» »ಆಶ್ಚರ್ಯ: ಈ ಬಂಡೆಕಲ್ಲಿನಿಂದ ಸದಾ ನೀರು ಹರಿಯುತ್ತಿರುತ್ತದೆಯಂತೆ...

ಆಶ್ಚರ್ಯ: ಈ ಬಂಡೆಕಲ್ಲಿನಿಂದ ಸದಾ ನೀರು ಹರಿಯುತ್ತಿರುತ್ತದೆಯಂತೆ...

Posted By:

ನಮ್ಮ ದೇಶದಲ್ಲಿ ಆಶ್ಚರ್ಯಕರವಾದ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಹಲವಾರು ಅದ್ಭುತವಾದ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದು. ಏಕೆಂದರೆ ಇಲ್ಲಿನದೇವಾಲಯದಲ್ಲಿ ಆಶ್ಚರ್ಯಕರವಾಗಿ ಒಂದು ಬಂಡೆಕಲ್ಲಿನಿಂದ ನೀರು ಹರಿಯುತ್ತಿರುತ್ತದೆಯಂತೆ.ಅದು ಎಲ್ಲಿಂದ ಬರುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.

ಅಸಲಿಗೆ ಈ ದೇವಾಲಯದಲ್ಲಿ ಹನುಮಂತನು ನೆಲೆಸಿದ್ದಾನೆ. ಈ ದೇವಾಲಯದಲ್ಲಿಯೇ ಅಂಥಹಬಂಡೆಕಲ್ಲು ಇರುವುದು. ಆ ನೀರು ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಇಂದಿಗೂರಹಸ್ಯವಾಗಿಯೇ ಉಳಿದಿದೆ. ಈ ದೇವಾಲಯಕ್ಕೂ ಭೀಮನಿಗೆ ಸಂಬಂಧವಿದೆ. ಆ ಸಂಬಂಧವೇನು? ಆದೇವಾಲಯದ ಸ್ಥಳ ಪುರಾಣವೇನು? ಅಷ್ಟಕ್ಕೂ ಆ ದೇವಾಲಯ ಎಲ್ಲಿದೆ? ಎಂಬ ಅನೇಕ ಪ್ರಶ್ನೆಗಳಿಗೆಉತ್ತರ ಲೇಖನದ ಮೂಲಕ ತಿಳಿದುಕೊಳ್ಳೊಣ.

1.ಎಲ್ಲಿದೆ?

1.ಎಲ್ಲಿದೆ?

ಈ ಮಹಿಮಾನ್ವಿತವಾದ ದೇವಾಲಯವು ತೆಲಂಗಾಣ ರಾಜ್ಯದಲ್ಲಿನ ಸಿರಿಸಿಲ್ಲ ಜಿಲ್ಲೆಯ ಭೀಮನಮಲರೆಡ್ಡಿ ಪೇಟೆಯಲ್ಲಿದೆ. ಆ ದೇವಾಲಯದ ಹೆಸರು ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ. ಈದೇವಾಲಯದ ಗರ್ಭಗುಡಿಯಲ್ಲಿ ಹನುಮಂತನು ವೀರಾಂಜನೇಯನಾಗಿ ನೆಲೆಸಿದ್ದಾನೆ. ಹನುಮಂತನವಿಗ್ರಹವು ಏಕಶಿಲ ವಿಗ್ರಹವಾಗಿದ್ದು, 9 ಅಡಿ ಎತ್ತರದಲ್ಲಿದ್ದು ಭಕ್ತರಿಗೆ ದರ್ಶನ ಭಾಗ್ಯವನ್ನು ನೀಡುತ್ತಿದ್ದಾನೆ.

2.ಮಹಾಭಾರತ ಕಾಲದಲ್ಲಿ....

2.ಮಹಾಭಾರತ ಕಾಲದಲ್ಲಿ....

ಈ ಗ್ರಾಮಕ್ಕೆ ಹೆಸರು ಏಕೆ ಬಂದಿತು ಎಂಬುದಕ್ಕೆ ಒಂದು ಆಸಕ್ತಿಕರವಾದ ಕಥೆಯುಪ್ರಚಾರದಲ್ಲಿದೆ. ಪೂರ್ವ ಮಹಾಭಾರತ ಕಾಲದಲ್ಲಿ ಪಾಂಡವರು ಅರಣ್ಯವಾಸ ಮಾಡುವ ಸಮಯದಲ್ಲಿಇಲ್ಲಿ ಕೆಲವು ದಿನಗಳು ಕಳೆದ್ದಿದ್ದರಂತೆ ಎಂದು ಮಲ್ಲರೆಡ್ಡಿ ಪ್ರದೇಶವುಗುರುತಿಸಿಕೊಂಡಿದೆ. ಆ ಕಾಲದಲ್ಲಿ ಪಾಂಡವರು ಅನೇಕ ಆಟಗಳನ್ನು ಆಡುತ್ತಿದ್ದರಂತೆ. ಹಾಗೆಒಮ್ಮೆ ಆಟ ಆಡುವ ಸಂದರ್ಭದಲ್ಲಿ ಒಂದು ಬಂಡೆಯ ಕೆಳಗೆ ಬಿಲ್ಲು ಬಿದ್ದಿತಂತೆ...

