Search
  • Follow NativePlanet
Share
» »ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ

ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ

ಅಮೃತ್‌ಸರ್ ಎನ್ನುವುದು ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಅಮೃತ್‌ ಸರ್ ಎಂದರೆ ಮೊದಲಿಗೆ ನೆನಪಾಗುವುದೇ ಗೋಲ್ಡನ್ ಟೆಂಪಲ್. ಪಂಜಾನ್‌ನ ಸ್ವರ್ಣ ಮಂದಿರ. ಇದು ಪ್ರವಾಸೋಧ್ಯಮದ ದೃಷ್ಠಿಯಲ್ಲೂ ಬಹಳ ಪ್ರಸಿದ್ಧಿ ಹೊಂದಿದೆ. ರಾಮಾಯಣವನ್ನು ಬರೆದ ವಾಲ್ಮೀಕಿ ಯಿಂದ ಹಿಡಿದು ಅದರಲ್ಲಿ ಬರುವ ಪ್ರತಿಯೊಂದು ಪಾತ್ರಗಳು ನಮಗೆ ಒಂದಲ್ಲ ಒಂದು ವಿಷಯವನ್ನು ಭೋದಿಸುತ್ತದೆ.

ರಾಮ, ರಾವಣ ಯುದ್ಧ ಮುಗಿದ ನಂತರ

ರಾಮ, ರಾವಣ ಯುದ್ಧ ಮುಗಿದ ನಂತರ

PC:Tej Kumar Book Depo
ರಾಮರಾವಣ ಯುದ್ಧ ಮುಗಿಸಿ ಶ್ರೀರಾಮನು ಸೀತಾದೇವಿಯನ್ನು ಅಯೋಧ್ಯೆಗೆ ಕರೆದುಕೊಂಡು ಬರುತ್ತಾಣರ. ಅಲ್ಲಿ ಏನೋ ಒಂದು ಸಣ್ಣ ಕಾರಣಕ್ಕೆ ಸೀತಾದೇವಿ ಗರ್ಭವತಿ ಎನ್ನುವುದನ್ನೂ ನೋಡದೆ ರಾವಣನು ಸೀತೆಯನ್ನು ಕಾಡಿಗೆ ಕಳಿಸುತ್ತಾನೆ.

ಚಿಕ್ಕಿ ಅಂದ್ರೆ ನಿಮಗಿಷ್ಟಾನಾ ? ಹಾಗಾದ್ರೆ ಇಲ್ಲಿನ ಚಿಕ್ಕಿ ನೀವು ಟೇಸ್ಟ್ ಮಾಡ್ಲೇಬೇಕುಚಿಕ್ಕಿ ಅಂದ್ರೆ ನಿಮಗಿಷ್ಟಾನಾ ? ಹಾಗಾದ್ರೆ ಇಲ್ಲಿನ ಚಿಕ್ಕಿ ನೀವು ಟೇಸ್ಟ್ ಮಾಡ್ಲೇಬೇಕು

ವಾಲ್ಮಿಕಿ ಮಹರ್ಷೀ ಆಶ್ರಯ

ವಾಲ್ಮಿಕಿ ಮಹರ್ಷೀ ಆಶ್ರಯ

PC: wikipedia

ಕಾಡಿಗೆ ಬಂದ ಸೀತಾದೇವಿಗೆ ವಾಲ್ಮಿಕಿ ಮಹರ್ಷಿಯು ಆಶ್ರಯವನ್ನು ನೀಡುತ್ತಾರೆ. ವಾಲ್ಮೀಕಿಯ ಆಶ್ರಮ ಅಮೃತ್‌ಸರದಿಂದ ೧೧ ಕಿ.ಮಿ ದೂರದಲ್ಲಿ ಇರುವ ಭಗವಾನ್ ವಾಲ್ಮೀಕಿ ತೀರ್ಥ ಸ್ಥಳವಾಗಿತ್ತು.ಇದನ್ನು ರಾಮತೀರ್ಥ ಎಂದು ಕೂಡಾ ಕರೆಯುತ್ತಾರೆ.

ಅಶ್ವಮೇಧ ಯಾಗ

ಅಶ್ವಮೇಧ ಯಾಗ

PC: Shivam chhabra

ಇದೇ ಸಂದರ್ಭದಲ್ಲಿ ರಾಮನು ಅಶ್ವಮೇಧ ಯಾಗವನ್ನು ನಡೆಸುತ್ತಾರೆ. ಒಂದು ಕುದುರೆಯನ್ನು ಊರು ಸುತ್ತಲು ಬಿಡುತ್ತಾರೆ. ಆ ಕುದುರೆ ಸುತ್ತಿದ ಊರುಗಳೆಲ್ಲಾ ರಾಜರ ಅಧೀನಕ್ಕೆ ಬರುತ್ತದೆ. ಯಾರಾದರೂ ಆ ಕುದುರೆಯನ್ನು ಬಂಧಿಸಿ ಯುದ್ಧ ಮಾಡಿ ಗೆದ್ದರೆ ಆ ರಾಜ್ಯ ಅವರಿಗೆ ಸೇರುತ್ತದೆ, ಶ್ರೀರಾಮ ಅಶ್ವಮೇಧ ಯಾಗ ಮಾಡಿ ಬಿಟ್ಟ ಆ ಕುದುರೆಯನ್ನು ಲವಕುಶರು ರಾಮ ತೀರ್ಥದಲ್ಲಿ ಬಂಧಿಸುತ್ತಾರೆ.

