Search
  • Follow NativePlanet
Share
» »ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?

ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?

ಮಧುರೈನಲ್ಲಿರುವ ಜನಪ್ರಿಯ ಸ್ಥಳವೆಂದರೆ ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ. ಇದು ವಂಡಿಯೂರ್ ಮಾರಿಯಮ್ಮನ್ ದೇವಸ್ಥಾನದಲ್ಲಿದೆ. ಮಾನವ ನಿರ್ಮಿತ ದ್ವೀಪದೊಂದಿಗೆ ದೇವಾಲಯದ ಕೊಳದ ಸಂಕೀರ್ಣವು ಮುಖ್ಯವಾಗಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲ್ಪಡುತ್ತದೆ.

ದೊಡ್ಡ ಟ್ಯಾಂಕ್

ದೊಡ್ಡ ಟ್ಯಾಂಕ್

ಪ್ರಸಿದ್ಧ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಭಕ್ತರ ದಂಡನ್ನು ಆಕರ್ಷಿಸುತ್ತದೆ. ಇಲ್ಲಿ ಒಂದು ಬೃಹತ್ ಟ್ಯಾಂಕ್ ಇದೆ. ಇದು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲಿಯೇ ದೊಡ್ಡ ಟ್ಯಾಂಕ್ ಎಂದು ಪರಿಗಣಿಸಲ್ಪಡುತ್ತದೆ. ಈ ದೇವಾಲಯದ ಟ್ಯಾಂಕ್‌ಗಳು ವೈಗೈ ನದಿಯಿಂದ ನೀರು ಪಡೆಯುತ್ತದೆ.

ವಿನಾಯಕನ ದೇವಾಲಯ

ವಿನಾಯಕನ ದೇವಾಲಯ

PC: எஸ்ஸார்

ಈ ದೇವಾಲಯವನ್ನು ತಿರುಮಲೈ ನಾಯಕನ ಆಳ್ವಿಕೆಯಲ್ಲಿ 1645 AD ಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಕೊಳದ ಸುತ್ತಲೂ ನಾಲ್ಕು ಕಡೆಗಳು ಗ್ರಾನೈಟ್ ಮೆಟ್ಟಿಲುಗಳಿಂದ ಸುತ್ತುವರೆದಿವೆ. ನಡುವಿನಲ್ಲಿ ವಿನಾಯಕನ ದೇವಾಲಯವಿದೆ. ದೇವಾಲಯದ ಜೊತೆಗೆ ಕೊಳದ ಸುತ್ತಲೂ ಈ ಉದ್ದನೆಯ ಮೆಟ್ಟಿಲುಗಳನ್ನು ರಾಜ ತಿರುಮಲೈ ನಾಯಕ್ ನಿರ್ಮಿಸಿದನು ಎನ್ನಲಾಗುತ್ತದೆ.

ದಂತಕಥೆ

ದಂತಕಥೆ

ದೇವಾಲಯದ ಸಂಕೀರ್ಣದಲ್ಲಿ ಒಂದು ದೊಡ್ಡ ಟ್ಯಾಂಕ್ ಇದೆ. ಈ ತೊಟ್ಟಿಯು ಎಲ್ಲಾ ವರ್ಷವೂ ನೀರಿನಿಂದ ತುಂಬಿರುತ್ತದೆ. ಈ ದೇವಾಲಯದ ವಿಗ್ರಹವನ್ನು ಕೂಡ ತೊಟ್ಟಿಯ ಕೆಳಗಿನಿಂದ ಪಡೆದುಕೊಂಡಿದ್ದು ಎಂದು ಹಳೆಯ ಪುರಾಣಗಳು ಹೇಳುತ್ತವೆ.

 305 ಮೀ ಉದ್ದದ ಟ್ಯಾಂಕ್

305 ಮೀ ಉದ್ದದ ಟ್ಯಾಂಕ್

ಇದು ರಾಜ ತಿರುಮಲೈ ನಾಯ್ಕರ್ ತನ್ನ ಅರಮನೆಯನ್ನು ನಿರ್ಮಿಸಲು ಅಗತ್ಯ ಇಟ್ಟಿಗೆಗಳನ್ನು ತಯಾರಿಸಲು ಮಣ್ಣಿನ ಉತ್ಖನನ ಮಾಡಿದ ಸ್ಥಳವಾಗಿದೆ. ಹೀಗೆ ರಚಿಸಲಾದ ಗುಂಡಿಯನ್ನು ಈಗ ಟ್ಯಾಂಕ್ ಎಂದು ಪರಿಗಣಿಸಲಾಗಿದೆ. ಇದು ಸುಮಾರು 305 ಮೀ ಉದ್ದ ಮತ್ತು 290 ಮೀ ಅಗಲವಿದೆ. ಇದು ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಸಮನಾದ ಪ್ರದೇಶವಾಗಿದೆ.