3.ಭೀಮ

3.ಭೀಮ

ಅಗ್ರಜನಾದ ಧರ್ಮರಾಯನು ಅದನ್ನು ತೆಗೆದುಕೊಂಡು ಬರುವಂತೆ ತನ್ನ ತಮ್ಮನಾದ ಭೀಮನಿಗೆತಿಳಿಸಿದನಂತೆ. ಅದಕ್ಕೆ ಭೀಮನು ಬಂಡೆಯನ್ನು ನೆತ್ತಿಯಿಂದ ಮೇಲಕ್ಕೆ ಎತ್ತಿ ಬಾಣವನ್ನುತಂದನಂತೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ಗುಹೆಯನ್ನು ಕೂಡ ಕಾಣಬಹುದಾಗಿದೆ.ಹಾಗಾಗಿಯೇ ಮಲ್ಲಾರೆಡ್ಡಿ ಪೇಟೆಯನ್ನು ಭೀಮನ ಮಲ್ಲಾರೆಡ್ಡಿ ಪೇಟೆ ಎಂದು ಕರೆಯುತ್ತಾರೆ.

4.ದೇವಾಲಯದ ಸ್ಥಳ ಪುರಾಣ

4.ದೇವಾಲಯದ ಸ್ಥಳ ಪುರಾಣ

ಇನ್ನು ದೇವಾಲಯದ ಸ್ಥಳ ಪುರಾಣದ ವಿಷಯಕ್ಕೆ ಬಂದರೆ ಸೀತಾರಾಮರ ದೇವಾಲಯಗಳ ಜೊತೆ ಜೊತೆಗೆಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯ, ಶಿವಾಲಯಗಳನ್ನು ಕೂಡ ಇಲ್ಲಿ ದರ್ಶನಮಾಡಿಕೊಳ್ಳಬಹುದಾಗಿದೆ. ಪೂರ್ವದಲ್ಲಿ ಈ 3 ದೇವಾಲಯಗಳನ್ನು ಭಕ್ತರು ದರ್ಶನ ಮಾಡಿಕೊಂಡುದೇವತೆಗಳನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆರಾಧಿಸುತ್ತಿದ್ದರಂತೆ.

5.ನೈವೇದ್ಯ

5.ನೈವೇದ್ಯ

ದೇವರಿಗೆ ಪ್ರೀಯವಾದ ಹಲವಾರು ಖಾದ್ಯಗಳನ್ನು ನೈವೇದ್ಯವಾಗಿ ತೆಗೆದುಕೊಂಡುಹೋಗುತ್ತಿದ್ದರಂತೆ. ಅಲ್ಲನ ಒಂದು ವೃಕ್ಷದ ಮೇಲೆ ಇರುವ ಬ್ರಹ್ಮರಾಕ್ಷಸಿಯು ಆಪ್ರಸಾದವನ್ನೆಲ್ಲಾ ಅಪವಿತ್ರವನ್ನಾಗಿ ಮಾಡುತ್ತಿದ್ದಳಂತೆ. ಅಷ್ಟೇ ಅಲ್ಲ ಸ್ವಾಮಿಗೆನೈವೇದ್ಯವನ್ನು ಇಡದೇ ಇರುವ ಹಾಗೆ ಭಕ್ತರಿಗೆ ಅನೇಕ ಅಡೆ-ತಡೆಗಳನ್ನು ಮಾಡುತ್ತಿದ್ದಳಂತೆ.