ಆಂಜನೇಯನನ್ನು ಬಂಧಿಸಿದ್ದು

ಆಂಜನೇಯನನ್ನು ಬಂಧಿಸಿದ್ದು

PC:Shivam chhabra

ಕುದುರೆಯನ್ನು ಬಿಡಿಸಲು ಬಂದಿದ್ದ ಶ್ರೀ ರಾಮನ ಸೈನ್ಯವನ್ನು ತಮ್ಮ ಶೌರ್ಯ ಪರಾಕ್ರಮದಿಂದ ಎದುರಿಸುತ್ತಾರೆ. ಈ ಕುದರೆಯನ್ನು ಬಿಡಿಸಲು ಬಂದ ಆಂಜನೇಯನನ್ನೂ ಇಲ್ಲೇ ಬಂಧಿಸುತ್ತಾರ ಎನ್ನುತ್ತದೆ ಪುರಾಣ. ಆಂಜನೆಯನನ್ನು ಕಟ್ಟಿಹಾಕಿದ್ದ ಮರವಿದ್ದ ಜಾಗದಲ್ಲಿ ಈಗ ದುರ್ಗಾ ದೇವಿಯ ದೇವಾಲಯವಿದೆ. ಈ ದೇವಾಲಯವು ಲಾಹೋರ್ ಗೇಟ್ ಸಮೀಪದಲ್ಲೇ ಇದೆ.

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ದುರ್ಗಾ ದೇವಿ ದೇವಾಲಯ

ದುರ್ಗಾ ದೇವಿ ದೇವಾಲಯ

PC:Shivam chhabra

ದುರ್ಗಾ ದೇವಿ ದೇವಾಲಯವು ಹಿಂದೂಗಳ ಪವಿತ್ರವಾದ ಕ್ಷೇತ್ರವಾಗಿದೆ. ಇಲ್ಲಿ ಪಾರ್ವತಿಯು ದುರ್ಗೇಯ ರೂಪದಲ್ಲಿ ಇದ್ದಾಳೆ. ಇಲ್ಲಿ ದುರ್ಗಾ ದೇವಿ, ಸೀತೆ, ಜೊತೆಗೆ ದೊಡ್ಡ ಹನುಮಂತನ ವಿಗ್ರಹವೂ ಕಾಣುತ್ತದೆ. ಇಲ್ಲಿ ದುರ್ಗೆಯೂ ವಿವಿಧ ರೂಪದಲ್ಲಿ ಸಣ್ಣ ಸಣ್ಣ ಶಿಲ್ಪಕಲಾಕೃತಿಯಲ್ಲಿ ಕಾಣಿಸುತ್ತಾಳೆ.

ಸಿಲ್ವರ್ ಟೆಂಪಲ್

ಸಿಲ್ವರ್ ಟೆಂಪಲ್

PC:Shivam chhabra

ಈ ದೇವಾಲಯದ ದ್ವಾರಗಳನ್ನು ಬೆಳ್ಳಿಗಳಿಂದ ನಿರ್ಮಿಸಲಾಗಿರುವುದರಿಂದ ಇದನ್ನು ಸಿಲ್ವರ್ ಟೆಂಪಲ್ ಎಂದೂ ಕರೆಯುತ್ತಾರೆ. ಇಲ್ಲಿ ಅನೇಕ ಗ್ರಂಥಗಳು ಇವೆ. ಅವುಗಳಲ್ಲಿ ತಾಳೆಪತ್ರೆಯ ಗ್ರಂಥಗಳು ಇರುವುದು ವಿಶೇಷ.

ಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿ

ಸರೋವರದ ಮಧ್ಯೆ ದೇವಾಲಯ

ಸರೋವರದ ಮಧ್ಯೆ ದೇವಾಲಯ

PC: Mohalimunda

ಈ ದೇವಾಲಯವನ್ನು ಒಂದು ಸುಂದರವಾದ ವಿಶಾಲ ಸರೋವರದ ಮಧ್ಯೆ ನಿರ್ಮಿಸಲಾಗಿದೆ. ಹಾಗಾಗಿ ಇದು ಬಹಳ ಸುಂದರವಾಗಿ ಕಾಣುತ್ತದೆ. ಈ ದೇವಾಲಯವನ್ನು ಹೆಚ್ಚಾಗಿ ಮಾರ್ಬಲ್ ಬಳಸಿ ನಿರ್ಮಿಸಲಾಗಿದೆ.

ಇಲ್ಲಿ ನಡೆಯುವ ಪೂಜೆಗಳು

ಇಲ್ಲಿ ನಡೆಯುವ ಪೂಜೆಗಳು

PC:Shivam chhabra

ಇಲ್ಲಿ ವಿಶೇಷವಾಗಿ ದಸರಾ, ಜನ್ಮಾಷ್ಟಮಿ. ರಾಮನವಮಿ, ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇಲ್ಲಿನ ಉತ್ಸವಗಳಲ್ಲಿ ಪಾಲ್ಗೊಳ್ಳಲು ದೇಶದ ನಾಲ್ಕು ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X