Search
  • Follow NativePlanet
Share
» »ನಾಗದೇವರು ಮನುಷ್ಯ ರೂಪದಲ್ಲಿ ಬರುವ ಕ್ಷೇತ್ರವನ್ನು ಕಂಡಿದ್ದೀರಾ?

ನಾಗದೇವರು ಮನುಷ್ಯ ರೂಪದಲ್ಲಿ ಬರುವ ಕ್ಷೇತ್ರವನ್ನು ಕಂಡಿದ್ದೀರಾ?

ನೀವು ವಿಷ್ಣುವಿನ ವಾಹನವಾಗಿರುವ ಗರುಡನ ದೇವಸ್ಥಾನವನ್ನು ನೋಡಿದ್ದೀರಾ? ಸಾಮಾನ್ಯವಾಗಿ ಗರುಡನ ಮೂರ್ತಿಯು ಗರುಡನ ಶಿಲ್ಪವನ್ನು ಕೆತ್ತಿದ ಮೂರ್ತಿಯಾಗಿರುತ್ತದೆ. ಆದರೆ ನಾವಿಂದು ಕೇರಳದಲ್ಲಿರುವ ಒಂದು ವಿಶೇಷ ಗರುಡನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ಗರುಡನ ಮೂರ್ತಿಯು ಅರ್ಧ ಮನುಷ್ಯ ಹಾಗೂ ಅರ್ಧ ಗರುಡನ ರೂಪದಲ್ಲಿದೆ. ಅಲ್ಲದೆ ಮಂಡಲದ ಸಮಯದಲ್ಲಿ ಹಾವು ಮನುಷ್ಯ ರೂಪದಲ್ಲಿ ಇಲ್ಲಿಗೆ ಬರುತ್ತದೆ ಎನ್ನುವುದು ಜನರ ನಂಬಿಕೆ. ಹೆಚ್ಚಿನ ಶಬರಿಮಲೆ ಭಕ್ತರು ಮಂಡಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಟ್ರೈಪ್ರಂಗೋಡ್‌ನಲ್ಲಿರುವ ಗರುಡ ದೇವಸ್ಥಾನ, ಅಲಥಿಯಾರ್ ಬಳಿಯ ಮಲಪ್ಪುರಂ ಜಿಲ್ಲೆಯ ತಿರೂರು ತಾಲ್ಲೂಕಿನಲ್ಲಿನ ಚಾಮರಾವಂ ರಸ್ತೆಯಲ್ಲಿದೆ. ಇದು ವಿಷ್ಣುವಿನ ವಾಹನ ಗರುಡಕ್ಕೆ ಸಮರ್ಪಿತವಾಗಿರುವ ಕೇರಳದ ಏಕೈಕ ದೇವಾಲಯವಾಗಿದೆ. ಇದನ್ನು "ವೆಲ್ಲಮಸೇರಿ ಗರುಡನ್ ಕಾವು ದೇವಾಲಯ" ಎಂದು ಕರೆಯಲಾಗುತ್ತದೆ.

ಅಂಕೋಲಾದಲ್ಲಿರುವ ಈ ಮಂದಿರಗಳಲ್ಲಿ ಕೈ ಮುಗಿದಿದ್ದೀರಾ, ಕಡಲತೀರದಲ್ಲಿ ಆಡಿದ್ದೀರಾ?ಅಂಕೋಲಾದಲ್ಲಿರುವ ಈ ಮಂದಿರಗಳಲ್ಲಿ ಕೈ ಮುಗಿದಿದ್ದೀರಾ, ಕಡಲತೀರದಲ್ಲಿ ಆಡಿದ್ದೀರಾ?

ದಂಥ ಕಥೆಯ ಪ್ರಕಾರ

ದಂಥ ಕಥೆಯ ಪ್ರಕಾರ

ಋಷಿಯೊಬ್ಬರು ಈ ಸ್ಥಳದಲ್ಲಿ ವಿಷ್ಣು ದೇವರನ್ನು ಕುರಿತು ತಪಸ್ಸು ಮಾಡಿದ್ದರು. ಅವರ ಭಕ್ತಿಗೆ ಮೆಚ್ಚಿದ ವಿಷ್ಣು ಋಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಆಗ ಋಷಿಯು ಮಾನವ ಜನ್ಮದಿಂದ ಮೋಕ್ಷವನ್ನು ಪಡೆದುಕೊಳ್ಳುವ ವಿಧಾನಗಳು ಮತ್ತು ಜನರನ್ನು ಕಾಯಿಲೆಯಿಂದ ದೂರವಿರಿಸುವ ರಹಸ್ಯ ಮತ್ತು ವಿಧಾನಗಳನ್ನು ತಿಳಿಯಲು ಬಯಸಿದ್ದ ಸ್ಥಳ ಇದು ಎನ್ನಲಾಗುತ್ತದೆ.

