ವರ ಹಿಂದು ದೇವಾಲಯ, ಸೇಂಟ್ ಜಾನ್ಸ್ ಚರ್ಚ್ ಮತ್ತು ಮುಸ್ಲಿಂ ಮಸೀದಿಗಳನ್ನು ಕಾಣಬಹುದಾಗಿದೆ. ಇದರಲ್ಲಿ ಜಲಕಂಟೇಶ್ವರ ದೇವಾಲಯವು ತನ್ನ ಭವ್ಯವಾದ ಕೆತ್ತನೆಗಳಿಂದ ಪ್ರಸಿದ್ಧಿಯನ್ನು ಪಡೆದಿದೆ.

Fahad Faisal

ವೆಲೂರು ಕೋಟೆ

ವೆಲೂರು ಕೋಟೆ

1806 ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮೊದಲ ಬಂಡಾಯವು ಈ ಕೋಟೆಯಲ್ಲಿಯೇ ಪ್ರಾರಂಭವಾಗಿತ್ತು. ಇದಕ್ಕೆ ವಿಜಯನಗರದ ಶ್ರೀರಂಗರಾಯರು ಸಾಕ್ಷಿಯಾಗಿದ್ದರು.

A.D.G. Shelley

ವೆಲೂರು ಕೋಟೆ

ವೆಲೂರು ಕೋಟೆ

ಈ ಅದ್ಭುತವಾದ ಕೋಟೆಯನ್ನು ಕ್ರಿ.ಶ 1566 ರಲ್ಲಿ ವಿಜಯನಗರ ಸಾಮ್ರಾಜ್ಯದ ಸದಾಶಿವರಾಯರ ಅಧೀನದಲ್ಲಿ ಮುಖ್ಯಸ್ಥರಾಗಿದ್ದ ಚಿಕ್ಕ ಬೊಮ್ಮಿ ನಾಯಕ್ ಮತ್ತು ತಿಮ್ಮಾ ರೆಡ್ಡಿ ನಾಯಕ್‍ರವರು ಈ ನೆಲ್ಲೂರ್ ಕೋಟೆಯನ್ನು ನಿರ್ಮಾಣ ಮಾಡಿದರು.

Venkatesh Ragu

ವೆಲೂರು ಕೋಟೆ

ವೆಲೂರು ಕೋಟೆ

ಕೋಟೆಗೆ ಆಕ್ರಮಣದ ಸಮಯದಲ್ಲಿ ರಕ್ಷಣಾ ಕ್ರಮವಾಗಿ 12 ಕಿ.ಮೀ ದೂರದಲ್ಲಿರುವ ವಿರಿಂಜು ಪುರಕ್ಕೆ ದಾರಿ ಕೂಡ ತಪ್ಪಿಸಿಕೊಳ್ಳಲು ಸುರಂಗ ಮಾರ್ಗ ಕೂಡ ಒಳಗೊಂಡಿದೆ. ಶತ್ರುಗಳ ದಾಳಿಯ ಸಂದರ್ಭದಲ್ಲಿ ರಾಜರು ಈ ಸುರಂಗ ಮಾರ್ಗವನ್ನು ಬಳಸುತ್ತಿದ್ದರು.

Samuelrajkumar

ವೆಲೂರು ಕೋಟೆ

ವೆಲೂರು ಕೋಟೆ

ಮುಖ್ಯವಾಗಿ ಈ ಕೋಟೆಯನ್ನು ದಕ್ಷಿಣ ಭಾರತದ ಮಿಲಿಟರಿ ವಾಸ್ತುಶಿಲ್ಪ ಶೈಲಿಯಲ್ಲಿಯೇ ಅತ್ಯುತ್ತಮವಾದುದು ಎಂದು ಗುರುತಿಸಲಾಗಿದೆ. ಪ್ರವೇಶ ದ್ವಾರದಲ್ಲಿರುವ ಶಿಲ್ಪಗಳು ವಾಸ್ತು ಶಿಲ್ಪಕ್ಕೆ ಮತ್ತಷ್ಟು ಮೆರಗನ್ನು ತಂದಿದೆ ಎಂದೇ ಹೇಳಬಹುದು. ಇಲ್ಲಿ ಒಂದು ಹಿಂದೂ ದೇವಾಲಯವು ಇದ್ದು, ಪ್ರಸ್ತುತ ಯಾವುದೇ ದೇವತಾ ಮೂರ್ತಿಗಳು ಇಲ್ಲಿ ಇಲ್ಲ. ಹಲವಾರು ವರ್ಷಗಳ ಹಿಂದೆ ಇಲ್ಲಿ ಶಿವನ ವಿಗ್ರಹವಿತ್ತು ಎನ್ನಲಾಗಿದೆ.