ತೆಪ್ಪೋತ್ಸವಂ

ತೆಪ್ಪೋತ್ಸವಂ

PC: Aravind Sivaraj

ದೇವಸ್ಥಾನದಲ್ಲಿ ಹಲವಾರು ಬಗೆಯ ಉತ್ಸವಗಳನ್ನು ಆಚರಿಸಲಾಗುತ್ತದೆ ಮತ್ತು ಎಲ್ಲಾ ಧಾರ್ಮಿಕ ಕ್ರಿಯೆಗಳನ್ನು ಅದ್ಭುತ ವೈಭವ ಮತ್ತು ಸಂತೋಷದಿಂದ ಮಾಡಲಾಗುತ್ತದೆ . ಈ ಸ್ಥಳವು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ದೇವಾಲಯದ ಉತ್ಸವ, ತೆಪ್ಪೂತ್ಸವಂನ್ನು ಆಚರಿಸಲಾಗುತ್ತದೆ. ಈ ಉತ್ಸವವು ರಾಜ ತಿರುಮಲೈ ನಾಯಕ್ ಆಳ್ವಿಕೆಯಿಂದ ಆಚರಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ರಾಜ ತಿರುಮಲೈ ನಾಯಕ್ ಹುಟ್ಟುಹಬ್ಬವನ್ನು ಆಚರಿಸಲು ಈ ಹಬ್ಬವನ್ನು ಆಯೋಜಿಸಲಾಗಿದೆ. ಉತ್ಸವದ ಸಮಯದಲ್ಲಿ ದೇವಸ್ಥಾನವನ್ನು ಸಾವಿರಾರು ದೀಪಗಳಿಂದ ಬೆಳಗಿಸಲಾಗುತ್ತದೆ. ಇದನ್ನು ಹುಣ್ಣಿಮೆಯ ರಾತ್ರಿಯಂದು ಆಚರಿಸಲಾಗುತ್ತದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿ

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿ

ಮೀನಾಕ್ಷಿ ದೇವಿ ಮತ್ತು ಸುಂದರೇಶ್ವರರ ವಿಗ್ರಹಗಳು ಹಾಗೂ ಮೀನಾಕ್ಷಿ ಅಮ್ಮನ್ ದೇವಸ್ಥಾನದ ದೇವತೆಗಳು ವರ್ಣರಂಜಿತ ಟ್ಯಾಂಕ್‌ನಲ್ಲಿ ತೇಲುತ್ತವೆ. ಈ ಸಮ್ಮೋಹನಗೊಳಿಸುವ ದೃಶ್ಯವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಮಧುರೈ ನಗರದ ಸಾರಿಗೆ ವ್ಯವಸ್ಥೆಯು ಅತ್ಯಂತ ಉತ್ತಮವಾಗಿದ್ದು ದೇಶದ ಎಲ್ಲಾ ಭಾಗಗಳಿಂದಲೂ ಇದು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಮಧುರೈ ವಿಮಾನ ನಿಲ್ದಾಣವು ದೆಹಲಿ, ಚೆನ್ನೈ, ಮುಂಬಯಿ ಮತ್ತು ಬೆಂಗಳೂರು ನಂತಹ ನಗರಗಳಿಗೆ ಸಂಪರ್ಕವನ್ನು ಹೊಂದಿದೆ.

ಈ ಮಧುರೈ ನಗರಕ್ಕೆ ಹತ್ತಿರವಾಗುವ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಎಂದರೆ ಚೆನ್ನೈ ವಿಮಾನ ನಿಲ್ದಾಣ.

ಮಧುರೈ ನಗರವು ಉತ್ತಮ ರೈಲ್ವೆ ಸಂಪರ್ಕವನ್ನು ಸಹ ಹೊಂದಿದೆ. ಮುಂಬಯಿ, ಕೋಲ್ಕತ್ತ, ಮೈಸೂರು,ಕೊಯಮತ್ತೂರು ಮತ್ತು ಚೆನ್ನೈ ನಂತಹ ನಗರಗಳಿಗೆ ಉತ್ತಮ ರೈಲ್ವೆ ಸಂಪರ್ಕದ ವ್ಯವಸ್ಥೆ ಇದೆ. ಮಧುರೈ ನಗರವು ಉತ್ತಮವಾದ ಬಸ್‌ ವ್ಯವಸ್ಥೆಯನ್ನು ಹೊಂದಿದ್ದು ಚೆನ್ನೈ, ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ ಮುಂತಾದ ನಗರಗಳಿಗೆ ನಿಯಮಿತ ಬಸ್ ಸೇವೆಯ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more