ಅರ್ಧ ಹದ್ದು-ಅರ್ಧ ಮನುಷ್ಯ ರೂಪದ ವಿಗ್ರಹ

ಅರ್ಧ ಹದ್ದು-ಅರ್ಧ ಮನುಷ್ಯ ರೂಪದ ವಿಗ್ರಹ

ಈ ದೇವಸ್ಥಾನದ ಪ್ರಮುಖ ದೇವತೆ ಗರುಡವಾಗಿದ್ದು ಅರ್ಧ ಹದ್ದು ಮತ್ತು ಅರ್ಧ-ಮನುಷ್ಯನ ಅಪರೂಪದ ವಿಗ್ರಹ ಇದಾಗಿದೆ. ಈ ದೇವಾಲಯದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ತಿರುನವಾಯ ಪ್ರಸಿದ್ಧವಾದ ಸ್ಥಳವಾಗಿದೆ. ಇಲ್ಲಿ ವಿಷ್ಣುವಿನ ಅವತಾರವಾದ ಕೂರ್ಮಾ ಅವತಾರದ (ಆಮೆ) ರೂಪದಲ್ಲಿ ಪೂಜಿಸಲಾಗುತ್ತದೆ.

ಯಮಯಿ ದೇವಸ್ಥಾನದಲ್ಲಿರುವ 7 ಕೆ.ಜಿ ಚಿನ್ನದ ಕಲಶ ನೋಡಿದ್ದೀರಾ?ಯಮಯಿ ದೇವಸ್ಥಾನದಲ್ಲಿರುವ 7 ಕೆ.ಜಿ ಚಿನ್ನದ ಕಲಶ ನೋಡಿದ್ದೀರಾ?

ಇಲ್ಲಿರುವ ಇತರ ದೇವತೆಗಳು

ಇಲ್ಲಿರುವ ಇತರ ದೇವತೆಗಳು

ದೇವಾಲಯದ ಸಂಕೀರ್ಣದಲ್ಲಿ ಇತರ ದೇವತೆಗಳಾದ ಗಣಪತಿ, ಭಗವತಿ ದೇವಿ, ಶ್ರೀ ಶಾಸ್ತ್ರ, ಮತ್ತು ಭದ್ರಕಾಳಿಗಳು ಪಶ್ಚಿಮ ಭಾಗದಲ್ಲಿ ದೀಪಸ್ತಂಭಂ ಮತ್ತು ಗೋಪುರವನ್ನು ಹೊಂದಿವೆ. ಗರುಡದ ಎಡಭಾಗದಲ್ಲಿ, ವೇತೆಕ್ಕರನ್ ಮತ್ತು ಕಾರ್ತ ವೀರಾರ್ಜುನನ್ ಮುಂತಾದ ದೇವತೆಗಳು ಕಂಡುಬರುತ್ತವೆ. ಈ ದೇವಸ್ಥಾನದ ದಕ್ಷಿಣ ಭಾಗದಲ್ಲಿ ದೊಡ್ಡ ದೇವಸ್ಥಾನದ ಕೊಳವಿದೆ.