K S Sai Krishna

ವೆಲೂರು ಕೋಟೆ

ವೆಲೂರು ಕೋಟೆ

ವೆಲೂರು ಕೋಟೆಯು ತನ್ನ ಇತಿಹಾಸ ಹಿನ್ನೆಲೆಯನ್ನು ತಿಳಿಸುತ್ತದೆ. ಅದೆನೆಂದರೆ ಹಲವಾರು ರಾಜವಂಶಗಳನ್ನು ಇಲ್ಲಿ ಬಂಧಿಸಲಾಗಿತ್ತು. ಅದರಲ್ಲಿಯೂ ಮೈಸೂರಿನ ಹುಲಿ ಟಿಪ್ಪು ಸುಲ್ತಾನ 1799 ರಲ್ಲಿ ಶ್ರೀ ರಂಗ ಪಟ್ಟಣದ ಪತನದ ನಂತರ ಟಿಪ್ಪುವಿನ ಪುತ್ರರು, ಹೆಣ್ಣುಮಕ್ಕಳು, ಹೆಂಡತಿ ಮತ್ತು ತಾಯಿ ಸೇರಿದಂತೆ ಅವರ ಕುಟುಂಬವನ್ನು ಈ ಕೋಟೆಯಲ್ಲಿಯೇ ಬಂಧಿಸಿ ಇಟ್ಟಿದ್ದರು.

Arullura

ವೆಲೂರು ಕೋಟೆ

ವೆಲೂರು ಕೋಟೆ

1806 ರಲ್ಲಿ ನಡೆದ ಸಿಪಾಯಿ ದಂಗೆಯ ನಂತರ ಬ್ರಿಟಿಷರು ಟಿಪ್ಪು ಅವರ ಪುತ್ರರನ್ನು ಮತ್ತು ಪುತ್ರಿಯರನ್ನು ಕಲ್ಕತ್ತಾಗೆ ವರ್ಗಾಯಿಸಿದರು. ವೆಲೂರು ಕೋಟೆಯು ಶ್ರೀಲಂಕಾದ ಕೊನೆಯ ಆಳ್ವಿಕೆಯ ಅರಸನಾದ ಶ್ರೀ ವಿಕ್ರಮ ರಾಜಸಿಂಹನ ಅಂತಿಮ ತಾಣವಾಯಿತು. ರಾಜ ಮತ್ತು ಆತನ ಕುಟುಂಬದವರು ಸುಮಾರು 17 ವರ್ಷಗಳ ಕಾಲ ಸೆರೆಯಾಗಿ ಇಟ್ಟಿದ್ದರು.

Glsanthoshkumar

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಕೋಟೆಯು ತಮಿಳುನಾಡು ರಾಜ್ಯದಲ್ಲಿದ್ದು, ಹಳೆಯ ಬಸ್ ನಿಲ್ದಾಣಕ್ಕೆ ಎದುರಾಗಿ ವೆಲೂರ್ ಪಟ್ಟಣದಲ್ಲಿ ನೆಲೆಗೊಂಡಿದೆ. ವೆಲ್ಲುರ್-ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿದೆ. ಚೆನ್ನೈನಿಂದ 120 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವೆಲೂರು-ಕಾಟ್ಪಾಡಿ ಜಂಕ್ಷನ್ ಆಗಿದೆ. ಇಲ್ಲಿ ಎಲ್ಲಾ ಸೂಪರ್ ಫಾಸ್ಟ್ ರೈಲುಗಳಿವೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುಪತಿ ವಿಮಾನ ನಿಲ್ದಾಣ, ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more