6.ಬ್ರಹ್ಮ ರಾಕ್ಷಸಿ

6.ಬ್ರಹ್ಮ ರಾಕ್ಷಸಿ

ಆ ರಾಕ್ಷಸಿಯ ಹಿಂಸೆ ತಡೆಯಲಾರದೆ ಒಂದು ದಿನ ಭಕ್ತರು ರಾಮನ ದೇವಾಲಯದಲ್ಲಿ ಮಲಗಿದ್ದರಂತೆ.ಅವರಿಗೆ ಆಂಜನೇಯ ಸ್ವಾಮಿಯು ಕನಸ್ಸಿನಲ್ಲಿ ಕಾಣಿಸಿ, ತಾನು ಸಮೀಪದಲ್ಲಿಯೇ ಇದ್ದೇನೆಎಂದೂ, ಇಲ್ಲಿ ಪ್ರತಿಷ್ಟಾಪಿಸಿದರೆ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆ ಎಂದುಕನಸ್ಸಿನಲ್ಲಿ ಹೇಳಿ ಮಾಯವಾಗುತ್ತಾನೆ. ಮುಂಜಾನೆ ಗ್ರಾಮಸ್ಥರೆಲ್ಲಾ ಸೇರಿ ಕನಸ್ಸಿನಲ್ಲಿಬಂದ ಪ್ರದೇಶಕ್ಕೆ ತೆರಳಿ ಸ್ವಾಮಿಯ ವಿಗ್ರಹದ ಹುಡುಕಾಟ ಪ್ರಾರಂಭಿಸುತ್ತಾರೆ.

7.9 ಅಡಿ ಎತ್ತರದ ಹನುಮಂತ

7.9 ಅಡಿ ಎತ್ತರದ ಹನುಮಂತ

ಸುಂದರವಾದ ಆಕಾರದಲ್ಲಿ 9 ಅಡಿ ಎತ್ತರದ ಏಕ ಶಿಲ ವಿಗ್ರಹವು ದೊರೆಯಿತಂತೆ.. ಅದು ಬೇರೆಯಾರದು ಅಲ್ಲ, ಆ ಶ್ರೀ ವೀರಾಂಜನೇಯ ಸ್ವಾಮಿಯ ವಿಗ್ರಹವೇ ಆಗಿತ್ತು. ಕನಸ್ಸಿನಲ್ಲಿತಿಳಿಸಿದ ಹಾಗೆಯೇ ಸ್ವಾಮಿ ಸಾಕ್ಷತ್‍ಕರಿಸಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ-ಸಡಗರ ಮನೆ ಮಾಡಿತ್ತು.

8.ವೀರಾಂಜನೇಯ ಸ್ವಾಮಿ ವಿಗ್ರಹ

8.ವೀರಾಂಜನೇಯ ಸ್ವಾಮಿ ವಿಗ್ರಹ

ಆ ವೀರಾಂಜನೇಯ ಸ್ವಾಮಿ ವಿಗ್ರಹವು ಗ್ರಾಮದ ಸರಿಹದ್ದಿನಲ್ಲಿ ಪ್ರವೇಶಿಸುತ್ತಿದ್ದಂತೆ,ವೃಕ್ಷದ ಮೇಲಿದ್ದ ಬ್ರಹ್ಮ ರಾಕ್ಷಸಿಯು ಭಸ್ಮಳಾದಳಂತೆ. ಆ ಬ್ರಹ್ಮ ರಾಕ್ಷಸಿಯನ್ನು ಭಸ್ಮಮಾಡಿದ ಕಾರಣ ಶ್ರೀ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು ಶ್ರೀ ರಾಮನ ವಿಗ್ರಹದಎದುರಿನಲ್ಲಿಯೇ ಗ್ರಾಮಸ್ಥರು ಪ್ರತಿಷ್ಟಾಪಿಸಿದರಂತೆ.

9.ಕಾಕತೀಯರ ಕಾಲದ್ದು..

9.ಕಾಕತೀಯರ ಕಾಲದ್ದು..

ದೇವಾಲಯದ ವಿಷಯಕ್ಕೆ ಬಂದರೆ ಕಾಕತೀಯರ ಕಾಲದಲ್ಲಿ ನಿರ್ಮಾಣ ಮಾಡಿದ 2 ಅಂತಸ್ತನ್ನುಹೊಂದಿರುವ ಅಪರೂಪದ ಈ ಕಲ್ಲಿನ ಕಟ್ಟಡದಲ್ಲಿ 9 ಅಡಿ ಎತ್ತರದ ವೀರಾಂಜನೇಯ ಸ್ವಾಮಿ,ವೆಂಕಟೇಶ್ವರ ಸ್ವಾಮಿ, ಶಿವಲಿಂಗಗಳು ಕೂಡ ಇವೆ. ಇವೆಲ್ಲಾ ಕಾಕತೀಯರ ಕಾಲದಲ್ಲಿ ನಿರ್ಮಾಣಮಾಡಿದ್ದು ಎಂದು ಅಲ್ಲಿನ ಶಾಸನಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.