ನಾಗದೋಷ ಪರಿಹಾರಕ್ಕೆ ಇಲ್ಲಿಗೆ ಬರುತ್ತಾರೆ

ನಾಗದೋಷ ಪರಿಹಾರಕ್ಕೆ ಇಲ್ಲಿಗೆ ಬರುತ್ತಾರೆ

ಜ್ಞಾನವನ್ನು ಪಡೆಯಲು, ಸಂಪತ್ತು ಪಡೆಯಲು, ರೋಗಗಳಿಂದ ಗುಣಮುಖರಾಗಲು ಮತ್ತು ವಾಹನಗಳ ಖರೀದಿಸಲು ಹೀಗೆ ಇನ್ನಿತರ ಬೇಡಿಕೆಗಳ ಪೂರೈಕೆಗೆ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ . ನಾಗದೋಷ ಪರಿಹಾರ ಮಾಡುವ ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದಾಗಿದೆ. 'ನಾಗಾ ದೋಷ' ಅಥವಾ 'ಸರ್ಪಾ ದೋಷ' ದಿಂದ ಬಳಲುತ್ತಿರುವ ಜನರು ಅದರ ದುಷ್ಪರಿಣಾಮಗಳನ್ನು ತೊಡೆದುಹಾಕಲು ಇಲ್ಲಿ ಬಂದು ಪೂಜಿಸುತ್ತಾರೆ.

ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?

ಹಾವು ಕಡಿತದಿಂದ ಪಾರಾಗಲು ಪ್ರಾರ್ಥಿಸುತ್ತಾರೆ

ಹಾವು ಕಡಿತದಿಂದ ಪಾರಾಗಲು ಪ್ರಾರ್ಥಿಸುತ್ತಾರೆ

ಅನೇಕ ಭಕ್ತರು ಮತ್ತು ಯಾತ್ರಿಕರು ಹಾವು ಕಡಿತ, ಲ್ಯುಕೋಡರ್ಮಾ ಮತ್ತು ಚರ್ಮ ರೋಗಗಳು, ಉಸಿರಾಟದ ತೊಂದರೆಗಳಿಂದ ಮುಕ್ತಿ ಪಡೆಯಲು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರೈತರು ತಮ್ಮ ಬೆಳೆಗಳನ್ನು ಹಕ್ಕಿಗಳಿಂದ ಹಾನಿಗೊಳಗಾಗುವುದನ್ನು ತಪ್ಪಿಸಲು ಗರುಡನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

1800 ವರ್ಷ ಹಳೆಯ ದೇವಾಲಯ

1800 ವರ್ಷ ಹಳೆಯ ದೇವಾಲಯ

ಈ ಪುರಾತನ ಗರುಡ ದೇವಸ್ಥಾನ ಸುಮಾರು 1800 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಪಶ್ಚಿಮಕ್ಕೆ ಮುಖ ಮಾಡಿಕೊಳ್ಳುತ್ತದೆ ಮತ್ತು ಈ ದೇವಾಲಯದ ಸಂಕೀರ್ಣದಲ್ಲಿರುವ ಇತರ ದೇವಾಲಯಗಳು ಪೂರ್ವಕ್ಕೆ ಎದುರಾಗಿವೆ. ಇದು ಶಂಕರ ನಾರಾಯಣ ಮತ್ತು ವಿಷ್ಣುವಿನ ಪೂರ್ವದ ಕಡೆಗೆ ಎದುರಿಸುತ್ತಿರುವ ಸನ್ನಿಧಿಗಳನ್ನು ಕೂಡ ಹೊಂದಿದೆ. ಈ ದೇವಾಲಯವು ವಿಷ್ಣು ಮತ್ತು ಶಂಕರ ನಾರಾಯಣ ದೇವಾಲಯದ ಮುಂದೆ 'ನಮಸ್ಕಾರ ಮಂಟಪ ಇದೆ. ವಿಷ್ಣು ದೇವಸ್ಥಾನವು ದಕ್ಷಿಣಕ್ಕೆ ಬಲಿಪುರವನ್ನು ಹೊಂದಿದೆ.

ಕಾರವಾರದಲ್ಲಿರುವ ಆಮೆ ಆಕಾರದ ದ್ವೀಪವನ್ನು ನೋಡಿದ್ದೀರಾ? ಕಾರವಾರದಲ್ಲಿರುವ ಆಮೆ ಆಕಾರದ ದ್ವೀಪವನ್ನು ನೋಡಿದ್ದೀರಾ?

ಮಂಡಲದ ಅವಧಿಯಲ್ಲಿ ಪೂಜೆ

ಮಂಡಲದ ಅವಧಿಯಲ್ಲಿ ಪೂಜೆ

ಅಯ್ಯಪ್ಪ (41 ದಿನಗಳು) ನ ಮಂಡಲದ ಅವಧಿ, ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೂ ಇರುತ್ತದೆ. ಈ ಅವಧಿಯನ್ನು ಈ ದೇವಾಲಯದಲ್ಲಿಅತ್ಯಂತ ಪ್ರಮುಖವಾದ ಆರಾಧನಾ ಕಾಲವೆಂದು ಪರಿಗಣಿಸಲಾಗಿದೆ. ಈ ದೇವತೆಯನ್ನು ಆರಾಧಿಸಲು ಎಲ್ಲಾ ಭಾನುವಾರಗಳು ಮಂಗಳಕರವೆಂದು ಪರಿಗಣಿಸಲಾಗಿದೆ. ಮಲಯಾಳಂ ತಿಂಗಳ 'ಧನು' ನ 12 ನೇ ಮತ್ತು 13 ನೇ ದಿನ ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ ಮಂಡಲದ ಸಮಯದಲ್ಲಿ ಹಾವುಗಳು ಮನುಷ್ಯ ರೂಪದಲ್ಲಿ ಬರುತ್ತವಂತೆ. ಹೀಗೊಂದು ವಿಶ್ವಾಸ ಇಲ್ಲಿಯ ಭಕ್ತರದ್ದು.

ಗರುಡನಿಗೆ ಅರ್ಪಣೆ

ಗರುಡನಿಗೆ ಅರ್ಪಣೆ

ಸಾಮಾನ್ಯವಾಗಿ ಯಾವುದೇ ದೇವಸ್ಥಾನದ ಹಣ್ಣುಗಳನ್ನು ನವಿರಾದ ತೆಂಗಿನಕಾಯಿಯನ್ನು ಗರುಡನಿಗೆ ಅರ್ಪಿಸಲಾಗುತ್ತದೆ.ಪಕ್ಷಿಗಳು ತಿನ್ನುವ ಕೆಲವು ಬೀಜಗಳು ಮತ್ತು ಕೀಟಗಳನ್ನು ಸಹ ಗರುಡಕ್ಕೆ ನೀಡಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಗರುಡನಿಗೆ ಹಾವುಗಳನ್ನು ಅರ್ಪಿಸುವ ಒಂದು ಅಭ್ಯಾಸವಿದೆ ಮತ್ತು ಭಕ್ತರು ಹಾವಿನ ಕಡಿತದಿಂದ ತಪ್ಪಿಸಿಕೊಳ್ಳಲು ಹಾವುಗಳನ್ನು ಗರುಡನಿಗೆ ಕೊಡುತ್ತಾರೆ. ಮನೆಗೆ ಹಾವು ಬಂದರೆ ಅದನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ ಬಟ್ಟೆಯಿಂದ ಅದನ್ನು ಮುಚ್ಚಿ ಈ ದೇವಾಲಯಕ್ಕೆ ತಂದು ಮರಗಳಿಂದ ಕೂಡಿರುವ ಪ್ರದೇಶದಲ್ಲಿ ಬೀಸಾಡಬೇಕಂತೆ. ಹಾಗೇ ಬಿಸಾಡಿದ ಹಾವು ನಂತರ ಪತ್ತೆಯಾಗುವುದಿಲ್ಲವಂತೆ. ಆ ಹಾವು ಗರುಡನಿಗೆ ಆಹಾರವಾಗಿದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾವುಗಳು ಗರುಡ (ಹದ್ದು) ನ ನೈಸರ್ಗಿಕ ಆಹಾರವಾಗಿದೆ. ಇಲ್ಲಿ ಗರುಡನಿಗೆ ವಿಶೇಷವಾಗಿ"ಮಂಜಾ ಪಾಸಮ್" ಅಂದರೆ ಹಳದಿ ಪಾಯಸವನ್ನು ಅರ್ಪಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಸ್ಥಳೀಯ ಸಾರಿಗೆಯು ಈ ದೇವಸ್ಥಾನವನ್ನು ತಲುಪಲು ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ. ದೇವಾಲಯಕ್ಕೆ ಹಲವಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಲಭ್ಯವಿದೆ.
ಈ ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ತಿರೂರು ರೈಲು ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವಾಗಿದ್ದು, ಈ ದೇವಾಲಯದಿಂದ 11 ಕಿ.ಮೀ ದೂರದಲ್ಲಿದೆ. ಇನ್ನು ಈ ದೇವಸ್ಥಾನದಿಂದ 43 ಕಿ.ಮೀ ದೂರದಲ್ಲಿರುವ ಕೋಜಿಕೋಡ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X