10.ಶಿಲ್ಪಕಲಾ ಸಂಪತ್ತು

10.ಶಿಲ್ಪಕಲಾ ಸಂಪತ್ತು

ಈ ಎಲ್ಲಾ ದೇವಾಲಯಗಳು ದೇವಾಲಯದ ಒಂದೇ ಪ್ರಾಂಗಣದಲ್ಲಿವೆ. ದೇವಾಲಯದ ಪ್ರಾಕಾರದ ಮೇಲೆಇರುವ ಶಿಲ್ಪಕಲೆಗಳು ಅಂದಿನ ಶಿಲ್ಪಕಲಾ ಚಾರ್ತುದ ನಿದರ್ಶನಗಳೇ ಆಗಿವೆ. ರಾಮಾಲಯದಲ್ಲಿನಸೀತಾ-ರಾಮರ ವಿಗ್ರಹದ ಎದುರಿನಲ್ಲಿಯೇ ವೀರಾಂಜನೇಯಸ್ವಾಮಿ ವಿಗ್ರಹ ಇರುವುದನ್ನುಕಾಣಬಹುದು. ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳುವವರು ಮಾಂಡವ್ಯ ನದಿ (ಪ್ರಸ್ತುತಮಾನೇರು ವಾಗು ನದಿ) ದಾಟಲೇಬೇಕು.

11.ಮಾಂಡವ್ಯ ಮಹಾನದಿ

11.ಮಾಂಡವ್ಯ ಮಹಾನದಿ

ಆ ಕಾಲದಲ್ಲಿ ಮಾಂಡವ್ಯ ಮಹಾಮುನಿ ತಪಸ್ಸು ಮಾಡಿದ್ದರಿಂದ ಈ ಪ್ರದೇಶದಲ್ಲಿನ ನದಿಗೆಮಾಂಡವ್ಯ ನದಿ ಎಂದು ಹೆಸರು ಬಂದಿತು ಎಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ.ದೇವಾಲಯದ ಸುತ್ತ ಈ ನದಿಯು ಹರಿಯುವುದರಿಂದ ಭಕ್ತರು ಯಾವ ದಿಕ್ಕಿನಿಂದ ಬಂದರು ಕೂಡನದಿಯಲ್ಲಿ ಕಾಲು ನೆನೆಯಲೇಬೇಕು.

12.ಬರಗಾಲ

12.ಬರಗಾಲ

ಬರಗಾಲ ಬಂದರು, ಮಳೆ ಬಾರದೇ ಇದ್ದರು ಕೂಡ ಇಲ್ಲಿನ ನೀರು ಮಾತ್ರ ಯಾವುದೇ ಕಾರಣಕ್ಕೂಬತ್ತುವುದಿಲ್ಲ. ಬದಲಾಗಿ ಸದಾ ತುಂಬಿ ಹರಿಯುತ್ತಿರುತ್ತದೆ. ಹಾಗಾಗಿಯೇ ಈ ನೀರನ್ನುಅತ್ಯಂತ ಪವಿತ್ರವಾದ ಜಲವೆಂದು ಪರಿಗಣಿಸಲಾಗುತ್ತದೆ. ದೇವಾಲಯದ ಪರಿಸರದಲ್ಲಿನಬಂಡೆಕಲ್ಲಿನಿಂದ ನೀರು ಪ್ರವಹಿಸುತ್ತಿರುತ್ತದೆ. ಆ ದೃಶ್ಯವನ್ನು ಕಾಣಲು ಅನೇಕ ಮಂದಿಭಕ್ತರು ಭೇಟಿ ನೀಡುತ್ತಿರುತ್ತಾರೆ.

13.ತೆರಳುವ ಬಗೆ ಹೇಗೆ?

13.ತೆರಳುವ ಬಗೆ ಹೇಗೆ?

ಬೆಂಗಳೂರಿನಿಂದ ತೆಲಂಗಾಣಕ್ಕೆ ಸುಮಾರು 703 ಕಿ.ಮೀ ದೂರದಲ್ಲಿದ್ದು, 10 ಗಂಟೆ 30ನಿಮಿಷಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.ಸಮೀಪದ ವಿಮಾನ ನಿಲ್ದಾಣವೆಂದರೆ : ಅದು ಬೆಗುಂಪೇಟೆ ವಿಮಾನ ನಿಲ್ದಾಣ ಹಾಗು ವರಂಗಲ್ ವಿಮಾನ ನಿಲ್ದಾಣವಾಗಿದೆ.ಸಮೀಪದ ರೈಲ್ವೆ ನಿಲ್ದಾಣವೆಂದರೆ : ಕರೀಂ ನಗರ ರೈಲ್ವೆ ನಿಲ್ದಾಣ ಮತ್ತು ಕೊತ್ತಪಲ್ಲಿ ರೈಲ್ವೆ ನಿಲ್ದಾಣವಾಗಿದೆ.